ಈ ದಿನ ಸಂಪಾದಕೀಯ | ಭೀಕರ ಬರದ ಭವಿಷ್ಯ; ಭೀಷಣ ಬಿಸಿಲಿಗೆ ಬಲಿಯಾಗುತ್ತಿವೆ ಜೀವಗಳು; ಸರ್ಕಾರಗಳ ಮೈಮರೆವು ಅಕ್ಷಮ್ಯ

Date:

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಈ ಬಾರಿ ಮುಂಗಾರು ಮಳೆ ಕೊರತೆಯ ಪ್ರಮಾಣ ಶೇ 92ರಷ್ಟು! ಇದು ನೀಡುವ ಸೂಚನೆಯೇನು? ಆಹಾರದ ಕೊರತೆ ಖಂಡಿತಾ ದೇಶವನ್ನು ಬಾಧಿಸಲಿದೆ. ಜನರು ಉಷ್ಣ ಹವಾಮಾನದಿಂದಾಗಿ ಸಾಯಲಿದ್ದಾರೆ. ಕಾಯಿಲೆಪೀಡಿತರು, ವಯಸ್ಸಾದವರು, ನವಜಾತ ಶಿಶುಗಳ ಜೀವಕ್ಕೆ ಎಲ್‌ನಿನೋ ನೇರವಾಗಿ ಹಾನಿ ಮಾಡಲಿದೆ. ಇದೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಹೊಣೆಗಾರಿಕೆ ಜನಪ್ರತಿನಿಧಿಗಳು, ಸರ್ಕಾರಗಳದ್ದು. ದುರಂತವೆಂದರೆ ಅವರೆಲ್ಲ ಅಧಿಕಾರ ಹಿರಿಯಲು, ಕುರ್ಚಿ ಭದ್ರಪಡಿಸಿಕೊಳ್ಳಲು ಬಡಿದಾಡಿಕೊಳ್ಳುತ್ತಾ ಜನರ ಹಿತ ಮರೆಯುತ್ತಿದ್ದಾರೆ. ಇದು ಅಕ್ಷಮ್ಯ.

- Advertisement -

ಈ ವರ್ಷ ಭಾರತ ಭೀಕರ ಬರಗಾಲ ಎದುರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿವೆ. ಈ ಶತಮಾನದಲ್ಲೇ ಇದು ಭೀಕರ ಬರಗಾಲ ಎನಿಸಲಿದೆ. ಪೆಸಿಫಿಕ್ ಸಾಗರದಲ್ಲಿ ಐದಾರು ವರ್ಷಗಳಿಗೊಮ್ಮೆ ನೀರು ಬಿಸಿಯಾಗಿ ಏಳುವ ತೀವ್ರತರದ ಬಿಸಿಯ ಅಲೆಗಳನ್ನು ‘ಎಲ್ ನಿನೋ’ ಎಂದು ಕರೆಯಲಾಗುತ್ತದೆ. ಎಲ್ ನಿನೋ ಮೇಲೆದ್ದಿತೆಂದರೆ ಭಾರತಕ್ಕೆ ಬರಗಾಲ ಖಂಡಿತ.  ಎಲ್ ನಿನೋದಿಂದಾಗಿಯೇ ಭಾರತವು1876, 1899, 1918, 1965, 1972, 1987, 2002, 2009 ಮತ್ತು 2015-2018ರಲ್ಲಿ ಬರಗಾಲ ಅನುಭವಿಸಿದೆ. ಈ ವರ್ಷವೂ ಭಾರತ ಬರಗಾಲ ಎದುರಿಸಲಿದೆ ಎಂದು ಜಾಗತಿಕ ಹವಾಮಾನ ವರದಿಗಳು ಹೇಳುತ್ತಿವೆ. ಪೆಸಿಫಿಕ್‌ ಸಾಗರದಲ್ಲಿ ಎಲ್‌ ನಿನೋ ಉಂಟಾದರೆ ಅದರ ದುಷ್ಪರಿಣಾಮ ಏಷ್ಯಾದ ಹಲವು ದೇಶಗಳ ಮೇಲೆ ಆಗಲಿದೆ. ಈ ಸಾರಿ ಬರೇ ಎಲ್‌ ನಿನೋ ಬಂದಿಲ್ಲ. ಅದರ ರೂಪ ಭಯಂಕರವಾಗಿದೆ. ಹಾಗಾಗಿ ಈಗಿನದು ʼಸೂಪರ್‌ ಎಲ್‌ ನಿನೋ; ಎಂದು ಕರೆಯಲಾಗುತ್ತಿದೆ. ಒಟ್ಟಿನಲ್ಲಿ ಎಲ್‌ನಿನೋ ಅಂದ್ರೆ ಭೀಕರ ಬರ, ಆಹಾರಕ್ಕೆ ತತ್ವಾರ ಅಷ್ಟೇ. ಈ ಬರವನ್ನು ಎದುರಿಸಲು ಸರ್ಕಾರಗಳು ಹೇಗೆ ಸಿದ್ಧವಾಗುತ್ತವೆ ಎಂಬುದರ ಮೇಲೆ ಅದರ ನಂತರದ ಪರಿಣಾಮ ನಿರ್ಧಾರವಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ಸರಿಯಾಗಿ ಐದು ವರ್ಷಗಳ ಹಿಂದೆ ಕೊರೋನಾ ಸಾಂಕ್ರಾಮಿಕ ವಿಶ್ವದಗಲ ತನ್ನ ಕಬಂಧ ಬಾಹು ಚಾಚಿದಾಗ ಯಾವೆಲ್ಲ ದೇಶಗಳು ಹೇಗೆಲ್ಲ ಜವಾಬ್ದಾರಿಯಿಂದ ನಿಭಾಯಿಸಿದವು ಎಂಬುದು ನಮ್ಮ ಕಣ್ಣ ಮುಂದಿದೆ. ಯಾರೆಲ್ಲ ಮೈಮರೆತು ಲಕ್ಷಾಂತರ ಜೀವಗಳಿಗೆ ಕಂಟಕರಾದರು ಎಂಬುದೂ ಗೊತ್ತೇ ಇದೆ. ಕೊರೋನಾ ಮೊದಲ ಅಲೆ ಭಾರತಕ್ಕೆ ಬರುವುದಕ್ಕೂ ಮುನ್ನ ನೆರೆ ದೇಶಗಳಾದ ಚೀನಾ, ನೇಪಾಳವನ್ನು ಬಾಧಿಸಲು ಆರಂಭಿಸಿದಾಗ ಭಾರತ ಎಚ್ಚೆತ್ತುಕೊಳ್ಳಲಿಲ್ಲ. ಕೊರೋನಾ ಸುನಾಮಿಯಂತೆ ಭಾರತಕ್ಕೆ ಅಪ್ಪಳಿಸಲಿದೆ. ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಭಾರತಕ್ಕೆ ಕೊರೋನಾ ಪ್ರವೇಶಿಸದಂತೆ ತಡೆಯಲು ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದ್ದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರನ್ನು ಮೋದಿ ಸರ್ಕಾರದ ಮಂತ್ರಿಗಳು ಲಘುವಾಗಿ ಪರಿಗಣಿಸಿದ್ದರು. ಬೇಜವಾಬ್ದಾರಿಯ ಹೇಳಿಕೆ ನೀಡಿ ಜನರನ್ನು ಭಯಭೀತರನ್ನಾಗಿಸುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿಕೆ ನೀಡಿದ್ದರು. ಅದಾದ ಎರಡೇ ತಿಂಗಳಿಗೆ ಕೊರೋನಾ ಅಕ್ಷರಶಃ ಸುನಾಮಿಯಂತೆ ಭಾರತಕ್ಕೆ ಕಾಲಿಟ್ಟು ತನ್ನ ರೌದ್ರಾವತಾರ ತೋರಿಸಿತ್ತು. ಆಗ ಮಾಡಿದ್ದೇ ಲಾಕ್‌ಡೌನ್‌. ಈ ಅವೈಜ್ಞಾನಿಕ ಮುಂದಾಲೋಚನೆ ಇಲ್ಲದ ಲಾಕ್‌ಡೌನ್‌ ದೇಶಾದ್ಯಂತ ಕಾರ್ಮಿಕವರ್ಗವನ್ನು ಸಾವಿರಾರು ಕಿಲೋಮೀಟರ್‌ ನಡೆಯುವಂತೆ ಮಾಡಿತ್ತು. ಲಕ್ಷಾಂತರ ಉದ್ಯಮಗಳು ಬಾಗಿಲು ಮುಚ್ಚಬೇಕಾಯ್ತು. ಅದರಿಂದ ಪಾಠ ಕಲಿಯದ ಸರ್ಕಾರ, ಎರಡನೇ ಅಲೆ ಬರುತ್ತದೆ ಎಂಬ ಎಚ್ಚರಿಕೆಯನ್ನು ವಿಜ್ಞಾನಿಗಳು ನೀಡಿದ್ದರೂ ಆಸ್ಪತ್ರೆಗಳನ್ನು ಸಜ್ಜುಗೊಳಿಸದೇ, ಔಷಧಿ, ಆಕ್ಸಿಜನ್‌- ವೆಂಟಿಲೇಟರ್‌ ಸಿಗದೇ ಜನ ಸಾಯುವಂತಾಗಿತ್ತು. ಮೋದಿ ಪರಿವಾರ ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ಪಂಚರಾಜ್ಯಗಳ ಚುನಾವಣೆಯನ್ನು ಗೆಲ್ಲುವ ಸಲುವಾಗಿ ಭರ್ಜರಿ ಪ್ರಚಾರ ನಡೆಸುತ್ತಾ ಕೊರೋನಾವನ್ನು ಲೆಕ್ಕಿಸದ ಪರಿಣಾಮವಾಗಿ ಜನ ಹಾದಿ ಬೀದಿಯಲ್ಲಿ ಬಿದ್ದು ಸಾಯುವಂತಾಗಿತ್ತು.

ಐದೇ ಐದು ವರ್ಷಗಳಲ್ಲಿ ಮತ್ತೆ ಅದೇ ಬಗೆಯ ಬೇಜವಾಬ್ದಾರಿತನವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತೋರಿಸುತ್ತಿವೆ. ಮೋದಿಯವರು ರಾಜ್ಯ ರಾಜ್ಯಗಳನ್ನು ಗೆಲ್ಲುವ ಆತುರದಲ್ಲಿ ಜನರ ಸಮಸ್ಯೆಗಳನ್ನು ಮರೆತಿದ್ದಾರೆ. ಈ ವರ್ಷ ಯುದ್ಧದ ಪರಿಣಾಮವಾಗಿ ದೇಶದ ಜಿಡಿಪಿ ಶೇ 1ರಷ್ಟು ಇಳಿಕೆಯಾಗಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಭೀಕರ ಬರಗಾಲ ಬಂದರೆ ಆಹಾರಧಾನ್ಯ ಉತ್ಪಾದನೆ ಇಳಿಕೆಯಾದರೆ ಅದರ ಪರಿಣಾಮ ದೇಶದ ಆರ್ಥಿಕತೆಯ ಮೇಲೆ ಬೀರಲಿದೆ.  

ಒಂದೂವರೆ ತಿಂಗಳಿನಿಂದ ಪಂಚರಾಜ್ಯಗಳ ಚುನಾವಣೆಯ ಪ್ರಚಾರಕ್ಕೆ ಕೇಂದ್ರ ಸರ್ಕಾರದ ಇಡೀ ಸಂಪುಟ ಸಚಿವರು ಮತ್ತು ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಜಮಾಯಿಸಿದ್ದರು. ಎಲ್‌ನಿನೋ ಕಾಲಿಟ್ಟಿದೆ. ಬಿಸಿಲ ಧಗೆ ತಾಳಲಾರದೇ ಜನ ಸಾಯುವ ಸ್ಥಿತಿ ನಿರ್ಮಾಣವಾಗಿದೆ. ಮನರೇಗಾ ಕಾರ್ಮಿಕರು ಬಿರುಬಿಸಿಲಿನಲ್ಲಿ ರಟ್ಟೆ ಮುರಿದು ದುಡಿಯುತ್ತಿದ್ದಾರೆ. ರಾಯಚೂರಿನಲ್ಲಿ ಕೆಲಸ ಮಾಡುವಾಗ ನಿತ್ರಾಣಗೊಂಡು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಕೆರೆ-ಕೊಳ್ಳಗಳು ಬತ್ತಿವೆ. ಜಲಾಶಯಗಳು ಖಾಲಿಯಾಗಿವೆ. ಜನರಿಗೆ ಕುಡಿಯಲೂ ನೀರಿಲ್ಲ. ಇಂತಹ ಸಮಯದಲ್ಲಿ ಚುನಾವಣೆಯ ಪ್ರಚಾರ, ಫಲಿತಾಂಶ ಎಂದು ರಾಜಕೀಯ ಪಕ್ಷಗಳು ಸರ್ಕಾರಗಳು ಸ್ವಾರ್ಥದಲ್ಲೇ ಮೈಮರೆಯುತ್ತಿವೆ. ಕೇಂದ್ರದ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಭಾಷಣ ಮಾಡುತ್ತಾ ʼಜೇಬಲ್ಲಿ ಒಂದು ಈರುಳ್ಳಿ ಇಟ್ಕೊಳ್ಳಿ ಸೆಕೆ ಆಗಲ್ಲʼ ಎಂದು ಹೇಳಿ ನಗೆ ಪಾಟಲಿಗೀಡಾಗಿದ್ದಾರೆ. ಚುನಾವಣೆಯ ಪ್ರಚಾರ ಸಭೆಗಳಿಗೆ ಜನರನ್ನು ಹಣ ಕೊಟ್ಟು ಕರೆಸಿ ಕುರಿಗಳನ್ನಾಗಿಸುತ್ತಿದ್ದಾರೆ. ಅದೇ ಜನರ ನಿತ್ಯದ ಬವಣೆಗಳಿಗೆ ಕಿವಿಯಾಗದ ಜನ ನಾಯಕರು ಎಲ್‌ನಿನೋ ಬಗ್ಗೆ, ಅದರ ಭೀಕರ ಪರಿಣಾಮದ ಬಗ್ಗೆ ಕಿಂಚಿತ್ತೂ ಗಮನ ಹರಿಸಿಲ್ಲ.

ಈ ಸಲ ಮಳೆ ಕಡಿಮೆ, ವರ್ಷವಿಡೀ ಉಷ್ಣತೆ ಹೆಚ್ಚು ಇರಲಿದೆ. ಬಿಸಿ ಗಾಳಿ ಬೀಸಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದರು. ಅದರ ಅನುಭವ ಈಗಾಗಲೇ ಆಗತೊಡಗಿದೆ. ಆದರೆ ರಾಜಕಾರಣಿಗಳು ಬರದಲ್ಲೂ ಹದ್ದಿನಂತೆ ಎರಗಿ ಹಣ ಮಾಡುತ್ತಾರೆ. ಬರ ಅಂದ್ರೆ ಎಲ್ಲರಿಗೂ ಇಷ್ಟ (Everybody Loves a Good Drought) ಎಂಬ  ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ಪುಸ್ತಕ ಕಡು ವಾಸ್ತವ. ಬರ ಬಂದ್ರೆ, ಪ್ರವಾಹ ಬಂದ್ರೆ ಸಂಕಷ್ಟದಲ್ಲಿರುವ ಜನರ ನೆರವಿಗೆ ಸರ್ಕಾರ ಹಣ ಬಿಡುಗಡೆ ಮಾಡುತ್ತದೆ. ಬಡವರಿಗಾಗಿ ಬಿಡುಗಡೆಯಾದ ಆ ಹಣದಲ್ಲಿ ಕಮಿಷನ್‌ ಹೊಡೆಯುವ ಜನಪ್ರತಿನಿಧಿಗಳು, ಅಧಿಕಾರಿಗಳಿಂದ ನಿರೀಕ್ಷೆ ಮಾಡುವುದು ಏನೂ ಇಲ್ಲ. ಅದು ಅವರ ಪಾಲಿಗೆ ಕಾಮಧೇನು, ಕಲ್ಪವೃಕ್ಷ.

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಈ ಬಾರಿ ಮುಂಗಾರು ಮಳೆ ಕೊರತೆಯ ಪ್ರಮಾಣ ಶೇ 92ರಷ್ಟು! ಇದು ನೀಡುವ ಸೂಚನೆಯೇನು? ಆಹಾರದ ಕೊರತೆ ಖಂಡಿತಾ ದೇಶವನ್ನು ಬಾಧಿಸಲಿದೆ. ಜನರು ಉಷ್ಣ ಹವಾಮಾನದಿಂದಾಗಿ ಸಾಯಲಿದ್ದಾರೆ. ಕಾಯಿಲೆಪೀಡಿತರು, ವಯಸ್ಸಾದವರು, ನವಜಾತ ಶಿಶುಗಳ ಜೀವಕ್ಕೆ ಎಲ್‌ನಿನೋ ನೇರವಾಗಿ ಹಾನಿ ಮಾಡಲಿದೆ. ಇದೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಹೊಣೆಗಾರಿಕೆ ಜನಪ್ರತಿನಿಧಿಗಳು, ಸರ್ಕಾರಗಳದ್ದು. ದುರಂತವೆಂದರೆ ಅವರೆಲ್ಲ ಅಧಿಕಾರ ಹಿರಿಯಲು, ಕುರ್ಚಿ ಭದ್ರಪಡಿಸಿಕೊಳ್ಳಲು ಬಡಿದಾಡಿಕೊಳ್ಳುತ್ತಾ ಜನರ ಹಿತ ಮರೆಯುತ್ತಿದ್ದಾರೆ. ಇದು ಅಕ್ಷಮ್ಯ. ಬರ ಎದುರಿಸಲು ಎಲ್ಲ ಸರ್ಕಾರಗಳು ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ತೋರದೇ ಎಲ್ಲ ಪ್ರಜೆಗಳ ಹಿತಕ್ಕಾಗಿ ವಿಶಾಲ ಮನಸ್ಸಿನಿಂದ ಕೆಲಸ ಮಾಡಬೇಕಿದೆ. ನ್ಯಾಯಯುತವಾಗಿ ಪರಿಹಾರ ಬಿಡುಗಡೆ ಮಾಡುವ ಮೂಲಕ ಒಕ್ಕೂಟ ತತ್ವವನ್ನೂ ಪಾಲಿಸಬೇಕಿದೆ.

ಕರ್ನಾಟಕ ಸರ್ಕಾರ ತಕ್ಷಣವೇ ಮನರೇಗಾ ಕಾರ್ಮಿಕರ ನೆರವಿಗೆ ಬರಬೇಕಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಕಾರ್ಮಿಕರಿದ್ದಾರೆ. ದಿನಕ್ಕೊಬ್ಬರಂತೆ ಬಿಸಿಲಿನ ತಾಪಕ್ಕೆ ಕುಸಿದುಬಿದ್ದು ಸಾವನ್ನಪ್ಪುತ್ತಿದ್ದಾರೆ. ಇಂತಹ ಕಡು ಕಷ್ಟದ ಸಮಯದಲ್ಲಿ ಸರ್ಕಾರ ಕಾರ್ಮಿಕರ ರಕ್ಷಣೆಗೆ ನಿಲ್ಲಬೇಕಿದೆ. ಸುಡು ಬಿಸಿಲಿನ ಸಮಯದಲ್ಲಿ ಕಾಮಗಾರಿ ಕೆಲಸಗಳಿಗೆ ವಿರಾಮ ಕೊಡಬೇಕಿದೆ. ಒಂದಿಷ್ಟು ಮಳೆ ಬಿದ್ದು ಭೂಮಿ ತಂಪಾಗುವರೆಗೆ ಕಾರ್ಮಿಕರಿಂದ ಕೆಲಸ ಮಾಡಿಸದೇ ಆಹಾರ ಕಿಟ್‌ ಅಥವಾ ಧನ ಸಹಾಯ ನೀಡುವ ಮೂಲಕ ಮಾನವೀಯತೆ ಮೆರೆಯಬೇಕಿದೆ. 

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಜನಪೀಡಕ ಕೇಸರಿ ಕೇಡಿಗಳಿಗೆ ಕಡೆಗಾಲ ಬಂದಿದೆ, ಎಚ್ಚರಗೊಳ್ಳುತ್ತಿದೆ ಜನಶಕ್ತಿ!

ಪಾಡ್‌ಕಾಸ್ಟ್‌ ಒಂದರಲ್ಲಿ ಮಾತನಾಡಿದ ಸ್ವತಂತ್ರ ಭಾರದ್ವಾಜ್ ಎಂಬ ವ್ಯಕ್ತಿ ನೀಡಿದ ಹೇಳಿಕೆಯೀಗ...

ಈ ದಿನ ಸಂಪಾದಕೀಯ | ಗುಳೆ ಹೊಸದಲ್ಲ, ಪರ್ಯಾಯ ಹುಡುಕದಿರುವುದು ಸರ್ಕಾರದ ವೈಫಲ್ಯವಲ್ಲವೇ?

ಗುಳೆ ಸಮಸ್ಯೆಯನ್ನು ಕೇವಲ ಕೃಷಿಕರ, ಬಡ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ...

ಈ ದಿನ ಸಂಪಾದಕೀಯ | GDP ಶೇ.7.8; ಅಸಲಿ ಅಭಿವೃದ್ಧಿ ಯಾರ ಪಾಲಿಗೆ?

ಈ ದೇಶದ GDP ದರ ನಿರೀಕ್ಷೆಗೂ ಮೀರಿ ಶೇ.7.8ರಷ್ಟು ದಾಖಲಾಗಿದ್ದರೆ ಅದು...

ಈ ದಿನ ಸಂಪಾದಕೀಯ | ಸರ್ಕಾರ ಸುರಂಗ ರಸ್ತೆಯತ್ತ; ನಾಗರಿಕರ ಚಿತ್ತ ಪರಿಸರ ಸಂರಕ್ಷಣೆಯತ್ತ

ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಯಾವುದೇ ಪ್ರಜಾಪ್ರಭುತ್ವ...