ಈ ದಿನ ಸಂಪಾದಕೀಯ | ನಗರದ ಸುಶಿಕ್ಷಿತರಿಗೆ ಮತದಾನ ಅಂದ್ರೆ ಯಾಕಷ್ಟು ನಿರ್ಲಕ್ಷ್ಯ?

Date:

ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ ಮೊನ್ನೆ ನಡೆದ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಅತಿ ಕಡಿಮೆ, ಅಂದರೆ ಈ ಚುನಾವಣೆಯಲ್ಲಿ ಶೇ.54.53ರಷ್ಟು ಮತದಾನವಾಗಿದೆ. 2013ರಲ್ಲಿ 62%, 2018 ರಲ್ಲಿ 57% ಮತದಾನವಾಗಿತ್ತು. ಅಂದರೆ ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಸರಾಸರಿ 3 ರಿಂದ 5%ದಷ್ಟು ಇಳಿಮುಖವಾಗುತ್ತಿದೆ

ನಗರದ ಜನರು ತಮಗಿರುವ ಮೂಲಭೂತ ಹಕ್ಕು ಮತ್ತು ಜವಾಬ್ದಾರಿಗಳ ಬಗ್ಗೆ ಅರಿವಿಲ್ಲದೇ ಬದುಕುತ್ತಿದ್ದಾರೆಯೇ? ಸುಶಿಕ್ಷಿತರು ಪ್ರಜಾಪ್ರಭುತ್ವ ವ್ಯವಸ್ಥೆಯೊಳಗಿನ ತಮ್ಮ ಕರ್ತವ್ಯವನ್ನೇ ಕಾಲಕಸವೆಂದು ಭಾವಿಸಿದ್ದಾರೆಯೇ ? ಸಕಲ ನಾಗರಿಕ ಸೌಲಭ್ಯಗಳನ್ನು ಪಡೆದು ಹೈ ಫೈ ಜೀವನ ನಡೆಸುತ್ತಿರುವವರಿಗೆ ತಮ್ಮ ಸ್ವಾರ್ಥವೇ ಮುಖ್ಯವಾಯಿತೇ? ಪ್ರತಿ ಬಾರಿ ಮತದಾನ ಮುಗಿಯುತ್ತಿದ್ದಂತೆ ಇಂತಹ ಹತ್ತಾರು ಪ್ರಶ್ನೆಗಳು ಏಳಲು ಶುರುವಾಗುತ್ತವೆ.

ಕರ್ನಾಟಕ ವಿಧಾನಸಭಾ ಚುನಾವಣೆ ಮೇ 10ರಂದು ಮುಗಿದಿದೆ. ʼಮತದಾನ ಮಾಡಿದ ಅಂಗವಿಕಲರು, ಶತಾಯುಷಿಗಳು, ಕ್ಯಾನ್ಸರ್‌ ರೋಗಿಗಳುʼ ಎಂಬ ತಲೆಬರಹದ ಸುದ್ದಿಗಳನ್ನು ಮುಂಜಾನೆ ಮತದಾನ ಶುರುವಾದಾಗಿನಿಂದ ದೃಶ್ಯ ಮಾಧ್ಯಮಗಳು ಬಿತ್ತರಿಸಿದವು. ಇದು ಮತದಾನಕ್ಕೆ ಹೋಗದಿರುವವರಿಗೆ ಪ್ರೇರಣೆ ಕೊಡಬಹುದಾದ ಸುದ್ದಿಗಳು.

