DSS ಕುರಿತು ಅವಹೇಳನ: ಪ್ರತಾಪ ಸಿಂಹಗೆ ಅಂಬೇಡ್ಕರ್ ವಿಚಾರಗಳ ಬಗ್ಗೆ ಪಾಠ!

Date:

ಟೀಕಾಕಾರರಿಂದ ರಾಜಕೀಯ ನಿರುದ್ಯೋಗಿ ಎಂದೇ ಕರೆಸಿಕೊಳ್ಳುವ ಮೈಸೂರಿನ ಮಾಜಿ ಸಂಸದ ಪ್ರತಾಪ ಸಿಂಹ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್‌) ಕುರಿತು ನಾಲಿಗೆ ಹರಿಬಿಟ್ಟಿದ್ದಾರೆ. ಆತನ ಮಾತುಗಳು ವೈರಲ್ ಆಗಿವೆ. “ನಾವು ಏನೇ ಮಾಡಿದರೂ ಡಿಎಸ್‌ಎಸ್‌ನವರು ನೀಲಿ ಶಾಲು ಹಾಕಿಕೊಂಡು ಬಂದು ಬಿಡುತ್ತಾರೆ. ನಿಮ್ಮ ಕಾರ್ಯಕ್ರಮಗಳಿಗೆ ನಾವು ಬರುತ್ತೇವೆಯೇ?” ಎನ್ನುವ ಆತ ಅಂಬೇಡ್ಕರ್ ಅವರ ‘ಥಾಟ್ಸ್ ಆನ್ ಪಾಕಿಸ್ತಾನ್’ ಕೃತಿಯನ್ನು ಉಲ್ಲೇಖಿಸಿ, “ಡಿಎಸ್‌ಎಸ್‌ನವರಿಗೆ ಅಂಬೇಡ್ಕರ್ ಗೊತ್ತಿಲ್ಲ. ಸರಿಯಾಗಿ ಅಂಬೇಡ್ಕರ್ ಅವರನ್ನು ಓದಿಕೊಂಡಿಲ್ಲ” ಎಂದಿದ್ದಾರೆ. ಟಿ ನರಸೀಪುರದಲ್ಲಿ ಮಸೀದಿ ಮುಂದೆ ಗಣಪತಿ ಉತ್ಸವ ತೆಗೆದುಕೊಂಡು ಹೋಗಿ, ಕೋಮು ಸಂಘರ್ಷ ಸೃಷ್ಟಿಸುವ ಯತ್ನವನ್ನೂ ಪ್ರತಾಪ್ ಮಾಡಿದ್ದಾರೆ. ಆತನ ಹೇಳಿಕೆ ದಲಿತ ಸಮುದಾಯವನ್ನು ಕೆರಳಿಸಿದೆ.

- Advertisement -

ಪ್ರಖರ ಅಂಬೇಡ್ಕರ್‌ವಾದಿ ಸಚಿವರಾಗಿದ್ದ ಬಿ.ಬಸವಲಿಂಗಪ್ಪನವರು, ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ 1973ನೇ ಇಸವಿಯಲ್ಲಿ ನಡೆದ ‘ಹೊಸ ಅಲೆ’ ಎಂಬ ವಿಚಾರ ಸಂಕಿರಣದಲ್ಲಿ ಪ್ರಾಸಂಗಿಕವಾಗಿ “ಕನ್ನಡ ಸಾಹಿತ್ಯದಲ್ಲಿ ಏನಪ್ಪ ಇದೆ? ನಿಮ್ಮ ಕಷ್ಟ ಸುಖ ಇದೆಯಾ? ಸಮಾಜದ ನೋವು, ಸಂಕಷ್ಟಗಳು ಇವೆಯಾ? ಅದರಲ್ಲಿ ಇರೋದೆಲ್ಲ ಬರೀ ಬೂಸಾ” ಎಂದು ಹೇಳಿದ್ದು ಜಾತಿವಾದಿಗಳನ್ನು ಕೆರಳಿಸಿತ್ತು. ಬಸವಲಿಂಗಪ್ಪನವರ ರಾಜೀನಾಮೆ ಪಡೆಯುವವರೆಗೆ ನಡೆದ ಬೂಸಾ ಪ್ರಕರಣ, ಮತ್ತೊಂದೆಡೆ ದಲಿತ ಚಳವಳಿ ಹುಟ್ಟಿಗೆ ಕಾರಣವಾಯಿತು. ಆಗ ಚಾಲ್ತಿಗೆ ಬಂದ ದಲಿತ ಸಂಘರ್ಷ ಸಮಿತಿ (ದಸಂಸ), ಈ ನಾಡಿದ ಎಲ್ಲ ಅಸಹಾಯಕರ ದನಿಯಾಯಿತು. ಅದೊಂದು ತಾಯ್ತನದ ಚಳವಳಿ. ಹಸಿದ ಜನ ಮುನ್ನಡೆಸಿದ ಚಳವಳಿ. ಕರ್ನಾಟಕದ ಎಡ (ಮಾದಿಗರು) ಮತ್ತು ಬಲ (ಹೊಲೆಯರು)- ಸೇರಿ ಕಟ್ಟಿದ ದಸಂಸ ಕೂಗಿದ ಘೋಷಣೆಗಳು ಸರ್ಕಾರದಲ್ಲಿ ಶಾಸನಗಳಾಗಿವೆ. ಇದನ್ನು ತಿಳಿಯದೆ ಅವಿವೇಕಿಯಂತೆ ಪ್ರಚೋದನಾಕಾರಿಯಾಗಿ ಮಾತನಾಡಿರುವ ಪ್ರತಾಪ ಸಿಂಹ ಅವರ ಹೇಳಿಕೆಯು ದಲಿತ ಸಮುದಾಯವನ್ನು ಅವಮಾನಿಸಿದೆ. ಆತನ ಹೇಳಿಕೆಯನ್ನು ಖಂಡಿಸಿ, ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅಂಬೇಡ್ಕರ್ ಅವರನ್ನು ಸೆಲೆಕ್ಟಿವ್ ಆಗಿ ಓದುವ ಸಂಘಪರಿವಾರದ ಸುಳ್ಳುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಯಲು ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಟಾಟಾ ಸನ್ಸ್ ಬೋರ್ಡ್ ರೂಮ್ ಕಲಹದ ಆಳ ಅಗಲವೇನು...

ಭಾರತದ ಭಾರೀ ಉದ್ಯಮ ಬ್ರ್ಯಾಂಡ್‌ಗಳಲ್ಲಿ ಒಂದು ಟಾಟಾ. ಉಪ್ಪಿನಿಂದ ಹಿಡಿದು ಉಕ್ಕು, ಕಾರು, ಐಟಿ, ಹೋಟೆಲ್, ವಿಮಾನಯಾನ, ಎಲೆಕ್ಟ್ರಿಕ್ ವಾಹನ, ಈಗ ಸೆಮಿಕಂಡಕ್ಟರ್‌ವರೆಗೆ ಟಾಟಾ ಸಾಮ್ರಾಜ್ಯ ವ್ಯಾಪಿಸಿದೆ. ಆದರೆ, ಈಗ ಇದೇ ಟಾಟಾ ಸಾಮ್ರಾಜ್ಯದ...

ESA ತೂಗುಗತ್ತಿ: ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ...

“ಗ್ರಾಮದ ಕನಿಷ್ಠ 20 ಪ್ರತಿಶತದಷ್ಟು ಪ್ರದೇಶವು ‘ಪರಿಸರ ಸೂಕ್ಷ್ಮ ಪ್ರದೇಶ’ (ESA) ಎಂದು ಕಂಡುಬಂದರೆ, ಉಳಿದ 80% ಪ್ರದೇಶ ನಗರೀಕರಣಗೊಂಡಿದ್ದರೂ ಇಡೀ ಗ್ರಾಮವನ್ನು ESA ಎಂದು ಪರಿಗಣಿಸುವ ನೀತಿಯನ್ನು ಕಸ್ತೂರಿ ರಂಗನ್ ವರದಿ...

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10...

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ" ಎಂದು ಕೃಷಿ ಅಧಿಕಾರಿಗಳು ಹೇಳಿದರು. ಮುಂಗಾರು ಆರಂಭದಲ್ಲಿ ಉತ್ತಮ...

ಇದನ್ನೂ ಓದಿರಿ: ಹಿಂದು ಕೋಡ್ ಬಿಲ್ ಹೋರಾಟಕ್ಕೆ 75 ವರ್ಷ: ಸಮಾನತೆಯ ಸಾಕಾರಕ್ಕಾಗಿ ಅಧಿಕಾರ ತ್ಯಜಿಸಿದ್ದರು ಡಾ….

ಲೇಖಕ ವಿಕಾಸ್ ಆರ್. ಮೌರ್ಯ ಹೀಗೆ ಬರೆಯುತ್ತಾರೆ: “ಮಿಸ್ಟರ್ ಪ್ರತಾಪ್ ಸಿಂಹ, DSS ಹುಟ್ಟಿದ್ದೇ ನಿಮ್ಮಂತವರು ನಡೆಸುತ್ತಿದ್ದ ತಾರತಮ್ಯ ನೀತಿಯ ವಿರುದ್ಧ. DSS ಅಂದು ಇಂದು ಮುಂದೆಯೂ ಅಂಬೇಡ್ಕರ್ ಮಾರ್ಗದಲ್ಲಿ ನಡೆಯುತ್ತದೆ. ‘RSS ಒಂದು ಅಪಾಯಕಾರಿ ಸಂಘಟನೆ’ (ಸಂಪುಟ 15, ಪುಟ 560), ‘ಹಿಂದು ಮಹಾಸಭಾ ಅಥವಾ RSS ನಂತಹ ಪ್ರತಿಗಾಮಿ ಗುಂಪುಗಳೊಂದಿಗೆ ಯಾವುದೇ ಹೊಂದಾಣಿಕೆಗಳನ್ನು ಮಾಡಿಕೊಳ್ಳುವಂತಿಲ್ಲ’ (ಸಂಪುಟ 17, ಪುಟ 359) ಎಂಬ ಎಚ್ಚರಿಕೆಯನ್ನು ಅಂಬೇಡ್ಕರ್ ಅವರು DSS ನಂತಹ ಜನಪರ ಸಂಘಟನೆಗಳಿಗೆ ಕೊಟ್ಟು ಹೋಗಿದ್ದಾರೆ. ಅದನ್ನ ತಪ್ಪದೆ DSS ಪಾಲಿಸುತ್ತಿದೆ. ನೀವೇ ಹೇಳಿದ THOUGHTS ON PAKISTAN ಅಲ್ಲಿ ಬಾಬಾಸಾಹೇಬರು “ಹಿಂದು ರಾಜ್ಯವು ವಾಸ್ತವವಾಗಿಬಿಟ್ಟರೆ ಅದು ಅತೀ ದೊಡ್ಡ ವಿಪತ್ತಾಗಿರುತ್ತದೆ. ಹೀಗಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಿ ಹಿಂದು ರಾಷ್ಟ್ರವು ವಾಸ್ತವಕ್ಕೆ ಬರದಂತೆ ತಡೆಗಟ್ಟಬೇಕು” (ಸಂಪುಟ 8, ಪುಟ 358) ಎಂದು ಹೇಳಿದ್ದಾರೆ. ಈಗ ಹೇಳಿ, ನೀವು ಯಾವಾಗ ಅಂಬೇಡ್ಕರ್ ಅವರಂತೆ RSS ವಿರೋದಿಸುತ್ತೀರಿ? ಹಿಂದು ರಾಷ್ಟ್ರ ಆಗದಂತೆ ತಡೆದು ಪ್ರಬುದ್ಧ ಭಾರತ ದೇಶವಾಗಿಸುವ ಅಂಬೇಡ್ಕರ್ ಕನಸಿನ ಜೊತೆ ನಿಲ್ಲುತೀರಿ? DSS ಯಾವಾಗಲು RSS ವಿರುದ್ಧವೇ. ಏಕೆಂದರೆ DSS ಯಾವತ್ತು ಭಾರತ ಸಂವಿಧಾನದ ಅಡಿಪಾಯಗಳಾದ ಸ್ವಾತಂತ್ರ್ಯ ಸಮಾನತೆ ಸಹೋದರತೆಯ ಪರವೇ.”

