ಬಿಸಿಲಿನ ತಾಪಕ್ಕೆ ಮನರೇಗಾ ಕಾರ್ಮಿಕರ ಸಾವು: ಕೆಲಸದ ಸಮಯ ಪರಿಷ್ಕರಣೆ ಕೂಲಿ ಕಾರ್ಮಿಕರಿಗೆ ಅನ್ವಯಿಸುವುದಿಲ್ಲವೇ?

Date:

ಬಿಸಿಲಿನ ತಾಪವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಮನರೇಗಾ ಕಾರ್ಮಿಕರಂತೆಯೇ ಇನ್ನೂ ಹಲವು ಕಾರ್ಮಿಕರು ಇಂತಹ ಅಪಾಯದಲ್ಲಿದ್ದಾರೆ. ಜಿಲ್ಲಾಡಳಿತವು ತನ್ನ ಕಣ್ಣುಗಳನ್ನು ಮುಚ್ಚಿಕೊಳ್ಳದೆ, ತ್ವರಿತ ಕ್ರಮ ಕೈಗೊಂಡರೆ ಮಾತ್ರ ಇಂತಹ ದುರಂತಗಳನ್ನು ತಡೆಯಬಹುದು. ಹೊರಾಂಗಣ ಪ್ರದೇಶದಲ್ಲಿ ದುಡಿಯುವ ಕಾರ್ಮಿಕ ವರ್ಗಕ್ಕೆ ಇದು ನಿಜವಾಗಿಯೂ ಕಷ್ಟದ ಕಾಲ. ಅವರ ಬದುಕು ರಕ್ಷಿಸುವುದು ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಸಮಾಜದ ಜವಾಬ್ದಾರಿಯೂ ಹೌದು.

ಕಲ್ಯಾಣ ಕರ್ನಾಟಕದ ಹಲವು ಭಾಗಗಳಲ್ಲಿ ಉಷ್ಣತೆಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅದರ ಪರಿಣಾಮವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ನರೇಗಾ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಮನರೇಗಾ) ಕಾರ್ಮಿಕರ ಜೀವಕ್ಕೆ ಅಪಾಯ ಉಂಟಾಗಿದೆ. ಇತ್ತೀಚೆಗೆ ಬಿಸಿಲಿನ ತೀವ್ರತೆಗೆ ಒಳಗಾಗಿ ಇಬ್ಬರು ನರೇಗಾ ಕಾರ್ಮಿಕರು ಸಾವನ್ನಪ್ಪಿರುವುದು ಕಂಡುಬಂದಿದೆ.

- Advertisement -

ರಾಯಚೂರು ತಾಲೂಕಿನ ಯಾಪಲದಿನ್ನಿ ಗ್ರಾಮದ ಹೊರವಲಯದಲ್ಲಿ ಮನರೇಗಾ ಅಡಿ ಒಂದು ವಾರದಿಂದ ರಾಳ್ಳಕುಂಟಾ ಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಸೋಮವಾರ ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಮಾಡುತ್ತಿದ್ದ ಹುಸೇನಪ್ಪ ಮಡಿವಾಳ ಎಂಬ ಕಾರ್ಮಿಕ ಹಾಜರಾತಿಯ ಫೋಟೊ ತೆಗೆಯುವ ಸಮಯದಲ್ಲಿ ಕುಸಿದು ಬಿದ್ದಿದ್ದರು. ಅವರನ್ನು ಆ್ಯಂಬುಲೆನ್ಸ್‌‌ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದರು. ಬುಧವಾರ ಸಿಂಧನೂರು ತಾಲೂಕಿನ ಪಗಡದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಣ್ಣ ಎಂಬ ಮತ್ತೊಬ್ಬ ಕಾರ್ಮಿಕ ಮೃತಪಟ್ಟಿರುವ ಘಟನೆ ನಡೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಮೌಢ್ಯತೆಯೊಳಗೆ ನಾ ಕಂಡ ಭಾರತ

ಭಾರತವು ಏಕತೆಯಲ್ಲಿ ವೈವಿಧ್ಯತೆಯನ್ನು ಕಂಡ ದೇಶ. ಹಲವು ಭಾಷೆಗಳು, ಧರ್ಮಗಳು, ಸಂಸ್ಕೃತಿಗಳು, ಆಹಾರ ಪದ್ಧತಿಗಳು, ಜೀವನಶೈಲಿಗಳು ಮತ್ತು ಆಚರಣೆಗಳು ಇಲ್ಲಿನ ಸಾಮಾಜಿಕ ಬದುಕಿನ ವೈಶಿಷ್ಟ್ಯ. ಈ ವೈವಿಧ್ಯತೆಯೇ ಭಾರತದ ಶಕ್ತಿ. ಆದರೆ, ವೈವಿಧ್ಯತೆಯನ್ನು...

