ಈ ದಿನ ಸಂಪಾದಕೀಯ | ಆರ್‌ಎಸ್‌ಎಸ್‌ನ ಇತಿಹಾಸವನ್ನೇ ತಿರುಚುತ್ತಿರುವ ಭಾಗವತ್!

Date:

ಮೋಹನ್ ಭಾಗವತ್ ಮಾತುಗಳನ್ನು ಕೇಳಿದರೆ, ಆರ್‌ಎಸ್‌ಎಸ್ ಎಂತಹ ಬೂಟಾಟಿಕೆಯ ಸಂಘಟನೆ ಎಂಬುದು ಮನವರಿಕೆಯಾಗುತ್ತದೆ. ಸ್ವತಃ ಭಾಗವತ್ ಅವರೇ ಆರ್‌ಎಸ್‌ಎಸ್‌ನ ಇತಿಹಾಸವನ್ನು ತಿರುಚುತ್ತಿದ್ದಾರಲ್ಲ ಅನಿಸುತ್ತದೆ...

ತಮ್ಮ ಮೇಲಿನ ಟೀಕೆಗಳನ್ನು ಹೇಗಾದರೂ ದಮನ ಮಾಡಬೇಕೆಂದು ಆರ್‌ಎಸ್‌ಎಸ್‌ ನಾಯಕರು ಜಿದ್ದಿಗೆ ಬಿದ್ದಂತೆ ಕಾಣುತ್ತಿದ್ದಾರೆ. ಈ ಓಟದ ಭರದಲ್ಲಿ ಆರ್‌ಎಸ್ಎಸ್‌ ಮುಖ್ಯಸ್ಥ (ಸರಸಂಘಚಾಲಕ) ಮೋಹನ್ ಭಾಗವತ್ ಸುಳ್ಳಿನ ಪ್ರಹಾರವನ್ನೇ ನಡೆಸಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಮತ್ತು ಇತರ ಸಂಗತಿಗಳಿಗೆ ಸಂಬಂಧಿಸಿದಂತೆ ನೀಡಿರುವ ಪ್ರತಿಕ್ರಿಯೆಗಳು ಮತ್ತದೇ ಸುಳ್ಳಿನ ಪರಂಪರೆಯ ಮುಂದುವರಿಕೆಯಾಗಿವೆ. ಆರ್‌ಎಸ್‌ಎಸ್‌ ನೋಂದಣಿಯಾಗಬೇಕೋ ಬೇಡವೋ ಎಂಬ ಚರ್ಚೆ ಪಕ್ಕಕ್ಕಿರಲಿ, ಆ ಟೀಕೆಗಳ ನೆಪದಲ್ಲಿ ಭಾಗವತ್ ನೀಡಿರುವ ಹಸಿಹಸಿ ಸುಳ್ಳಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ.

- Advertisement -

”ಆರ್‌ಎಸ್‌ಎಸ್ 1925ರಲ್ಲಿ ಸ್ಥಾಪನೆಯಾಯಿತು. ಆಗ ಭಾರತವನ್ನು ಬ್ರಿಟಿಷರು ಆಳುತ್ತಿದ್ದರು. ನಾವು ಬ್ರಿಟಿಷ್ ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಬೇಕಿತ್ತು ಎಂದು ನೀವು ನಿರೀಕ್ಷಿಸುತ್ತೀರಾ? ನಮ್ಮ ಹೋರಾಟ ಬ್ರಿಟಿಷರ ವಿರುದ್ಧ ಇತ್ತು. ದೇಶಕ್ಕೆ ಸ್ವಾತಂತ್ರ‍್ಯ ಬಂದ ನಂತರ, ಸಂಘಗಳನ್ನು ನೋಂದಣಿ ಮಾಡಬೇಕೆಂದು ಭಾರತ ಸರ್ಕಾರ ಕಡ್ಡಾಯಗೊಳಿಸಲಿಲ್ಲ. ನಮ್ಮನ್ನು ಸಾಮಾನ್ಯ ನಂಬಿಕೆಗಳನ್ನು ಹಂಚಿಕೊಳ್ಳುವ ಮತ್ತು ಸ್ವಯಂಪ್ರೇರಣೆಯಿಂದ ಒಟ್ಟಾಗಿ ಕೆಲಸ ಮಾಡುವ ಜನರ ಗುಂಪು ಎಂದು ವರ್ಗೀಕರಿಸಲಾಗಿದೆ ಮತ್ತು ನಮ್ಮದು ಮಾನ್ಯತೆ ಪಡೆದ ಸಂಸ್ಥೆ” ಎನ್ನುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಮುಂದುವರಿದು, ಆರ್‌ಎಸ್‌ಎಸ್ ಪ್ರತಿಪಾದಿಸುವ ಹಿಂದುತ್ವದ ಕುರಿತು ಪ್ರತಿಕ್ರಿಯಿಸುತ್ತಾ, ”ಹಿಂದೂಗಳಿಗಷ್ಟೇ ಆರ್‌ಎಸ್‌ಎಸ್ ಪ್ರವೇಶ. ‘ಭಾರತೀಯರೆಲ್ಲರೂ ಹಿಂದೂ’ ಎಂದು ಭಾವಿಸುವವರನ್ನು ನಾವು ಹಿಂದೂ ಎಂದು ಪರಿಗಣಿಸುತ್ತೇವೆ. ಧರ್ಮ, ಜಾತಿ, ಪಂಥ, ಲಿಂಗವೆಂಬ ಭೇದವಿಲ್ಲ. ಶಾಖೆಗೆ ಬರುವವರು ಈ ಎಲ್ಲ ಪ್ರತ್ಯೇಕತಾ ಭಾವವನ್ನು ಹೊರಗಿಟ್ಟು ಬರಬೇಕು. ಭಾರತದಲ್ಲಿ ನಿಜವಾಗಿಯೂ ಜಾತೀಯತೆ ಇಲ್ಲ. ಇರುವುದು ಜಾತಿ ಕುರಿತ ಗೊಂದಲ ಮಾತ್ರ. ಅದನ್ನೂ ರಾಜಕೀಯ ಲಾಭಕ್ಕಾಗಿ ಸೃಷ್ಟಿಸಲಾಗಿದೆ. ಶಾಖೆಗೆ ಬರುವವರ ಜಾತಿ, ಧರ್ಮವನ್ನು ನಾವು ಲೆಕ್ಕಹಾಕುವುದಿಲ್ಲ. ಅವರನ್ನು ಹಿಂದೂ ಎಂದೇ ಪರಿಗಣಿಸುತ್ತೇವೆ” ಎಂದು ತಿಳಿಸಿದ್ದಾರೆ.

ಭಾಗವತ್ ಮಾತುಗಳನ್ನು ಓದಿದರೆ, ಆರ್‌ಎಸ್‌ಎಸ್ ಎಂತಹ ಬೂಟಾಟಿಕೆಯ ಸಂಘಟನೆ ಎಂಬುದು ಮನವರಿಕೆಯಾಗುತ್ತದೆ. ವ್ಯಂಗ್ಯವಾಗಿ ಹೇಳುವುದಾದರೆ, ಸ್ವತಃ ಭಾಗವತ್ ಅವರೇ ಆರ್‌ಎಸ್‌ಎಸ್‌ನ ಇತಿಹಾಸವನ್ನು ತಿರುಚುತ್ತಿದ್ದಾರಲ್ಲ ಎನಿಸುತ್ತದೆ. “ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಕಾರಣ, ನಾವು ಅವರ ಸರ್ಕಾರದ ಕಾಲದಲ್ಲಿ ನೋಂದಣಿ ಮಾಡಿಕೊಳ್ಳಲಿಲ್ಲ” ಎನ್ನುವುದು ಕೂಡ ಹಸಿಹಸಿ ಸುಳ್ಳಿನ ಸಂಗತಿ. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಎಂದಿಗೂ ಕಾಣಿಸಿಕೊಳ್ಳದ, ಪರೋಕ್ಷವಾಗಿ ಬೆಂಬಲಿಸಿದರೂ ತಮ್ಮದೇ ಅಜೆಂಡಾಗಳನ್ನು ಇಟ್ಟುಕೊಂಡಿದ್ದ ಆರ್‌ಎಸ್‌ಎಸ್‌, ಬ್ರಿಟಿಷರ ವಿರುದ್ಧ ಹೋರಾಡಿತ್ತು ಎಂಬುದೇ ಇತಿಹಾಸಕ್ಕೆ ಬಗೆಯುವ ಮಹಾ ದ್ರೋಹ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಕಾಂಗ್ರೆಸ್‌ಗಷ್ಟೇ ಅಲ್ಲ, ಸಮಾಜಕ್ಕೆ ಅರ್ಥವಾಗಿದೆಯೇ ಆರ್‌ಎಸ್‌ಎಸ್ ಅಜೆಂಡಾ?

‘Hindu Nationalism: Origins, Ideologies and Modern Myths’ ಎಂಬ ಕೃತಿಯಲ್ಲಿ ಚೇತನ್ ಭಟ್ ದಾಖಲಿಸುವ ಪ್ರಕಾರ, ”ಆರ್‌ಎಸ್‌ಎಸ್‌ನವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಂದೋ ಪರೋಕ್ಷವಾಗಿ ಭಾಗವಹಿಸುತ್ತಿದ್ದರು. ಇಲ್ಲವೇ ಅದರಿಂದ ದೂರವೇ ಉಳಿಯುತ್ತಿದ್ದರು. ಆದರೆ ಮುಸ್ಲಿಮರ ವಿರುದ್ಧ ನಡೆಯುವ ಹಿಂಸಾತ್ಮಕ ಘಟನೆಗಳಲ್ಲಿ ಮಾತ್ರ ಅವರ ಪಾತ್ರ ಯಾವತ್ತೂ ಇರುತ್ತಿತ್ತು. ಗಾಂಧೀಜಿ 1930ರಲ್ಲಿ ಉಪ್ಪಿನ ಸತ್ಯಾಗ್ರಹ ಮತ್ತು ಕಾನೂನು ಭಂಗ ಚಳವಳಿಯನ್ನು ಹಮ್ಮಿಕೊಂಡಾಗ, ಆರ್‌ಎಸ್‌ಎಸ್ ತನ್ನ ತಳಮಳವನ್ನು ಎದುರಿಸಬೇಕಾಯಿತು. ಅನೇಕ ಮಂದಿ ಕಾರ್ಯಕರ್ತರಿಗೆ ಕಾನೂನು ಭಂಗ ಚಳವಳಿಯಲ್ಲಿ ಭಾಗವಹಿಸುವ ಇಚ್ಛೆ ಇತ್ತು. ಅತ್ತ ತಮ್ಮ ಕಾರ್ಯಕರ್ತರನ್ನೂ ತೃಪ್ತಿಪಡಿಸಬೇಕು ಮತ್ತು ಬ್ರಿಟಿಷ್ ಸರ್ಕಾರದ ಜತೆಯೂ ಕೈಜೋಡಿಸಬೇಕು ಎನ್ನುವ ಇರಾದೆ ಇದ್ದ ಆರ್‌ಎಸ್‌ಎಸ್ ಸರಕಾರದೊಂದಿಗೆ ತನಗಿದ್ದ ಸಂಬಂಧದ ವಿಚಾರವಾಗಿ ಕಾರ್ಯಕರ್ತರಿಗೆ ಏನೂ ಹೇಳದೆ, ‘ಆರ್‌ಎಸ್ಎಸ್ ಸಂಘಟನಾತ್ಮಕವಾಗಿ ಈ ಚಳವಳಿಯಲ್ಲಿ ಭಾಗವಹಿಸಲು ನಿರ್ಧರಿಸಿಲ್ಲ. ಆದರೆ ಕಾರ್ಯಕರ್ತರು ತಮ್ಮ ವೈಯಕ್ತಿಕ ನೆಲೆಯಲ್ಲಿ ಬೇಕಾದರೆ ಭಾಗವಹಿಸಬಹುದು’ ಎಂಬ ನಿಲುವಿಗೆ ಬರುತ್ತದೆ”(ಉಲ್ಲೇಖ: Gandhi’s Assassin: The Making of Nathuram Godse and His Idea of India-  Dhirendra Jha).

ಕಾರ್ಯಕರ್ತರ ಕೋಪಕ್ಕೆ ತುತ್ತಾಗಬೇಕಾಗುತ್ತದೆ ಎಂದು ಹೆದರಿದ ಅಂದಿನ ಆರ್‌ಎಸ್‌ಎಸ್‌ ಮುಖ್ಯಸ್ಥ ಕೆ.ಬಿ.ಹೆಡಗೇವಾರ್, ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ, ಚಳವಳಿಗೆ ಬರುತ್ತಾರೆ. ಸಂಘಟನೆಯಲ್ಲಿದ್ದೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರೆ, ಸಂಘಟನೆಯ ವಿರುದ್ಧ ಬ್ರಿಟಿಷರು ಸಿಟ್ಟಾಗುತ್ತಾರೆಂಬುದು ಅವರ ದುಷ್ಟ ಆಲೋಚನೆಯಾಗಿರುತ್ತದೆ. ಹೆಡಗೇವಾರ್ ಅವರನ್ನು ಬಂಧಿಸಿದಾಗ, ಅದನ್ನೇ ಅವಕಾಶವನ್ನಾಗಿ ಬಳಸಿಕೊಂಡು ರಾಜಕೀಯ ಕೈದಿಗಳನ್ನು ಆರ್‌ಎಸ್‌ಎಸ್ ಕಾರ್ಯಕರ್ತರನ್ನಾಗಿ ಪರಿವರ್ತಿಸುವ ಕಾರ್ಯಾಚರಣೆ ನಡೆಸುತ್ತಾರೆ. ತನ್ನ ಸಂಘಟನೆಯನ್ನು ಬಲವರ್ಧನೆ ಮಾಡುವುದೇ ಹೆಡಗೇವಾರ್ ಗುರಿಯಾಗಿರುತ್ತದೆ ಹೊರತು, ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವ ಘನ ಉದ್ದೇಶವೇನೂ ಇರಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಮೋಹನ್ ಭಾಗವತ್ ಪ್ರತಿಪಾದಿಸುತ್ತಿರುವ ‘ಹಿಂದುತ್ವ ಮತ್ತು ಹಿಂದೂರಾಷ್ಟ್ರ’ ಪರಿಕಲ್ಪನೆಯ ಮೂಲ ಬಿತ್ತನೆ ಮಾಡಿದ್ದು ವಿ.ಡಿ.ಸಾವರ್ಕರ್. ಮೊಹಮ್ಮದ್ ಅಲಿ ಜಿನ್ನಾ ಎರಡು ರಾಷ್ಟ್ರ ಸಿದ್ಧಾಂತವನ್ನು ಬಿತ್ತುವ ಮೊದಲೇ, 17 ವರ್ಷಗಳ ಹಿಂದೆಯೇ ಸಾವರ್ಕರ್ ‘ಹಿಂದೂಗಳಿಗೆ ಹಿಂದೂ ರಾಷ್ಟ್ರ’ ಎಂಬ ಪರಿಕಲ್ಪನೆಯನ್ನು ಚಾಲ್ತಿಗೆ ತಂದಿದ್ದರು. ಆರಂಭದಲ್ಲಿ ಬ್ರಿಟಿಷ್ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿ, ಜೈಲು ಸೇರಿದ್ದ ಸಾವರ್ಕರ್, ನಿರಂತರ ಕ್ಷಮಾಪಣಾ ಪತ್ರಗಳನ್ನು ಬರೆಯುತ್ತಾ, ಜೈಲಿನಲ್ಲೂ ಅಧಿಕಾರಿಗಳೊಂದಿಗೆ ಆತ್ಮೀಯತೆಯಿಂದ ಇದ್ದು, ಬಿಡುಗಡೆಗಾಗಿ ಮನವೊಲಿಕೆ ಮಾಡುತ್ತಿದ್ದರು. ಸಾವರ್ಕರ್ ಜೈಲಿನಿಂದ ಹೊರಬಂದ ಮೇಲೆ ಸ್ವಾತಂತ್ರ್ಯ ಚಳವಳಿಯಿಂದ ದೂರ ಉಳಿದರು. ಬ್ರಿಟಿಷರಿಗೆ ವಿಧೇಯರಾಗಿ ನಡೆದುಕೊಳ್ಳುವುದಾಗಿ ಬರೆದುಕೊಟ್ಟಿದ್ದ ಮುಚ್ಚಳಿಕೆಗೆ ಅನುಗುಣವಾಗಿ ನಡೆದುಕೊಳ್ಳಲು ಆರಂಭಿಸಿದರು. ವಸಾಹತು ವಿರೋಧಿ ಹೋರಾಟವನ್ನು ಗಾಂಧೀಜಿಯವರು ಕೈಗೊಂಡಾಗ ಎಲ್ಲ ಜಾತಿ, ವರ್ಗದ ಜನ ಅದರಲ್ಲಿ ಪಾಲ್ಗೊಂಡರು. ನಿಜವಾದ ಅರ್ಥದಲ್ಲಿ ಈ ದೇಶದ ಜನರನ್ನು ಧರ್ಮಾತೀತವಾಗಿ ಒಗ್ಗೂಡಿಸಿ ಮುನ್ನಡೆಸಿದ್ದು ಬ್ರಿಟಿಷರಿಗೆ ನುಂಗಲಾರದ ತುತ್ತಾಗಿತ್ತು. ಬ್ರಿಟಿಷರ ಒಡೆದು ಆಳುವ ನೀತಿಯ ಹಾದಿಯನ್ನೇ ಕ್ರಮಿಸಿದ ಸಾವರ್ಕರ್‌, ‘ದ್ವಿರಾಷ್ಟ್ರ ಸಿದ್ಧಾಂತ’ ಮಂಡಿಸಿದ್ದರಲ್ಲಿಯೂ ಸ್ವಾತಂತ್ರ್ಯ ಚಳವಳಿಯ ದಿಕ್ಕುತಪ್ಪಿಸುವ ಉದ್ದೇಶವಿತ್ತು ಮತ್ತು ಬ್ರಿಟಿಷರಿಗೆ ತೋರುತ್ತಿದ್ದ ವಿಧೇಯತೆ ಅಲ್ಲಿತ್ತು(ಆಧಾರ: Gandhi’s Assassin).

ಪೇಶ್ವೆ ಆಳ್ವಿಕೆಯನ್ನು ಮರುಸ್ಥಾಪಿಸಬೇಕು, ಬ್ರಾಹ್ಮಣರು ಎಂದಿಗೂ ಮೇಲಿನ ಸ್ಥಾನದಲ್ಲಿರಬೇಕು ಎಂಬ ಗುರಿಯನ್ನು ಹೊಂದಿದ್ದ ಆರ್‌ಎಸ್‌ಎಸ್‌ನ ಚಿತ್ಪಾವನ ಬ್ರಾಹ್ಮಣರಿಗೆ, ಗಾಂಧೀಜಿಯವರ ಸುಧಾರಣಾವಾದಿ ಹಿಂದೂ ಸಮಾಜದ ಪರಿಕಲ್ಪನೆ ಮತ್ತು ಅಸ್ಪೃಶ್ಯತಾ ನಿವಾರಣೆ, ಕೋಮು ಸಾಮರಸ್ಯದ ತಳಹದಿಯ ಭಾರತ ಅಪಥ್ಯವಾಗಿತ್ತು. ಹಿಂದೂ ನಾವೆಲ್ಲ ಒಂದು ಎನ್ನುತ್ತಾ, ಕಲ್ಪಿತ ಶತ್ರುವಿನೊಂದಿಗೆ ಸಮರ ಸಾರಿ, ಜಾತಿ ಅಸಮಾನತೆಯ ಪ್ರಶ್ನೆಯನ್ನು ಗೌಣವಾಗಿಸುವುದು ಆರ್‌ಎಸ್‌ಎಸ್‌ನ ದೀರ್ಘಕಾಲೀನ ಅಜೆಂಡಾ. ಆರ್‌ಎಸ್‌ಎಸ್‌ನೊಳಗೆ ಜಾತಿ ವ್ಯವಸ್ಥೆ ಇಲ್ಲ ಎನ್ನುವುದು ಬೂಟಾಟಿಕೆಯಷ್ಟೇ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಸಂಘಪರಿವಾರದ ಹುನ್ನಾರಗಳನ್ನು ಅರಿತ ದಲಿತರು

‘ಐ ಕುಡ್ ನಾಟ್ ಬಿ ಹಿಂದೂ’ (ನಾನು ಹಿಂದೂ ಆಗಲು ಸಾಧ್ಯವಿಲ್ಲ) ಎಂಬ ಕೃತಿಯನ್ನು ಬರೆದಿರುವ ರಾಜಸ್ಥಾನದ ಭನ್ವರ್ ಮೇಘವಂಶಿ ಮೂಲತಃ ದಶಕಗಳ ಕಾಲ ಆರ್‌ಎಸ್‌ಎಸ್‌ನಲ್ಲಿ ಕಾಲಾಳಾಗಿ ದುಡಿದವರು. ದಲಿತರಾಗಿದ್ದ ಅವರು, ಆರ್‌ಎಸ್‌ಎಸ್‌ ಒಳಗಿನ ಜಾತಿ ತಾರತಮ್ಯವನ್ನು ನೋಡಿ, ಬೇಸತ್ತು ಹೊರಬಂದರು. ತಮ್ಮ ಕೃತಿಯಲ್ಲಿ ಆರ್‌ಎಸ್‌ಎಸ್‌ನ ನಿಜಮುಖಗಳನ್ನು ಅನಾವರಣ ಮಾಡಿದರು. ”ನನ್ನ ಹಳ್ಳಿಯಾದ ಭಿಲ್ವಾರಾ ಜಿಲ್ಲೆಯ ಸಿಧಿಯದಲ್ಲಿ, ನನ್ನ ಮನೆಯಲ್ಲಿ ತಯಾರಿಸಿದ ಆಹಾರವನ್ನು ತಿನ್ನಲು ಹಿರಿಯ ಆರ್‌ಎಸ್‌ಎಸ್ ಸದಸ್ಯರು ನಿರಾಕರಿಸಿದರು. ಅವರು ಅದನ್ನು ಪ್ಯಾಕ್ ಮಾಡಿ ಮತ್ತೊಂದು ಹಳ್ಳಿಗೆ ಕೊಂಡೊಯ್ದರು. ಆದರೆ ಅದನ್ನು ರಸ್ತೆಬದಿಯಲ್ಲಿ ಎಸೆದರು. ನಾನು ದಲಿತನಾಗಿದ್ದರಿಂದ ಹೀಗೆ ಮಾಡಿದರು” ಎನ್ನುವ ಮೇಘವಂಶಿ, ”ನಾನು ತಕ್ಷಣ ಎಲ್ಲ ಹಂತದ ನಾಯಕರಿಗೂ ದೂರುಗಳನ್ನು ನೀಡಿದೆ. ನಾಗ್ಪುರದಲ್ಲಿದ್ದ ಅಂದಿನ ಸರಸಂಘಚಾಲಕರಿಗೂ ದೂರು ಬರೆದೆ. ಯಾರೂ ಪ್ರತಿಕ್ರಿಯಿಸುವ ಸೌಜನ್ಯ ತೋರಿಸಲಿಲ್ಲ. ​​ನನ್ನ ನೋವನ್ನು ಕೇಳಲಿಲ್ಲ. ಕೇವಲ ಮೌನವಹಿಸಿದರು. ಇದು ಸಂಘಟನೆಯ ಬೂಟಾಟಿಕೆಯನ್ನು ಬಯಲು ಮಾಡಿತು. ಆಗ ನಾನು ಆರ್‌ಎಸ್‌ಎಸ್ ತೊರೆಯಲು ನಿರ್ಧರಿಸಿದೆ” ಎನ್ನುತ್ತಾರೆ. ಜಾತಿ ವ್ಯವಸ್ಥೆಯ ವಿರುದ್ಧ ಆರ್‌ಎಸ್‌ಎಸ್ ನಾಯಕರು ಆಗಾಗ್ಗೆ ನೀಡುವ ಹೇಳಿಕೆಗಳನ್ನು ಮೇಘವಂಶಿ ಹೀಗೆ ನೋಡುತ್ತಾರೆ: ”ಜಾತಿ ವ್ಯವಸ್ಥೆಯ ವಿರುದ್ಧ ಆರ್‌ಎಸ್‌ಎಸ್ ಸಾಂದರ್ಭಿಕವಾಗಿ ಮಾತನಾಡುವುದು, ವರ್ಷಕ್ಕೊಮ್ಮೆ ಹಾವು ತನ್ನ ಪೊರೆಯನ್ನು ಕಳಚಿದಂತೆ ಅಷ್ಟೇ. ಆದರೆ ಅದರ ಮೂಲ ಸಿದ್ಧಾಂತ ಹಾಗೆಯೇ ಇರುತ್ತದೆ”.  ಈ ಸತ್ಯವನ್ನು ದೇಶದ ಜನರು ಅರ್ಥಮಾಡಿಕೊಳ್ಳಬೇಕಿದೆ.

ಎಂದಿಗೂ ಬ್ರಾಹ್ಮಣೀಯ ವ್ಯವಸ್ಥೆಯ ಪೋಷಣೆಗೆ ದುಡಿಯುವುದೇ ಆರ್‌ಎಸ್‌ಎಸ್‌ನ ಮೂಲಮಂತ್ರ. ಅದಕ್ಕಾಗಿ ಅವರು ಬ್ರಿಟಿಷರೊಂದಿಗೂ ಚೆನ್ನಾಗಿರುತ್ತಾರೆ, ತುರ್ತುಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಇಂದಿರಾಗಾಂಧಿ ಅವರೊಂದಿಗೂ ಆಪ್ತತೆ ಹೊಂದಿರುತ್ತಾರೆ. ಆದರೆ ಇತಿಹಾಸದ ಸತ್ಯಗಳಿಗೆ ವಿರುದ್ಧವಾಗಿ ಆರ್‌ಎಸ್‌ಎಸ್ ನಾಯಕರು ತಮ್ಮನ್ನು ತಾವು ಸ್ವಾತಂತ್ರ್ಯ ಹೋರಾಟಗಾರರು, ಹಿಂದೂ ಸಮಾಜದ ಸುಧಾರಕರು ಎಂಬಂತೆ ಬಿಂಬಿಸಿಕೊಳ್ಳುತ್ತಾರೆ. ಈ ಆತ್ಮವಂಚನೆಯ ಕೆಲಸವನ್ನು ಇನ್ನಾದರೂ ನಿಲ್ಲಿಸಲಿ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹಬ್ಬ-ಆಚರಣೆಗಳೇ ಬಿಜೆಪಿಯ ದ್ವೇಷದ ಅಸ್ತ್ರ; ಜನತೆ ಎಚ್ಚೆತ್ತುಕೊಳ್ಳಲಿ!

ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ಆಚರಣೆಗಳ ಪಾವಿತ್ರ್ಯವನ್ನು ಹಾಳುಗೆಡವುವ, ಹಬ್ಬಗಳನ್ನು...

ಈ ದಿನ ಸಂಪಾದಕೀಯ | ಪ್ರಜಾ ಸೇವೆ ಪ್ರಚಾರವೂ ಇರಲಿ, ಪ್ರಜೆಗಳ ಬದುಕಿನಲ್ಲಿ ಬದಲಾವಣೆಯನ್ನೂ ತರಲಿ

ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಜನರಿಗೆ ತಲುಪಲು ಪ್ರಚಾರ ಮುಖ್ಯ; ಅದಕ್ಕಿಂತ ಸಾಮಾನ್ಯರ...

ಈ ದಿನ ಸಂಪಾದಕೀಯ | ಭಿನ್ನಮತಗಳ ನಡುವೆ BRICS ಶೃಂಗಸಭೆ; ಒಮ್ಮತ ಸಾಧಿಸುವುದೇ ಸವಾಲು!

ಇರಾನ್-ಯುಎಇ ಉದ್ವಿಗ್ನತೆ, ರಷ್ಯಾ-ಪಶ್ಚಿಮ ರಾಷ್ಟ್ರಗಳ ಸಂಘರ್ಷ, ಏಷ್ಯಾ ದೈತ್ಯರ ಆಂತರಿಕ ತಿಕ್ಕಾಟಗಳು...

ಈ ದಿನ ಸಂಪಾದಕೀಯ | ಪಾದಯಾತ್ರೆಯ ಪಾವಿತ್ರ್ಯತೆಯನ್ನು ಬಿಜೆಪಿ ಮುಖಂಡರು ಮಣ್ಣುಗೂಡಿಸಿದರೇ?

ದೇಶದಲ್ಲಿ ಇಲ್ಲಿಯವರೆಗೆ ಜರುಗಿದ ಪಾದಯಾತ್ರೆಗಳು ಜನರ ಸಮಸ್ಯೆಗಳನ್ನು ಹೊತ್ತು ನಡೆದ ಹೆಜ್ಜೆಗಳಾಗಿದ್ದವು,...