ಈ ಬಾರಿ ಅಂಗವಿಕಲರು ಮತ್ತು ಎಂಬತ್ತು ವರ್ಷ ಮೇಲ್ಪಟ್ಟ ಹಿರಿಯರಿಗೆ ಮನೆಯಲ್ಲಿಯೇ ಮತದಾನ ಮಾಡುವ ವ್ಯವಸ್ಥೆಯೊಂದನ್ನು ಮೊದಲ ಬಾರಿಗೆ ರಾಜ್ಯದಲ್ಲಿ ಚುನಾವಣಾ ಆಯೋಗ ಘೋಷಿಸಿತ್ತು. ಅದು ಕೆಲವೇ ಕೆಲವು ಕಡೆ ನಡೆಯಿತು. ಪ್ರಚಾರದ ಕೊರತೆ ಮತ್ತು ಬದ್ಧತೆಯ ಕೊರತೆಯ ಕಾರಣ ಅಂಗವಿಕಲರನ್ನು ಹೊತ್ತು ತಂದು ಮತದಾನ ಮಾಡಿಸಲಾಯಿತು. ಗ್ರಾಮೀಣ ಭಾಗದ ಜನರಿಗೆ ಈಗಲೂ ಮತದಾನ ಎಂಬುದು ಬಹಳ ಹೆಮ್ಮೆಯ ಸಂಗತಿ. ಮತಗಟ್ಟೆಗೆ ಹೋಗಿಯೇ ಅವರು ಮತದಾನ ಮಾಡುವುದರಲ್ಲಿ ಉತ್ಸುಕರು. ಅದರ ಪರಿಣಾಮವಾಗಿ ಮತ್ತು ರಾಜಕೀಯ ಪಕ್ಷಗಳ ಮುತುವರ್ಜಿಯಿಂದ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಮತದಾನ ನಡೆಯುತ್ತಿದೆ.

ಆದರೆ, ಈ ನಗರದ ಜನರಿಗೆ ಏನಾಗಿದೆ? ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ ಮೊನ್ನೆ ನಡೆದ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಅತಿ ಕಡಿಮೆ, ಅಂದರೆ ಈ ಚುನಾವಣೆಯಲ್ಲಿ ಶೇ.54.53ರಷ್ಟು ಮತದಾನವಾಗಿದೆ. 2013ರಲ್ಲಿ 62%, 2018 ರಲ್ಲಿ 57% ಮತದಾನವಾಗಿತ್ತು. ಅಂದರೆ ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಸರಾಸರಿ 3 ರಿಂದ 5%ದಷ್ಟು ಇಳಿಮುಖವಾಗುತ್ತಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2008ರ ಚುನಾವಣೆಯಲ್ಲಿ ಬೆಂಗಳೂರಿನ ಮತದಾನ ಪ್ರಮಾಣ ಶೇ.47.30ರಷ್ಟಿತ್ತು. ಬೆಂಗಳೂರಿನ ನಾಲ್ಕೂ ವಿಭಾಗಗಳು (ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ) ಸೇರಿ 28 ಶಾಸಕರನ್ನು ಆರಿಸುತ್ತವೆ. ಈ ಪ್ರವೃತ್ತಿ ದಶಕಗಳಷ್ಟು ಹಳೆಯದು. ಸ್ವಾತಂತ್ರ್ಯ ಬಂದ ಮೊದಲ ಮೂರು ದಶಕಗಳಲ್ಲಿ ಮತದಾನದ ಉತ್ಸಾಹವಿತ್ತು. 80ರ ದಶಕದ ನಂತರ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಈ ಕಂದಕ ಹಿರಿದಾಗುತ್ತಿದೆ.

ಹಾಗಿದ್ದರೆ ನಗರದ ಜನ ತಾವು ʼಬೇಜವಾಬ್ದಾರಿಗಳುʼಎಂಬ ಹಣೆಪಟ್ಟಿ ಶಾಶ್ವತವಾಗಿ ಅಂಟಿಸಿಕೊಳ್ಳಲು ಹೊರಟಿದ್ದಾರೆಯೇ? ಮತದಾನ ಮಾಡದ ಜನರಿಗೆ ನಗರದ ಅವ್ಯವಸ್ಥೆ, ಮೂಲಭೂತ ಸೌಕರ್ಯಗಳ ಬಗ್ಗೆ ಬೇಡಿಕೆ ಇಡುವ ಅಥವಾ ತಕರಾರು ತೆಗೆಯುವ ಹಕ್ಕು ಇರುತ್ತದೆಯೇ? ಅಷ್ಟಕ್ಕೂ ತಮ್ಮ ತಮ್ಮ ವಾರ್ಡ್‌ಗೆ ಹೋಗಿ ಸರತಿಯಲ್ಲಿ ನಿಂತು ಮತದಾನ ಮಾಡುವುದು ಅಷ್ಟೊಂದು ಕಷ್ಟವೇ? ಅವಮಾನಕರವೇ? ಎಂಬುದನ್ನು ಆ ಜನರೇ ಹೇಳಬೇಕು.

ಜನಪ್ರತಿನಿಧಿಗಳೊಂದಿಗೆ ನಿತ್ಯ ಮುಖಾಮುಖಿಯಾಗಿ ಕೆಲಸ ಮಾಡಿಸಿಕೊಳ್ಳುವ ಅಗತ್ಯ ನಗರಪ್ರದೇಶಗಳ ಮೇಲ್ವರ್ಗಗಳ ಮಂದಿಗೆ ಇರುವುದಿಲ್ಲ. ಪಟ್ಟಣಗಳ ಮತದಾರರು ಸಂಚಾರ ಸಮಸ್ಯೆಗಳು, ಮತಗಟ್ಟೆಗಳ ಉದ್ದುದ್ದ ಸಾಲುಗಳಲ್ಲಿ ನಿಂತು ಕಾಯಬೇಕೆಂಬ ಗೊಣಗಾಟ, ಚುನಾವಣೆಗಳ ನಿಷ್ಪ್ರಯೋಜಕತೆ, ರಾಜಕಾರಣವೇ ಹೊಲಸು, ಟಿಕೆಟ್ ಪಡೆದುಕೊಂಡ ಬಹುತೇಕ ಅಭ್ಯರ್ಥಿಗಳು ಅಯೋಗ್ಯರು ಎಂಬ ಸಿನಿಕತನ, ಈ ಸಿನಿಕತನ ಮತ್ತು ಭ್ರಮನಿರಸನ ಬಹುತೇಕ ಸಮರ್ಥನೀಯ. ‘NOTA’ (None Of The Above) ಆಯ್ಕೆ ಇದ್ದರೂ ನಗರಪ್ರದೇಶದ ಜನ ಬರ್ತಿಲ್ಲ. ಈ ಪ್ರವೃತ್ತಿಯನ್ನು ಹೀಗೆಯೇ ಮುಂದುವರೆಯಲು ಬಿಡುವುದು ಜನತಂತ್ರದ ಆರೋಗ್ಯಕ್ಕೆ ಮಾರಕ.

ಐಟಿ ಕಂಪನಿಗಳಲ್ಲಿ ದುಡಿಯುವ ನಗರದ ಜನರಿಗೆ ವಾರಾಂತ್ಯ ಅಂದ್ರೆ ಶುಕ್ರವಾರ ರಾತ್ರಿಯೇ ಶುರುವಾಗುತ್ತದೆ. ಬರೋಬ್ಬರಿ ಎರಡು ಹಗಲು, ಮೂರು ರಾತ್ರಿ ವಾರಾಂತ್ಯ! ಪಾರ್ಟಿ, ಕ್ಲಬ್ಬು, ಪಬ್ಬು, ಶಾಪಿಂಗ್ ಅಥವಾ ಪ್ರವಾಸದಲ್ಲಿ ಕಳೆದು ಹೋಗುವ ಯುವಜನರಿಗೆ ಈ ರಾಜ್ಯದಲ್ಲೊಂದು ಸರ್ಕಾರ ಇದೆ, ಸರ್ಕಾರದ ನೀತಿ ನಿಭಾವಣೆಯಲ್ಲಿ ನಮ್ಮದೂ ಪಾತ್ರ ಇದೆ ಮತ್ತು ಇರಬೇಕು ಎಂಬ ಕನಿಷ್ಠ ನಾಗರಿಕ ಪರಿಜ್ಞಾನ ಇದ್ದಂತಿಲ್ಲ. ಈ ಬಾರಿ ಮತದಾನ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕು ಎಂಬ ಕಾರಣಕ್ಕೆ ಚುನಾವಣಾ ಆಯೋಗ ವಾರಾಂತ್ಯದ ಬದಲು ವಾರದ ಮಧ್ಯೆ ಬುಧವಾರ ಮತದಾನಕ್ಕೆ ಏರ್ಪಾಡು ಮಾಡಿತ್ತು. ಆದರೂ ಮತದಾನಕ್ಕೆ ಜನ ಬಂದಿಲ್ಲ ಎಂದರೆ ಇದು ಗಂಭೀರ ಲೋಪ.

ಇದನ್ನು ಓದಿ ಬೇರೆ ಯಾವ ಸಂದರ್ಭವೂ ಉದಯಿಸುವುದಿಲ್ಲ, ಎಲ್ಲರೂ ನನಗೆ ಸಹಕಾರ ಕೊಟ್ಟು, ಆಶೀರ್ವಾದ ಮಾಡುತ್ತಾರೆ: ಡಿಕೆಶಿ

ಇದು ಬೆಂಗಳೂರು ನಗರದ ಸಮಸ್ಯೆ ಮಾತ್ರವಲ್ಲ. ಮಂಗಳೂರು ಸೇರಿದಂತೆ ಎಲ್ಲ ಮಹಾನಗರಗಳ ಹಣೆಬರಹ ಇಷ್ಟೇ. ಮಂಗಳೂರು ನಗರದಲ್ಲಿ ವಾಸವಿರುವ ವಿವಿಐಪಿ, ವಿಐಪಿಗಳು ಬೃಹತ್‌ ವಸತಿ ಸಮುಚ್ಛಯಗಳಲ್ಲಿ ವಾಸವಿರುವ 1,57,117 ಮಂದಿ ಮತದಾನ ಮಾಡಿಲ್ಲ. ಮಂಗಳೂರಿನಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಕುಮಾರ್‌ ನೇತೃತ್ವದಲ್ಲಿ ಸ್ವೀಪ್‌ ಸಮಿತಿ ರಚನೆ ಮಾಡಿ 50 ಲಕ್ಷ ವೆಚ್ಚದಲ್ಲಿ ಅಪಾರ್ಟ್‌ ಮೆಂಟ್‌ಗೆ ತೆರಳಿ ಅಭಿಯಾನ, ಹೋರ್ಡಿಂಗ್ಸ್‌ ಅಳವಡಿಕೆ, ಜಾಥಾ, ಸೆಲಬ್ರಿಟಿ ಪ್ರಚಾರ, ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದರು. ಆದರೆ ಅದು ಮತದಾನದ ಪ್ರಮಾಣ ಹೆಚ್ಚಿಸುವಲ್ಲಿ ಅಣುವಿನಷ್ಟೂ ಪರಿಣಾಮ ಬೀರಿಲ್ಲ. ಬದಲಿಗೆ 2.37% ಇಳಿಕೆಯೇ ಆಗಿದೆ! ಮೈಸೂರು ನಗರದ ಕೆಲವು ಮತಗಟ್ಟೆಗಳಲ್ಲಿಯೂ ಕಡಿಮೆ ಮತದಾನ ದಾಖಲಾಗಿದೆ.

ರಾಜಕೀಯ ವ್ಯವಸ್ಥೆಯ ಬಗ್ಗೆ ಅದು ಇಳಿದಿರುವ ಮಟ್ಟದ ಬಗ್ಗೆ, ಕ್ರಿಮಿನಲ್‌ಗಳು, ಲೂಟಿಕೋರರು, ಅವಿದ್ಯಾವಂತರೇ ರಾಜಕಾರಣದಲ್ಲಿ ಮೇಲುಗೈ ಸಾಧಿಸುತ್ತಿರುವುದು, ಅಂತವರಿಂದ ಆಳಿಸಿಕೊಳ್ಳುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಅದನ್ನು ಬದಲಾಯಿಸುವ ಶಕ್ತಿ ಪ್ರತಿ ಮತಕ್ಕೂ ಇದೆ. ಹಾಗಂತ ಸುಶಿಕ್ಷಿತ ವರ್ಗ ಪವಿತ್ರ ಮತದಾನದ ಹಕ್ಕಿನಿಂದ ವಿಮುಖರಾದರೆ ವ್ಯವಸ್ಥೆ ಬದಲಾಗುವ ಬದಲು ಇನ್ನಷ್ಟು ಹಾಳಾಗುತ್ತದೆ. ಈ ಪ್ರವೃತ್ತಿಯನ್ನು ಹೀಗೆಯೇ ಮುಂದುವರೆಯಲು ಬಿಡುವುದು ಜನತಂತ್ರದ ಆರೋಗ್ಯಕ್ಕೆ ಮಾರಕ. ಜನಪ್ರತಿನಿಧಿಗಳು ಮತದಾರರಿಗೆ ಉತ್ತರದಾಯಿ ಆಗಿರತಕ್ಕದ್ದು. ಆದರೆ ಐದು ವರ್ಷಗಳಿಗೊಮ್ಮೆ ಮತ ಹಾಕಿಸಿಕೊಳ್ಳಲು ಬರುವ ಜನಪ್ರತಿನಿಧಿಗಳು ಕ್ಷೇತ್ರದ ಕಡೆಗೆ ತಲೆ ಹಾಕುವುದು ಬಹುತೇಕ ಅಪರೂಪ. ಹೀಗಿದ್ದಾಗ ಅರ್ಧಕ್ಕರ್ಧದಷ್ಟು ಮತದಾರರು ಮತಗಟ್ಟೆ ಕಡೆ ತಲೆ ಹಾಕದೆ ಹೋದರೆ, ಈಗಾಗಲೆ ಜನರಿಂದ ದೂರ ಸರಿದಿರುವ ಜನಪ್ರತಿನಿಧಿಗಳಿಗೆ ಇನ್ನಷ್ಟು ಹಾಸಿಕೊಟ್ಟಂತಾಗುತ್ತದೆ. ಇದಕ್ಕೆ ಕಡಿವಾಣ ಹಾಕಲು ಕಡ್ಡಾಯ ಮತದಾನವೊಂದೇ ಪರಿಹಾರ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಐತಿಹಾಸಿಕ ಹೆಜ್ಜೆಯಿಡುವ ಅಗತ್ಯವಿದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಲಡಾಖಿನ ಹೋರಾಟವೂ ಮತ್ತು ಮೋದಿಯ ಮೊಂಡಾಟವೂ

ಆರ್ಟಿಕಲ್‌ 370 ತೆರವುಗೊಳಿಸಿದ ಮೋದಿಯವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾರು ಬೇಕಾದರೂ...

ಈ ದಿನ ಸಂಪಾದಕೀಯ | ಸರ್ವಾಧಿಕಾರದತ್ತ ದೇಶ ದಾಪುಗಾಲು ಹಾಕುತ್ತಿಲ್ಲವೇ? ಅವರಿಗಾದದ್ದು ನಮಗಾಗುವುದಿಲ್ಲವೇ?

ಹಿಟ್ಲರ್ ಮತ್ತು ಪುಟಿನ್ ಮಾಡಿದಂತೆ, ಮೋದಿ ಅವರು ದೇಶದಲ್ಲಿ ವಿರೋಧ ಪಕ್ಷಗಳಿಲ್ಲದಂತೆ,...

ಈ ದಿನ ಸಂಪಾದಕೀಯ | ಮರೆಯಲಾರದ, ಮರೆಯಬಾರದ ಮನಮೋಹನ ಈ ಸಿಂಗ್

ಮನಮೋಹನ್ ಸಿಂಗ್ ಎಂದೂ ಅಧಿಕಾರ ಚಲಾಯಿಸಲಿಲ್ಲ, ಹಣ ಮಾಡಲಿಲ್ಲ, ಪ್ರಚಾರ ಬಯಸಲಿಲ್ಲ,...

ಈ ದಿನ ಸಂಪಾದಕೀಯ | ನಿರ್ಮಲಾ ಸೀತಾರಾಮನ್‌ ಮುಕ್ತಮನಸ್ಸಿನಿಂದ ಚರ್ಚೆಯಲ್ಲಿ ಭಾಗವಹಿಸುವರೇ ?

ನಿರ್ಮಲಾ ಸೀತಾರಾಮನ್‌ ಅವರು ರಾಜ್ಯದ ಪ್ರಜ್ಞಾವಂತರು ಸಿದ್ದಪಡಿಸಿರುವ ವೇದಿಕೆಗೆ ಬಂದು ಮುಕ್ತ...