ಲೇಖಕ ಎಸ್. ಸುನೀಲ್ ಕುಮಾರ್ ಪ್ರತಿಕ್ರಿಯಿಸಿ, “ಅಂಬೇಡ್ಕರ್ ಅವರನ್ನು ಸಂಪೂರ್ಣವಾಗಿ ದಲಿತ ಸಮಾಜವೇ ಓದಿಕೊಂಡಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ದಲಿತರು ಅಂಬೇಡ್ಕರ್ ಅವರನ್ನು ಓದಿಕೊಂಡಿರುವಷ್ಟೂ ಶೂದ್ರ ಸಮಾಜ ಅಂಬೇಡ್ಕರ್ ಅವರನ್ನು ಓದಿಕೊಂಡಿಲ್ಲ ಎಂಬುದಂತೂ ಸತ್ಯ. ನೀನು ಸಹ ಅಂಬೇಡ್ಕರ್ ಅವರನ್ನು ಸಂಪೂರ್ಣವಾಗಿ ಓದಿರುವಂತೆ ಕಾಣುತ್ತಿಲ್ಲ. ಯಾವಾಗ ನೋಡಿದರೂ Thoughts on Pakistan, Population Exchange ಬಗ್ಗೆ ಮಾತ್ರ ಮಾತನಾಡುತ್ತೀಯ. ಆದರೆ ಅದು ಅಂಬೇಡ್ಕರ್ ಅವರ ಚಿಂತನೆಯ ಒಂದು ಭಾಗ ಮಾತ್ರ. Pakistan or the Partition of India ಕೃತಿಯಲ್ಲಿ ಅವರು ಜನಸಂಖ್ಯೆ ವಿನಿಮಯದ ಪರವಾದ ವಾದವನ್ನು ವಿವರಿಸಿದ್ದಾರೆ. ಹಿಂದು ಧರ್ಮದ ಬಗ್ಗೆ ಮಾತನಾಡುವ ಮೊದಲು ಅಂಬೇಡ್ಕರ್ ಅವರ “Who Were the Shudras?” ಓದು. ಶೂದ್ರರು ಯಾರು? ಅವರು ನಾಲ್ಕನೇ ವರ್ಣವಾಗಿ ಹೇಗೆ ಪರಿಗಣಿಸಲ್ಪಟ್ಟರು? ಈ ಪ್ರಶ್ನೆಗಳನ್ನೇ ಅಂಬೇಡ್ಕರ್ ಆ ಕೃತಿಯಲ್ಲಿ ಚರ್ಚಿಸಿದ್ದಾರೆ. ಇನ್ನೊಂದು ಪ್ರಶ್ನೆಗೆ ಉತ್ತರಿಸು: ಅಂಬೇಡ್ಕರ್ ಅವರು ಗಣಪತಿ, ಶಿವ, ವಿಷ್ಣು, ರಾಮ ಮುಂತಾದವರನ್ನು ದೇವರೆಂದು ನಂಬಬಾರದು, ಪೂಜಿಸಬಾರದು ಎಂದು ತಮ್ಮ 22 ಪ್ರತಿಜ್ಞೆಗಳಲ್ಲಿ ಏಕೆ ಹೇಳಿದ್ದಾರೆ? ಅದರ ಹಿಂದಿರುವ ಅವರ ಸಾಮಾಜಿಕ ಮತ್ತು ಧಾರ್ಮಿಕ ಚಿಂತನೆ ಏನು? ಅದನ್ನು ಅರ್ಥಮಾಡಿಕೊಳ್ಳದೆ ಕೇವಲ Population Exchange ವಿಚಾರವನ್ನು ಹಿಡಿದುಕೊಂಡು “ನಾನು ಅಂಬೇಡ್ಕರ್ ಓದಿದ್ದೇನೆ” ಎಂದು ಹೇಳುವುದು ಅಂಬೇಡ್ಕರ್ ಅವರ ಚಿಂತನೆಯ ಒಂದು ಸಣ್ಣ ಭಾಗವನ್ನಷ್ಟೇ ನೋಡುವಂತಾಗುತ್ತದೆ” ಎಂದು ಕುಟುಕಿದ್ದಾರೆ.

“ಅಂಬೇಡ್ಕರ್ ಅವರು ಬರೆದಿರುವ ‘ಥಾಟ್ಸ್ ಆನ್ ಪಾಕಿಸ್ತಾನ’ವನ್ನು ಓದಬೇಕೆಂದು ಚೀರಿಕೊಂಡು ಹಿಂದು-ಮುಸ್ಲಿಂ ಸೌಹಾರ್ದತೆಯನ್ನು ಕದಡಲು ಹೊರಟಿರುವ ಕೋಮುವಾದಿಗಳೆಲ್ಲ ‘ಹಿಂದು ಧರ್ಮದ ಒಗಟುಗಳು’, ‘ಪ್ರಾಚೀನ ಭಾರತದಲ್ಲಿ ಕ್ರಾಂತಿ – ಪ್ರತಿಕ್ರಾಂತಿ’ಯನ್ನೂ ಒಮ್ಮೆ ಓದಬೇಕು” ಎಂದಿರುವ ಪತ್ರಕರ್ತ ರವಿಕುಮಾರ್ ಟೆಲೆಕ್ಸ್, ‘ಪಾಕಿಸ್ತಾನ’ ಕುರಿತ ಅಂಬೇಡ್ಕರ್ ಅವರ ನಿಲುವುಗಳನ್ನು ಹಂಚಿಕೊಂಡಿದ್ದಾರೆ:

“ಭಾರತದ ಶೇಕಡ 90ರಷ್ಟು ಮುಸಲ್ಮಾನರ ಭಾವುಕತೆಯ ಬೆಂಬಲವಿರುವ ಪಾಕಿಸ್ತಾನ ಯೋಜನೆಯನ್ನು ಪೂರ್ಣವಾಗಿ ನಿರಾಕರಿಸುವುದು ವಿವೇಕವೂ ಅಲ್ಲ, ಸಾಧ್ಯವೂ ಇಲ್ಲ ಎಂಬುದು ನನ್ನ ನಂಬಿಕೆ. ಪಾಕಿಸ್ತಾನದ ಬಗ್ಗೆ ನಮಗಿರಬೇಕಾದ ಸರಿಯಾದ ಮತ್ತು ಏಕೈಕ ಮನೋವೃತ್ತಿಯೆಂದರೆ ಅದರ ಎಲ್ಲಾ ಆಯಾಮಗಳನ್ನು ಅಭ್ಯಸಿಸುವುದು, ಅದರ ಪರಿಣಾಮಗಳನ್ನು ಅರ್ಥೈಸುವುದು ಮತ್ತು ಅದರ ಬಗ್ಗೆ ಒಂದು ಸೂಕ್ತ ತೀರ್ಮಾನವನ್ನು ಕೈಗೊಳ್ಳುವುದು ಎಂಬ ಬಗ್ಗೆ ನನಗೆ ಸಂಶಯವಿಲ್ಲ. (ಅಂಬೇಡ್ಕರ್ ಬರೆಹ ಭಾಷಣ ಪುಟ 383 xiv)”

“ಪಾಕಿಸ್ತಾನವು ಪರಿಗಣಿಸಲೇಬೇಕಾದ ಒಂದು ಯೋಜನೆ ಎಂಬುದು ಪ್ರಶ್ನಾತೀತವಾದುದು. ಆ ಯೋಜನೆಯನ್ನು ಪರಿಗಣಿಸಬೇಕೆಂದು ಮುಸಲ್ಮಾನರು ಒತ್ತಾಯಿಸುವುದು ಖಂಡಿತ. ಅಲ್ಲದೆ ರಾಜಕೀಯ ಅಧಿಕಾರದ ಯಾವುದೇ ವರ್ಗಾವಣೆಯಾಗುವ ಮೊದಲೇ ಹಿಂದು ಹಾಗೂ ಮುಸಲ್ಮಾನರ ನಡುವೆ ಒಂದು ರೀತಿಯ ಒಪ್ಪಂದವೇರ್ಪಡಬೇಕೆಂದು ಬ್ರಿಟಿಷರು ಒತ್ತಡ ಹಾಕುವುದೂ ಖಂಡಿತ. ಅಂತಹ ಧೋರಣೆಗೆ ಬ್ರಿಟಿಷರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಆಕ್ರಮಣಶೀಲ ಹಿಂದು ಬಹುಮತಕ್ಕೆ, ತನ್ನ ವಾರಸುದಾರನೆಂಬಂತೆ ಅಧಿಕಾರ ವಹಿಸಿಕೊಟ್ಟು ತನ್ನ ಸ್ಟೇಚ್ಛೆಗೆ ಅನುಗುಣವಾಗಿ ಆ ಬಹುಮತವು ಮುಸಲ್ಮಾನ ಅಲ್ಪಸಂಖ್ಯಾತರೊಡನೆ ವ್ಯವಹರಿಸುವಂತೆ ಬಿಡಲು ಬ್ರಿಟಿಷರು ಒಪ್ಪಲಾರರು. ಹಾಗೆ ಮಾಡುವುದರಿಂದ ಸಾಮ್ರಾಜ್ಯಶಾಹಿ ಆಡಳಿತವನ್ನು ಕೊನೆಗೊಳಿಸಿದಂತಾಗುವುದಿಲ್ಲ. ಅದು ಇನ್ನೊಂದು ಸಾಮ್ರಾಜ್ಯಶಾಹಿಯನ್ನು ಸೃಷ್ಟಿಸಿದಂತಾಗುತ್ತದೆ. ಹೀಗಿರುವುದರಿಂದ ಅವರ ಇಷ್ಟಾನುಸಾರವಾಗಿಯೇ ಪಾಕಿಸ್ತಾನದ ಜೊತೆ ಕೈಕುಲುಕಬೇಕಾದುದನ್ನು ಹಿಂದುಗಳು ತಪ್ಪಿಸಿಕೊಳ್ಳಲಾಗುವುದಿಲ್ಲ. (ಅ. ಬ. ಭಾ.ಪುಟ 383 xv)”.

ಇದನ್ನೂ ಓದಿರಿ: ಚಾಮರಾಜ ಕ್ಷೇತ್ರದ ಮೇಲೆ ‘ನಿರುದ್ಯೋಗಿ’ ಪ್ರತಾಪ್ ಸಿಂಹ ಕಣ್ಣು; ಹಿಂದುತ್ವವೇ ಅಸ್ತ್ರ

ಬಿಎಸ್‌ಪಿ ಮುಖಂಡ ಹ.ರ. ಮಹೇಶ್ ಪ್ರತಿಕ್ರಿಯಿಸಿ, “ಮಿಸ್ಟರ್ ಪ್ರತಾಪ್ ಸಿಂಹ, ಕರ್ನಾಟಕದ ನೆಲಕ್ಕೆ ಬಾಬಾಸಾಹೇಬ್ ಅಂಬೇಡ್ಕರರ ವಿಚಾರಗಳನ್ನು ಹರಡಿದ್ದೇ ಪ್ರೊ. ಬಿ.ಕೃಷ್ಣಪ್ಪ ಮತ್ತು ಇತರೆ ಹಿರಿಯರು ಸ್ಥಾಪಿಸಿದ ದಸಂಸ. ಕರ್ನಾಟಕದ ದಲಿತ ಚಳವಳಿಯು ರೈತ ಚಳವಳಿ, ಮಹಿಳಾ ಚಳವಳಿ, ಕನ್ನಡ ಚಳವಳಿ, ಕಾರ್ಮಿಕ ಚಳವಳಿ, ಬಹುಜನ ಚಳವಳಿ, ಬೌದ್ಧ ಚಳವಳಿಗಳಿಗೆ ಪ್ರೇರಣೆ ಮತ್ತು ಶಕ್ತಿ ತುಂಬಿರುವುದು ಇತಿಹಾಸ. ರಾಜ್ಯದಲ್ಲಿ ದೇಶದಲ್ಲಿ ಜಗತ್ತಿನಲ್ಲಿ ಯಾವ ಜಾತಿ ಧರ್ಮ ಲಿಂಗದವರಿಗೆ ಅನ್ಯಾಯವಾದರೂ ಅದರ ವಿರುದ್ಧ ಹೋರಾಡುವ ಎಲ್ಲಾ ಜಾತಿ ಧರ್ಮದವರನ್ನೂ ಕೂಡಿಸಿಕೊಂಡು ಚಳವಳಿ ರೂಪಿಸುವುದನ್ನು ಕಲಿಸಿಕೊಟ್ಟ ಡಿಎಸ್‌ಎಸ್‌ ಬಗ್ಗೆ ಹಗುರವಾಗಿ ಮಾತಾಡಿರುವುದು ಅಕ್ಷಮ್ಯ! ಇನ್ನು, ‘ನೀಲಿ ಶಾಲು ನೀಲಿ ಬಾವುಟ’ ಎಂಬುದು ಅಂಬೇಡ್ಕರ್ವಾದದ ವೈಶಾಲ್ಯತೆ ಸೌಹಾರ್ದತೆ ಸಮಾನತೆ ಸೋದರತೆ ನ್ಯಾಯ ಮತ್ತು ಸ್ವಾಭಿಮಾನದ ಸಂಕೇತ! ಹಾಗಾಗಿಯೇ ಬಾಬಾಸಾಹೇಬರು ತಾವು ಮೊಟ್ಟಮೊದಲು (1936) ಸ್ಥಾಪಿಸಿದ ಇಂಡಿಪೆಂಡೆಂಟ್ ಲೇಬರ್ ಪಾರ್ಟಿಗೆ ನೀಲಿಬಣ್ಣದ ಬಾವುಟವನ್ನು ಆಯ್ಕೆ ಮಾಡಿಕೊಂಡರು. ಅಂಥ ನೀಲಿ ಶಾಲಿನ ಬಗ್ಗೆ ಅದನ್ನು ಧರಿಸುವ ಸಮುದಾಯದ ಬಗ್ಗೆಯೂ ನೀವು ಅವಹೇಳಕಾರಿ ಮಾತುಗಳನ್ನಾಡಿದ್ದೀರಿ. ಈ ಕೂಡಲೇ ನೀವು ನಿಮ್ಮ ಮಾತುಗಳನ್ನು ಹಿಂಪಡೆಯಬೇಕು, DSS ಹಾಗೂ ನೀಲಿ ಶಾಲಿನ ಬಗ್ಗೆ ಆಡಿರುವ ಮಾತುಗಳಿಗೆ ಕ್ಷಮೆ ಕೇಳಬೇಕು” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿರಿ: ದೇವರು, ಪುರಾಣ, ಕರ್ಮಕಾಂಡಗಳು ಮನುಷ್ಯನನ್ನು ಗುಲಾಮನನ್ನಾಗಿ ಮಾಡುತ್ತವೆಂದು ಹೇಳಿದ ಪೆರಿಯಾರ್ ಯಾರು?

“ಬಾಬಾಸಾಹೇಬರು ಕೇವಲ ಥಾಟ್ಸ್ ಆನ್ ಪಾಕಿಸ್ಥಾನ್ ಪುಸ್ತಕ ಮಾತ್ರ ಬರೆದಿಲ್ಲ, ಜಾತಿವಿನಾಶ, ಭಾರತದಲ್ಲಿ ಜಾತಿಗಳು, ಹಿಂದು ಧರ್ಮದ ಒಗಟುಗಳು, ಶೂದ್ರರು ಯಾರು? ಅಸ್ಪೃಶ್ಯರು ಯಾರು..? ಗಾಂಧಿ ಮತ್ತು ಕಾಂಗ್ರೆಸ್ ಅಸ್ಪೃಶ್ಯರಿಗೆ ಮಾಡಿದ್ದೇನು..? ಕ್ರಾಂತಿ ಪ್ರತಿಕ್ರಾಂತಿ ಇಂಥ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ನಿಮಗೆ ನಿಜವಾಗಿಯೂ ದೇಶದ ಬಗ್ಗೆ ಕಾಳಜಿ ನಿಮ್ಮ ಓದಿನ ಬಗ್ಗೆ ನಂಬಿಕೆ ಚರ್ಚೆ ಮಾಡುವ ತಾಕತ್ತು ಇದ್ದರೆ ಬನ್ನಿ ಈ ಪುಸ್ತಕಗಳ ಬಗ್ಗೆ ಸಾರ್ವಜನಿಕ ಚರ್ಚೆ ಮಾಡೋಣ” ಎಂದು ಸವಾಲು ಹಾಕಿದ್ದಾರೆ.

ಮುಂದುವರಿದು, “ಈಗಲಾದರೂ DSS ನ ಎಲ್ಲಾ ಬಣಗಳ ನಾಯಕರು ಒಂದಾಗಿ ಈ ಸಂವಿಧಾನ ವಿರೋಧಿ ಕೋಮುವಾದದ ವಿರುದ್ಧ ಹೋರಾಟ ರೂಪಿಸಲಿ. ಆರ್‌ಎಸ್‌ಎಸ್‌ ಬಿಜೆಪಿಗರ ಕೋಮುವಾದದ ವಿರುದ್ಧ ಹೋರಾಟ ರೂಪಿಸುವುದೆಂದರೆ ಮತ್ತೆ ಅಂಬೇಡ್ಕರ್ ವಿರೋಧಿ ಮತ್ತು ಜಾತಿವಾದಿಯಾದ ಕಾಂಗ್ರೆಸ್ ಪರವಾಗಿ ನಿಂತು ಅದರ ತೆಕ್ಕೆಗೆ ಬಿದ್ದು ಮತ್ತೆ ಬಾಬಾಸಾಹೇಬರನ್ನು ಅವಮಾನಿಸಬೇಡಿ. ಯಾವ ನಾಯಿನರಿಗಳು ನಿಮಗೆ ಪಾಠ ಮಾಡಬಾರದಂತೆ ಆ ಪಕ್ಷಗಳಲ್ಲಿ ಹರಿದು ಹಂಚಿಹೋಗದೆ ದಯಮಾಡಿ ಮತ್ತೆ ಒಡೆದು ಹೋಗದಂತೆ ಒಂದಾಗಿ” ಎಂದು ಮನವಿ ಮಾಡಿದ್ದಾರೆ.

ಪ್ರತಾಪ್ ಸಿಂಹನ ಹೇಳಿಕೆ ದಶಕಗಳ ಹೋರಾಟವನ್ನು ಅವಮಾನಿಸಿದೆ ಮತ್ತು ಅಂಬೇಡ್ಕರ್ ಸಿದ್ಧಾಂತದ ಕುರಿತು ಹಗುರವಾಗಿ ಅವರು ಮಾತನಾಡಿದ್ದಾರೆ. ಪ್ರತಾಪ್ ಸಿಂಹ ಈ ಹಿಂದೆಯೂ ದಲಿತರ ಕುರಿತು ಅಸಹನೆ ವ್ಯಕ್ತಪಡಿಸಿರುವುದು ಕಂಡು ಬಂದಿದೆ. ರಾಜಕೀಯವಾಗಿ ನೆಲೆ ಕಳೆದುಕೊಂಡಿರುವ ಪ್ರತಾಪ್‌, ಆಡಿರುವ ಮಾತುಗಳ ಕುರಿತು ಬಿಜೆಪಿ ನಾಯಕರು ಯಾವ ನಿಲುವು ತಾಳುತ್ತಾರೆಂಬುದೇ ಸದ್ಯದ ಪ್ರಶ್ನೆ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅರಣ್ಯ ಸಂರಕ್ಷಣೆ ಹೆಸರಲ್ಲಿ ಜನರ ಬದುಕು ಬಲಿ ಕೊಡಬೇಡಿ: ಕಸ್ತೂರಿರಂಗನ್ ವರದಿ ವಿರುದ್ಧ ಕರವೇ ಆಕ್ರೋಶ

ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಅತ್ಯಂತ ಅಗತ್ಯ. ಆದರೆ ಪರಿಸರ ಸಂರಕ್ಷಣೆಯ...

ನಂದಿಗ್ರಾಮ ಉಪಚುನಾವಣೆ: ಟಿಎಂಸಿ ಅಭ್ಯರ್ಥಿ ನಾಮಪತ್ರ ವಾಪಸ್; ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದ್ದು, ನಂದಿಗ್ರಾಮ ವಿಧಾನಸಭಾ ಕ್ಷೇತ್ರದ...

ಮಂಗಳೂರಿನಲ್ಲಿ ಕಿದ್ವಾಯಿ, ಜಯದೇವ ಆಸ್ಪತ್ರೆಗಳ ಶಾಖೆ ನಿರ್ಮಾಣಕ್ಕೆ ಸರ್ಕಾರ ಅಸ್ತು

"ಮಂಗಳೂರಿನಲ್ಲಿ ಕಿದ್ವಾಯಿ, ಜಯದೇವ ಆಸ್ಪತ್ರೆಗಳ ಶಾಖೆಗಳ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ...

SIR ಪ್ರಕ್ರಿಯೆಯಲ್ಲಿ ಗಂಭೀರ ಲೋಪ; ಚುನಾವಣಾ ಆಯೋಗಕ್ಕೆ ಬಿ.ಕೆ. ಹರಿಪ್ರಸಾದ್ ಪತ್ರ

ASDDO ಅಂಕಿಅಂಶಗಳಲ್ಲಿ ಹೊಂದಾಣಿಕೆ ಇಲ್ಲ, 44 ಲಕ್ಷ ಮತದಾರರ ಮ್ಯಾಪಿಂಗ್ ಸಮಸ್ಯೆ,...