ಈ ದಿನ ಸಂಪಾದಕೀಯ | ಮನರಂಜನೆಯ ಮರೆಯಲ್ಲಿ ಬದುಕು ಬರಿದಾಗಿಸುತ್ತಿರುವ ಬಿಜೆಪಿ

Date:

ದೇಶದ ಯುವ ಜನತೆ ಆಟದಲ್ಲಿ ಮೈಮರೆತರೆ; ಹಣ, ಸಮಯ ಮತ್ತು ನೆಮ್ಮದಿ ಕಳೆದುಕೊಂಡು ಬದುಕು ಬರಿದು ಮಾಡಿಕೊಂಡರೆ; ನಿರುದ್ಯೋಗ, ಹಣದುಬ್ಬರ, ಬೆಲೆ ಏರಿಕೆಗಳನ್ನು ಪ್ರಶ್ನಿಸದಂತಾದರೆ; ಅದು ಆಳುವ ಸರ್ಕಾರಗಳಿಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸುವುದಿಲ್ಲವೇ?

ದೇಶದಾದ್ಯಂತ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯಗಳದ್ದೇ ಗದ್ದಲ. ಇದೇ ಸಂದರ್ಭದಲ್ಲಿ ಐದು ರಾಜ್ಯಗಳ ಹಣೆಬರಹ ಬದಲಿಸಬಲ್ಲ ವಿಧಾನಸಭಾ ಚುನಾವಣೆಗಳು ಜರುಗುತ್ತಿವೆ. ಒಂದು ಕ್ರಿಕೆಟ್, ಇನ್ನೊಂದು ಚುನಾವಣೆ- ಈ ದೇಶ ಎರಡನ್ನೂ ಜ್ವರದಂತೆ ಭಾವಿಸುತ್ತದೆ. ಎರಡೂ ಒಂದೇ ಸಮಯದಲ್ಲಿ ಬಾಧಿಸುವಂತೆ ಕೇಂದ್ರ ಚುನಾವಣಾ ಆಯೋಗ ಮತ್ತು ಬಿಸಿಸಿಐ ವ್ಯವಸ್ಥಿತವಾಗಿ ನೋಡಿಕೊಂಡಿವೆ.

- Advertisement -

ಆಯೋಗದಲ್ಲಿ ಗ್ಯಾನೇಶ್ ಕುಮಾರ್, ಕ್ರಿಕೆಟ್ ಬೋರ್ಡ್‌ನಲ್ಲಿ ಜಯ್ ಶಾ ಎಂಬ ಮುಖ್ಯಸ್ಥರಿದ್ದಾರೆ. ಚುನಾವಣಾ ಆಯೋಗ ಬಿಜೆಪಿಯ ಬಿಗಿಮುಷ್ಟಿಯಲ್ಲಿದ್ದು, ಚುನಾವಣೆಗಳನ್ನು ಗೆಲ್ಲಿಸಿಕೊಡುತ್ತಿದ್ದರೆ; ಕ್ರಿಕೆಟ್ ಬೋರ್ಡ್ ಐಪಿಎಲ್‌ನಂತಹ ಆಟದ ನೆಪದಲ್ಲಿ ಜೂಜಾಟ ನಡೆಸುತ್ತ ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿದೆ. ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಮರೆಸುತ್ತಿದೆ, ಹಿನ್ನೆಲೆಗೆ ಸರಿಸುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಇದರ ಪರಿವೆಯೇ ಇಲ್ಲದ ದೇಶದ ಯುವ ಜನತೆ- ಎರಡು ವರ್ಗವಾಗಿ ವಿಭಜನೆಗೊಂಡಿದೆ. ಒಂದು ವರ್ಗ ಅಪ್ಪಟ ಮನರಂಜನೆ ನೀಡುವ ಕ್ರಿಕೆಟ್ ಪಂದ್ಯಗಳನ್ನು ನೋಡುತ್ತ ಟ್ರೋಲಾಟದಲ್ಲಿ ಮುಳುಗಿದರೆ; ಮತ್ತೊಂದು ವರ್ಗ ಪ್ರತಿ ಬಾಲಿಗೂ ಬೆಟ್ಟಿಂಗ್ ಕಟ್ಟುತ್ತ ಜೂಜಾಟದಲ್ಲಿ ಬದುಕನ್ನು ಬರಿದಾಗಿಸಿಕೊಳ್ಳುತ್ತಿದೆ. ಇವರ ನಡುವೆ ಆಟಗಾರರು, ಸಿನಿಮಾ ನಟ-ನಟಿಯರು, ಪ್ರಾಯೋಜಕರು, ಜಾಹೀರಾತುದಾರರು, ಸುದ್ದಿ ಮಾಧ್ಯಮಗಳು, ಉದ್ಯಮಿಗಳು, ಸ್ಟೇಡಿಯಂ ಮಾಲೀಕರು ಮಹಾರಾಜರಂತೆ ಮೆರೆಯುತ್ತಿದ್ದಾರೆ.

ಇದನ್ನು ಓದಿದ್ದೀರಾ?: ಮೋದಿ ಝಳಪಿಸಿದ ಹೊಸ ಅಸ್ತ್ರ ಡಿಜಿಟಲ್ ಸೆನ್ಸಾರ್‌ಶಿಪ್!

ಒಂದು ವರ್ಗಕ್ಕೆ ಐಪಿಎಲ್ ಕ್ರಿಕೆಟ್ ಕ್ಷಣಕ್ಷಣಕ್ಕೂ ರೋಚಕತೆಯನ್ನು ಕಟ್ಟಿಕೊಡುವ, ಮನರಂಜನೆ ನೀಡುವ ಆಟ. ಈ ವರ್ಗದ ಕ್ರಿಕೆಟ್ ಅಭಿಮಾನಿಗಳು, ಸೋಷಿಯಲ್ ಮೀಡಿಯಾವನ್ನು ಯುದ್ಧಭೂಮಿ ಎಂದು ಭ್ರಮಿಸುತ್ತಾರೆ. ಟ್ರೋಲ್ ಮತ್ತು ಮೀಮ್ಸ್‌ಗಳನ್ನು ಮಿಸೈಲ್‌ಗಳಂತೆ ಬಳಸುತ್ತಾರೆ. ಲೈಕ್‌ಗಳಿಗೆ ಉಬ್ಬಿಹೋಗುತ್ತಾರೆ. ಕಮೆಂಟ್ಸ್‌ಗಳಿಗೆ ಕಂಗಾಲಾಗುತ್ತಾರೆ. ತಮ್ಮೊಳಗಿನ ಆಸೆ-ಆಕಾಂಕ್ಷೆಗಳನ್ನು ಆಟಗಾರರ ಮೇಲೆ ಹೇರುತ್ತಾರೆ. ಗೆದ್ದರೆ ಪ್ರಪಂಚವನ್ನೇ ಗೆದ್ದಂತೆ ಕುಣಿದಾಡುತ್ತಾರೆ; ಸೋತರೆ ಎದುರಾಳಿ ತಂಡವನ್ನು ಟ್ರೋಲ್ ಮಾಡಿ ವಿಕೃತಿ ಮೆರೆಯುತ್ತಾರೆ. ಮನುಷ್ಯತ್ವವನ್ನೇ ಮರೆತು ಕಾದಾಟಕ್ಕಿಳಿಯುತ್ತಾರೆ. ಅದಕ್ಕೆ ಉತ್ತಮ ಉದಾಹರಣೆಯಾಗಿ ಮೊನ್ನೆ ಬೆಂಗಳೂರಿನಲ್ಲಿ ಆರ್‍‌ಸಿಬಿ ಮತ್ತು ಸಿಎಸ್‌ಕೆ ಪಂದ್ಯವನ್ನು ನೋಡಬಹುದಾಗಿದೆ. ಆ ಪಂದ್ಯದ ನಂತರ ನಡೆದ ಘಟನೆಗಳ ವಿಡಿಯೋಗಳೇ ಅಭಿಮಾನಿಗಳ ಅಸಹ್ಯವನ್ನು ಹೊರಹಾಕುತ್ತವೆ.

ಒಂದು ಪೋಸ್ಟ್/ಟ್ರೋಲ್ ಎಷ್ಟು ಜನ ನೋಡಿದರು, ಹೇಗೇಗೆಲ್ಲ ವೈರಲ್ ಆಯಿತು, ಎಷ್ಟು ಓಡಿತು ಎಂಬುದರ ಮೇಲೆ ಅವತ್ತಿನ ಅವರ ಬದುಕು ನಿಂತಿರುತ್ತದೆ. ಅದೇನೂ ನಿರಂತರವಲ್ಲ, ಅವರ ಅಬ್ಬರ, ಆರ್ಭಟ, ಕುಣಿದಾಟವೇ ಬದುಕಲ್ಲ. ಮೊಬೈಲ್‌ನಿಂದ ಬೆರಳು ತೆಗೆಯುತ್ತಿದ್ದಂತೆ, ಎಲ್ಲವೂ ತಣ್ಣಗಾಗಿರುತ್ತದೆ. ಅದು ಗೊತ್ತಿದ್ದರೂ, ಮತ್ತೊಂದು ಮ್ಯಾಚ್‌ಗಾಗಿ- ಹಣಿಯಲು, ಅಣಕಿಸಲು ಸಿದ್ಧರಾಗಿರುತ್ತಾರೆ. ಸೋಷಿಯಲ್ ಮೀಡಿಯಾ ಎನ್ನುವುದು ಹೊಸಗಾಲದ ಕಿಂದರಿಜೋಗಿ. ನಾವು ಆ ಕಿಂದರಿಜೋಗಿಯ ಹಿಂದೆ ಇಲಿಗಳಂತೆ ಓಡುತ್ತಿದ್ದೇವೆ… ಎಲ್ಲಿಗೆ ಎನ್ನುವುದು ಗೊತ್ತಿಲ್ಲ!

ಮತ್ತೊಂದು ವರ್ಗ ಬೆಟ್ಟಿಂಗ್ ದಂಧೆಯಲ್ಲಿ ಮುಳುಗೇಳುತ್ತಿದೆ. ಜೂಜಾಟದ ಜಾಲದಲ್ಲಿ ಯುವಕರು, ಕಾಲೇಜು ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಆರ್ಥಿಕವಾಗಿ ಹಿಂದುಳಿದವರು, ದಿನಗೂಲಿ ಕಾರ್ಮಿಕರು, ನಗರಗಳಲ್ಲಿ ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿರುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಜೂಜಾಟ ಮೊದಲು ನಗರ, ಪಟ್ಟಣಗಳಲ್ಲಿ ಮಾತ್ರವಿತ್ತು. ಈಗ ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಇದ್ದು, ಹಳ್ಳಿಗಳಿಗೂ ಹಬ್ಬಿದೆ. ಪಂದ್ಯಗಳ ಸೋಲು–ಗೆಲುವು ಲೆಕ್ಕಾಚಾರದಲ್ಲಿ ನಡೆಯುತ್ತಿದ್ದ ಬೆಟ್ಟಿಂಗ್, ಈಗ ಟಾಸ್‌ನಿಂದ ಹಿಡಿದು ಕೊನೆಯ ಓವರ್‍‌ವರೆಗೆ; ಪ್ರತಿ ಬಾಲಿಗೆ, ಓವರ್‍‌ಗೆ, ವಿಕೆಟ್ ಪತನಕ್ಕೆ, ವೈಯಕ್ತಿಕ ಸ್ಕೋರ್‍‌ಗೆ, ಪವರ್ ಪ್ಲೇವರೆಗೂ ಹಣ ಕಟ್ಟಲಾಗುತ್ತದೆ. ಬೌಂಡರಿ ಬಾರಿಸಿದರೆ 10ಕ್ಕೆ 20. ಸಿಕ್ಸರ್ ಬಾರಿಸಿದರೆ 10ಕ್ಕೆ 40. ಒಬ್ಬೊಬ್ಬರದು ಒಂದೊಂದು ರೇಂಜ್.

ಇದನ್ನು ಓದಿದ್ದೀರಾ?: ತಮ್ಮದೇ ಅವನತಿಗೆ ಅಂತಿಮ ಮೊಳೆ ಹೊಡೆದುಕೊಳ್ಳುತ್ತಿದ್ದಾರೆ ಟ್ರಂಪ್!

ಪ್ರತಿ ಬಾರಿಯ ಐಪಿಎಲ್‌ನಲ್ಲೂ ಸಾವಿರಾರು ಕೋಟಿಗಳ ಅಕ್ರಮ ಬೆಟ್ಟಿಂಗ್ ವ್ಯವಹಾರ ಅವ್ಯಾಹತವಾಗಿ ನಡೆಯುತ್ತದೆ. ಸಣ್ಣದಾಗಿ ಶುರುವಾದ ಜೂಜಾಟ ಈಗ ಬೃಹತ್ ದಂಧೆಯಾಗಿ ಮಾರ್ಪಾಡಾಗಿದೆ. ಗಲ್ಲಿಯ ರೌಡಿಗಳಿಂದ ಹಿಡಿದು ಮಾಫಿಯಾ ಡಾನ್‌ಗಳವರೆಗೆ; ಪೇದೆಯಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೆ; ದಿನಗೂಲಿ ಕಾರ್ಮಿಕನಿಂದ ಹಿಡಿದು ಐಎಎಸ್ ಅಧಿಕಾರಿಗಳವರೆಗೆ; ರಾಜಕೀಯ ಪುಢಾರಿಯಿಂದ ನಾಯಕರವರೆಗೆ ವಿಸ್ತರಣೆಯಾಗಿದೆ. ಇದಲ್ಲದೆ, ಬುಕ್ಕಿಗಳು ನಡೆಸುವ ಮ್ಯಾಚ್ ಫಿಕ್ಸಿಂಗ್, ಪ್ರತಿ ಪಂದ್ಯಕ್ಕೆ, ಪ್ರತಿ ಬಾಲಿಗೆ ವಿಶ್ವದಾದ್ಯಂತ ನಡೆಯುವ ಬೆಟ್ಟಿಂಗ್ ದಂಧೆಯ ಅಂದಾಜು ಹಣ ನಮ್ಮ ಊಹೆಗೂ ನಿಲುಕದ್ದಾಗಿದೆ. ಹಣ ಕಳೆದುಕೊಂಡ ಬಡವರು, ಮಧ್ಯಮವರ್ಗದವರು ಆತ್ಮಹತ್ಯೆಗಳಿಗೆ ತುತ್ತಾದರೆ, ಹಲವು ಕುಟುಂಬಗಳು ಮನೆ ಮಠ ಕಳೆದುಕೊಂಡು ಬೀದಿಗೆ ಬೀಳುತ್ತವೆ.

ಹೀಗೆ ದೇಶದ ಯುವ ಜನತೆ ಆಟದಲ್ಲಿ ಮೈಮರೆತರೆ; ಹಣ, ಸಮಯ ಮತ್ತು ನೆಮ್ಮದಿ ಕಳೆದುಕೊಂಡು ಬದುಕು ಬರಿದು ಮಾಡಿಕೊಂಡರೆ; ನಿರುದ್ಯೋಗ, ಹಣದುಬ್ಬರ, ಬೆಲೆ ಏರಿಕೆಗಳನ್ನು ಪ್ರಶ್ನಿಸದಂತಾದರೆ; ಅದು ಆಳುವ ಸರ್ಕಾರಗಳಿಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸುತ್ತದೆ. ಮೋದಿ ಸರ್ವಾಧಿಕಾರಿಯಂತೆ ಮೆರೆಯಲು; ಮುಗುಮ್ಮಾಗಿ ಮತ್ತಷ್ಟು ಅನಾಹುತಗಳನ್ನು ಮಾಡಲು ನಾವೇ ಅನುವು ಮಾಡಿಕೊಟ್ಟಂತಾಗುತ್ತದೆ. ಬಿಜೆಪಿಯ ಈ ಮರೆಸುವ ಆಟ ಅರ್ಥವಾಗುವುದು ಯಾವಾಗ?

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ ...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ...