‘ಉಚಿತ’ ಯೋಜನೆಗಳಿಂದ ಬಡವರು ಸೋಮಾರಿಗಳಾಗಲ್ಲ- ನೊಬೆಲ್ ಅರ್ಥಶಾಸ್ತ್ರಿಯ ಖಚಿತ ಅನಿಸಿಕೆ

Date:

ಬಡವರಿಗೆ ‘ಉಚಿತ’ ಹಣ ಅಥವಾ ನೆರವು ನೀಡುವುದರಿಂದ ಅವರು ಸೋಮಾರಿಗಳಾಗುವುದಿಲ್ಲ, ಅವರಲ್ಲಿ ಅವಲಂಬಿತ ಮನೋಭಾವ ಉಂಟಾಗುವುದೆಂಬದು ನಿಜವಲ್ಲ. ಬದಲಿಗೆ ಅವರ ಬದುಕುಗಳನ್ನು ಬದಲಾಯಿಸುತ್ತದೆ ಎಂದಿದ್ದಾರೆ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ.

- Advertisement -

ಯೂಟ್ಯೂಬ್‌ನಲ್ಲಿ ಪಾಡ್‌ಕಾಸ್ಟರ್ ರಾಜ್ ಶಮಾನಿ ಅವರೊಂದಿಗೆ ನಡೆದ ಮುಕ್ತ ಸಂಭಾಷಣೆಯಲ್ಲಿ ಅವರು ಈ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10...

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ" ಎಂದು ಕೃಷಿ ಅಧಿಕಾರಿಗಳು ಹೇಳಿದರು. ಮುಂಗಾರು ಆರಂಭದಲ್ಲಿ ಉತ್ತಮ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ...

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ, ಆಹಾರ ಭದ್ರತೆ ಮತ್ತು ಶಕ್ತಿ ಭದ್ರತೆಯ ತಾಣ. ಇಂದಿನ ಜಾಗತಿಕ ತಾಪಮಾನ ಏರಿಕೆಯ ಸವಾಲನ್ನು ಭಾರತವು ಕೇವಲ ಪರಿಸರ ಸಮಸ್ಯೆಯಾಗಿ...

ಈ ದಿನ ಕವಿತೆ | ಇಸ್ರೇಲಿನ ವಾಯುದಾಳಿಯ ರಾತ್ರಿಯಲಿ...

ಈ ಬಾರಿ ಪ್ಯಾಲೆಸ್ತೀನ್‌ನ ಕವಿ ಮೊಸಾಬ್ ಅಬು ತೋಹಾ ಅವರ ಕವನವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದಿದ್ದಾರೆ ಸಿ ಎಚ್‌ ಭಾಗ್ಯ ಅವಳು ತನ್ನ ಹಾಸಿಗೆಯ ಸುತ್ತಾ ಇರುವ ಮಕ್ಕಳನ್ನು ಒಟ್ಟೈಸುವಳು.ಹೊಟೇಲ್ ಬಿಡುವ...

ಅಭಿಜಿತ್ ಬ್ಯಾನರ್ಜಿ ಈ ಅಭಿಪ್ರಾಯಗಳನ್ನು ಜೀವಂತ ಉದಾಹರಣೆಗಳ ಸಹಿತ ವಿವರಿಸಿದ್ದಾರೆ. USAID ನ್ನು ಸ್ಥಗಿತಗೊಳಿಸುವ ಮುನ್ನ ನಡೆಸಲಾದ ಒಂದು ವ್ಯಾಪಕ ಮೆಟಾ-ವಿಶ್ಲೇಷಣೆಯನ್ನು ಉಲ್ಲೇಖಿಸಿದ್ದಾರೆ. ಆ ಅಧ್ಯಯನವು 140 ಪ್ರತ್ಯೇಕ ಸಂಶೋಧನಾ ಯೋಜನೆಗಳ ಫಲಿತಾಂಶಗಳನ್ನು ಒಗ್ಗೂಡಿಸಿತ್ತು. ಅಧ್ಯಯನವು ಎತ್ತಿದ್ದ ಪ್ರಶ್ನೆ ಸರಳವಿತ್ತು:

ಉಚಿತ ಸೌಲಭ್ಯಗಳು ಬಡವರನ್ನು ಕಡಿಮೆ ಕೆಲಸ ಮಾಡಲು ಪ್ರೇರೇಪಿಸುತ್ತವೆಯೇ?

“ಉಚಿತ ಸೌಲಭ್ಯಗಳನ್ನು ಪಡೆಯುವವರು ತುಸು ಹೆಚ್ಚೇ ಕೆಲಸ ಮಾಡುತ್ತಾರೆ, ಕಡಿಮೆ ಅಲ್ಲ.”

ಕಲ್ಯಾಣ ಯೋಜನೆಗಳು ಜನರನ್ನು ಸೋಮಾರಿಗಳನ್ನಾಗಿಸುತ್ತವೆ ಎಂಬ ಭಯಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. 140 ಅಧ್ಯಯನಗಳಲ್ಲೂ ದತ್ತಾಂಶ ಒಂದೇ ರೀತಿಯ ಕಥೆಯನ್ನು ಹೇಳಿದೆ.

ಪಶ್ಚಿಮ ಬಂಗಾಳ ಅಧ್ಯಯನ

ಗ್ರಾಮೀಣ ಪಶ್ಚಿಮ ಬಂಗಾಳದಲ್ಲಿ ನಡೆಸಲಾದ ಒಂದು ಮಹತ್ವದ ಅಧ್ಯಯನವನ್ನು ಬ್ಯಾನರ್ಜಿ ವಿವರಿಸಿದ್ದಾರೆ. ಈ ಸಂಶೋಧನೆ 1997ರಲ್ಲಿ ಒಂದು ಬಡ ಹಳ್ಳಿಯಲ್ಲಿ ಆರಂಭವಾಯಿತು. ಸಂಶೋಧಕರು ಗ್ರಾಮಸ್ಥರಿಗೆ ಒಂದು ಸರಳ ಪ್ರಶ್ನೆ ಕೇಳಿದರು: “ನಿಮ್ಮಲ್ಲಿ ನಿಜವಾಗಿಯೂ ಬಡವರು ಯಾರು?”

ಗ್ರಾಮಸ್ಥರು ಅತ್ಯಂತ ದರಿದ್ರ ಕುಟುಂಬಗಳನ್ನು ಗುರುತಿಸಿದರು. ಅವರು ಎಷ್ಟರ ಮಟ್ಟಿಗೆ ಬಡವರಾಗಿದ್ದರೆಂದರೆ, ಇತರ ಬಡವರೂ ಅವರ ದುಸ್ಥಿತಿಯನ್ನು ಒಪ್ಪಿಕೊಂಡಿದ್ದರು.

ಗುರುತಿಸಲ್ಪಟ್ಟ ಪ್ರತಿ ಕುಟುಂಬಕ್ಕೂ ಸಣ್ಣ ಉತ್ಪಾದಕ ಆಸ್ತಿಯನ್ನು ನೀಡಲಾಯಿತು. ಕೆಲವರಿಗೆ ಹಸು ಸಿಕ್ಕಿತು. ಇತರರಿಗೆ ಆಡುಗಳನ್ನು ನೀಡಲಾಯಿತು. ಕೆಲವರಿಗೆ ಸ್ಥಳೀಯವಾಗಿ ಮಾರಾಟ ಮಾಡಬಹುದಾದ ವಸ್ತುಗಳನ್ನು ನೀಡಲಾಯಿತು. ಮುಖ್ಯವಾಗಿ, ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಅವರಿಗೇ ಬಿಡಲಾಗಿತ್ತು.

ಒಂದು ವರ್ಷದವರೆಗೆ, ಯೋಜನೆಯನ್ನು ಜಾರಿಗೊಳಿಸಿದ ಸಂಸ್ಥೆಯ ಪ್ರತಿನಿಧಿಗಳು ನಿಯಮಿತವಾಗಿ ಅವರನ್ನು ಭೇಟಿ ಮಾಡುತ್ತಿದ್ದರು. ಈ ಬೆಂಬಲ ಸರಳವಾಗಿದ್ದರೂ ನಿರಂತರವಾಗಿತ್ತು.

ನಂತರ ಸಂಶೋಧಕರು ಕಾಯುತ್ತಿದ್ದರು. 17 ವರ್ಷಗಳ ಬಳಿಕ ಅವರು ಮತ್ತೆ ಮಾಹಿತಿಯನ್ನು ಸಂಗ್ರಹಿಸಿದರು. ಫಲಿತಾಂಶಗಳು ಆಶ್ಚರ್ಯಕರವಾಗಿದ್ದವು.

ಆ ಆಸ್ತಿಯನ್ನು ಪಡೆದ ಜನರು 40% ಹೆಚ್ಚು ಶ್ರೀಮಂತರಾಗಿದ್ದರು,” ಎಂದು ಬ್ಯಾನರ್ಜಿ ಹೇಳಿದ್ದಾರೆ.

ಅವರ ಬಳಕೆಯ ಮಟ್ಟ ಹೆಚ್ಚಾಗಿತ್ತು. ಅವರ ಆದಾಯ ಏರಿಕೆಯಾಗಿತ್ತು. ಅವರ ಮಕ್ಕಳು ವಿಭಿನ್ನ ರೀತಿಯ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದರು. ಅವರ ಬದುಕು ಬದಲಾಗಿತ್ತು.

ಒಂದು ಆಸ್ತಿಯನ್ನು ಮಾತ್ರ ನೀಡಲಾಯಿತು. ನಂತರ ಪುನರಾವರ್ತಿತ ನೆರವು ನೀಡಲಿಲ್ಲ. ಆದರೂ ಸುಮಾರು ಎರಡು ದಶಕಗಳ ಬಳಿಕವೂ ಅದರ ಪರಿಣಾಮ ಮಾಯವಾಗಿರಲಿಲ್ಲ; ಬದಲಾಗಿ ಅದು ಮತ್ತಷ್ಟು ವೃದ್ಧಿಯಾಗಿತ್ತು.

ಅವಕಾಶ ಪ್ರೇರಣೆಯನ್ನು ಹುಟ್ಟಿಸುತ್ತದೆ

ಉಚಿತ ಆಸ್ತಿ ಅಥವಾ ನೆರವು ಪಡೆದವರು ಏಕೆ ಹೆಚ್ಚು ಕೆಲಸ ಮಾಡುತ್ತಾರೆ? ಸುಮ್ಮನೆ ಯಾಕೆ ಕುಳಿತುಕೊಳ್ಳುವುದಿಲ್ಲ?

ಬಡತನವೇ ಮನೋನಿರುತ್ಸಾಹ ಉಂಟುಮಾಡುತ್ತದೆ. ಯಾವುದೇ ದಾರಿಯೂ ಕಾಣದ ಪರಿಸ್ಥಿತಿಯಲ್ಲಿ ಸಿಲುಕಿರುವುದು ಶ್ರಮಿಸಲು ಪ್ರೇರೇಪಿಸುವುದಿಲ್ಲ; ಬದಲಿಗೆ ಉತ್ಸಾಹವನ್ನು ಕುಗ್ಗಿಸುತ್ತದೆ.

“ನಿಮ್ಮ ಜೀವನ ತುಂಬಾ ಕೆಟ್ಟದ್ದಾಗಿದೆ ಎಂದು ಭಾವಿಸುತ್ತಾ ಖಿನ್ನತೆಯಲ್ಲಿ ಬದುಕುವುದು ಜನರನ್ನು ಕೆಲಸ ಮಾಡಲು ಉತ್ಸಾಹಿಗಳನ್ನಾಗಿಸುವ ಮಾರ್ಗವಲ್ಲ,” ಎಂಬುದು ಬ್ಯಾನರ್ಜಿ ವಿಶ್ಲೇಷಣೆ.

ಒಬ್ಬ ವ್ಯಕ್ತಿಗೆ ಒಂದು ಆಸ್ತಿ ಅಥವಾ ಅವಕಾಶ ದೊರೆತಾಗ ಏನೋ ಬದಲಾವಣೆ ಸಂಭವಿಸುತ್ತದೆ. ಉತ್ತಮ ಭವಿಷ್ಯ ಸಾಧ್ಯ ಎಂಬ ನಂಬಿಕೆ ಮೂಡುತ್ತದೆ. ಆ ನಂಬಿಕೆಯೇ ಕ್ರಿಯಾಶೀಲತೆಯನ್ನು ಹುಟ್ಟುಹಾಕುತ್ತದೆ.

“ನೀವು ಅವರಿಗೆ ಒಂದು ಅವಕಾಶ ನೀಡಿದಾಗ, ‘ಈಗ ಬಹುಶಃ ಉತ್ತಮ ಜೀವನ ಸಾಧ್ಯ’ ಎಂದು ಅವರು ಭಾವಿಸುತ್ತಾರೆ. ಹೊಸ ವಿಷಯಗಳನ್ನು ಪ್ರಯತ್ನಿಸಲು ಅವರು ಹೆಚ್ಚು ಉತ್ಸಾಹ ತೋರುತ್ತಾರೆ,” ಎಂಬುದು ಬ್ಯಾನರ್ಜಿ ವಿವರಣೆ.

ಬಡವರು ಮಾನಸಿಕವಾಗಿ ಇತರರಿಂದ ಭಿನ್ನರು ಎಂಬ ಗ್ರಹಿಕೆ ಸರಿಯಲ್ಲ. ಬಹುತೇಕ ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಜೀವನ ಬಯಸುತ್ತಾರೆ. ಘನತೆಯಿಂದ ಬದುಕಲು ಇಚ್ಛಿಸುತ್ತಾರೆ.

ಈ ಯೋಜನೆಯನ್ನು ಕೆಲವೊಮ್ಮೆ “ಗ್ರಾಜುಯೇಷನ್ ಪ್ರೋಗ್ರಾಂ” ಎಂದು ಕರೆಯಲಾಗುತ್ತದೆ. ಈ ಹೆಸರಿನ ಉದ್ದೇಶ ಸ್ಪಷ್ಟವಾಗಿದೆ: ಜನರು ತೀವ್ರ ಬಡತನದಿಂದ ಶಾಶ್ವತವಾಗಿ ಹೊರಬರಲು ಸಹಾಯ ಮಾಡುವುದು.

ಬಡವರು ಸೋಮಾರಿಗಳೆಂಬ ಮಿಥ್ಯೆ

ಸಾಕ್ಷ್ಯಗಳು ಇಷ್ಟು ನಿಚ್ಚಳವಿದ್ದರೂ, ಉಚಿತ ಸೌಲಭ್ಯಗಳು ಜನರನ್ನು ಸೋಮಾರಿಗಳನ್ನಾಗಿಸುತ್ತವೆ ಎಂಬ ನಂಬಿಕೆ ಸಮಾಜದಲ್ಲಿ ಏಕೆ ಇನ್ನೂ ಉಳಿದಿದೆ?

ಯಶಸ್ವಿ ವ್ಯಕ್ತಿಗಳು ತಮ್ಮ ಯಶಸ್ಸಿನಲ್ಲಿ ತಮ್ಮ ವೈಯಕ್ತಿಕ ಪ್ರತಿಭೆಯ ಪಾತ್ರವನ್ನು ಹೆಚ್ಚಾಗಿ ಅಂದಾಜಿಸುತ್ತಾರೆ ಮತ್ತು ಅದೃಷ್ಟದ ಪಾತ್ರವನ್ನು ಕಡಿಮೆ ಅಂದಾಜಿಸುತ್ತಾರೆ ಎಂಬುದು ಬ್ಯಾನರ್ಜಿ ನಂಬಿಕೆ.

“ನಾನು ಓದಲು, ಬರೆಯಲು ಮತ್ತು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿರುವುದು ನನ್ನ ಪ್ರತಿಭೆಯ ಅದ್ಭುತವಲ್ಲ, ಅದು ಕೇವಲ ನನ್ನ ಸಾಂಸ್ಕೃತಿಕ ಇಡುಗಂಟಿನ ಅದೃಷ್ಟ.ಇದೂ ನಾನು ಗಳಿಸಿದ್ದಲ್ಲ, ಪರಂಪರಾಗತವಾಗಿ ಬಂದದ್ದು”

ಜನರು ತಮ್ಮ ಯಶಸ್ಸನ್ನು ಸಂಪೂರ್ಣವಾಗಿ ತಮ್ಮ ಶ್ರಮದ ಫಲ ಎಂದು ಭಾವಿಸಿದಾಗ, ಇತರರ ಬಡತನವನ್ನು ವೈಯಕ್ತಿಕ ವೈಫಲ್ಯವಾಗಿ ನೋಡಲು ಶುರು ಮಾಡುತ್ತಾರೆ. ತಮ್ಮ ಸ್ಥಿತಿಗತಿಯನ್ನು ಬಡವರು ತಾವಾಗಿಯೇ ಗಳಿಸಿಕೊಂಡಿದ್ದಾರೆ; ಆದ್ದರಿಂದ ಅವರು ನೆರವಿಗೆ ಅರ್ಹರಲ್ಲ ಎಂಬ ಮನೋಭಾವ ಬೆಳೆದುಬಿಡುತ್ತದೆ.