ಸುಮಾರು 41ರಿಂದ 44 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದ ತಾಪಮಾನದಲ್ಲಿ, ಕುಡಿಯುವ ನೀರು ಮತ್ತು ನೆರಳಿನ ಸಮರ್ಪಕ ವ್ಯವಸ್ಥೆ ಇಲ್ಲದೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಇದು ಒಂದು ಆಘಾತಕಾರಿ ಘಟನೆಯಾಗಿದ್ದು, ಸರ್ಕಾರಕ್ಕೆ ಎಚ್ಚರಿಕೆಯಾಗಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವ ಕಾರಣ ಅಧಿಕಾರಿಗಳು ಮನರೇಗಾ ನಿಯಮಾವಳಿ ಪ್ರಕಾರ ಕೆಲಸ ಸ್ಥಳದಲ್ಲಿ ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ಮಾಡಿಲ್ಲದಿರುವುದು ಕಂಡುಬಂದಿದ್ದು, ʼ44 ಡಿಗ್ರಿ ಉಷ್ಣಾಂಶದಲ್ಲಿ ಕೆಲಸ ಮಾಡುತ್ತಿದ್ದ ಹುಸೇನಪ್ಪ ಬಿಸಿಲಿನಿಂದಾಗಿಯೇ ಮೃತಪಟ್ಟಿದ್ದು, ಸರ್ಕಾರ ತಕ್ಷಣ ಪರಿಹಾರ ಕೊಡಬೇಕು‘ ಎಂದು ಮಡಿವಾಳಪ್ಪ ಅವರ ಕುಟುಂಬದವರು ಒತ್ತಾಯಿಸಿದ್ದಾರೆ.

ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಉಪಾಧ್ಯಕ್ಷ ರಂಗಪ್ಪ ಯಾಪಲದಿನ್ನಿ ಮಾತನಾಡಿ, “ಒಂದೆಡೆ ಮಧ್ಯಾಹ್ನದ ವೇಳೆ ಮನೆಯಿಂದ ಹೊರಗೆ ಬರದಂತೆ ಜಿಲ್ಲಾಡಳಿತ ಪತ್ರಿಕಾ ಪ್ರಕಟಣೆ ಹೊರಡಿಸಿದರೆ, ಇನ್ನೊಂದಡೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ನರೇಗಾ ಕಾಮಗಾರಿ ನಡೆಯುವ ಸ್ಥಳದಲ್ಲಿ ನೆರಳು, ನೀರಿನ ವ್ಯವಸ್ಥೆ ಇರುವ ಬಗ್ಗೆ ಸರಿಯಾಗಿ ಮೇಲ್ವಿಚಾರಣೆ ನಡೆಸುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವು ಕೂಲಿಕಾರ್ಮಿಕರನ್ನು ಬಲಿ ಪಡೆಯುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಹುಸೇನಪ್ಪ ಅವರು ಕಡಿಮೆ ರಕ್ತದೊತ್ತಡದಿಂದ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಶವ ಪರೀಕ್ಷೆ ನಡೆಸಿದರೆ ಮಾತ್ರ ನಿಖರ ಕಾರಣ ತಿಳಿಯುತ್ತಿತ್ತು. ಬಿಸಿಲಾಘತದಿಂದಲೇ ಮೃತಪಟ್ಟಿದ್ದಾರೆಂದು ತಕ್ಷಣದ ನಿರ್ಧಾರಕ್ಕೆ ಬರಲಾಗದು” ಎಂದು ರಿಮ್ಸ್‌ ಮೆಡಿಸನ್‌ ವಿಭಾಗದ ಡಾ.ಬಸವರಾಜ್‌ ತಿಳಿಸಿದ್ದಾರೆ.

ಏನೇ ಆದರೂ, ಕಾರ್ಮಿಕರು ಮೃತಪಟ್ಟಿರುವ ಘಟನೆ ಮಾನವೀಯತೆ ಮತ್ತು ಆಡಳಿತ ವ್ಯವಸ್ಥೆಯ ಜವಾಬ್ದಾರಿಗಳ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಸಾಮಾನ್ಯವಾಗಿ ನರೇಗಾ ಯೋಜನೆಯಡಿ ಕೆಲಸ ಮಾಡುವವರು ಬಡತನ ರೇಖೆಗಿಂತ ಕೆಳಗಿನವರಾಗಿದ್ದು, ತಮ್ಮ ಜೀವನೋಪಾಯಕ್ಕಾಗಿ ಬಿಸಿಲಿನಲ್ಲಿಯೇ ದುಡಿಯುವುದು ಅನಿವಾರ್ಯವಾಗಿದೆ. ಆದರೆ, ಇಂತಹ ಗಂಭೀರ ಹವಾಮಾನ ಪರಿಸ್ಥಿತಿಗಳಲ್ಲಿ ಸರ್ಕಾರದಿಂದ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ವೈದ್ಯರ ಪ್ರಕಾರ, “ತಾಪಮಾನ 43 ಡಿಗ್ರಿ ಸೆಲ್ಸಿಯಸ್ ಮೀರಿದಾಗ ಹೊರಾಂಗಣ ಕೆಲಸ ಮಾಡುವವರ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಕೆಲಸವನ್ನು ನಿಲ್ಲಿಸುವುದು, ಸಾಕಷ್ಟು ಕುಡಿಯುವ ನೀರು ಮತ್ತು ವಿಶ್ರಾಂತಿ ವ್ಯವಸ್ಥೆ ಒದಗಿಸುವುದು ಅತ್ಯವಶ್ಯಕವಾಗಿದೆ. ಆದರೆ ಹಲವೆಡೆ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿಲ್ಲ” ಎನ್ನುತ್ತಾರೆ.

ಈ ಬಗ್ಗೆ ಗ್ರಾಮೀಣ ಕೂಲಿಕಾರರ ಸಂಘಟನೆಯ ರಾಜ್ಯ ಮುಖಂಡ ಗುರುರಾಜ್ ಮಾತನಾಡಿ, “ನರೇಗಾ ಯೋಜನೆಯಡಿಯಲ್ಲಿ ಸರ್ಕಾರ ಸೌಲಭ್ಯಗಳನ್ನು ಒದಗಿಸಬೇಕು. ಕೆಲಸ ಮಾಡುವ ಸ್ಥಳದಲ್ಲಿ ಶಾಮಿಯಾನ ಅಥವಾ ಶೆಡ್‌ ವ್ಯವಸ್ಥೆ ಮಾಡಬೇಕು, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಆರೋಗ್ಯ ತಪಾಸಣೆ ಹಾಗೂ ತುರ್ತು ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಇನ್ನೂ ಹೆಚ್ಚಾಗಿ ನರೇಗಾ ಕೆಲಸಗಳನ್ನು ನಿಲ್ಲಿಸಿ, ಕಾರ್ಮಿಕರಿಗೆ ಸರ್ಕಾರದಿಂದ ಆಹಾರ ಪದಾರ್ಥಗಳ ಕಿಟ್‌ಗಳನ್ನು ನೀಡುವ ವ್ಯವಸ್ಥೆ ಮಾಡುವುದು ಅಗತ್ಯವಾಗಿದೆ” ಎಂದು ಆಗ್ರಹಿಸಿದರು.

“ಕಾರ್ಮಿಕರು ಬಿಸಿಲಿನಲ್ಲಿ ಕೆಲಸ ಮಾಡುತ್ತಿರುವ ಸಮಸ್ಯೆ ಬಗ್ಗೆ ಗೊತ್ತಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಜರಾತಿ ಪರಿಶೀಲಿಸಲು ಸ್ಥಳಕ್ಕೆ ಬಂದಾಗ ಮೂಲಸೌಕರ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡಿಲ್ಲ. ಈ ಬಗ್ಗೆ ಸರ್ಕಾರವು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ. ಕಾರ್ಮಿಕರು ಸುಡು ಬಿಸಿಲಿಗೆ ಬಳಲಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಹಾಗಾಗಿ ಬಿಸಿಲಿನ ತೀವ್ರತೆಗೆ ಅನುಗುಣವಾಗಿ ಕೆಲಸದ ವೇಳೆಯನ್ನು ಪರಿಷ್ಕರಿಸುವುದಕ್ಕೆ, ಕುಡಿಯುವ ನೀರಿನ ವ್ಯವಸ್ಥೆಗೆ ಗ್ರಾಮ ಪಂಚಾಯಿತಿ, ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಕೇಳಿಕೊಂಡರೂ ಯಾವುದೇ ವ್ಯವಸ್ಥೆ ಮಾಡಿಲ್ಲ. ಮನವಿಗೂ ಸ್ಪಂದಿಸಿಲ್ಲ” ಎಂದು ಆಕ್ರೋಶ ಹೊರ ಹಾಕಿದರು.

“ಕಾರ್ಮಿಕರು ಸುಡು ಬಿಸಿಲಿನಲ್ಲಿ ಕೆಲಸ ಮಾಡಿದರೂ ಕೂಡ ವೇತನ ನೀಡುವ ವೇಳೆ ಸತಾಯಿಸಿ ಬಳಿಕ ಪಾವತಿಸುತ್ತಾರೆ. ಕಾರ್ಮಿಕರು ತೀವ್ರ ಬಿಸಿಲು, ವೇತನವಿಲ್ಲದೆ ಒತ್ತಡದಲ್ಲಿ ವೃದ್ಧರು, ಹಿರಿಯ ವಯಸ್ಸಿನವರು ಚಿಂತೆಗೀಡಾಗುತ್ತಿದ್ದಾರೆ. ತೀವ್ರ ಬಿಸಿಲಿಗೆ ಮೃತ ಕಾರ್ಮಿಕರ ಕುಟುಂಬಕ್ಕೆ ಸಮರ್ಪಕ ಪರಿಹಾರ ನೀಡುವದರ ಜತೆಗೆ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಕಾರ್ಮಿಕ ಮಹಿಳೆ ಮಾರೆಮ್ಮ ಈ ದಿನ.ಕಾಮ್‌ ಜತೆಗೆ ಮಾತನಾಡಿ, “ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕೆಲಸದ ಸ್ಥಳಕ್ಕೆ ಅಧಿಕಾರಿಗಳು ಬಂದು ಆ್ಯಪ್‌ನಲ್ಲಿ ಫೋಟೋವನ್ನು ತಕ್ಷಣ ಅಪ್‌ಡೇಟ್ ಮಾಡಬೇಕಾಗಿದೆ. ಆದರೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಕೆಲವೊಮ್ಮೆ ಅವರು ಬರುವವರೆಗೆ ಕಾರ್ಮಿಕರು ಮಧ್ಯಾಹ್ನ 12 ಗಂಟೆಯವರೆಗೂ ಕಾಯಬೇಕಾಗುತ್ತದೆ. ಇನ್ನೂ ಕೆಲ ಸಂದರ್ಭಗಳಲ್ಲಿ 2–3 ಗಂಟೆಗಳವರೆಗೂ ತಡವಾಗುತ್ತದೆ. ಬೇಗ ಮನೆಗೆ ಹೋದರೆ ಗೈರುಹಾಜರಾತಿಯಾಗಿ ಗುರುತಿಸಲಾಗುತ್ತದೆಂಬ ಭಯದಿಂದ ಕಾರ್ಮಿಕರು ಕೆಲಸದ ಸ್ಥಳವನ್ನು ಬಿಡದೆ ಅಲ್ಲೇ ಕೂತು ಕಾಯುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ಪಂಚಾಯಿತಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಹೆಚ್ಚಿನ ಬೇಜವಾಬ್ದಾರಿತನ ತೋರಿಸುತ್ತಿದ್ದಾರೆ. ಕೆಲವೊಮ್ಮೆಆ್ಯಪ್‌ ಸಹ ತೆರೆಯುವುದಿಲ್ಲ. ಇದರಿಂದ ಕಾರ್ಮಿಕರ ಸಮಯ ವ್ಯರ್ಥವಾಗುತ್ತಿದೆ. ವಿಬಿ ಜಿ ರಾಮ್ ಜಿ ಬಂದ ನಂತರ ನರೇಗಾ ಕಾರ್ಯಗಳು ಸಂಪೂರ್ಣವಾಗಿ ಹದಗೆಟ್ಟಿವೆ” ಎಂದರು.

