ಶಿಕಾರಿಪುರದಿಂದಲೇ ವಿಜಯೇಂದ್ರ ಕಣಕ್ಕೆ : ಮಗನ ಸ್ಪರ್ಧಾಕ್ಷೇತ್ರದ ಕುತೂಹಲಕ್ಕೆ ತೆರೆ ಎಳೆದ ಬಿಎಸ್‌ವೈ

Date:

  • ವಿಜಯೇಂದ್ರ ಸ್ಪರ್ಧೆ ಕ್ಷೇತ್ರವನ್ನು ಅಂತಿಮಗೊಳಿಸಿದ ಬಿಎಸ್‌ವೈ
  • ವರುಣಾ ಬದಲು ಶಿಕಾರಿಪುರದಿಂದ ಕಣಕ್ಕಿಳಿಯಲು ಸೂಚನೆ

ರಾಜ್ಯ ರಾಜಕಾರಣದ ಕುತೂಹಲ ಕೆರಳಿಸಿದ್ದ ಬಿ ವೈ ವಿಜಯೇಂದ್ರ ಸ್ಪರ್ಧೆ ವಿಚಾರವಾಗಿ ಊಹಾಪೋಹಗಳಿಗೆ ಬಿಜೆಪಿ ಚುನಾವಣಾ ಸಂಸದೀಯ ಸಮಿತಿ ಸದಸ್ಯ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಪುತ್ರ ವಿಜಯೇಂದ್ರ ಮಾಜಿ ಸಿಎಂ ಸಿದ್ದರಾಮಯ್ಯ ಎದುರು ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಆ ಮೂಲಕ ಈ ಬಗ್ಗೆ ಎದ್ದಿದ್ದ ಎಲ್ಲ ಬಗೆಯ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ ಯಡಿಯೂರಪ್ಪ ವಿಜಯೇಂದ್ರನಿಗೆ ಶಿಕಾರಿಪುರದಿಂದಲೇ ಸ್ಪರ್ಧೆ ಮಾಡಲು ಹೇಳಿದ್ದೇನೆ ಎಂದಿದ್ದಾರೆ.

ನನ್ನ ರಾಜಕೀಯ ಕರ್ಮಭೂಮಿ ಶಿಕಾರಿಪುರ. ಇಲ್ಲಿಂದಲೇ ವಿಜಯೇಂದ್ರನ ರಾಜಕೀಯವೂ ಆರಂಭವಾಗಲಿ ಎನ್ನುವುದು ನನ್ನ ಆಶಯ. ಅದರಂತೆ ಆತನಿಗೆ ಇಲ್ಲಿಂದಲೇ ಸ್ಪರ್ಧಿಸಲು ಹೇಳಿರುವುದಾಗಿ ಯಡಿಯೂರಪ್ಪ ತಿಳಿಸಿದರು.

ಜೊತೆಗೆ ಶಿಕಾರಿಪುರದಿಂದಲೇ ವಿಜಯೇಂದ್ರನ ಸ್ಪರ್ಧೆಗೆ ಅವಕಾಶ ನೀಡಬೇಕೆಂದು ವರಿಷ್ಠರನ್ನು ಕೇಳಿಕೊಳ್ಳುತ್ತೇನೆ. ಎಷ್ಟೇ ಒತ್ತಡ ಬಂದರೂ ಅವನ ರಾಜಕೀಯದ ಅದೃಷ್ಟ ಪರೀಕ್ಷೆ ಇಲ್ಲಿಂದಲೇ ಆಗಲಿದೆ ಎಂದು ಯಡಿಯೂರಪ್ಪ ಹೇಳಿದರು.

ಈ ಸುದ್ದಿ ಓದಿದ್ದೀರಾ?:`ಯಾವ ಮೋದಿನೂ ಇಲ್ಲ, ಪಾದಿನೂ ಇಲ್ಲ’ ಬಿಜೆಪಿ ಶಾಸಕನ…

ಇನ್ನು ಬಿಎಸ್ ವೈ ಪ್ರತಿಕ್ರಿಯೆಗೂ ಮುನ್ನ ಮೈಸೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ್ದ ಬಿ ವೈ ವಿಜಯೇಂದ್ರ ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಅವರು ಹೇಳಿದಲ್ಲಿ ನಾನು ಸ್ಪರ್ಧಿಸುವೆ. ಸದ್ಯ ಶಿಕಾರಿಪುರದಿಂದ ಸ್ಪರ್ಧಿಸಲು ತಂದೆಯವರು ನನಗೆ ಸೂಚಿಸಿದ್ದಾರೆ. ನಾನೂ ಈಗಾಗಲೇ ಒಂದು ಸುತ್ತು ಶಿಕಾರಿಪುರ ಕ್ಷೇತ್ರದ ಪ್ರವಾಸ ಮಾಡಿದ್ದೇನೆ ಎಂದು ಹೇಳಿದರು.

ರಾಜ್ಯದ 224 ಕ್ಷೇತ್ರಗಳಲ್ಲೂ ಸ್ಪರ್ಧೆ ಬಗ್ಗೆ ಅಭಿಪ್ರಾಯ ಸಂಗ್ರಹವಾಗುತ್ತಿದೆ. ಚುನಾವಣೆಯಲ್ಲಿ ಯಾವುದೂ ಅಸಾಧ್ಯವಲ್ಲ. ಅಂತಿಮವಾಗಿ ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತೆ ಎಂದು ವಿಜಯೇಂದ್ರ ಹೇಳಿದ್ದರು.

ಮುಂದುವರೆದು ಮಾತನಾಡಿದ ಅವರು ಮೊದಲು ನನಗೆ ಟಿಕೆಟ್ ನೀಡಲಿ ಆನಂತರ ಎರಡು ಅಥವಾ ಒಂದು ಕ್ಷೇತ್ರದಲ್ಲಿ ಕಣಕ್ಕಿಳಿಯುವುದೋ ಎನ್ನುವುದನ್ನು ನಿರ್ಧರಿಸೋಣ ಎಂದಿದ್ದರು.

ಇದಕ್ಕೂ ಮೊದಲು ವಿಜಯೇಂದ್ರ ಸ್ಪರ್ಧಾ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವರುಣಾ ಕ್ಷೇತ್ರವನ್ನೂ ಒಳಗೊಂಡಂತೆ ರಾಜ್ಯದ ಉಳಿದ ಕ್ಷೇತ್ರಗಳಿಗಾಗಿ ಅಭ್ಯರ್ಥಿಗಳ ಆಯ್ಕೆ ಜವಾಬ್ದಾರಿಯೂ ಯಡಿಯೂರಪ್ಪ ಹಾಗೂ ಚುನಾವಣಾ ಸಂಸದೀಯ ಮಂಡಳಿಯದ್ದು ಎಂದು ಹೇಳಿದ್ದರು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿಗಮ ಮಂಡಳಿ ನೇಮಕಾತಿಯಲ್ಲಿ ಯಾರ ಅಭಿಪ್ರಾಯವನ್ನೂ ಪಡೆದಿಲ್ಲ: ಸಿದ್ದರಾಮಯ್ಯ

ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಕಾನೂನುಬಾಹಿರ ನ್ಯಾಯಾಲಯದ ಮೊರೆ...

‘ಮಹಾಧರಣಿ’ಗೆ ಸಿಎಂ ಸಿದ್ದರಾಮಯ್ಯ ಸ್ಪಂದನೆ: ಡಿ.19ರಂದು ಮಹತ್ವದ ಸಭೆ

ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕಳೆದ ಮೂರು ದಿನಗಳಿಂದ ಸಂಯುಕ್ತ ಹೋರಾಟ ಸಮಿತಿಯ...

ದೇಶದಲ್ಲಿ ‘ಬ್ರ್ಯಾಂಡ್‌ ಬೆಂಗಳೂರು’ ನಂಬರ್ ಒನ್ ಆಗಿಸಬೇಕಿದೆ: ಸಿದ್ದರಾಮಯ್ಯ

'ದೇಶ ಸುಸ್ಥಿರವಾಗಿ ಬೆಳೆಯಬೇಕಾದರೆ ನಗರ-ಗ್ರಾಮೀಣ ಸುಸ್ಥಿರ ಬೆಳವಣಿಗೆ ಕಾಣಬೇಕು' 'ರಾಜ್ಯದ...

‘ಫ್ರೀಡಂ ಪಾರ್ಕ್’ನಿಂದ ನಮಗೆ ‘ಫ್ರೀಡಂ’ ಕೊಡಿ: ಸಿಎಂ ಸಿದ್ದರಾಮಯ್ಯಗೆ ‘ಮಹಾಧರಣಿ’ ಆಗ್ರಹ

ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಪ್ರತಿಯೊಂದು ಪ್ರತಿಭಟನೆಗಳು ಕೇವಲ 'ಫ್ರೀಡಂ ಪಾರ್ಕ್‌'ಗೆ ಸೀಮಿತವಾಗಿದ್ದು,...