ಇದರಲ್ಲಿ ಸ್ವಾರ್ಥದ ಅಂಶವೂ ಇದೆ. ಬಡವರಿಗೆ ನೆರವು ನೀಡುವುದು ವ್ಯರ್ಥ ಅಥವಾ ಹಾನಿಕಾರಕ ಎಂದು ನಂಬಿದರೆ, ಅವರಿಗೆ ನೆರವು ನೀಡದಿರುವುದನ್ನು ನೈತಿಕವಾಗಿ ಸಮರ್ಥಿಸಿಕೊಳ್ಳುವುದು ಸುಲಭವಾಗುತ್ತದೆ.

ಸರ್ಕಾರಿ ಕಲ್ಯಾಣ ಯೋಜನೆಗಳು: ಒಳ್ಳೆಯದೋ ಕೆಟ್ಟದೋ?

ಕಲ್ಯಾಣ ಯೋಜನೆಗಳು ಬಡ ಕುಟುಂಬಗಳಿಗೆ ಸಹಾಯ ಮಾಡುತ್ತವೆ ಎಂದು ಅಧ್ಯಯನಗಳು ತೋರಿಸುತ್ತಿದ್ದರೂ, ಉಚಿತ ಸೌಲಭ್ಯಗಳ ರಾಜಕೀಯವು ಭಾರತಕ್ಕೆ ಹಾನಿಕಾರಕ ಎಂದು ಅನೇಕರು ಏಕೆ ನಂಬುತ್ತಾರೆ?”

ತಮ್ಮ ತೆರಿಗೆ ಹಣವನ್ನು ಬಡವರಿಗೆ ಮರುಹಂಚಿಕೆ ಮಾಡುವುದನ್ನು ಬಹಳಷ್ಟು ಜನ ಇಷ್ಟಪಡುವುದಿಲ್ಲ. ಈ ಭಾವನೆ ಸಾರ್ವಜನಿಕ ಚರ್ಚೆಗಳಲ್ಲಿ ಮತ್ತು ಮಾಧ್ಯಮ ಕಥನಗಳಲ್ಲಿ ಹೆಚ್ಚು ಪ್ರಕಟವಾಗಿ ಕಾಣುತ್ತದೆ. “ಇದು ದೇಶವನ್ನು ಹಾಳು ಮಾಡುತ್ತಿದೆ ಎಂದು ನಾನು ಭಾವಿಸುವುದಿಲ್ಲ,” ಎಂಬುದು ಬ್ಯಾನರ್ಜಿಯವರ ಖಚಿತ ಅಭಿಪ್ರಾಯ.

“ಆದರೆ ಮರುಹಂಚಿಕೆಯನ್ನು ನಿರಂತರ ಹೆಚ್ಚಿಸುತ್ತ ಹೋಗಬೇಕಿದೆ. ಅದು ದೇಶವೂ ಶ್ರೀಮಂತಗೊಳಿಸುತ್ತದೆ. ದೇಶ ಶ್ರೀಮಂತವಾಗುತ್ತ ಹೋದಂತೆ GST ಹೆಚ್ಚಾಗುತ್ತದೆ ಮತ್ತು ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಹಣ ಲಭ್ಯವಾಗುತ್ತದೆ.”

ಆದರೆ ರಾಜಕೀಯ ಪಕ್ಷಗಳು ತಮ್ಮ ಯೋಜನೆಗಳನ್ನು ಮತಗಳಿಗಾಗಿ ಪ್ರದರ್ಶನಕ್ಕಿಡುವ ಪ್ರವೃತ್ತಿಯು ನಿಜ ಚಿಂತೆಯ ಸಂಗತಿ.

ಅಧಿಕಾರದಲ್ಲಿರುವವರು, ತಾವು ನೀಡಲು ಬಯಸುವುದನ್ನು ಅಲ್ಲ, ಜನರಿಗೆ ನಿಜವಾಗಿ ಬೇಕಾಗಿರುವುದನ್ನು ನೀಡಬೇಕು ಎಂಬುದು ಬ್ಯಾನರ್ಜಿಯವರ ಸಲಹೆ.

ಕಲ್ಯಾಣ ಯೋಜನೆಗಳ ನಿರ್ಧಾರಗಳು ಸಾಕ್ಷ್ಯಾಧಾರಿತ ಆಗಿರಬೇಕು ಮತ್ತು ಶಿಸ್ತಿನಿಂದ ಕೂಡಿರಬೇಕು. ಸರ್ಕಾರಗಳು ಚುನಾವಣೆಗೆ ಮುನ್ನ ಹೆಚ್ಚು ಪ್ರಚಾರ ಪಡೆಯುವ ಘೋಷಣೆಗಳಿಗಿಂತ ದೀರ್ಘಕಾಲೀನ ಪ್ರಯೋಜನಗಳತ್ತ ಗಮನಹರಿಸಬೇಕು.

 “ಸರ್ಕಾರಿ ಕಲ್ಯಾಣ ಯೋಜನೆಗಳು ಒಳ್ಳೆಯವ ಅಥವಾ ಕೆಟ್ಟವೇ?” ಎಂಬ ಪ್ರಶ್ನೆಗೆ ಬ್ಯಾನರ್ಜಿ ನೇರ ಉತ್ತರ-

“ಒಟ್ಟಾರೆ ನೋಡಿದರೆ, ಹೆಚ್ಚು ಹಣ ಬಡವರ ಕೈ ಸೇರುತ್ತಿದೆ. ಆದ್ದರಿಂದ ಅದು ಒಳ್ಳೆಯದೇ,” 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

Formula E Case: ಎಸಿಬಿ ನ್ಯಾಯಾಲಯಕ್ಕೆ ಕೆಟಿಆರ್ ಹಾಜರು; ‘ದುರುದ್ದೇಶಪೂರಿತ ಪ್ರಚಾರ’ ಎಂದು ವಾಗ್ದಾಳಿ

ಫಾರ್ಮುಲಾ ಇ ರೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಆರ್‌ಎಸ್ ಕಾರ್ಯಾಧ್ಯಕ್ಷ ಹಾಗೂ ತೆಲಂಗಾಣ...

ಪಂಜಾಬ್: ಬಿಜೆಪಿ ನಾಯಕ ರವನೀತ್ ಸಿಂಗ್ ಬೆಂಗಾವಲು ಪಡೆಯ ಮೇಲೆ ದಾಳಿ

ಪಂಜಾಬ್‌ನಲ್ಲಿ ಆಯೋಜಿಸಲಾಗಿದ್ದ ಬಿಜೆಪಿಯ ಮಾದಕವಸ್ತು ವಿರೋಧಿ ಅಭಿಯಾನದಲ್ಲಿ ಪಾಲ್ಗೊಳ್ಳಲು ಪಠಾಣ್‌ಕೋಟ್‌ನತ್ತ ತೆರಳುತ್ತಿದ್ದ...

ರಾಜಸ್ಥಾನ ಸ್ಥಳೀಯ ಚುನಾವಣೆ: 86 ಗೆದ್ದರೂ ಮಿಷನ್-200 ಸಾಧಿಸಲು ಬಿಜೆಪಿ ಹರಸಾಹಸ; ‘ಆಪರೇಷನ್ ಲೋಟಸ್’ ಸದ್ದು!

ರಾಜಸ್ಥಾನದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಒಟ್ಟು 200...

ಅಮೆರಿಕದ ಶೇ 100 ಸುಂಕದಿಂದ ಭಾರತದ ಆರ್ಥಿಕತೆಗೆ ಕಾದಿದೆ ಭಾರಿ ಆಪತ್ತು

ವಾಷಿಂಗ್ಟನ್‌ನಿಂದ ಹೊರಬಿದ್ದಿರುವ ಈ ನಿರ್ಧಾರ ಭಾರತದ ಆರ್ಥಿಕತೆಯ ಪಾಲಿಗೆ ಅಕ್ಷರಶಃ ಮರಣಶಾಸನವಾಗಿ...