ಕೆಜಿಎಫ್ : ದಲಿತ ಸಂಘರ್ಷ ಸಮಿತಿಯ ಬೇತಮಂಗಲ ಹೋಬಳಿಯ ಸಮಿತಿಯನ್ನು ರಚಿಸುವ ಬಗ್ಗೆ ಸಭೆಯನ್ನು ದಸಂಸ ಕೆಜಿಎಫ್ ತಾಲೂಕು ಸಂಚಾಲಕ ಎಂ.ರಾಮಪ್ಪ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬೇತಮಂಗಲ ಹೋಬಳಿಯ ಸಂಚಾಲಕರಾಗಿ ಗೊಲ್ಲಹಳ್ಳಿ ಎಂ.ಟಿ ಸುಮಂತ್, ಆಂತರಿಕ ಶಿಸ್ತು ಸಂಚಾಲಕರಾಗಿ ಜಯಮಂಗಲ ಶಿವಮೂರ್ತಿ, ಖಜಾಂಚಿಯಾಗಿ ಗೊಲ್ಲಹಳ್ಳಿ ವಂಶಿ, ಸದಸ್ಯರಾಗಿ ಸುಮನ್, ವೇಣು, ಶಿವಮೂರ್ತಿ, ಶ್ರೀಧರ್, ರಾಹುಲ್, ಸುಬ್ರಮಣಿ, ಪವನ್ , ಸುಜಯ್, ಅರವಿಂದ್ ಅವರನ್ನು ನೇಮಕ ಗೋಳಿಸಲಾಯಿತು.
ಈ ವೇಳೆ ಕೆಜಿಎಫ್ ತಾಲೂಕು ಸಂಚಾಲಕ ಎಂ ರಾಮಪ್ಪ ಮಾತನಾಡಿ, ದಲಿತ ಸಂಘರ್ಷ ಸಮಿತಿಯೂ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ನಿವೇಶನ ರಹಿತರಿಗೆ ನಿವೇಶನ, ಮನೆ ಸೇರಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗಿದೆ.
ಕಾನೂನು ಅಡಿಯಲ್ಲಿ ಅನ್ಯಾಯಕ್ಕೆ ಒಳಗಾದವರ ನೆರವಿಗೆ ಧಾವಿಸಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಹಲವು ವಿರೋಧಿ ನೀತಿಗಳ ಬಗ್ಗೆ ಧ್ವನಿ ಎತ್ತಿ ಸರ್ವರಿಗೂ ಸಮಪಾಲು ಎಂಬ ನೀತಿಯಡಿ ಕೆಲಸ ಮಾಡುತ್ತಿದ್ದು, ಹೋಬಳಿ ಮಟ್ಟದಲ್ಲಿಯೂ ಸಂಘಟನೆ ಮೂಲಕ ಮತ್ತಷ್ಟು ಅರ್ಥಪೂರ್ಣ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಸಮಿತಿ ಸಭೆ ನಡೆಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಇದನ್ನು ಓದಿದ್ದೀರಾ..? ಉಚಿತ ಹೊಲಿಗೆ ಯಂತ್ರಗಳಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ : ಶಾರ್ಲೆನ್
ಈ ಸಂದರ್ಭದಲ್ಲಿ ದಸಂಸ ಕೆಜಿಎಫ್ ತಾಲೂಕು ಸಂಚಾಲಕ ಎಂ ರಾಮಪ್ಪ, ಎಲ್ಲಮ್ಮ, ಸುಬ್ಬರಾಯಪ್ಪ, ಅನ್ವರ್ ಪಾಷಾ, ರಾಮ್ ಪ್ರಸನ್ನ, ರವಿಚಂದ್ರನ್, ರಾಮಚಂದ್ರ, ವೆಂಕಟೇಶಪ್ಪ, ಅಮೃತ, ರಾಧಮ್ಮ, ಗಾಯಿತ್ರಿ, ಸುಮಾ, ಅಲುವೇಲು, ಸುಬ್ಬು ಸೇರಿದಂತೆ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.




