`ಯಾವ ಮೋದಿನೂ ಇಲ್ಲ, ಪಾದಿನೂ ಇಲ್ಲ’ ಬಿಜೆಪಿ ಶಾಸಕನ ಆಡಿಯೋ ವೈರಲ್

Date:

  • 3 ನಿಮಿಷ 19 ಸೆಕೆಂಡ್‌ನ ಆಡಿಯೋ ವೈರಲ್
  • ನಾನೇ ದೇವರು ಎಂದ ಶಿವರಾಜ್ ಪಾಟೀಲ್

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾದ ಸಂದರ್ಭದಲ್ಲಿಯೇ ಬಿಜೆಪಿ ಶಾಸಕರೊಬ್ಬರ ಆಡಿಯೋ ವೈರಲ್ ಆಗಿದೆ. ಶಾಸಕ, ಆಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಉಡಾಫೆಯಿಂದ ಮಾತನಾಡಿದ್ದು, ಕಮಲ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ.

ರಾಯಚೂರು ನಗರ ಬಿಜೆಪಿ ಶಾಸಕ ಡಾ ಶಿವರಾಜ್ ಪಾಟೀಲ್‌ ಅವರು ಮಾತನಾಡಿದ 3 ನಿಮಿಷ 19 ಸೆಕೆಂಡ್‌ಗಳಿರುವ ಫೋನ್‌ ಸಂಭಾಷಣೆ ಆಡಿಯೋ ವೈರಲ್ ಆಗಿದೆ.

ಶಿವರಾಜ್ ಪಾಟೀಲ್‌ ಅವರು ಪ್ರಧಾನಿ ಮೋದಿ, ಸಚಿವ ಶ್ರೀರಾಮುಲು ಹಾಗೂ ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಮಾತನಾಡಿದ್ದಾರೆ. “ಯಾವ ಮೋದಿನೂ ಇಲ್ಲ ಪಾದಿನೂ ಇಲ್ಲ, ಮೋದಿ ಬಲಗೈಗೂ ನಾನು ಕೇಳಲ್ಲ, ನಾನೇ ಸಿಂಗಲ್ ಆರ್ಮಿ” ಎಂದು ಬಿಜೆಪಿ ಶಾಸಕ ತಮ್ಮ ಆಪ್ತರೊಬ್ಬರ ಜೊತೆಗೆ ಮಾತನಾಡಿದ್ದಾರೆ.

ರಾಜ್ಯ ಚುನಾವಣೆ ಹತ್ತಿರವಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ವೈರಲ್ ಆಡಿಯೋದಿಂದ ಮುಜುಗರಕ್ಕೆ ಈಡಾಗಿದ್ದಾರೆ. ಶಿವರಾಜ್ ಪಾಟೀಲ್ ಸ್ವತಃ ತಮ್ಮನ್ನು ತಾವು ಹೊಗಳಿಕೊಳ್ಳುವ ಭರದಲ್ಲಿ ಬಿಜೆಪಿ ವರಿಷ್ಠರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಿದ್ದರಾಮಯ್ಯ, ಸುರ್ಜೇವಾಲಾ ವಿರುದ್ಧ ಬಿಜೆಪಿ ದೂರು

ಆಡಿಯೋದಲ್ಲಿ ಏನಿದೆ?

“ಮೋದಿಯ ರೈಟ್ ಹ್ಯಾಂಡ್‌ಗೇ ನಾನು ಕೇಳಲ್ಲ. ನಾನೇ ಸಿಂಗಲ್ ಆರ್ಮಿ, ನನಗೆ ರೈಟ್ ಇಲ್ಲ ಲೆಫ್ಟ್ ಇಲ್ಲ ನನ್ನ ಕೈ ನನ್ನ ಕಾಲು, ನಾನೇ ಮೋದಿ, ನಾನೇ ಟ್ರಂಪ್ ಯಾವ ಬದನೆಕಾಯಿ ಮಾತು ಸಹ ನಾನು ಕೇಳಂಗಿಲ್ಲ” ಎಂದು ಶಿವರಾಜ್ ಪಾಟೀಲ್ ಮೋದಿ ಕುರಿತು ಉಡಾಫೆಯ ಮಾತನಾಡಿದ್ದಾರೆ.

“ಯಾವ ಮೋದಿಯೂ ಇಲ್ಲ. ಪಾದಿಯೂ ಇಲ್ಲ. ನಾನೇ ಶಿವರಾಜ್ ಪಾಟೀಲ್. ಶಿವರಾಜ್ ಪಾಟೀಲ್ ಅಂದ್ರೇ ದೇವರು, ನಾನು ಇದ್ರೇನೆ ಜಗತ್ತು” ಎಂದು ಆಡಿಯೋದಲ್ಲಿ ಹೇಳಿಕೊಂಡಿದ್ದಾರೆ.

“ಸೋಮಶೇಖರ್ ರೆಡ್ಡಿ, ಶ್ರೀರಾಮುಲುಗೂ ನಾನು ಕೇರ್ ಮಾಡಲ್ಲ. ನನ್ನ ಮುಂದೆ ಏನೂ ನಡೆಯಂಗಿಲ್ಲ. ಮೊದಲಿನಿಂದಲೂ ನನ್ನ ಕ್ಷೇತ್ರಕ್ಕೆ ಲೀಡರ್ ಗಳಿಗೆ ಬಾ ಅಂತೀನಾ…? ನನಗೆ ಯಾರೂ ಇಲ್ಲ.. ನಾನು ಸಿಂಗಲ್ ಆರ್ಮಿ” ಎಂದಿದ್ದಾರೆ.

“ಎಲೆಕ್ಷನ್‌ನಲ್ಲಿ ಸೋತರು ಚಿಂತೆಯಿಲ್ಲ ಗೆದ್ರು ಚಿಂತೆಯಿಲ್ಲ ಮಲಗಿದರೂ ಚಿಂತೆಯಿಲ್ಲ. ಜಗತ್ತಿನಲ್ಲಿ ಚಿಂತೆಯಿಲ್ಲದ ಪುರುಷ ಅಂದ್ರೆ ಅದು ಶಿವರಾಜ್ ಪಾಟೀಲ್. ನಾನು ದೇವರು ಇದ್ದಂಗೆ, ಅದಕ್ಕೆ ನಮ್ಮ ಹುಡುಗರಿಗೆ ಹೇಳೀನಿ. ದಿನಾಲೂ ನನ್ನ ಕಾಲಿಗೆ ನಮಸ್ಕಾರ ಮಾಡ್ರಿ ಅಂತ. ಶಿವರಾಜ್ ಪಾಟೀಲ್ ದೈವ ಬರೆಸಿಕೊಳ್ಳಲ್ಲ.. ನಾನೇ ದೈವ ಬರಿತೀನಿ” ಎಂದು ಶಿವರಾಜ್ ಪಾಟೀಲ್ ತಮ್ಮನ್ನು ತಾವು ಹೊಗಳಿಕೊಂಡು ಬಿಜೆಪಿ ವರಿಷ್ಠರನ್ನು ತೆಗಳಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಆಶ್ರಯ ಪಡೆದಿರುವ 1500 ಪ್ರಯಾಣಿಕರಿಗೆ ಅಗತ್ಯ ನೆರವು

1500 ಕಾರ್ಮಿಕರಿಗೆ ಬಿಬಿಎಂಪಿ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ನೆರವು ಕಾರ್ಮಿಕರ ನೆರವಿಗೆ...

ಸಚಿವ ವೆಂಕಟೇಶ್ ಹೇಳಿಕೆಯಿಂದ ಗೋವುಗಳ ಕಳ್ಳ ಸಾಗಾಣಿಕೆ, ಸಾಮೂಹಿಕ ಗೋಹತ್ಯೆ‌ ತಲೆ ಎತ್ತಲಿದೆ: ಮಾಜಿ ಸಿಎಂ ಬೊಮ್ಮಾಯಿ

ಗೋವುಗಳನ್ನು ಏಕೆ ಕಡಿಯಬಾರದು ಎಂಬ ಸಚಿವರ ಹೇಳಿಕೆಗೆ ಬೊಮ್ಮಾಯಿ ಆಕ್ಷೇಪ 'ತಮಗೆ ನೀಡಿರುವ...

15,000 ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆ ಶೀಘ್ರ ಭರ್ತಿ; ಗೃಹ ಸಚಿವ ಪರಮೇಶ್ವರ್

ಪೊಲೀಸ್ ಇಲಾಖೆಗೆ ಬಲ ತುಂಬಲು ಮುಂದಾದ ಸರ್ಕಾರ ಹೊಸ ನೇಮಕಾತಿ ಆರಂಭಿಸಲು ಸೂಚನೆ...

ರಾಜ್ಯದ ಕೆಲವೆಡೆ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಮುನ್ಸೂಚನೆ

ಕರಾವಳಿ ಮತ್ತು ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಉತ್ತರ ಒಳನಾಡಿನ ಕೆಲವು...