ಬದಲಾಯ್ತು ಟ್ವಿಟರ್‌ ಲೋಗೋ; ಮಸ್ಕ್‌ ಮಸ್ತಿಗೆ ಹಕ್ಕಿ ಬದಲಿಗೆ ನಾಯಿ ಬಂತು

Date:

  • ವೆಬ್‌ ಆವೃತ್ತಿಗೆ ಕ್ರಿಪ್ಟೋ ಕರೆನ್ಸಿಯ ನಾಯಿ ಚಿತ್ರ
  • ಮೊಬೈಲ್ ಟ್ವಿಟರ್ ಆ್ಯಪ್‌ನಲ್ಲಿ ಪಕ್ಷಿಯ ಲೋಗೋ

ಸದಾ ಒಂದಿಲ್ಲೊಂದು ವಿಷಯದಲ್ಲಿ ಸದ್ದು ಮಾಡುತ್ತಿದ್ದ ಬಿಲೇನಿಯರ್ ಎಲಾನ್ ಮಸ್ಕ್‌ ತನ್ನ ಒಡೆತನದ ಟ್ವಿಟರ್‌ ಲೋಗೋ ಬದಲಾಯಿಸುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

- Advertisement -

ಇತ್ತೀಚೆಗೆ ಟ್ವಿಟರ್‌ಗೆ ಹೊಸ ಸಿಇಒ ಹುಡುಕಾಡುತ್ತಿದ್ದೇನೆ ಎಂದಿದ್ದ ಎಲಾನ್‌ ಮಸ್ಕ್‌, ಇದೀಗ ಟ್ವಿಟರ್‌ ವೆಬ್‌ ಆವೃತ್ತಿಯ ಲೋಗೋವನ್ನೇ ಬದಲಿಸಿದ್ದಾರೆ. ಮೊದಲಿದ್ದ ‘ನೀಲಿ ಹಕ್ಕಿ’ಯ ಬದಲಿಗೆ ನಾಯಿಗಳ ಮೀಮ್‌ಗಳಲ್ಲಿ ಅಥವಾ ಕ್ರಿಪ್ಟೋ ಕರೆನ್ಸಿಯಲ್ಲಿ ಬಳಕೆಯಾಗುತ್ತಿದ್ದ ‘ನಾಯಿ’ ಚಿತ್ರವನ್ನು ಹಾಕಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ...

ದೇಶದಲ್ಲಿ ಬಡತನ ಇಳಿಕೆಯಾಗುತ್ತಿದೆ, ಅಭಿವೃದ್ಧಿಯ ಅಂಕಿಅಂಶಗಳು ಏರುತ್ತಿವೆ. ಆದರೆ, ಆರ್ಥಿಕ ಪ್ರಗತಿಯ ನಡುವೆಯೂ ಶ್ರಮಜೀವಿಗಳ ಬದುಕಿನಲ್ಲಿ ಬಡತನ, ಜಾತಿ ತಾರತಮ್ಯ ಮತ್ತು ಅಸಮಾನತೆ ಏಕೆ ಮುಂದುವರಿದಿವೆ? ಅಭಿವೃದ್ಧಿಯ ಫಲ ಸಮಾಜದ ಕಟ್ಟಕಡೆಯ ಮನುಷ್ಯನಿಗೂ...

ಬಾಗಲಕೋಟೆ | ಸಾಕ್ಷರತೆಯಲಿ ಹಿಂದುಳಿದ ಜಿಲ್ಲೆ ʻಅಕ್ಷರ ಕ್ರಾಂತಿಗೆʼ...

ಮುಳುಗಡೆ ನಗರಿ ಬಾಗಲಕೋಟೆ ಜಿಲ್ಲೆ ಇಂದು ಕಬ್ಬಿನ ಬೆಲೆ ಹೋರಾಟದಲ್ಲಿ ಗೆಲುವು ಸಾಧಿಸಿ ಸಂಭ್ರಮಿಸುತ್ತಿದೆ. ಇದೇ ಸಂಭ್ರಮ ಶಿಕ್ಷಣ ಕ್ಷೇತ್ರದಲ್ಲಿಯೂ ಕಾಣಿಸಿಕೊಳ್ಳಬೇಕಿದೆ. ಆದರೆ, ಸಾಕ್ಷರತೆ, ಶಿಕ್ಷಕರ ಕೊರತೆ ಹಾಗೂ ಡಿಜಿಟಲ್ ಸೌಲಭ್ಯಗಳ ಅಭಾವ...

25ರ ಹರೆಯದಲ್ಲೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾದ ಆದಿವಾಸಿ ಕ್ರಾಂತಿಕಾರಿ...

ಕೇವಲ 25 ವರ್ಷಗಳ ಬದುಕಿನಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತಕ್ಕೆ ಸವಾಲು ಹಾಕಿ, ಸಾವಿರಾರು ಆದಿವಾಸಿಗಳನ್ನು ಸಂಘಟಿಸಿ, ಭೂಮಿಯ ಹಕ್ಕು ಮತ್ತು ಸ್ವಯಂ ಆಡಳಿತಕ್ಕಾಗಿ ಬೃಹತ್ ಚಳವಳಿಯನ್ನು ಕಟ್ಟಿದ ಬಿರ್ಸಾ ಮುಂಡಾ ಅವರು ಕೇವಲ...

ನೂತನವಾಗಿ ಪರಿ‍ಚಯಿಸಲಾಗಿರುವ ಟ್ವಿಟರ್ ಲೋಗೋ ಬದಲಾವಣೆಯು ಕೇವಲ ವೆಬ್‌ ಆವೃತ್ತಿಗೆ ಮಾತ್ರ ಸೀಮಿತವಾಗಿದೆ. ಮೊಬೈಲ್ ಟ್ವಿಟರ್ ಆ್ಯಪ್‌ನಲ್ಲಿ ಪಕ್ಷಿಯ ಲೋಗೋ ಮುಂದುವರೆದಿದೆ.

ಹತ್ತು ವರ್ಷಗಳ ಹಿಂದೆ ಬಿಟ್‌ಕಾಯಿನ್‌ನಂತಹ ಇತರ ಕ್ರಿಪ್ಟೋಕರೆನ್ಸಿಗಳನ್ನು ಅಪಹಾಸ್ಯ ಮಾಡುವ ಉದ್ದೇಶದಿಂದ ನಾಯಿ ಚಿತ್ರವನ್ನು ರಚಿಸಲಾಗಿತ್ತು. ಇದೀಗ ಅದನ್ನೇ ಟ್ವಿಟರ್‌ ಲೋಗೋವಾಗಿ ಬಳಸಲಾಗಿದೆ.

ಈ ಕುರಿತು ಟ್ವೀಟ್ ಮಾಡಿದ್ದ ಮಸ್ಕ್‌, ಹೊಸ ಲೋಗೋಗೆ ಸಂಬಂಧಿಸಿದಂತೆ ಫೋಟೋ ಒಂದನ್ನು ಶೇರ್​ ಮಾಡಿಕೊಂಡಿದ್ದರು. ನಾಯಿ ತನ್ನ ಕಾರಿನಲ್ಲಿ ಚಲಾಯಿಸುತ್ತಿರುವಾಗ ಪೊಲೀಸರು ಐಡಿ ಕಾರ್ಡ್‌ ಪರಿಶೀಲಿಸುತ್ತಾರೆ. ಆ ಫೋಟೋದಲ್ಲಿ ನೀಲಿ ಹಕ್ಕಿಯ ಚಿತ್ರವಿದೆ. ಆಗ ನಾಯಿ, “ಇದು ನನ್ನ ಹಳೆಯ ಫೋಟೋ” ಎನ್ನುತ್ತದೆ.

ಎಲಾನ್​ ಮಸ್ಕ್​ ಅವರು ಕೆಲ ತಿಂಗಳ ಹಿಂದೆ, ‘ಟ್ವಿಟರ್​ ಸಿಇಒ ಬದಲಾಗಿದ್ದಾರೆ’ ಎಂದು ಹೇಳಿ, ನಾಯಿ ಸಿಇಒ ಸೀಟ್​ನಲ್ಲಿ ಕುಳಿತುಕೊಂಡಿರುವಂತೆ ಫೋಟೋ ಶೇರ್ ಮಾಡಿದ್ದರು. ಇದೀಗ ನಾಯಿಯ ಫೋಟೋವನ್ನೆ ಲೋಗೋ ಆಗಿ ಬದಲಾಯಿಸಿದ್ದಾರೆ.

ಕಳೆದ ವರ್ಷದ ಭರವಸೆ ಈಡೇರಿಸಿದ ಮಸ್ಕ್‌

2022ರ ಮಾರ್ಚ್‌ನಲ್ಲಿನ ಟ್ವೀಟ್ ಸ್ಕ್ರೀನ್‌ಶಾಟ್‌ವೊಂದನ್ನು ಎಲಾನ್‌ ಮಸ್ಕ್‌ ಹಂಚಿಕೊಂಡಿದ್ದಾರೆ. ಅದರಲ್ಲಿ ಬಳಕೆದಾರರೊಬ್ಬರು, ಪಕ್ಷಿ ಲೋಗೋವನ್ನು ‘ನಾಯಿ’ ಚಿತ್ರಕ್ಕೆ ಬದಲಾಯಿಸಲು ಕೇಳಿದ್ದರು. ‘ಖಂಡಿತ’ ಎಂದು ಮಸ್ಕ್‌ ಭರವಸೆ ನೀಡಿದ್ದರು. ಅಂತೆಯೇ ಇದೀಗ ವೆಬ್ ಆವೃತ್ತಿಯಲ್ಲಿ ಮಾತ್ರ ಬದಲಾವಣೆ ಮಾಡಿದ್ದಾರೆ.

ಮಸ್ಕ್‌ ಅವಾಂತರ ಒಂದೇ ಎರಡೇ!

ಟ್ವಿಟರ್‌ ಲೋಗೋ ಬದಲಾವಣೆಯ ಮೂಲಕ ಮಸ್ಕ್‌ ಈಗ ಸುದ್ದಿಯಾಗಿರಬಹುದು. ಆದರೆ, ಅವರು ತಮ್ಮ ನಿರ್ಧಾರಗಳ ಮೂಲಕ ಸದಾ ಒಂದಿಲ್ಲೊಂದು ವಿವಾದಕ್ಕೀಡಾಗುತ್ತಾ ಬಂದಿದ್ದಾರೆ.

ಇತ್ತೀಚೆಗೆ ಟ್ವಿಟರ್​ನಲ್ಲಿ ಬ್ಲೂಟಿಕ್​ಗೆ ಶುಲ್ಕ ವಿಧಿಸುವ ‘ಫೀಚರ್’​ ಪರಿಚಯಿಸುವ ಮೂಲಕ ಬಹಳಷ್ಟು ಚರ್ಚೆಗೆ ಒಳಗಾಗಿದ್ದರು. ಇಷ್ಟೇ ಅಲ್ಲದೆ, ತಮ್ಮ ಉದ್ಯೋಗಿಗಳಿಗೆ ‘ಮನೆಯಲ್ಲಿಯೇ ಇರಿ’ ಎಂದು ಸಂದೇಶ ಕಳುಹಿಸುವ ಮೂಲಕ ಉದ್ಯೋಗ ಕಡಿತಗೊಳಸಿದ್ದರು.

ಟ್ವಿಟರ್‌ನ ಸಿಇಒ ಖುರ್ಚಿಯ ಮೇಲೆ ಕುಳಿತಿರುವ ಮಸ್ಕ್‌ ತಮ್ಮ ಸ್ಥಾನಕ್ಕಾಗಿ ಮತ್ತೊಬ್ಬರನ್ನು ಹುಡುಕುತ್ತಿದ್ದೇನೆ ಎಂದಿದ್ದರು. ಏಪ್ರಿಲ್‌ ತಿಂಗಳಲ್ಲಿ ಬರೀ ವೆಬ್‌ ಆವೃತ್ತಿಗೆ ಮಾತ್ರ ಲೋಗೋ ಬದಲಾವಣೆಯಾಗಿದ್ದು, ಇದು ‘ಏಪ್ರಿಲ್ ಫೂಲ್‌’ ಸಹ ಇರಬಹುದು ಎಂದು ಹೇಳಲಾಗುತ್ತಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

36 ಗಂಟೆಗಳ ಸ್ಥಗಿತದ ಬಳಿಕ ಯಥಾಸ್ಥಿತಿಗೆ ಮರಳಿದ ಮೈಕ್ರೋಸಾಫ್ಟ್: ಔಟ್‌ಲುಕ್, ಟೀಮ್ಸ್ ಸೇವೆಗಳ ಯಶಸ್ವಿ ಮರುಸ್ಥಾಪನೆ

ಜಗತ್ತಿನಾದ್ಯಂತ ಲಕ್ಷಾಂತರ ಗ್ರಾಹಕರು, ವಾಣಿಜ್ಯ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳನ್ನು ತೀವ್ರವಾಗಿ...

ಅಮೆರಿಕದ ವಿಮಾನಯಾನದಲ್ಲಿ ಕಂಡರಿಯದ ಅಲ್ಲೋಲ-ಕಲ್ಲೋಲ: 11,000 ವಿಮಾನಗಳು ದಿಢೀರ್ ಸ್ಥಗಿತ

ಅಮೆರಿಕದ ವಾಯು ಸಂಚಾರ ನಿಯಂತ್ರಣ (ATC) ಸಂಪರ್ಕ ವ್ಯವಸ್ಥೆಯಲ್ಲಿ ಉಂಟಾದ ಭಾರಿ...

ಆಫೀಸ್, ಔಟ್‌ಲುಕ್, ಟೀಮ್ಸ್ ಸ್ಥಗಿತಕ್ಕೆ ಸೈಬರ್ ದಾಳಿ ಕಾರಣವೇ; ಅಸಲಿ ಸತ್ಯ ಬಿಚ್ಚಿಟ್ಟ ಮೈಕ್ರೋಸಾಫ್ಟ್

ಜಗತ್ತಿನಾದ್ಯಂತ ಮೈಕ್ರೋಸಾಫ್ಟ್ 365 ಸೇವೆಗಳಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಲಕ್ಷಾಂತರ ಬಳಕೆದಾರರು...

ಶಾಂತಿ ಯತ್ನದ ನಡುವೆಯೇ ರಷ್ಯಾ ಮೇಲೆ ಉಕ್ರೇನ್‌ ದಾಳಿ: ಸಂಧಾನ ಆಹ್ವಾನಕ್ಕೆ ಯುರೋಪ್ ಪಟ್ಟು

ಅಮೆರಿಕದ ನೇತೃತ್ವದಲ್ಲಿ ನಡೆಯುತ್ತಿರುವ ರಷ್ಯಾ-ಉಕ್ರೇನ್ ಶಾಂತಿ ಮಾತುಕತೆಯಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ...