ಟ್ರಂಪ್‌ vs ಮೀಡಿಯಾ | ಗೆದ್ದದ್ದು ಯಾರು?

Date:

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಾಧ್ಯಮಗಳ ನಡುವಿನ ಸಂಘರ್ಷ ಹೊಸದೇನಲ್ಲ. ಅಧ್ಯಕ್ಷಗಾದಿ ಹಿಡಿದ ಕಾಲದಿಂದಲೇ ಟ್ರಂಪ್ ಪ್ರಮುಖ ಮಾಧ್ಯಮ ಸಂಸ್ಥೆಗಳತ್ತ ಬೊಟ್ಟು ಮಾಡಿ ʼಫೇಕ್ ನ್ಯೂಸ್ʼ ಎಂದು ಕರೆಯುತ್ತಾ ಬಂದಿದ್ದಾರೆ. ಮಾಧ್ಯಮಗಳ ಮೇಲಿನ ಟೀಕೆಯನ್ನು ಭಾಷಣಕ್ಕಷ್ಟೇ ಸೀಮಿತಗೊಳಿಸದೆ ಕಾನೂನು ಹೋರಾಟಕ್ಕೂ ಎಳೆದು ತರುವ ಧೋರಣೆ ಇತ್ತೀಚೆಗೆ ಹೆಚ್ಚಾಗಿದೆ.

- Advertisement -

ಟ್ರಂಪ್ ಅವರ ವಿರುದ್ಧದ ವರದಿ, ತನಿಖೆ ಅಥವಾ ವಿಶ್ಲೇಷಣೆಗಳನ್ನು ಪ್ರಕಟಿಸಿದ ಮಾಧ್ಯಮ ಸಂಸ್ಥೆಗಳ ಮೇಲೆ ದಂಡಾತ್ಮಕ ಕೇಸುಗಳು, ಭಾರೀ ಪ್ರಮಾಣದ ಪರಿಹಾರ ಬೇಡಿಕೆ, ಬಿಟ್ಟರೆ ನ್ಯಾಯಾಲಯದ ಬೆದರಿಕೆ. ಇವು ನಿರಂತರವಾಗಿ ಕಾಣಿಸಿಕೊಳ್ಳುತ್ತಿವೆ. ಹೀಗೆ ಅವರ ವಿರುದ್ಧ ಕಾನೂನು ಸಮರಕ್ಕೆ ಸಜ್ಜಾಗಿದ್ದ Pulitzer, BBC, ABC, CNN, CBS, NYT, Washington Post, The Wall Street Journal ಸೇರಿದಂತೆ ಹಲವು ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ಕೊನೆಗೆ ಶರಣಾಗಿರುವುದು ಆಘಾತಕಾರಿ ಬೆಳವಣಿಗೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಈ ಹಾದಿಯಲ್ಲಿ ಮೊದಲಿಗೆ ಗಮನಸೆಳೆದದ್ದು ಪುಲಿಟ್ಜರ್ ಪ್ರಶಸ್ತಿ ಮಂಡಳಿಯ ವಿರುದ್ಧ 2016ರಲ್ಲಿ ಟ್ರಂಪ್ ಹೂಡಿದ್ದ ಮೊಕದ್ದಮೆ. ಅಧ್ಯಕ್ಷೀಯ ಚುನಾವಣಾ ಪ್ರಚಾರ ಮತ್ತು ರಷ್ಯಾ ಹಸ್ತಕ್ಷೇಪ ಕುರಿತ ವರದಿಗಳಿಗೆ The New York Times ಮತ್ತು The Washington Post ಪತ್ರಿಕೆಗಳಿಗೆ ನೀಡಲಾದ ಪುಲಿಟ್ಜರ್ ಪ್ರಶಸ್ತಿಗಳನ್ನು ಹಿಂಪಡೆಯಲೇಬೇಕೆಂದು ಆಗ್ರಹಿಸಿ ಟ್ರಂಪ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಅಮೆರಿಕದ ನ್ಯಾಯಾಲಯಗಳು ಈ ಅರ್ಜಿಯನ್ನು ತಿರಸ್ಕರಿಸಿದವು. ಅದನ್ನು ಪತ್ರಿಕಾ ಸ್ವಾತಂತ್ರ್ಯ ಮತ್ತು ಸಂಪಾದಕೀಯ ಸ್ವಾಯತ್ತತೆಯ ಪರವಾಗಿ ಮಹತ್ವದ ತೀರ್ಪೆಂದು ಪರಿಗಣಿಸಲಾಯಿತು.

Donald trump 12

2018ರ ನವೆಂಬರ್‌ನಲ್ಲಿ ಸುದ್ದಿ ಸಂಸ್ಥೆ CNN ಹಾಗೂ ಅದರ ಮುಖ್ಯ ಪ್ರತಿನಿಧಿ ಜಿಮ್ ಅಕೋಸ್ಟಾ, ತಮ್ಮ ಪ್ರೆಸ್‌ಪಾಸ್‌ಗಳನ್ನು ಅನ್ಯಾಯವಾಗಿ ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿ ಟ್ರಂಪ್‌ ವಿರುದ್ಧ ವಾಷಿಂಗ್ಟನ್‌ ಡಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು. ಈ ಸಂಘರ್ಷಕ್ಕೆ ಕಾರಣವಾಗಿದ್ದು ವೈಟ್‌ಹೌಸ್‌ನಲ್ಲಿ ನಡೆದ ಪ್ರಮುಖ ಪತ್ರಿಕಾಗೋಷ್ಠಿ. ಮಧ್ಯಾವಧಿ ಚುನಾವಣೆಗಳ ನಂತರ ನಡೆದ ಈ ಗೋಷ್ಠಿಯಲ್ಲಿ, ಮಧ್ಯ ಅಮೆರಿಕದ ವಲಸೆ ಕಾರವಾನ್‌ಗಳನ್ನು ಟ್ರಂಪ್‌ ಅವರು ʼಆಕ್ರಮಣʼ ಎಂದಿದ್ದನ್ನು ಕುರಿತು ಅಕೋಸ್ಟಾ ಪ್ರಶ್ನಿಸಿದ್ದರು. ಇದರಿಂದ ಟ್ರಂಪ್‌ ಹಾಗೂ ಪತ್ರಕರ್ತರ ನಡುವಿನ ವಾಗ್ವಾದ ತಾರಕಕ್ಕೇರಿತು. ಅಕೋಸ್ಟಾ ಅವರು ಪ್ರಶ್ನೆ ಕೇಳಕೂಡದೆಂದು ಸೂಚಿಸಿ, ಮೈಕ್ರೋಫೋನ್‌ ಅನ್ನು ತೆಗೆಸಿಬಿಟ್ಟರು ಟ್ರಂಪ್.‌ ಆಗ ಅದು ಭಾರೀ ಸಂಚಲನ ಮೂಡಿಸಿತ್ತು.

ಘಟನೆ ಬಳಿಕ, ವೈಟ್ ಹೌಸ್ ಹೊರಗೆ ಲೈವ್ ವರದಿ ಮಾಡಲು ಮುಂದಾದ ಅಕೋಸ್ಟಾರ ಪ್ರೆಸ್‌ಪಾಸ್ ಅನ್ನು ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ವಶಪಡಿಸಿಕೊಂಡರು. ಈ ಕ್ರಮವು ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು CNN ಆರೋಪಿಸಿತು. ಆದರೆ ವೈಟ್ ಹೌಸ್ ಪ್ರೆಸ್ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್, ಅಕೋಸ್ಟಾ ಇಂಟರ್ನ್ ಮೇಲೆ ಕೈ ಹಾಕಿದ್ದಾರೆ ಎಂದು ಹೇಳಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು. ಪ್ರತಿಯಾಗಿ ಅಕೋಸ್ಟಾ ಮತ್ತೆ ನ್ಯಾಯಾಲಯದ ಮೊರೆ ಹೋಗಿ, ಈ ಕ್ರಮವು ಅಮೆರಿಕ ಸಂವಿಧಾನದ ಮೊದಲ ತಿದ್ದುಪಡಿ (ಪತ್ರಿಕಾ ಸ್ವಾತಂತ್ರ್ಯ) ಹಾಗೂ ಐದನೇ ತಿದ್ದುಪಡಿ (ನ್ಯಾಯಸಮ್ಮತ ಪ್ರಕ್ರಿಯೆ) ಹಕ್ಕುಗಳ ಉಲ್ಲಂಘನೆ ಎಂದು ವಾದಿಸಿದರು. ನ್ಯಾಯಾಲಯ ತಾತ್ಕಾಲಿಕ ತಡೆ ಆದೇಶ ನೀಡಿ, ಅಕೋಸ್ಟಾಗೆ ಪ್ರೆಸ್‌ಪಾಸ್ ಮರಳಿ ನೀಡುವಂತೆ ಆದೇಶಿಸಿತು.

ನ್ಯಾಯಾಲಯದ ಮಧ್ಯಂತರ ಆದೇಶದ ನಂತರ, 2018ರ ನವೆಂಬರ್ 19ರಂದು CNN ಈ ಮೊಕದ್ದಮೆಯನ್ನು ಹಿಂತೆಗೆದುಕೊಂಡಿತು. ಈ ಪ್ರಕರಣವು ಅಮೆರಿಕದಲ್ಲಿ ಮಾಧ್ಯಮಗಳ ಹಕ್ಕುಗಳು ಮತ್ತು ಆಡಳಿತದ ನಡುವಿನ ಸಂಬಂಧಗಳ ಕುರಿತು ರಾಷ್ಟ್ರಮಟ್ಟದ ಚರ್ಚೆಗೆ ಕಾರಣವಾಯಿತು. ಪ್ರಸ್ತುತ ಅಕೋಸ್ಟಾ CNN ನಿಂದ ಹೊರಬಂದು ಸ್ವತಂತ್ರ ಪತ್ರಕರ್ತರಾಗಿ ʼದ ಜಿಮ್‌ ಅಕೋಸ್ಟಾʼ ಶೋ ನಡೆಸುತ್ತಿದ್ದಾರೆ.

The New York Times, The Washington Post ಮತ್ತು The Wall street Journalಗಳ ಮೇಲೂ ಟ್ರಂಪ್ ಕಾನೂನು ಕ್ರಮಕ್ಕೆ ಮುಂದಾಗಿದ್ದರು. ಚುನಾವಣಾ ಪ್ರಕ್ರಿಯೆ, ವ್ಯಾಪಾರ-ವ್ಯವಹಾರ ಹಾಗೂ ರಾಜಕೀಯ ಹಿನ್ನೆಲೆಯ ಕುರಿತ ವರದಿಗಳನ್ನು ‘ಉದ್ದೇಶಪೂರ್ವಕ ಸುಳ್ಳು’ ಎಂದು ಆರೋಪಿಸಿ ದಶಕೋಟಿ ಡಾಲರ್ ಪರಿಹಾರ ಬೇಡಿಕೆಯೊಂದಿಗೆ ಕೇಸುಗಳು ದಾಖಲಿಸಲ್ಪಟ್ಟವು. ಬಹುತೇಕ ಪ್ರಕರಣಗಳನ್ನು ನ್ಯಾಯಾಲಯದ ಹಂತದಲ್ಲಿ, ಕೆಲವನ್ನು ತಾಂತ್ರಿಕ ಕಾರಣಗಳಿಂದ ಕೈಬಿಡಲಾಯಿತು. ಆದರೆ ಈ ಕೇಸುಗಳ ಉದ್ದೇಶ ಮಾಧ್ಯಮಗಳ ಮೇಲೆ ಭಯದ ವಾತಾವರಣ ನಿರ್ಮಿಸುವುದೇ ಆಗಿತ್ತು ಎನ್ನುತ್ತವೆ ಅಮೆರಿಕದ ಮಾಧ್ಯಮ ವಿಶ್ಲೇಷಣೆಗಳು.

ಇದನ್ನೂ ಓದಿ: AI ಕ್ರಾಂತಿಯಿಂದ ಜಾಗತಿಕ RAM ಕೊರತೆ: ದುಬಾರಿಯಾಗಲಿವೆ ಸ್ಮಾರ್ಟ್‌ಫೋನ್‌!

ABC ನ್ಯೂಸ್‌ನ This Week ಕಾರ್ಯಕ್ರಮದಲ್ಲಿ ನಿರೂಪಕ ಜಾರ್ಜ್ ಸ್ಟೀಫನೊಪೌಲೋಸ್ ನೀಡಿದ ಹೇಳಿಕೆಗಳು, ನ್ಯಾಯಾಲಯ ನೀಡಿದ್ದ ತೀರ್ಪೊಂದನ್ನು ತಪ್ಪಾಗಿ ಅರ್ಥೈಸಿ ಜನರ ಮುಂದೆ ಮಂಡಿಸಲಾಗಿದೆ ಎಂದು ಟ್ರಂಪ್ ಆರೋಪಿಸಿದರು. 2024ರಲ್ಲಿ ಈ ಕುರಿತು ABC ವಿರುದ್ಧ ಮಾನಹಾನಿ ಪ್ರಕರಣ ದಾಖಲಾಯಿತು. ಕಾನೂನಾತ್ಮಕವಾಗಿ ಇನ್ನೂ ನಿರ್ಧಾರವಾಗಿರದ ವಿಷಯವನ್ನು ʼಸತ್ಯʼ ಎಂಬಂತೆ ಪ್ರಕಟಿಸಿ ಮಾನಹಾನಿಗೆ ಯತ್ನಿಸಲಾಗಿದೆ ಎನ್ನುವುದು ಟ್ರಂಪ್‌ ಅವರ ವಾದವಾಗಿತ್ತು. ABC ನ್ಯೂಸ್ ಈ ಮೊಕದ್ದಮೆಯನ್ನು ರದ್ದುಪಡಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರೂ, ನ್ಯಾಯಾಲಯ ವಿಚಾರಣೆ ಮುಂದುವರಿಸಲು ಅವಕಾಶ ನೀಡಿತ್ತು. ಬಳಿಕ ABC ನ್ಯೂಸ್ ಹಾಗೂ ಟ್ರಂಪ್ ನಡುವೆ ಒಪ್ಪಂದವಾಗಿ, ಸಂಸ್ಥೆ ನಷ್ಟ ತುಂಬಿಕೊಡುವುದಾಗಿ ಹೇಳಿ ಟ್ರಂಪ್‌ ಮುಂದೆ ಮಂಡಿಯೂರಿತು. ಇದು ಕಾನೂನು ಹೋರಾಟ, ರಾಜಕೀಯ ಪ್ರಾಬಲ್ಯದ ಒತ್ತಡ ಎಷ್ಟರ ಮಟ್ಟಿಗೆ ದೊಡ್ಡ ಮಾಧ್ಯಮ ಸಂಸ್ಥೆಗಳನ್ನೂ ಮಣಿಸಬಲ್ಲದು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಯಿತು.

image 2025 12 20T155130.999 1

ಅಮೆರಿಕದಂತಹ ಬಲಿಷ್ಠ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿಯೇ, ರಾಜಕೀಯ ಶಕ್ತಿಯು ಕಾನೂನನ್ನು ಬಳಸಿಕೊಂಡು ಮಾಧ್ಯಮಗಳ ಮೇಲೆ ಒತ್ತಡ ತರುವ ಪ್ರಯತ್ನ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅಮೆರಿಕದ ಸಂವಿಧಾನವು ಮಾಧ್ಯಮಗಳಿಗೆ ಬಲವಾದ ರಕ್ಷಣೆ ಒದಗಿಸಿದ್ದರೂ, ನಿರಂತರ ಕೇಸು, ನ್ಯಾಯಾಂಗ ಪ್ರಕ್ರಿಯೆ ಮತ್ತು ಆರ್ಥಿಕ ಒತ್ತಡಗಳು ಪ್ರತಿಕಾ ವೃತ್ತಿ ಧರ್ಮವನ್ನು ಹಳ್ಳಕ್ಕೆ ತಳ್ಳುವ ಅಪಾಯವಿದೆ ಎಂಬುದನ್ನು ಅಲ್ಲಿನ ತಜ್ಞರು ಎಚ್ಚರಿಸಿದರು.

ಭಾರತೀಯ ಮಾಧ್ಯಮ ಸಂಸ್ಥೆಗಳು ಬಹುವಾಗಿ BBC, CNNಗಳಂತಹ ಜಾಗತಿಕ ಮಾಧ್ಯಮಗಳ ವರದಿಗಳನ್ನೇ ಆಧಾರವಾಗಿಟ್ಟುಕೊಂಡು ಅಂತಾರಾಷ್ಟ್ರೀಯ ಸುದ್ದಿಗಳನ್ನು ಬಿತ್ತರಿಸುತ್ತವೆ. ಇಂತಹ ಸಂಸ್ಥೆಗಳು ಒತ್ತಡಕ್ಕೆ ಒಳಗಾಗಿಬಿಟ್ಟರೆ, ಜಾಗತಿಕ ಸುದ್ದಿಗಳ ಸ್ವರೂಪ, ಧಾಟಿ ಮತ್ತು ತೀಕ್ಷ್ಣತೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಖ್ಯವಾಗಿ, ಅಮೆರಿಕದಲ್ಲಿ ನಡೆಯುತ್ತಿರುವ ಈ ಮಾದರಿಯನ್ನು ಉದಾಹರಣೆಯಾಗಿ ಮುಂದಿಟ್ಟುಕೊಂಡು ಇತರ ದೇಶಗಳಲ್ಲೂ ರಾಜಕೀಯ ಶಕ್ತಿಗಳನ್ನು ಟೀಕಿಸುವ ಮಾಧ್ಯಮಗಳ ವಿರುದ್ಧ ಕಾನೂನು ಅಸ್ತ್ರ ಪ್ರಯೋಗಿಸಲು ಮುಂದಾಗುವ ಅಪಾಯಕಾರಿ ಸಾಧ್ಯತೆ ಇದೆ.

ಇದನ್ನೂ ಓದಿ: 10-ಮಿನಿಟ್ ಡೆಲಿವರಿ ಸಂಸ್ಕೃತಿ; ʼಕ್ವಿಕ್‌ ಕಾಮರ್ಸ್‌ʼ ಒಳಬೇಗುದಿ!

ಭಾರತದಲ್ಲಿ ಈಗಾಗಲೇ ಮಾನಹಾನಿ ಕೇಸುಗಳು, ನೋಟಿಸ್‌ಗಳು ಮತ್ತು ತನಿಖಾ ಸಂಸ್ಥೆಗಳ ಒತ್ತಡದ ಕುರಿತು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಟ್ರಂಪ್–ಮಾಧ್ಯಮ ಸಂಘರ್ಷ ಮತ್ತೊಂದು ಎಚ್ಚರಿಕೆಯ ಗಂಟೆಯಂತೆ ಕಾಣುತ್ತದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರಶ್ನೆ ಕೇಳುವುದೇ ಮಾಧ್ಯಮಗಳ ಕರ್ತವ್ಯ. ಆದರೆ ಪ್ರಶ್ನೆ ಕೇಳಿದ್ದಕ್ಕೆ ಕೇಸು, ದಂಡ, ಬೆದರಿಕೆಗಳು ಸಾಮಾನ್ಯವಾದರೆ, ಅದು‌ ಮಾಧ್ಯಮ ಮಾತ್ರವಲ್ಲ ಸಮಾಜದ ವಾಕ್ ಸ್ವಾತಂತ್ರ್ಯವನ್ನೇ ಕಸಿಯುವ ಅಪಾಯವಿದೆ.

WhatsApp Image 2025 12 20 at 3.50.51 PM 1

ಟ್ರಂಪ್ ವಿರುದ್ಧದ ಪ್ರಕರಣಗಳು ನ್ಯಾಯಾಲಯಗಳಲ್ಲಿ ಗೆಲ್ಲಲಿ ಅಥವಾ ಸೋಲಲಿ, ಆದರೆ ಅವು ಉಂಟುಮಾಡುವ ಪರಿಣಾಮಗಳನ್ನು ಸುಲಭಕ್ಕೆ ಅಳೆಯಲು ಸಾಧ್ಯವಿಲ್ಲ. ಇದು ಟ್ರಂಪ್‌ ಸುದ್ದಿಗಷ್ಟೇ ಸೀಮಿತವಲ್ಲ. ಪ್ರಪಂಚದಾದ್ಯಂತ ಮಾಧ್ಯಮ ಸಂಸ್ಥೆಗಳು ಎದುರಿಸುತ್ತಿರುವ ಸಂಕಷ್ಟಗಳನ್ನು ತೋರಿಸುವ ಕನ್ನಡಿ. ಅಮೆರಿಕದಂತಹ ದೇಶಗಳಲ್ಲೇ ಹೀಗಾದರೆ, ಉಳಿದ ದೇಶಗಳ ಪರಿಸ್ಥಿತಿ ಹೇಗಿರಬಹುದು?

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

CNN, MS NOW, Politicoಗೆ ಶ್ವೇತಭವನ ಪ್ರವೇಶ ನಿರ್ಬಂಧ; ಟ್ರಂಪ್ ಆದೇಶಕ್ಕೆ ಫೆಡರಲ್ ಕೋರ್ಟ್ ತಡೆ

CNN, MS NOW ಮತ್ತು Politico ಸುದ್ದಿ‌ ಸಂಸ್ಥೆಗಳ ಪತ್ರಕರ್ತರಿಗೆ ಶ್ವೇತಭವನ...

ಸೂಚನೆಯಿಲ್ಲದೆ ಆಸ್ಟ್ರೇಲಿಯಾದ ಸರ್ಕಾರಿ ವೆಬ್‌ಸೈಟ್ ಹ್ಯಾಕ್ ಮಾಡಿದ ‘OpenAI’

ಆಸ್ಟ್ರೇಲಿಯಾದ ಸರ್ಕಾರಿ ಆರೋಗ್ಯ ಇಲಾಖೆಯ ವೆಬ್‌ಸೈಟ್‌ ಒಂದನ್ನು ಕೃತಕ ಬುದ್ಧಿಮತ್ತೆ (AI)...

10 ಸಾವಿರ ಸಂಸ್ಥೆಗಳ ಇ-ಮೇಲ್ ಹ್ಯಾಕ್: ಸೈಬರ್ ವಂಚಕರ ‘ಎಐ ಚಾಟ್‌ಬಾಟ್’ ಸ್ಥಗಿತಗೊಳಿಸಿದ ಮೈಕ್ರೋಸಾಫ್ಟ್

ವಿಶ್ವಾದ್ಯಂತ 10,000ಕ್ಕೂ ಹೆಚ್ಚು ಸಂಸ್ಥೆಗಳಿಗೆ ಸೇರಿದ 12,000ಕ್ಕೂ ಅಧಿಕ ಇ-ಮೇಲ್ ಖಾತೆಗಳನ್ನು...

11 ವರ್ಷಗಳ ಬಳಿಕ ಅಮೆರಿಕಕ್ಕೆ ಜಿನ್‌ಪಿಂಗ್; ಭೇಟಿಯ ನಿರೀಕ್ಷೆ ಏನು?

ಚೀನಾದ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ 11 ವರ್ಷಗಳ ಬಳಿಕ ಅಮೆರಿಕಕ್ಕೆ ಅಧಿಕೃತ...