‘ಭಾರತೀಯ ನಾಯಿ, ವಾಪಸ್ ಹೋಗು’: ಆಸ್ಟ್ರೇಲಿಯಾದಲ್ಲಿ ಭಾರತೀಯನ ಮೇಲೆ ಜನಾಂಗೀಯ ದಾಳಿ

Date:

ಆಸ್ಟ್ರೇಲಿಯಾದ ಮೆಲ್ಬೋರ್ನ್ ಬಳಿಯ ಗೀಲಾಂಗ್‌ನಲ್ಲಿರುವ ಜಿಮ್‌ನಲ್ಲಿ ನರ್ಸ್ಆಗಿ ಕೆಲಸ ಮಾಡುತ್ತಿದ್ದ ಪಂಜಾಬ್‌ ಮೂಲದ ಭಾರತೀಯ ಮೇಲೆ ಮೂವರು ಹಲ್ಲೆ ನಡೆಸಿದ್ದಾರೆ. ‘ಭಾರತೀಯ ನಾಯಿ – ವಾಪಸ್‌ ಹೋಗು’ ಎಂದು ಬೆದರಿಕೆಯಾಗಿದ್ದಾರೆ ಎಂದು ವರದಿಯಾಗಿದೆ.

- Advertisement -

ಭಾರತೀಯರನ್ನು ಗುರಿಯಾಗಿಸಿಕೊಂಡು ಆಸ್ಟ್ರೇಲಿಯಾದಲ್ಲಿ ಜನಾಂಗೀಯ ದಾಳಿಗಳು ಹೆಚ್ಚುತ್ತಿವೆ ಎಂಬ ಆರೋಪಗಳು ಇತ್ತೀಚೆಗೆ ಕೇಳಿಬರುತ್ತಿವೆ. ಇದೇ ಸಮಯದಲ್ಲಿ, ಈ ಘಟನೆ ನಡೆದಿದೆ. ಘಟನೆಯನ್ನು ಜನಾಂಗೀಯ ದ್ವೇಷದಿಂದ ನಡೆದ ಕೃತ್ಯವೆಂದು ಹೇಳಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಪಂಜಾಬ್‌ ಮೂಲದ ಹರ್ಮನ್‌ಪ್ರೀತ್ ಸಿಂಗ್ (22) ಅವರು ಜಿಮ್‌ನಲ್ಲಿ ನರ್ಸ್‌ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿಗೆ, ತರಬೇತಿಗಾಗಿ ಬಂದಿದ್ದ ಮೂವರು ಆರಂಭದಲ್ಲಿ ಸಿಂಗ್‌ ಅವರನ್ನು ನಿಂದಿಸಿದ್ದಾರೆ. ಜಿಮ್‌ನಿಂದ ಹೊರಬಂದಾಗ, ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಸಿಂಗ್ ಅವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

“ನಾನು ಜಿಮ್‌ನಿಂದ ಹೊರಗೆ ಬರುವುದನ್ನು ಮೂವರು ವ್ಯಕ್ತಿಗಳು ಕಾಯುತಿದ್ದರು. ಅವರು ನನ್ನನ್ನು ‘ಭಾರತೀಯ ನಾಯಿ’ಯೆಂದು ಕರೆದರು. ‘ನೀನು ಎಲ್ಲಿಂದ ಬಂದಿದ್ದೀಯೋ, ಅಲ್ಲಿಗೆ ವಾಪಸ್‌ ಹೋಗು’ ಎಂದು ಬೆದರಿಕೆ ಹಾಕಿದರು. ಬಳಿಕ, ಅವರಲ್ಲಿ ಒಬ್ಬ ತನ್ನ ತಲೆಯಿಂದ ನನ್ನ ಮೂಗಿಗೆ ಗುದ್ದಿದನು. ಇದರಿಂದ ಭಾರೀ ರಕ್ತಸ್ರಾವವಾಯಿತು” ಎಂದು ಘಟನೆ ಕುರಿತು ಸಿಂಗ್‌ ವಿವರಿಸಿದ್ದಾರೆ.

