ಗಾಜಾ | ಶಾಲೆ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ; 100ಕ್ಕೂ ಹೆಚ್ಚು ಮಂದಿ ಸಾವು

Date:

ಗಾಜಾ ನಗರದ ಶಾಲೆಯೊಂದರ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಶಾಲೆ ಸದ್ಯ ನಿರಾಶ್ರಿತರ ಆಶ್ರಯ ಕೇಂದ್ರವಾಗಿತ್ತು ಎಂದು ಪ್ಯಾಲೆಸ್ತೀನ್‌ ಆರೋಗ್ಯ ಅಧಿಕಾರಿಗಳು ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.

ಕೇಂದ್ರ ಗಾಜಾ ನಗರದ ತಬೀನ್ ಶಾಲೆಯ ಮೇಲಿನ ದಾಳಿಯಲ್ಲಿ 47 ಜನರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಆಂಬ್ಯುಲೆನ್ಸ್ ಮತ್ತು ತುರ್ತು ಸೇವೆ ತಿಳಿಸಿದೆ. ಇಸ್ರೇಲ್ ಮಿಲಿಟರಿಯು ಈ ದಾಳಿಯನ್ನು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.

ಸುಮಾರು 10 ತಿಂಗಳ ಹಿಂದೆ ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದಾಗಿದ್ದು, ಅಂದಿನಿಂದ ಗಾಜಾದಲ್ಲಿ ಶಾಲೆಗಳಲ್ಲಿ, ಇತರೆ ಸ್ಥಳಗಳಲ್ಲಿ ಜನರು ನೆಲೆಸಿದ್ದಾರೆ. ವಿಶ್ವಸಂಸ್ಥೆಯ ಪ್ರಕಾರ, ಜುಲೈ 6ರ ಸುಮಾರಿಗೆ ಗಾಜಾದಲ್ಲಿನ 564 ಶಾಲೆಗಳಲ್ಲಿ 477 ನೇರವಾಗಿ ಯುದ್ಧದಲ್ಲಿ ಹಾನಿಗೊಂಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜೂನ್‌ನಲ್ಲಿ, ಕೇಂದ್ರ ಗಾಜಾದಲ್ಲಿ ಪ್ಯಾಲೆಸ್ತೀನ್ ನಿರಾಶ್ರಿತರ ಕೇಂದ್ರದ ಮೇಲೆ ಇಸ್ರೇಲ್ ವೈಮಾನಿಕ ದಾಳಿಯಿಂದಾಗಿ 12 ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 33 ಮಂದಿ ಸಾವನ್ನಪ್ಪಿದ್ದಾರೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾಕಿಸ್ತಾನ | ಗುರುತಿನ ಚೀಟಿ ಪರಿಶೀಲಿಸಿದ ಬಳಿಕ 23 ಪ್ರಯಾಣಿಕರಿಗೆ ಗುಂಡಿಕ್ಕಿ ಕೊಲೆ

ಅಪರಿಚಿತ ಬಂದೂಕುಧಾರಿಗಳು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಗುರುತಿನ ಚೀಟಿ ಪರಿಶೀಲಿಸಿದ ಬಳಿಕ...

ಉಕ್ರೇನ್ | ಹೋಟೆಲ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: ಸುದ್ದಿ ಸಂಸ್ಥೆ ಸುರಕ್ಷತಾ ಸಲಹೆಗಾರ ಸಾವು

ಉಕ್ರೇನ್‌ ಯುದ್ಧದ ಬಗ್ಗೆ ವರದಿ ಮಾಡುತ್ತಿದ್ದ ರಾಯಿಟರ್ಸ್ ಸುದ್ದಿ ಸಂಸ್ಥೆ ಸುರಕ್ಷತಾ...

ಟೆಲಿಗ್ರಾಮ್ ಮೆಸೆಜಿಂಗ್ ಆಪ್ ಸಿಇಒ ಪವೆಲ್ ಡೊರಾವ್ ಬಂಧನ

ಬಿಲಿಯನೇರ್ ಉದ್ಯಮಿ, ಟೆಲಿಗ್ರಾಮ್ ಮೆಸೆಜಿಂಗ್ ಆಪ್‌ನ ಸ್ಥಾಪಕ ಮತ್ತು ಸಿಇಒ ಪವೆಲ್...

ಯೂಟ್ಯೂಬ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಕ್ರಿಸ್ಟಿಯಾನೋ ರೊನಾಲ್ಡೊ; ಒಂದೇ ದಿನದಲ್ಲಿ ‘ಡೈಮಂಡ್ ಬಟನ್’

ಪೋರ್ಚುಗಲ್‌ನ ಪ್ರಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಯೂಟ್ಯೂಬ್ ಇತಿಹಾಸದಲ್ಲೇ ಹೊಸ...