ಅಂದು ಸಿದ್ಧಾರ್ಥ, ಇಂದು ರಾಯ್‌; ಸಾಲು ಸಾಲು ಉದ್ಯಮಿಗಳ ಆತ್ಮಹತ್ಯೆ ಹಿಂದಿರುವ ಸತ್ಯವೇನು?

Date:

ಜೀವನದಲ್ಲಿ ಯಶಸ್ಸು, ಸಂಪತ್ತು ಮತ್ತು ಐಶ್ವರ್ಯವನ್ನು ಗಳಿಸುವುದು ಅನೇಕರ ಕನಸು. ಆದರೆ, ಈ ಸಂಪತ್ತು ನಿಜವಾಗಿಯೂ ನೆಮ್ಮದಿಯನ್ನು ತರುತ್ತದೆಯೇ? ಇತ್ತೀಚಿನ ಕೆಲವು ಘಟನೆಗಳು ಈ ಪ್ರಶ್ನೆಗೆ ಉತ್ತರವನ್ನು ನೀಡುತ್ತಿವೆ. ಬೆಂಗಳೂರಿನಲ್ಲಿ ನಡೆದ ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ ಜೆ ರಾಯ್ ಅವರ ಆತ್ಮಹತ್ಯೆ ಮತ್ತು ಕೆಲವು ವರ್ಷಗಳ ಹಿಂದೆ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಹೆಗಡೆ ಆತ್ಮಹತ್ಯೆಗಳು ಈ ಸತ್ಯವನ್ನು ತೆರೆದಿಟ್ಟಿವೆ. ಈ ಇಬ್ಬರು ಉದ್ಯಮಿಗಳು ಅಪಾರ ಸಂಪತ್ತನ್ನು ಹೊಂದಿದ್ದರೂ, ಅವರ ಜೀವನದಲ್ಲಿ ನೆಮ್ಮದಿ ಇರಲಿಲ್ಲ. ಆದಾಯ ತೆರಿಗೆ ಅಧಿಕಾರಿಗಳ ಒತ್ತಡ, ಹಣಕಾಸು ಸಮಸ್ಯೆಗಳು ಮತ್ತು ಮಾನಸಿಕ ಒತ್ತಡಗಳು ಅವರನ್ನು ಆತ್ಮಹತ್ಯೆಯತ್ತ ತಳ್ಳಿವೆ.

- Advertisement -

ನಿನ್ನೆ ಐಟಿ ಅಧಿಕಾರಿಗಳ ಎದುರೇ ಎದೆಗೆ ಗುಂಡಿಟ್ಟು ಆತ್ನಹತ್ಯೆ ಮಾಡಿಕೊಂಡ ಸಿಜೆ ರಾಯ್ ಅಥವಾ ರಾಯ್ ಚಿರಿಯಾಂಕಂದಥ್ ಜೋಸೆಫ್, ಕೇರಳ ಮೂಲದ ಉದ್ಯಮಿ. ಅವರು ಕಾನ್ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದರು. ಈ ಗ್ರೂಪ್ ರಿಯಲ್ ಎಸ್ಟೇಟ್, ಹೋಟೆಲ್ ಮತ್ತು ಇತರ ವ್ಯವಹಾರಗಳಲ್ಲಿ ತೊಡಗಿತ್ತು. ರಾಯ್ ಅವರ ಸಂಪತ್ತು ಸುಮಾರು 9,000 ಕೋಟಿ ರೂಪಾಯಿಗಳಷ್ಟಿತ್ತು. ಅವರ ಬಳಿ ಖಾಸಗಿ ಜೆಟ್ ವಿಮಾನ, 12 ರೋಲ್ಸ್ ರಾಯ್ಸ್ ಕಾರುಗಳಿದ್ದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬರ: ಪರಿಹಾರ ಮತ್ತು ಪರ್ಯಾಯ ಮಾರ್ಗಗಳತ್ತ ಒಂದು ನೋಟ

ಬರ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಹಾರಾಷ್ಟ್ರವು ಮಾದರಿ ಕಾರ್ಯಾಚರಣೆ ಕೈಗೊಂಡಿದೆ. ಮತ್ತು ಅದರಲ್ಲಿ ಅದು ಬಹುಪಾಲು ಯಶಸ್ಸನ್ನೂ ಸಾಧಿಸಿದೆ. ಬೃಹತ್ ನೀರಾವರಿ ಯೋಜನೆಗಳಿಗೆ ಕೊಡುವ ಆದ್ಯತೆ ಮತ್ತು ಮಹತ್ವವನ್ನು ಸಣ್ಣ ನೀರಾವರಿ ಯೋಜನೆಗಳಿಗೂ ನೀಡಬೇಕೆನ್ನುವುದೇ...

ಹಮ್ ಔರತೇಂ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...
ವಿ ಜೆ ರಾಯ್‌ 2

2026ರ ಜನವರಿ 30ರಂದು, ಬೆಂಗಳೂರಿನ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ಅವರ ಕಚೇರಿಯಲ್ಲಿ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡರು. ಆ ಸಮಯದಲ್ಲಿ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಅವರ ಕಚೇರಿಯಲ್ಲಿ ದಾಳಿ ನಡೆಸುತ್ತಿದ್ದರು. ಈ ದಾಳಿ ಮೂರು ದಿನಗಳಿಂದ ನಡೆಯುತ್ತಿತ್ತು. ರಾಯ್ ಅವರು ತಮ್ಮ ಕೊಠಡಿಯಲ್ಲಿ ಪಿಸ್ತೂಲಿನಿಂದ ತಮ್ಮನ್ನು ತಾವು ಗುಂಡು ಹಾರಿಸಿಕೊಂಡು ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ.

ರಾಯ್ ಅವರ ಸಹೋದರ ಬಾಬು ರಾಯ್ ಮತ್ತು ಕುಟುಂಬಸ್ಥರು ಐಟಿ ಅಧಿಕಾರಿಗಳನ್ನು ದೂಷಿಸಿದ್ದಾರೆ. “ಐಟಿ ಅಧಿಕಾರಿಗಳ ಒತ್ತಡದಿಂದಲೇ ಈ ಘಟನೆ ನಡೆದಿದೆ” ಎಂದು ಅವರು ಆರೋಪಿಸಿದ್ದಾರೆ. ಕೇರಳದಿಂದ ಬಂದ ಐಟಿ ತಂಡದ ನಾಯಕ ಕೃಷ್ಣಪ್ರಸಾದ್ ಮತ್ತು ಅವರ ಸಹೋದ್ಯೋಗಿಗಳು ರಾಯ್ ಅವರನ್ನು ಮಾನಸಿಕವಾಗಿ ಹಿಂಸಿಸಿದರು ಎಂದು ಹೇಳಲಾಗಿದೆ. ಡಿಸೆಂಬರ್ 2025ರಲ್ಲಿ ಆರಂಭವಾದ ದಾಳಿಗಳು ರಾಯ್ ಅವರನ್ನು ತೀವ್ರ ಒತ್ತಡಕ್ಕೆ ಒಳಪಡಿಸಿದ್ದವು. ಅವರು ತಮ್ಮ ತಾಯಿಯೊಂದಿಗೆ ಮಾತನಾಡುವುದಕ್ಕಾಗಿ ಸಮಯ ಕೇಳಿದ್ದರು, ಆದರೆ ನಂತರದಲ್ಲೇ ಈ ಆತ್ಮಹತ್ಯೆ ನಡೆದಿದೆ ಎಂದು ಮೂಲಗಳು ಹೇಳುತ್ತವೆ. ಈ ಮೊದಲೇ ಸಿಜೆ ರಾಯ್ ಕೆಲವೊಂದು ದಾಖಲೆಗಳನ್ನು ಐಟಿ ಅಧಿಕಾರಿಗಳಿಗೆ ನೀಡಿದ್ದರು. ಇದಾದ ಬಳಿಕ ಮತ್ತಷ್ಟು ದಾಖಲೆ ತಂದುಕೊಡಲು ಐಟಿ ಅಧಿಕಾರಿಗಳ ಅನುಮತಿ ಪಡೆದ ಎರಡನೇ ಪ್ಲೋರ್‌ಗೆ ಹೋಗಿದ್ದರು. ಅಲ್ಲಿ ರಿವಾಲ್ವರ್‌ನಿಂದ ಎದೆಗೆ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಕ್ಷಣ ಕಚೇರಿ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆ ತಲುಪುವ ವೇಳೆಗಾಗಲೇ ಕೊನೆಯುಸಿರೆಳೆದಿದ್ದಾರೆ.

ಈ ಘಟನೆಯ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ, ಕುಟುಂಬಸ್ಥರು ಸಿಐಡಿ ತನಿಖೆಗೆ ಒತ್ತಾಯಿಸಿದ್ದಾರೆ. ಸಂಪತ್ತು ಎಷ್ಟೇ ಇದ್ದರೂ, ಸರ್ಕಾರಿ ಅಧಿಕಾರಿಗಳ ಒತ್ತಡ ಮತ್ತು ಹಣಕಾಸು ಸಮಸ್ಯೆಗಳು ಜೀವನವನ್ನು ಎಲ್ಲಿಗೆ ಬೇಕಾದರೂ ತಂದು ನಿಲ್ಲಿಸಬಹುದು. ಐಟಿ ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಸಿಜೆ ರಾಯ್ ಮೊದಲಿಗರೇನಲ್ಲ. ಈ ಹಿಂದೆ ಕನ್ನಡದ ದಿಗ್ಗಜ ಉದ್ಯಮಿ ಸಿದ್ದಾರ್ಥ್ ಹೆಗಡೆ ಕೂಡಾ ಐಟಿ ದಾಳಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು.

ರಾಜಕೀಯ ಕುಟುಂಬದ ನಂಟಿದ್ದರೂ ಸಿದ್ಧಾರ್ಥ್‌ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ

ಸಿದ್ದಾರ್ಥ 1

ದೇಶದ 200 ನಗರಗಳಲ್ಲಿ 1,772ಕ್ಕೂ ಹೆಚ್ಚು ಕೆಫೆ ಕಾಫಿ ಡೇ ಶಾಖೆಗಳನ್ನು ಹೊಂದಿದ್ದ, ಒಂದು ತಲೆಮಾರಿನ ಮೇಲೆ ಅಪಾರ ಪ್ರಭಾವ ಬೀರಿದ್ದ ಕನ್ನಡದ ಉದ್ಯಮಿ ಸಿದ್ದಾರ್ಥ್ ಹೆಗಡೆ ಕೂಡಾ ಇದೇ ಟ್ಯಾಕ್ಸ್ ಟೆರರಿಸಂಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದರು. 1996ರಲ್ಲಿ ಆರಂಭವಾದ ಸಿಸಿಡಿ ಇಂದು ಭಾರತದ ಅತಿದೊಡ್ಡ ಕಾಫಿ ಶಾಪ್‌ಗಳಲ್ಲಿ ಒಂದು. ಸಿದ್ದಾರ್ಥ ಅವರು ಕಾಫಿ ಬೆಳೆಗಾರರ ಕುಟುಂಬದಿಂದ ಬಂದವರು. ಅವರು ಸಂಪತ್ತನ್ನು ಗಳಿಸಿ, ಮೈಂಡ್‌ಟ್ರೀ ಐಟಿ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ಅವರ ಸಂಪತ್ತು ಸಾವಿರಾರು ಕೋಟಿ ರೂಪಾಯಿಗಳಲ್ಲಿತ್ತು. ವಿಜೆ ಸಿದ್ದಾರ್ಥ್ ಹೆಗಡೆ 2019ರ ಜುಲೈ 29ರಂದು ಮಂಗಳೂರಿನ ಬಳಿಯ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಉಳ್ಳಾಲದ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ ಸಿದ್ಧಾರ್ಥನ ಶವ ಎರಡು ದಿನಗಳ ನಂತರ ಸ್ಥಳದಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿತ್ತು. ಬೆಂಗಳೂರಿನಿಂದ ಇನ್ನೋವಾ ಕಾರಿನಲ್ಲಿ ಮಂಗಳೂರಿಗೆ ಹೋಗುವ ಮಾರ್ಗಮಧ್ಯೆ ಇಳಿದು ನಡೆದವರು ಸೇತುವೆಯಿಂದ ಕೆಳಕ್ಕೆ ಹಾರಿದ್ದರು. ಎರಡು ದಿನಗಳ ನಂತರ ಜುಲೈ 31ರ ಬೆಳಿಗ್ಗೆ ಹೊಯ್ಗೆ ಬಜಾರ್ ಸಮೀಪದ ನದಿಯಲ್ಲಿ ಸಿದ್ದಾರ್ಥ್ ಶವವಾಗಿ ಪತ್ತೆಯಾಗಿದ್ದರು.

ಒಟ್ಟು 22 ಸಾವಿರ ಕೋಟಿ ರೂಪಾಯಿಗೂ ಅಧಿಕ ಆಸ್ತಿ ಹೊಂದುವ ಮೂಲಕ ದೇಶದ ಆಗರ್ಭ ಶ್ರೀಮಂತರ ಪಟ್ಟಿಯಲ್ಲಿದ್ದ ಸಿದ್ದಾರ್ಥ್ ಹೆಗಡೆ ಆತ್ಮಹತ್ಯೆ ಮಾಡಿಕೊಂಡಾಗಲೂ ಸೋಷಿಯಲ್ ಮೀಡಿಯಾದಲ್ಲಿ ಟ್ಯಾಕ್ಸ್‌ ಟೆರರಿಸಂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ತೆರಿಗೆ ಅಧಿಕಾರಿಗಳ ಒತ್ತಡವನ್ನು ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಸೂಸೈಡ್ ನೋಟ್​ನಲ್ಲಿ ವಿ.ಜಿ. ಸಿದ್ದಾರ್ಥ ಬರೆದಿದ್ದರು. ಇದೀಗ ರಾಯ್ ಸಾವಿಗೂ ಐಟಿ ದಾಳಿಯೇ ಕಾರಣ ಎಂದು ಹೇಳಲಾಗುತ್ತಿದೆ.

photo 6334800733101822243 w

ಈ ಎರಡು ಘಟನೆಗಳು ಏನನ್ನು ತೋರಿಸುತ್ತದೆ. ಸಂಪತ್ತು ನೆಮ್ಮದಿಯ ಗ್ಯಾರಂಟಿಯನ್ನ ಕೊಡುವುದಿಲ್ಲ ಎನ್ನುವುದನ್ನ ಸಾಬೀತು ಮಾಡಿದೆ. ಸಿಜೆ ರಾಯ್ ಮತ್ತು ಸಿದ್ದಾರ್ಥ ಹೆಗಡೆ ಇಬ್ಬರೂ ಶ್ರೀಮಂತರು, ಯಶಸ್ವಿ ಉದ್ಯಮಿಗಳು. ಆದರೆ, ಅವರ ಜೀವನದಲ್ಲಿ ಮಾನಸಿಕ ಶಾಂತಿ ಇರಲಿಲ್ಲ. ಐಟಿ ಅಧಿಕಾರಿಗಳ ದಾಳಿಗಳು, ಹಣಕಾಸು ಒತ್ತಡಗಳು ಮತ್ತು ವ್ಯವಹಾರದ ಒತ್ತಡ ಅವರನ್ನು ಹಿಂಸಿಸಿದವು. ಶ್ರೀಮಂತರ ಜೀವನದಲ್ಲೂ ಅನೇಕ ಸವಾಲುಗಳಿವೆ. ಹೂಡಿಕೆಗಳು, ಸಾಲಗಳು, ಮಾರುಕಟ್ಟೆಯ ಏರಿಳಿತಗಳು ಮತ್ತು ಕಾನೂನು ಸಮಸ್ಯೆಗಳು ಅವರನ್ನು ನಿರಂತರ ಒತ್ತಡದಲ್ಲಿ ಇರಿಸುತ್ತವೆ. ಅನೇಕರು ಈ ಒತ್ತಡವನ್ನು ತಡೆದುಕೊಳ್ಳಲಾರದೆ ಆತ್ಮಹತ್ಯೆಗೆ ಮುಂದಾಗುತ್ತಾರೆ. ಸಂಪತ್ತು ಮಾತ್ರ ಜೀವನದ ಗುರಿಯಲ್ಲ ನೆಮ್ಮದಿ ಮತ್ತು ಮಾನಸಿಕ ಆರೋಗ್ಯವೂ ಮುಖ್ಯವೇ.

photo 6334800733101822242 w

ನಮ್ಮ ಸಮಾಜದಲ್ಲಿ ಒಂದು ಅಪಾಯಕಾರಿ ಭ್ರಮೆ ಇದೆ. “ಅವರು ಶ್ರೀಮಂತರು, ಅವರಿಗೆ ಯಾವ ಕಷ್ಟ?” ಈ ಭ್ರಮೆಯೇ ಅನೇಕ ಶ್ರೀಮಂತರನ್ನ ಮೌನವಾಗಿ ಕೊಲ್ಲುತ್ತಿದೆ. ಶ್ರೀಮಂತರಿಗೆ ಕಣ್ಣೀರು ಸುರಿಸಲು ಸಮಯವಿಲ್ಲ, ದುಃಖ ಹೇಳಿಕೊಳ್ಳಲು ನಂಬಿಕಸ್ಥರಿಲ್ಲ, ದುರ್ಬಲತೆ ತೋರಿಸಿಕೊಳ್ಳಲು ಅವಕಾಶ ಇಲ್ಲ, ಅವರ ನೋವು ಎಸಿ ರೂಮಿನೊಳಗೆ ಮೌನವಾಗಿ ಹಿಂಸಿಸುತ್ತದೆ.

ಸಿಜೆ ರಾಯ್ ಅಥವಾ ಸಿದ್ದಾರ್ಥ ಹೆಗಡೆ ಇವರ ಆತ್ಮಹತ್ಯೆಗಳನ್ನು “ದುರ್ಬಲತೆ” ಅಂತ ಮುಗಿಸಿಬಿಡೋದು ಸುಲಭ. ಆದರೆ ಸತ್ಯ ಬೇರೆಯೇ ಇರುತ್ತದೆ. ಆತ್ಮಹತ್ಯೆ ಒಂದು ಕ್ಷಣದ ನಿರ್ಧಾರ ಅಲ್ಲ. ಅದು ದೀರ್ಘಕಾಲದ ಯೋಚನೆಯ ನಂತರ ಬರುವ ಸಮಾಧಾನಕರವಾಗಿ ಕಾಣಿಸುತ್ತಿರುತ್ತದೆ. ಒತ್ತಡ, ಅವಮಾನ, ಭಯ, ಒಂಟಿತನ ಇವೆಲ್ಲವೂ ಸೇರಿ, ಒಬ್ಬ ವ್ಯಕ್ತಿಗೆ “ಇನ್ನೂ ಬದುಕುವುದಕ್ಕೆ ಅರ್ಥವೇ ಇಲ್ಲ” ಅನ್ನಿಸುವ ಹಂತಕ್ಕೆ ತಳ್ಳುತ್ತವೆ.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ...

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ, ಚೀನಾಗೆ ಹೆದರಿದಿರೇ?

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ...

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ...

ಭಾರತದಲ್ಲಿ 23 ವರ್ಷ, ಭಾರತೀಯರ ಹೃದಯದಲ್ಲಿ ಸಾವಿರ ವರ್ಷ ಬದುಕುವ ಭಗತ್ ಸಿಂಗ್

ʼನನ್ನನ್ನು ಕೊಲ್ಲಬಹುದು, ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲʼ ಎಂದು ಕೊನೆಯ...