ಸ್ಥಳೀಯ ಮಾಧ್ಯಮಗಳೊಂದಿಗೆ ಮತ್ತಷ್ಟು ಮಾತನಾಡಿದ ಸಿಂಗ್, “ಹಲ್ಲೆ ಮತ್ತು ಜನಾಂಗೀಯ ನಿಂದನೆಯಿಂದ ನಾನು ಇನ್ನೂ ಆಘಾತಕ್ಕೊಳಗಾಗಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.

ಕಳೆದ ವರ್ಷ, ಆಸ್ಟ್ರೇಲಿಯಾಗೆ ವಲಸೆ ಬರುವುದನ್ನು ವಿರೋಧಿಸಿ ಅಲ್ಲಿನ ಗುಂಪೊಂದು ಪ್ರತಿಭಟನಾ ಮೆರವಣಿಗೆ ನಡೆಸಿತ್ತು. ಅಂದಿನಿಂದ, ಆಸ್ಟ್ರೇಲಿಯಾದಲ್ಲಿ ಉದ್ವಿಗ್ನತೆ ಹೆಚ್ಚಿದೆ ಎಂದು ವರದಿಯಾಗಿದೆ. 2015ರ ಜುಲೈನಲ್ಲಿ, ಅಡಿಲೇಡ್‌ನಲ್ಲಿ ಅಮನ್‌ಪ್ರೀತ್ ಸಿಂಗ್ ಎಂಬವರ ವ್ಯಕ್ತಿ ಮೇಲೆ ಐದು ಜನರು ದಾಳಿ ಮಾಡಿದ್ದರು. ಜನಾಂಗೀಯ ನಿಂದನೆಯ ಘೋಷಣೆಗಳನ್ನು ಕೂಗುತ್ತಾ ಅವರ ಮೇಲೆ ಹಲ್ಲೆ ನಡೆಸಿದ್ದರು.

WhatsApp Image 2023 06 13 at 1.10.34 PM e1686642227658
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಷ್ಯಾದಲ್ಲಿ ನ್ಯುಮೋನಿಕ್ ಪ್ಲೇಗ್ ಭೀತಿ: ಲ್ಯಾಬ್ ಸಿಬ್ಬಂದಿ ಸಾವು, 200 ಮಂದಿ ಮೇಲೆ ನಿಗಾ

ರಷ್ಯಾದ ಇರ್ಕುಟ್ಸ್ಕ್ (Irkutsk) ಪ್ರದೇಶದಲ್ಲಿ ಶಂಕಿತ ನ್ಯುಮೋನಿಕ್ ಪ್ಲೇಗ್‌ಗೆ ಲ್ಯಾಬ್ ಉದ್ಯೋಗಿಯೊಬ್ಬರು...

ಶರತ್ತುಗಳು ಈಡೇರುವವರೆಗೆ ಹಾರ್ಮುಜ್ ಜಲಸಂಧಿ ತೆರೆಯುವುದಿಲ್ಲ: ಇರಾನ್ ಸ್ಪಷ್ಟನೆ

ತನ್ನ ಎಲ್ಲ ಶರತ್ತುಗಳು ಸಂಪೂರ್ಣವಾಗಿ ಈಡೇರುವವರೆಗೆ ಜಾಗತಿಕ ತೈಲ ಮತ್ತು ಅನಿಲ...

ಹಾರ್ಮುಜ್ ಜಲಸಂಧಿಯಲ್ಲಿ ಕುವೈತ್ ಹಡಗಿನ ಮೇಲೆ ದಾಳಿ: ಐವರು ಭಾರತೀಯರ ರಕ್ಷಣೆ

ಹಾರ್ಮುಜ್ ಜಲಸಂಧಿಯಲ್ಲಿ ಕುವೈತ್ ಧ್ವಜವಿದ್ದ ತೈಲ ಹಡಗಿನ ಮೇಲೆ ಸ್ಫೋಟಕ ವಸ್ತುವಿನಿಂದ...

‘Instagram ಹೆಣ್ಮಕ್ಕಳಿಗೆ ಮಾತ್ರ’; ಎಲಾನ್ ಮಸ್ಕ್ ಹೀಗ್ಯಾಕಂದ್ರು?

ಟೆಕ್ ಜೈಂಟ್ ಎಲಾನ್ ಮಸ್ಕ್ ಮತ್ತೊಮ್ಮೆ ತಮ್ಮ ವಿವಾದಾತ್ಮಕ ಹೇಳಿಕೆಗಳ...