ಬೀದರ್‌ಗೆ ಹೆಚ್ಚುವರಿ ರೈಲು ಸೌಲಭ್ಯ ಕಲ್ಪಿಸಬೇಕು ಎಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕ ಒತ್ತಾಯಿಸಿದೆ.
ಈ ಕುರಿತು ನಗರದ ಸಂಸದರ ನಿವಾಸಕ್ಕೆ ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಗಣೇಶ ಪಾಟೀಲ್ ನೇತೃತ್ವದಲ್ಲಿ ಭೇಟಿ ನೀಡಿ ಸಂಸದ ಸಾಗರ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬೀದರ್ ಜಿಲ್ಲೆ ಪ್ರಗತಿಯತ್ತ ಹೆಜ್ಜೆಯಿರಿಸಿದೆ. ಆದರೆ, ಶೈಕ್ಷಣಿಕವಾಗಿ ಔದ್ಯೋಗಿಕವಾಗಿ ಇನ್ನಷ್ಟು ವೇಗ ಪಡೆಯಲು ಹೆಚ್ಚುವರಿಯಾಗಿ ರೈಲು ಸೌಲಭ್ಯ ಕಲ್ಪಿಸುವುದು ತೀರಾ ಅಗತ್ಯವಾಗಿದೆ. ಬೀದರ್ ನಿಂದ ನವ ದೆಹಲಿಗೆ ಸೂಪರ್ ಫಾಸ್ಟ್ ರೈಲು ಸೇವೆವಿಸ್ತರಿಸುವುದರ ಜತೆಗೆ ರಾಜ್ಯದ ರಾಜಧಾನಿ ಬೆಂಗಳೂರಿಗೆ ಸಂಚರಿಸಲು ಹೆಚ್ಚುವರಿಇನ್ನೊಂದು ರೈಲು ಸೌಲಬ್ಯ ಕಲ್ಪಿಸಬೇಕು.
ವಾರದಲ್ಲಿ ಎರಡು ದಿನ ಬೀದರ್ ನಿಂದ ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ಸಂಚರಿಸುತ್ತಿರುವ ಕಲಬುರಗಿ ವಾಯಬೆಂಗಳೂರು ರೈಲಿನ ಸಮಯ ಸಾಯಂಕಾಲ ೫ ಗಂಟೆ ಬದಲಾಯಿಸಬೇಕು. ಈ ರೈಲನ್ನು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಕೇಂದ್ರ ರೈಲ್ವೆ ನಿಲ್ದಾಣದ ವರೆಗೆ ಸಂಚರಿಸಿದರೇ ಈ ಭಾಗದ ಜನರಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಕರ್ತವ್ಯ ಲೋಪ, ದುರ್ನಡತೆ : ಒಂದೇ ದಿನ ಇಬ್ಬರು ಪಿಡಿಒ ಸಸ್ಪೆಂಡ್
ಈ ಸಂದರ್ಭದಲ್ಲಿ ಪ್ರಮುಖರಾದ ಸುದೀಪ ತೂಗಾಂವೆ, ಚಂದು ಸಂಪಂಗೆ, ಬಸವರಾಜ ಕಾರಬಾರಿ, ಅನಿಲ ರಾಜಗೀರಾ, ರವಿ ಪಾಟೀಲ್, ಆದಿತ್ಯ ರೆಡ್ಡಿ, ಸುದೀರ ಹೇಡೆ ಸೇರಿದಂತೆ ಹಲವರು ಇದ್ದರು.




