- ನ್ಯಾಟೊದ 31ನೇ ಸದಸ್ಯನಾಗಿ ಫಿನ್‌ಲ್ಯಾಂಡ್ ಸೇರ್ಪಡೆ
- ಪ್ರಧಾನ ಕಚೇರಿಯಲ್ಲಿ ಔಪಚಾರಿಕವಾಗಿ ಸದಸ್ಯತ್ವ ಹಸ್ತಾಂತರ
ಫಿನ್‌ಲ್ಯಾಂಡ್ ರಾಷ್ಟ್ರ ಮಂಗಳವಾರ (ಏಪ್ರಿಲ್ 4) ಉತ್ತರ ಅಟ್ಲಾಂಟಿಕ್ ಒಕ್ಕೂಟವನ್ನು (ನ್ಯಾಟೊ) ಸೇರಿದೆ. ಈ ಮೂಲಕ ನ್ಯಾಟೊದ 31ನೇ ಸದಸ್ಯ ರಾಷ್ಟ್ರವಾಗಿದೆ.
ಹೊಸ ರಾಷ್ಟ್ರದ ಸೇರ್ಪಡೆಯು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಕಾರ್ಯತಂತ್ರದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
ಕಳೆದ ವರ್ಷ ಉಕ್ರೇನ್‌ನ ಮೇಲೆ ರಷ್ಯಾದ ಸಂಪೂರ್ಣ ಆಕ್ರಮಣವು ಯುರೋಪ್ ಖಂಡದ ರಾಷ್ಟ್ರಗಳಲ್ಲಿ ಭದ್ರತೆ ಹೆಚ್ಚಿಸಿಕೊಳ್ಳುವ ಅಗತ್ಯವನ್ನು ಸೃಷ್ಟಿಸಿತ್ತು. ಅಲ್ಲದೆ ಫಿನ್‌ಲ್ಯಾಂಡ್ ಮತ್ತು ಅದರ ನೆರೆಯ ಸ್ವೀಡನ್ ದೇಶಗಳು ದಶಕಗಳ ಕಾಲ ಹೊಂದಿದ್ದ ಮಿಲಿಟರಿ ಅಲಿಪ್ತ ನೀತಿಯನ್ನು ಕೈಬಿಡಲು ಪ್ರೇರೇಪಿಸಿತು.
ಮಿತ್ರರಾಷ್ಟ್ರಗಳಾದ ಟರ್ಕಿ ಮತ್ತು ಹಂಗೇರಿ ತಮ್ಮದೇ ವಿಭಿನ್ನ ಕಾರಣಗಳಿಗಾಗಿ ನ್ಯಾಟೊ ಅಡಿಯಲ್ಲಿ ಬರಲು ಫಿನ್‌ಲ್ಯಾಂಡ್ ಪ್ರಯತ್ನವನ್ನು ವಿಳಂಬಗೊಳಿಸಿದವು.
ಆದರೆ ಕಳೆದ ವಾರ ದೇಶಕ್ಕೆ ಇದ್ದ ಅಂತಿಮ ಅಡಚಣೆ ತೆರವುಗೊಳಿಸಲು ಟರ್ಕಿಯ ಸಂಸತ್ತು ಮತ ಚಲಾಯಿಸಿತು. ಒಂದು ವರ್ಷದೊಳಗೆ ಅಂಗೀಕಾರ ಪೂರ್ಣಗೊಳಿಸುವುದರಿಂದ ಮೈತ್ರಿಯ ಇತ್ತೀಚಿನ ಇತಿಹಾಸದಲ್ಲಿ ಇದು ಅತ್ಯಂತ ವೇಗದ ಸದಸ್ಯತ್ವ ಪ್ರಕ್ರಿಯೆಯಾಗಿದೆ.
ನ್ಯಾಟೊ ಪ್ರಧಾನ ಕಚೇರಿಯಲ್ಲಿ ಔಪಚಾರಿಕವಾಗಿ ದೇಶದ ಸದಸ್ಯತ್ವ ಹಸ್ತಾಂತರಿಸಬೇಕಿದೆ.
ಫಿನ್‌ಲ್ಯಾಂಡ್ ವಿದೇಶಾಂಗ ಸಚಿವರು ನ್ಯಾಟೊ ಸ್ಥಾಪನೆಯ ಪ್ರಮುಖ ನಾಯಕ ಅಮೆರಿಕದ ರಾಜ್ಯ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರಿಗೆ ಔಪಚಾರಿಕ ಪ್ರವೇಶ ಪತ್ರಗಳನ್ನು ಹಸ್ತಾಂತರಿಸುತ್ತಾರೆ.
ಈ ಸುದ್ದಿ ಓದಿದ್ದೀರಾ? ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ | ನೀಲಿಚಿತ್ರ ತಾರೆ ಆರೋಪ ನಿರಾಕರಿಸಿದ ಅಮೆರಿಕದ ಮಾಜಿ ಅಧ್ಯಕ್ಷ
ನಂತರ ದೇಶದ ನೀಲಿ ಮತ್ತು ಬಿಳಿ ಧ್ವಜವನ್ನು ಬ್ರಸೆಲ್ಸ್‌ನಲ್ಲಿರುವ ನ್ಯಾಟೊ ಪ್ರಧಾನ ಕಚೇರಿಯ ಮುಂದೆ ಎಸ್ಟೋನಿಯಾ ಮತ್ತು ಫ್ರಾನ್ಸ್ ನಡುವೆ ಹಾರಿಸಲಾಗುತ್ತದೆ.
“ಫಿನ್‌ಲ್ಯಾಂಡ್ ನ್ಯಾಟೊದ ಸದಸ್ಯನಾಗುವುದು ಅಸಾಧ್ಯ ಎಂದು ನಾವು ಭಾವಿಸಿದ್ದೇವೆ. ಆದರೆ ಈಗ ಅವರು ನಮ್ಮ ಒಕ್ಕೂಟದ ಭಾಗವಾಗಿದ್ದಾರೆ. ಇದು ನಿಜಕ್ಕೂ ಐತಿಹಾಸಿಕ ಕ್ಷಣ” ಎಂದು ನ್ಯಾಟೊ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ.