ಈ ದಿನ ಸಂಪಾದಕೀಯ | ಸಂಸತ್ತಿಗೆ ಬರದೆ, ಉತ್ತರಿಸದೆ ಗೃಹ ಸಚಿವ ಅಮಿತ್‌ ಶಾ ಅಡಗಿಕೊಂಡಿರುವುದೇಕೆ?

Date:

ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಸಚಿವರೂ ಸಂಸತ್ತಿಗೆ ಉತ್ತರದಾಯಿಯಾಗಿರಬೇಕು. ಆದರೆ, ಮುಂಗಾರು ಅಧಿವೇಶನ ಆರಂಭವಾಗಿ ಹದಿನೈದು ದಿನಗಳಾದರೂ ಘನತೆವೆತ್ತ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಕಲಾಪಕ್ಕೆ ಹಾಜರಾಗಿಲ್ಲ, ಉತ್ತರಿಸಿಲ್ಲ. ಪ್ರಶ್ನೆಗಳಿಗೆ ಹೆದರಿ ಅಡಗಿಕೊಳ್ಳುವುದು ಹೇಡಿಗಳ ಕೆಲಸವಲ್ಲವೇ?

ನೀಟ್‌ ಪರೀಕ್ಷೆ ಅಕ್ರಮ ಖಂಡಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಪೆಲೆಟ್‌ ಗನ್‌ ದಾಳಿ ಹಾಗೂ ಅಯೋಧ್ಯಾ ರಾಮಮಂದಿರದ ಹುಂಡಿ ಕಳವು ಆರೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್‌ ಶಾ ಅವರು ಸದನದಲ್ಲಿ ಸ್ಪಷ್ಟನೆ ನೀಡಬೇಕು ಮತ್ತು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿ ವಿಪಕ್ಷಗಳು ಸಂಸತ್‌ ಭವನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ಹಮ್ಮಿಕೊಂಡಿವೆ.

- Advertisement -

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ತಕ್ಷಣವೇ ಸಂಸತ್ತಿಗೆ ಆಗಮಿಸಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು, ಚರ್ಚೆಗೆ ನಾವು ಸಿದ್ಧ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರೆ; ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿರುವ ಅಪರಾಧಿಪ್ರಜ್ಞೆಯಿಂದಲೇ ಅವರು ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ ಎಂದು ಲೋಕಸಭೆ ನಾಯಕ ರಾಹುಲ್‌ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ಹೌದು, ಪ್ರತಿಪಕ್ಷಗಳ ನಾಯಕರ ಆರೋಪದಲ್ಲಿ ಹುರುಳಿದೆ. ಮುಂಗಾರು ಅಧಿವೇಶನ ಆರಂಭವಾಗಿ ಹದಿನೈದು ದಿನಗಳಾದರೂ ಘನತೆವೆತ್ತ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಕಲಾಪಕ್ಕೆ ಹಾಜರಾಗದೆ, ಉತ್ತರಿಸದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಸಚಿವರೂ ಸಂಸತ್ತಿಗೆ ಉತ್ತರದಾಯಿಯಾಗಿರಬೇಕು. ತಮ್ಮ ಇಲಾಖೆಗೆ ಸಂಬಂಧಿಸಿದ ನೀತಿ-ನಿರ್ಧಾರಗಳ ಬಗ್ಗೆ ಸಂಸದರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಅದು ಅವರ ಸಾಂವಿಧಾನಿಕ ಹೊಣೆಗಾರಿಕೆ. ಅದು ಪ್ರಜಾಪ್ರಭುತ್ವದ ಆರೋಗ್ಯಕರ ಕಾರ್ಯನಿರ್ವಹಣೆಗೆ ಅತ್ಯಗತ್ಯ.

ಇದನ್ನು ಓದಿದ್ದೀರಾ?: ಮಹಿಳೆಯರಿಲ್ಲದ ಸಚಿವ ಸಂಪುಟ: 33% ಮೀಸಲಾತಿ ಮಾತು ಎಲ್ಲೋಯ್ತು?

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸಂಸತ್ತಿನಲ್ಲಿ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸದೆ ಇರುವುದು ಹಾಗೂ ಚರ್ಚೆಗಳಿಂದ ದೂರ ಉಳಿದಿರುವುದು ಇದೇ ಮೊದಲೇನೂ ಅಲ್ಲ. ಕಳೆದ ಹನ್ನೆರಡು ವರ್ಷಗಳಲ್ಲಿ ದೇಶ ಎದುರಿಸಿದ ಹಲವು ಗಂಭೀರ ಸಮಸ್ಯೆಗಳಿಗೆ, ದೇಶದ ಜನ ಬಯಸುವ ಪ್ರಶ್ನೆಗಳಿಗೆ ಉತ್ತರಿಸದ ಹಲವಾರು ಉದಾಹರಣೆಗಳಿವೆ. ಅವು ರಾಜಕೀಯ ವಿವಾದಗಳಾಗಿವೆ, ಕೇಂದ್ರ ಗೃಹ ಇಲಾಖೆಗೆ ಕಪ್ಪು ಮಸಿ ಬಳಿದಿವೆ.

ಅಮಿತ್ ಶಾ ಗೃಹ ಸಚಿವರಾಗುತ್ತಿದ್ದಂತೆ, 2019ರಲ್ಲಿ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾದರು. ಇದು ರಾಷ್ಟ್ರೀಯ ಭದ್ರತೆಯ ವಿಚಾರ, ಆದರೆ ಗೃಹ ಸಚಿವರಿಂದ ಸಮಂಜಸವಾದ ಉತ್ತರ ಬರಲಿಲ್ಲ. 2020ರಲ್ಲಿ ನಡೆದ ದೆಹಲಿ ಗಲಭೆ ತಡೆಯಲು ಏಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿಲ್ಲ, ಪೊಲೀಸ್ ಇಲಾಖೆಯ ಕಾರ್ಯವೈಖರಿ ಹೇಗಿತ್ತು ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಲಿಲ್ಲ. 2021ರಲ್ಲಿ ರಾಷ್ಟ್ರೀಯ ಭದ್ರತೆಯ ವಿಚಾರಕ್ಕೆ ಸಂಬಂಧಿಸಿದಂತೆ ಪೆಗಾಸಸ್ ಸ್ಪೈವೇರ್ ಬಳಕೆಯ ಆರೋಪಗಳ ಕುರಿತು ಗೃಹ ಸಚಿವಾಲಯ ಸೊಲ್ಲೆತ್ತಲಿಲ್ಲ. 2023ರಿಂದ ಇಲ್ಲಿಯವರೆಗೆ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ದೀರ್ಘ ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಲೇ ಬಂದಿವೆ. ಆದರೆ ಡಬಲ್‌ ಎಂಜಿನ್‌ ಸರ್ಕಾರಗಳ ಹೊಣೆಗಾರಿಕೆ ಮತ್ತು ಹಿಂಸಾಚಾರ ನಿಯಂತ್ರಣದಲ್ಲಿನ ನಿರ್ಲಕ್ಷ್ಯ ಕುರಿತು ಉತ್ತರವೇ ಇಲ್ಲ. 2025ರಲ್ಲಿ ಪೆಹಲ್ಗಾಮ್ ದಾಳಿಯಿಂದಾಗಿ ದೇಶದ 26 ಜನ ಅಮಾಯಕರು ಪ್ರಾಣತೆತ್ತರು. ಇದು ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯ ಎಂದು ಇಡೀ ದೇಶವೇ ಕೂಗಿ ಹೇಳಿತು. ಆದರೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಇದಕ್ಕೂ ಉತ್ತರಿಸಲಿಲ್ಲ.

ಈಗ ಅಮಾಯಕ ವಿದ್ಯಾರ್ಥಿಗಳ ಮೇಲೆ ಪೆಲೆಟ್‌ ಗನ್‌ ದಾಳಿಗೆ ಆದೇಶಿಸಿದವರು ಯಾರು ಹಾಗೂ ಅಯೋಧ್ಯಾ ರಾಮಮಂದಿರದಲ್ಲಿ ಹುಂಡಿ ಕಳವು ಮಾಡಿದವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರತಿಪಕ್ಷಗಳು ಪ್ರಶ್ನೆ ಕೇಳುತ್ತಿವೆ. ಉತ್ತರಿಸಬೇಕಾದ ಗೃಹ ಸಚಿವ ಅಮಿತ್‌ ಶಾ ಸಂಸತ್ತಿಗೆ ಬರದೆ ತಪ್ಪಿಸಿಕೊಂಡಿದ್ದಾರೆ. ಅಧಿವೇಶನದ ಕಲಾಪಗಳಲ್ಲಿ ಭಾಗಿಯಾಗದೆ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ.

ಪ್ರತಿಪಕ್ಷಗಳನ್ನು ಧೈರ್ಯವಾಗಿ ಎದುರಿಸುವುದು, ಪ್ರಶ್ನೆಗಳಿಗೆ ಉತ್ತರಿಸುವುದು, ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಸೂಚಿಸುವುದು ಅಮಿತ್ ಶಾ ಅವರ ಜಾಯಮಾನವೇ ಅಲ್ಲ. ಪ್ರಜಾಸತ್ತಾತ್ಮಕ ರಾಜಕಾರಣ ಅವರದ್ದಲ್ಲ. ಅದಕ್ಕೆ ಅವರು ಬೆಳೆದುಬಂದ ಬಗೆಯನ್ನು ಅವಲೋಕಿಸಿದರೆ, ಅರ್ಥವಾಗದೆ ಇರುವುದಿಲ್ಲ. 

ಅರವತ್ತೊಂದರ ಹರೆಯದ ಅಮಿತ್ ಭಾಯಿ ಅನಿಲ್‌ಚಂದ್ರ ಶಾ ಜನಿಸಿದ್ದು ಮುಂಬೈನ ಜೈನ ಕುಟುಂಬದಲ್ಲಿ. ತಂದೆ ಅನಿಲ್ ಚಂದ್ ಶಾ ಪಿವಿಸಿ ಪೈಪ್ ವ್ಯಾಪಾರಸ್ಥ. ಇವರ ಮಗನಾದ ಅಮಿತ್, ಜೀವ ರಸಾಯನ ಶಾಸ್ತ್ರ ಪದವೀಧರ. ಶೇರು ದಳ್ಳಾಳಿಯಾಗಿ, ಗುಜರಾತ್‌ನ ಹಣಕಾಸು ಸಂಸ್ಥೆಯ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಹೊಂದಿದವರು. ಚಿಕ್ಕಂದಿನಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್)ದೊಂದಿಗೆ ಗುರುತಿಸಿಕೊಂಡಿದ್ದ ಅಮಿತ್ ಶಾ, ಕಾಲೇಜು ದಿನಗಳಲ್ಲಿ ಎಬಿವಿಪಿಯ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು. 1982ರಲ್ಲಿ ಮೊದಲ ಬಾರಿಗೆ ಮೋದಿಯನ್ನು ಭೇಟಿ ಮಾಡಿದ್ದು ಕೂಡ ಆರೆಸ್ಸೆಸ್ ಅಂಗಳದಲ್ಲಿಯೇ. 1986ರಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು. 1997ರಲ್ಲಿ ಸರ್ಖೇಜ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಮೂಲಕ, ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಂಡ ಅಮಿತ್ ಶಾ ಸತತವಾಗಿ ನಾಲ್ಕು ಬಾರಿ ಗೆದ್ದರು.

ಆದರೆ ಅಮಿತ್‌ ಶಾ ರಾಜಕೀಯ ಬದುಕಿನ ‘ಭವಿಷ್ಯ’ ರೂಪುಗೊಂಡಿದ್ದು, ಅದು ಇಡೀ ದೇಶಕ್ಕೆ ಮತ್ತು ಪ್ರಪಂಚಕ್ಕೆ ಪರಿಚಯವಾಗಿದ್ದು 2002ರ ಗುಜರಾತ್ ನರಮೇಧದಲ್ಲಿ. ಚಿಕ್ಕ ವಯಸ್ಸಿನಲ್ಲಿಯೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಗೃಹ ಖಾತೆಯೂ ಸೇರಿದಂತೆ 10 ಖಾತೆಗಳನ್ನು ನಿರ್ವಹಿಸುವ ಸಚಿವರಾದರು. ಅದರಲ್ಲೂ ಸೋಹ್ರಾಬುದ್ದೀನ್, ಇಶ್ರತ್ ಜಹಾನ್, ಹರೇನ್ ಪಾಂಡ್ಯರ ನಕಲಿ ಎನ್‌ಕೌಂಟರ್ ಪ್ರಕರಣ ಹಾಗೂ ರಾಜ್ಯ ಪೊಲೀಸರಿಗೆ ಆದೇಶ ನೀಡಿ ಹಲವಾರು ಜನರನ್ನು ಕೊಲ್ಲಿಸಲು ಕಾರಣರಾದರೆಂಬ ಆಪಾದನೆಗೆ ಗುರಿಯಾದರು. ಹಲವಾರು ಕೇಸುಗಳು ಮೈ ಮೆತ್ತಿಕೊಂಡವು. ಅಷ್ಟೇ ಅಲ್ಲ, ಸಿಬಿಐ ತನಿಖೆ ಕೈಗೆತ್ತಿಕೊಂಡು ಅಮಿತ್ ಶಾರನ್ನು ಮುಖ್ಯ ಆರೋಪಿಯನ್ನಾಗಿಸಿ ಜುಲೈ 25, 2010ರಂದು ಬಂಧಿಸಿ, ಮೂರು ತಿಂಗಳ ಕಾಲ ಜೈಲಿಗೂ ಅಟ್ಟಿತ್ತು.

2010ರಲ್ಲಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಗುಜರಾತ್ ಬಿಟ್ಟ ಅಮಿತ್ ಶಾ ಮತ್ತೆ ಮರಳಿದ್ದು 2012ರಲ್ಲಿ, ಗುಜರಾತ್ ಹೈಕೋರ್ಟ್ ಜಾಮೀನು ನೀಡಿದ ಮೇಲೆ. 2012ರ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಗೆಲ್ಲುವ ಮೂಲಕ ದೇಶದ ರಾಜಕಾರಣದ ದಿಕ್ಕನ್ನೇ ಬದಲಿಸಿಬಿಟ್ಟರು. ಇಲ್ಲಿಂದ ಅಮಿತ್ ಶಾರ ಹೊಸ ರಾಜಕಾರಣ, ಅಂದರೆ ಈ ದೇಶದ ಜನತೆ ಇಲ್ಲಿಯವರೆಗೆ ಕಂಡು ಕೇಳದ ಕುಟಿಲ ತಂತ್ರಗಾರಿಕೆಯ ರಾಜಕಾರಣ ಚಾಲ್ತಿಗೆ ಬಂತು.

ಇದನ್ನು ಓದಿದ್ದೀರಾ?: ʼಋತುತಾರೆʼ ಸ್ವಾಗತಾರ್ಹ; ಮಹಿಳಾ ಆರೋಗ್ಯಕ್ಕೆ ಹೊಸ ದಿಕ್ಸೂಚಿ

2014ರಲ್ಲಿ ದೇಶದ ಹೊಸ ರಾಜಕಾರಣದ ಮುಂದಾಳತ್ವವನ್ನು ನರೇಂದ್ರ ಮೋದಿ ವಹಿಸಿಕೊಂಡರೆ, ಅವರ ಹಿಂದಿನ ಚಾಲಕ ಶಕ್ತಿಯಾಗಿ ಅಮಿತ್ ಶಾ ನಿಯೋಜಿತರಾದರು. ಆಕರ್ಷಕ ವಾಗ್ಮಿಯಲ್ಲದ ಶಾ, ತಂತ್ರ-ಕುತಂತ್ರಗಳನ್ನು ಹೆಣೆಯುವುದರಲ್ಲಿ ನಿಸ್ಸೀಮರು. ಇಂತಹ ವ್ಯಕ್ತಿಯನ್ನು ನರೇಂದ್ರ ಮೋದಿಯವರು 2019ರಲ್ಲಿ ದೇಶದ ಗೃಹ ಮಂತ್ರಿಯನ್ನಾಗಿ ಮಾಡಿದರು. ಆ ಸ್ಥಾನಕ್ಕೆ ಬೇಕಾದ ಹಿರಿತನ, ಅನುಭವ, ಯೋಗ್ಯತೆ, ಅರ್ಹತೆ, ನಾಯಕತ್ವ, ವಾಕ್ಚಾತುರ್ಯಗಳೆಂಬ ಗುಣಗಳು ಗೌಣವಾಗಿ; ಆ ಜಾಗವನ್ನು ವಿವಾದ, ತಂತ್ರಗಾರಿಕೆ, ನಿರ್ವಹಣೆ, ನಿಭಾವಣೆ, ಭಂಡತನ, ಕಿಲಾಡಿತನಗಳು ಆಕ್ರಮಿಸಿಕೊಂಡಿವೆ. ಒಬ್ಬ ವ್ಯಕ್ತಿ ಹೀಗೂ ರಾಜಕೀಯ ರಂಗದಲ್ಲಿ ಪ್ರವರ್ಧಮಾನಕ್ಕೆ ಬರಬಹುದು, ಒಂದು ದೇಶದ ಗೃಹ ಖಾತೆಯಂತಹ ಜವಾಬ್ದಾರಿಯುತ ಸ್ಥಾನವನ್ನು ಅಲಂಕರಿಸಬಹುದು ಎಂಬುದಕ್ಕೆ ಬಿಜೆಪಿಯೇ ಸಾಕ್ಷಿಯಾಗಿದೆ.

ಇಂತಹ ಬಿಜೆಪಿಯನ್ನು, ಬಿಜೆಪಿಯ ಭಾಗವಾಗಿರುವ ಅಮಿತ್ ಶಾ ಅವರನ್ನು ದೇಶದ ರಾಜಕಾರಣದಿಂದ ಮುಕ್ತಗೊಳಿಸುವ ಕಾಲ ಈಗ ಸನ್ನಿಹಿತವಾಗಿದೆ. ಅದಕ್ಕೆ ತಕ್ಕಂತೆ ದೇಶದ ಯುವಜನತೆ ಎಚ್ಚೆತ್ತಿದೆ, ಪ್ರಶ್ನಿಸುತ್ತಿದೆ. ಅದರ ಫಲವಾಗಿ ಧರ್ಮೇಂದ್ರ ಪ್ರಧಾನ್‌ರನ್ನು ಕುರ್ಚಿಯಿಂದ ಕೆಳಗಿಳಿಸಲಾಗಿದೆ. ಇದು ನಿಜಕ್ಕೂ ಅಮಿತ್ ಶಾರಲ್ಲಿ ನಡುಕ ಹುಟ್ಟಿಸಿದೆ, ಅಡಗಿಕೊಳ್ಳುವಂತೆ ಮಾಡಿದೆ. ಪ್ರಶ್ನೆಗಳಿಗೆ ಹೆದರಿ ಅಡಗಿಕೊಳ್ಳುವುದು ಹೇಡಿಗಳ ಕೆಲಸ, ಅಂತಹ ಗೃಹ ಸಚಿವರನ್ನು ಪಡೆದ ಭಾರತ… ಧನ್ಯ!

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಹಾವು ಕಚ್ಚಿದರೆ ಕ್ಷಣವೂ ತಡಮಾಡದೆ, ಸರ್ಕಾರಿ ಆಸ್ಪತ್ರೆಯತ್ತ ಧಾವಿಸಿ: ಡಾ. ಮಹೇಶ ಕೋಣಿ

ಹಾವು ಕಡಿತಕ್ಕೆ ಒಳಗಾದವರು ಆತಂಕಕ್ಕೊಳಗಾಗಿ ನಾಟಿ ಚಿಕಿತ್ಸೆ, ನಕಲಿ ವೈದ್ಯರ ಮೊರೆ...

ಬಿಹಾರದ ಖಜಾನೆ ಖಾಲಿ, ಆದರೂ ಪ್ರಧಾನಿ ಹುಟ್ಟುಹಬ್ಬಕ್ಕೆ ಕೋಟಿ ಕೋಟಿ ಪೋಲು: ತೇಜಸ್ವಿ ಯಾದವ್ ಆರೋಪ

ಬಿಹಾರದಲ್ಲಿ ತೀವ್ರ ಪ್ರವಾಹ ಪರಿಸ್ಥಿತಿಯಿಂದಾಗಿ ಲಕ್ಷಾಂತರ ಜನರು ತೊಂದರೆಯಲ್ಲಿರುವಾಗ ಮತ್ತು ರಾಜ್ಯ...

ಹಿರಿಯ ಪತ್ರಕರ್ತೆ ಪಾಯಲ್ ಮೆಹ್ತಾ ಅಕಾಲಿಕ ನಿಧನ: ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಗಣ್ಯರ ಸಂತಾಪ

ಸಿಎನ್‌ಎನ್-ನ್ಯೂಸ್18 ವಾಹಿನಿಯ ಹಿರಿಯ ರಾಜಕೀಯ ಪತ್ರಕರ್ತೆ ಪಾಯಲ್ ಮೆಹ್ತಾ (46) ಅವರು...

ಬಿಹಾರ MLC ಚುನಾವಣೆ: 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಪ್ರಶಾಂತ್ ಕಿಶೋರ್ ಜನ ಸುರಾಜ್ ಪಾರ್ಟಿ

ಬಿಹಾರ ವಿಧಾನ ಪರಿಷತ್ತಿನ (ಎಂಎಲ್‌ಸಿ) ಮುಂಬರುವ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ...