ಈ ದಿನ ಸಂಪಾದಕೀಯ | ಜನಾಂಗೀಯ ನಿಂದನೆ ಎಂಬ ರೋಗ ಮತ್ತು ಫಿಫಾ ಫುಟ್‌ಬಾಲ್

Date:

ಕ್ರೀಡೆಯ ನಿಜವಾದ ಗೆಲುವು ಟ್ರೋಫಿಗಳನ್ನು ಗೆಲ್ಲುವುದಲ್ಲ; ಪ್ರತಿಯೊಬ್ಬ ಆಟಗಾರನೂ ಗೌರವ, ಸಮಾನತೆ ಮತ್ತು ಮಾನವೀಯತೆಯೊಂದಿಗೆ ಆಟವಾಡುವ ವಾತಾವರಣವನ್ನು ನಿರ್ಮಿಸುವುದಾಗಿದೆ. ಇಲ್ಲಿ ಗೆಲ್ಲಬೇಕಾಗಿರುವುದು ಯಾವುದೇ ದೇಶವಲ್ಲ, ತಂಡವಲ್ಲ, ಆಟಗಾರನೂ ಅಲ್ಲ, ಕ್ರೀಡೆ ಮಾತ್ರ.

ಈ ಬಾರಿಯ ಫಿಫಾ ವಿಶ್ವಕಪ್ ಹಲವು ಕಾರಣಗಳಿಗೆ ಕುತೂಹಲ ಕೆರಳಿಸಿದೆ. ಮೂವತ್ತರ ಆಚೀಚೆ ಇರುವ ಮೆಸ್ಸಿ, ರೊನಾಲ್ಡೊ, ಎಂಬಾಪೆ, ನೇಮರ್‌, ಸಾಡಿಯೋ ಮಾನೆ, ಲೂಕ ಮೊಡ್ರಿಕ್‌, ಮುಹಮ್ಮದ್‌ ಸಲಾಹ್‌ರಂತಹ ಸ್ಟಾರ್‌ ಆಟಗಾರರಿಗೆ ಇದು ಕೊನೆಯ ವಿಶ್ವಕಪ್‌ ಆಗಲಿದೆ. ಇವರು ಕೇವಲ ಆಟಗಾರರಲ್ಲ, ಒಂದು ಪೀಳಿಗೆಯ ಕನಸು, ಪ್ರೇರಣೆ ಮತ್ತು ಫುಟ್ಬಾಲ್‌ನ ದಂತಕತೆಗಳು. ಹಾಗಾಗಿ ಇದು ಕೇವಲ ಕ್ರೀಡಾಕೂಟವಲ್ಲ, ಅಂಕಿಅಂಶಗಳ ಪೇರಿಸುವ ಆಟವಲ್ಲ, ಭಾವನೆಗಳ ಹಬ್ಬ. ಕನಸುಗಳ ಸಂಭ್ರಮ. ಕೋಟ್ಯಂತರ ಅಭಿಮಾನಿಗಳ ಉಸಿರಾಟ. ಇಡೀ ವಿಶ್ವವೇ ಕಾಲ್ಚೆಂಡಿನ ಮಾಂತ್ರಿಕತೆಗೆ ಮಾರುಹೋಗಿದೆ, ಮೋಡಿಗೊಳಗಾಗಿದೆ, ಸಾಕ್ಷಿಯಾಗುತ್ತಿದೆ.

- Advertisement -

ಫುಟ್‌ಬಾಲ್‌ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ. ದೇಶ, ಧರ್ಮ, ಭಾಷೆ, ಜಾತಿ, ವರ್ಣ, ಹಣ ಎಂಬ ಎಲ್ಲ ಗಡಿಗಳನ್ನು ದಾಟಿ ಜನರನ್ನು ಒಂದುಗೂಡಿಸುವ ಸಾಮರ್ಥ್ಯ ಈ ಆಟಕ್ಕಿದೆ. ಅದೆಲ್ಲವೂ ಈಗ ವಿಶ್ವಕಪ್ ಫುಟ್‌ಬಾಲ್‌ ಪಂದ್ಯಾವಳಿಯಲ್ಲಿ ಕಾಣುತ್ತಿದೆ. ಈ ಸಂಭ್ರಮ, ಸಂತೋಷದ ನಡುವೆಯೇ, ಮತ್ತೊಂದು ಮಗ್ಗುಲಿನಲ್ಲಿ ಮಾನವ ಸಮಾಜವನ್ನು ಶತಮಾನಗಳಿಂದ ಕಾಡುತ್ತಿರುವ ವರ್ಣಭೇದ ಅಥವಾ ಜನಾಂಗೀಯ ನಿಂದನೆ(Racism) ಎಂಬ ಸಾಮಾಜಿಕ ರೋಗವೂ ಉಲ್ಬಣಿಸುತ್ತಿದೆ. ನಮ್ಮಲ್ಲಿ ಮೇಲ್ಜಾತಿ ಶ್ರೇಷ್ಠವೆನ್ನುವ ಮೂರ್ಖರಿರುವಂತೆ; ಯೂರೋಪ್ ಮತ್ತು ಅಮೆರಿಕಾಗಳಲ್ಲಿ ಬಿಳಿ ತೊಗಲು ಶ್ರೇಷ್ಠವೆನ್ನುವ ಬುದ್ಧಿಗೇಡಿಗಳಿದ್ದಾರೆ. ಫುಟ್ ಬಾಲ್ ಕ್ರೀಡಾಕೂಟದಲ್ಲಿ ಅದು ಎದ್ದು ಕಾಣುತ್ತಿದೆ.  

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ವಿಶ್ವದ ಅತಿ ದೊಡ್ಡ ಫುಟ್‌ಬಾಲ್‌ ಸಂಸ್ಥೆಯಾದ ಫಿಫಾ ಹಲವು ವರ್ಷಗಳಿಂದ ವರ್ಣಭೇದದ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹೋರಾಟ ನಡೆಸುತ್ತಿದೆ. ಈ ಬಾರಿ ಹಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ತಂತ್ರಜ್ಞಾನದ ಸಹಕಾರ ಪಡೆದಿದೆ. ಸ್ವಯಂಸೇವಾ ಕಾರ್ಯಕರ್ತರನ್ನು ನಿಯುಕ್ತಿಗೊಳಿಸಿದೆ. ವಿಶೇಷವಾಗಿ ಪ್ರೇಕ್ಷಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ಫಿಫಾ ಅಧ್ಯಕ್ಷ ಜಿಯಾನಿ ಇನ್ಸಾಂಟಿನೊ, ‘ವರ್ಣ ತಾರತಮ್ಯ ಸಹಿಸುವುದಿಲ್ಲ. ಅನುಚಿತವಾಗಿ ವರ್ತಿಸಿದವರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಘೋಷಿಸಿದ್ದೂ ಆಗಿದೆ. ಫಿಫಾ ತನ್ನ ಸಂವಿಧಾನದಲ್ಲಿಯೇ ಅದನ್ನು ಅಳವಡಿಸಿಕೊಂಡಿದೆ. ವರ್ಣ, ಧರ್ಮ, ಲಿಂಗ, ರಾಷ್ಟ್ರೀಯತೆ ಅಥವಾ ರಾಜಕೀಯ ಅಭಿಪ್ರಾಯದ ಆಧಾರದ ಮೇಲೆ ತಾರತಮ್ಯ ನಡೆಸುವುದು ಶಿಕ್ಷಾರ್ಹ ಅಪರಾಧ ಎಂದು ಸ್ಪಷ್ಟಪಡಿಸಿದೆ.

ಇದನ್ನು ಓದಿದ್ದೀರಾ?: ಫ್ರಾನ್ಸ್‌ಗೆ ಭರ್ಜರಿ ಜಯ; ಮೆಸ್ಸಿ ಸಾರ್ವಕಾಲಿಕ ದಾಖಲೆಯ ಸನಿಹಕ್ಕೆ ಎಂಬಾಪೆ

ಇಷ್ಟಾದರೂ ಆಟಗಾರರ ಮೇಲೆ ಆಗುತ್ತಿರುವ ಜನಾಂಗೀಯ ನಿಂದನೆಗಳು, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ದ್ವೇಷಪೂರಿತ ಅಭಿಯಾನಗಳು ಮತ್ತು ಪ್ರೇಕ್ಷಕರ ವರ್ತನೆಗಳನ್ನು ನೋಡಿದರೆ, ಇವರು ಈ ಕಾಲದಲ್ಲಿ ಮನುಷ್ಯರಾಗುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಮೊನ್ನೆ ಇಂಗ್ಲೆಂಡ್ ಮತ್ತು ಘಾನಾ ತಂಡಗಳ ನಡುವಿನ ಪಂದ್ಯದ ವೇಳೆ, ಘಾನಾ ಆಟಗಾರರನ್ನು ಬಹಿರಂಗವಾಗಿಯೇ ನಿಂದಿಸಿದರು. ಛೇಡಿಸಿದರು. ಆಡಿಕೊಂಡು ನಕ್ಕರು. ಸೋಜಿಗದ ಸಂಗತಿ ಎಂದರೆ, ಇಂಗ್ಲೆಂಡ್ ತಂಡದಲ್ಲಿನ 26 ಆಟಗಾರರ ಪೈಕಿ 15 ಮಂದಿ ಕಪ್ಪುವರ್ಣೀಯ ಮತ್ತು ಮಿಶ್ರವರ್ಣೀಯ ಆಟಗಾರರಿದ್ದರು.

ಫುಟ್‌ಬಾಲ್‌ನಲ್ಲಿ ಇದು ಹಲವು ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕಪ್ಪು ವರ್ಣದ ಆಟಗಾರರನ್ನು ಉದ್ದೇಶಿಸಿ ಕೋತಿಯಂತೆ ಅಣಕಿಸುವುದು, ಕಿಚಾಯಿಸುವುದು, ನಿಂದಿಸುವುದು, ಕೂಗುವುದು, ಅವಹೇಳನಕಾರಿ ಬ್ಯಾನರ್‌ಗಳನ್ನು ಪ್ರದರ್ಶಿಸುವುದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಸಂದೇಶಗಳನ್ನು ಹರಡುವುದು… ನಡೆದೇ ಇದೆ.

ಇತ್ತೀಚಿನ ದಿನಗಳಲ್ಲಿ ವೃತ್ತಿಪರ ಫುಟ್‌ಬಾಲ್‌ನಲ್ಲಿ ಆಫ್ರಿಕಾ, ದಕ್ಷಿಣ ಅಮೆರಿಕ ಮತ್ತು ಏಷ್ಯಾ ಮೂಲದ ಆಟಗಾರರ ಸಂಖ್ಯೆ ಹೆಚ್ಚಾದಂತೆ, ವರ್ಣಭೇದದ ರೋಗವೂ ಹೆಚ್ಚಾಗುತ್ತಿದೆ. ಅಂದರೆ ಕರಿಯರನ್ನು ಕಂಡರೆ ಅಸಹನೆ, ಸಿಟ್ಟು, ದ್ವೇಷಾಸೂಯೆಗಳು ದುಪ್ಪಟ್ಟಾಗುತ್ತಿವೆ. ಅನೇಕ ಆಟಗಾರರು ತಮ್ಮ ಸ್ವಂತ ಶ್ರಮ ಮತ್ತು ಪ್ರತಿಭೆಯಿಂದ ವಿಶ್ವದ ಮೆಚ್ಚುಗೆ ಗಳಿಸಿದರೂ, ಮೈದಾನದ ಒಳಗೆ ಮತ್ತು ಹೊರಗೆ ಜನಾಂಗೀಯ ನಿಂದನೆಗೆ ಗುರಿಯಾಗುವುದು ನಿಲ್ಲದಾಗಿದೆ.

ಮೊನ್ನೆ ಫಿಫಾ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿರುವ ಬಲಿಷ್ಠ ಸ್ಪೇನ್ ತಂಡದ ಆಟಗಾರರಿಗೆ ಒಂದೇ ಒಂದು ಗೋಲು ಹೊಡೆಯದಂತೆ ಕೋಟೆ ಕಟ್ಟಿದ್ದು, 67ನೇ ಸ್ಥಾನದಲ್ಲಿರುವ ಕೇಪ್‌ ವರ್ಡ್‌ ತಂಡ. ಹಾಗೆ ನೋಡಿದರೆ, ಕೇಪ್ ವರ್ಡ್ ತಂಡ ಇದೇ ಮೊದಲ ಬಾರಿಗೆ ಅರ್ಹತೆ ಪಡೆದಿದೆ. ಪಶ್ಚಿಮ ಆಫ್ರಿಕಾದ ಕರಾವಳಿಯಿಂದ ಸುಮಾರು 600 ಕಿ.ಮೀ. ದೂರದಲ್ಲಿರುವ, ಕೇವಲ ಐದಾರು ಲಕ್ಷ ಜನಸಂಖ್ಯೆಯಿರುವ, ಫುಟ್‌ಬಾಲ್‌ನಲ್ಲಿ ಅಂಬೆಗಾಲು ಇಡುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಅದ್ಭುತ ಆಟದಿಂದಾಗಿ ನಾಕ್‌ಔಟ್ ಹಂತ ತಲುಪಿದ ಅತಿ ಚಿಕ್ಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದಕ್ಕೆ ಮುಖ್ಯ ಕಾರಣ, ಗೋಲಿ ವೋಜಿನಾರ ಅದ್ಭುತ ಗೋಲ್‌ಕೀಪಿಂಗ್. ಸಾಮಾನ್ಯವಾಗಿ ಫುಟ್‌ಬಾಲ್‌ ಆಟಗಾರರು ನಿವೃತ್ತರಾಗುವ ವಯಸ್ಸಿನ, 40ರ ಹರೆಯದ ವೋಜಿನಾರ ಆಟ ಮಿಂಚಿಗೂ ಮೀರಿದ್ದು. 2012ರಿಂದ ಕೇಪ್ ವರ್ಡ್ ರಾಷ್ಟ್ರೀಯ ತಂಡದ ಪ್ರಮುಖ ಗೋಲ್‌ಕೀಪರ್ ಆಗಿರುವ ವೋಜಿನಾ, ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಪಂದ್ಯದ ಬಳಿಕ ತಮ್ಮ ಅಜ್ಜ-ಅಜ್ಜಿ ಹಾಗೂ ಅಮ್ಮನನ್ನು ನೆನೆದು ಭಾವುಕರಾಗಿ ಕಣ್ಣೀರು ಹಾಕಿದ್ದು ಈಗ ಜಗತ್ಪ್ರಸಿದ್ಧವಾಗಿದೆ. ಇಷ್ಟಾದರೂ, ವೋಜಿನಾರನ್ನು ಕೂಡ ಕೆಲವರು ಜನಾಂಗೀಯ ನಿಂದನೆ, ಟ್ರೋಲ್ ಮೂಲಕ ಅವಮಾನಿಸಿದ್ದಾರೆ.

ಜನಾಂಗಭೇದ ಎನ್ನುವುದು ಹೊಸದೇನೂ ಅಲ್ಲ. ಇದು ಅಮೆರಿಕದ ಬಂಡವಾಳಶಾಹಿ ಕ್ರೌರ್ಯ ಮತ್ತು ಯುರೋಪಿನ ವಸಾಹತುಶಾಹಿ ಹಿಂಸೆಯೊಂದಿಗೆ ತಳಕು ಹಾಕಿಕೊಂಡಿದೆ. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಮುಂತಾದ ಮಹಾನ್ ನಾಯಕರು ಜಗತ್ತಿನಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿ ಸಮಾನತೆ ಸಾರಿದ ಇತಿಹಾಸವೂ ಇದೆ. ಲ್ಯಾಟಿನ್ ಅಮೆರಿಕಾ ರಾಷ್ಟ್ರಗಳು ಫುಟ್‌ಬಾಲ್‌ ಕ್ರೀಡೆಯ ಮೇಲೆ ಅಧಿಪತ್ಯ ಸಾಧಿಸಿದ್ದರೂ ಕಡುಬಡ ರಾಷ್ಟಗಳಾದ ಕ್ಯಾಮರೂನ್, ನೈಜೀರಿಯಾ, ಐವರಿ ಕೋಸ್ಟ್ ದೇಶಗಳು ಕ್ರೀಡೆಯಲ್ಲಿ ಪಾರಮ್ಯ ಮೆರೆಯುತ್ತಿವೆ. ಅಷ್ಟೇ ಅಲ್ಲ, ಈಗ ಚಾಂಪಿಯನ್‌ ಎನಿಸಿಕೊಂಡ ಬಹುತೇಕ ತಂಡಗಳಲ್ಲಿ ಚುರುಕಾಗಿ ಆಡುವ, ತಮ್ಮ ಪ್ರತಿಭೆಯಿಂದಲೇ ಸ್ಥಾನ ಪಡೆದಿರುವ ಕಪ್ಪುವರ್ಣೀಯ ಆಟಗಾರರಿಲ್ಲದ ತಂಡಗಳೇ ಇಲ್ಲ. ಹೀಗಿದ್ದರೂ ಅವರ ಮೇಲಿನ ಅಸಹನೆ, ದೌರ್ಜನ್ಯ ಮತ್ತು ದ್ವೇಷಾಸೂಯೆಗಳು ನಿಂತಿಲ್ಲ.

ಇದನ್ನು ಓದಿದ್ದೀರಾ?: ಜಗತ್ತೇ ಸಂಭ್ರಮಿಸುವ ಫಿಫಾ ವಿಶ್ವಕಪ್: ಭಾರತದ ತಂಡ ಯಾಕೆ ಆಡುತ್ತಿಲ್ಲ?

ಫುಟ್‌ಬಾಲ್ ಕೇವಲ ಹಣ, ಪ್ರಚಾರ, ಪ್ರತಿಷ್ಠೆ, ಗೋಲು ಗಳಿಸುವ ಆಟವಲ್ಲ; ಅದು ಸಾಮಾಜಿಕ ಬದಲಾವಣೆಯ ಸಾಧನ. ಮೈದಾನಕ್ಕಿಳಿದ ಆಟಗಾರರು, ಆಟಗಾರರಷ್ಟೇ. ಅಲ್ಲಿ ದೇಶ, ಧರ್ಮ, ಜಾತಿ, ಬಣ್ಣಗಳಿಲ್ಲ. ಎಲ್ಲರೂ ಸಮಾನರು. ಈ ಮೌಲ್ಯವನ್ನು ಕಾಪಾಡುವುದು ಕ್ಲಬ್‌ಗಳು, ಆಟಗಾರರು ಮತ್ತು ಅಭಿಮಾನಿಗಳ ಜವಾಬ್ದಾರಿಯಾಗಿದೆ.

ವಿಶ್ವವನ್ನು ಒಂದುಗೂಡಿಸುವ ಶಕ್ತಿ ಫುಟ್‌ಬಾಲ್‌ಗೆ ಇದ್ದರೆ, ವರ್ಣಭೇದವನ್ನು ಸೋಲಿಸುವ ನೈತಿಕ ಹೊಣೆಗಾರಿಕೆಯೂ ಅದಕ್ಕಿದೆ. ಕ್ರೀಡೆಯ ನಿಜವಾದ ಗೆಲುವು ಟ್ರೋಫಿಗಳನ್ನು ಗೆಲ್ಲುವುದಲ್ಲ; ಪ್ರತಿಯೊಬ್ಬ ಆಟಗಾರನೂ ಗೌರವ, ಸಮಾನತೆ ಮತ್ತು ಮಾನವೀಯತೆಯೊಂದಿಗೆ ಆಟವಾಡುವ ವಾತಾವರಣವನ್ನು ನಿರ್ಮಿಸುವುದಾಗಿದೆ. ಇಲ್ಲಿ ಗೆಲ್ಲಬೇಕಾಗಿರುವುದು ಯಾವುದೇ ದೇಶವಲ್ಲ, ತಂಡವಲ್ಲ, ಆಟಗಾರನೂ ಅಲ್ಲ, ಕ್ರೀಡೆ ಮಾತ್ರ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ನಕಲಿ ಆಹಾರ ಮತ್ತು ಔಷಧ: ಜನರ ಜೀವದ ಜೊತೆ ಚೆಲ್ಲಾಟ

ಆಹಾರ ಮತ್ತು ಔಷಧಗಳ ಉತ್ಪಾದನೆ, ಸಂಗ್ರಹಣೆ ಹಾಗೂ ವಿತರಣಾ ವ್ಯವಸ್ಥೆಯಲ್ಲಿ ನಡೆಯುವ...

ಈ ದಿನ ಸಂಪಾದಕೀಯ | ಸಾಮರಸ್ಯ ಇರಲೆನ್ನುವ ಆರೆಸ್ಸೆಸ್, ಸಮಾನತೆ ಬೇಕೆಂದು ಸಾರುವುದಿಲ್ಲವೇಕೆ?

ಜಾತಿಪದ್ಧತಿಯೊಂದಿಗೆ ರಾಜಿ ಮಾಡಿಕೊಂಡ ಆರೆಸ್ಸೆಸ್ ಪ್ರಣೀತ ಸಾಮರಸ್ಯ ವಾದದಿಂದ ಅಸ್ಪೃಶ್ಯರು, ದಲಿತರು...

ಈ ದಿನ ಸಂಪಾದಕೀಯ | ಅಮೆರಿಕ ದಾದಾಗಿರಿಗೆ ಮೋದಿ ಮೌನ- ರಾಜತಾಂತ್ರಿಕತೆಯಲ್ಲ, ಶರಣಾಗತಿ!

ಅಮೆರಿಕ ಜೊತೆಗಿನ ಭಾರತದ ನಂಟು 'ಸಮಾನ ಸಾರ್ವಭೌಮತ್ವ'ದ ಮೇಲೆ ಆಧಾರಿತವಾಗಿರಬೇಕೇ ಹೊರತು,...

ಈ ದಿನ ಸಂಪಾದಕೀಯ | ಯಾರು ದೇಶದ್ರೋಹಿಗಳು? ಮೋದಿ ಭಾರತದ ಹೊಸ ನಿರೂಪಣೆ ಅಪಾಯಕಾರಿ

ಮೋದಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯೇತರ ಪಕ್ಷಗಳ ಮುಖಂಡರನ್ನು, ಬಿಜೆಪಿ ವಿರೋಧಿಗಳನ್ನು,...