“ತಾಪಮಾನ 40 ಡಿಗ್ರಿ ಮೀರಿದಾಗ ಕಾನೂನಿನಂತೆ ಅಳತೆ(measurement)ಗೆ ಪ್ರಾಮುಖ್ಯತೆ ಇರಬೇಕು, ಸಮಯವಲ್ಲ. ಬೆಳಿಗ್ಗೆ 11ರಿಂದ 4ರವರೆಗೆ ನರೇಗಾ ಕಾಮಗಾರಿಗಳನ್ನು ಸ್ಥಗಿತಗೊಳಿಸಿ, ಬದಲಿಗೆ ಬೆಳಿಗ್ಗೆ ಅಥವಾ ಸಂಜೆ ವೇಳೆ ಕೆಲಸ ನಡೆಸಿದರೆ ಅನುಕೂಲವಾಗಬಹುದು. ಕಾರ್ಮಿಕ ಕುಟುಂಬಗಳಿಗೆ ಅಕ್ಕಿ, ಬೇಳೆ, ಎಣ್ಣೆ, ಬಿಸ್ಕಟ್, ಓಆರ್‌ಎಸ್ ಪ್ಯಾಕೆಟ್‌ಗಳನ್ನು ಹೊಂದಿರುವಂತಹ ಉಚಿತ ಆಹಾರ ಕಿಟ್ ಒದಗಿಸುವುದರಿಂದ ಅವರ ತುರ್ತು ಅಗತ್ಯವನ್ನು ಪೂರೈಸಿದಂತಾಗುತ್ತದೆ. ಪ್ರತಿ ಕಾಮಗಾರಿ ಸ್ಥಳದಲ್ಲಿ ನೀರು, ಶೆಡ್‌, ಟೋಪಿ, ಉಪ್ಪು-ಗ್ಲುಕೋಸ್ ದ್ರಾವಣ ಒದಗಿಸುವುದರ ಜತೆಗೆ ಆರೋಗ್ಯ ಸಿಬ್ಬಂದಿಗಳು ನಿಯಮಿತ ಪರಿಶೀಲನೆ ನಡೆಸಬೇಕಾಗಿದೆ. ಅಲ್ಲದೆ ಹಿಂದಿನ ಸರ್ಕಾರಿ ಆದೇಶಗಳಂತೆ ಮೃತ ಕಾರ್ಮಿಕರ ಕುಟುಂಬಕ್ಕೆ ತ್ವರಿತವಾಗಿ 2 ಲಕ್ಷ ರೂಪಾಯಿ ಪರಿಹಾರ ಮತ್ತು ಕುಟುಂಬದ ಇತರ ಸದಸ್ಯರಿಗೆ ಉದ್ಯೋಗ ಖಾತ್ರಿ ನೀಡುವುದನ್ನು ಜಾರಿಗೊಳಿಸಬೇಕು. ಬಿಸಿಲು ತೀವ್ರವಾಗುವ ಮುನ್ನಚ್ಚರಿಕೆಯಾಗಿ ಜಿಲ್ಲಾಡಳಿತವು ಹೀಟ್ ಆಕ್ಷನ್ ಪ್ಲಾನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಕಾರ್ಮಿಕರಿಗೆ ಆರೋಗ್ಯ ಜಾಗೃತಿ ಮತ್ತು ಚಿಕಿತ್ಸೆಗಳನ್ನು ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಗತ್ಯವಾಗಿದೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ತೀವ್ರ ಬಿಸಿಲಿನ ಪರಿಣಾಮವಾಗಿ ಸಂಭವಿಸಿದ ಸಾವಿನ ಕುರಿತು ಮಾಹಿತಿ ಲಭ್ಯವಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನರೇಗಾ ಯೋಜನೆಯಡಿ ಪರಿಹಾರ ನೀಡುವಂತೆ ಮೇಲಾಧಿಕಾರಿಗಳಿಗೆ ವರದಿ ಕಳುಹಿಸಲಾಗಿದೆ. ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಕೆಲಸದ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶಾಮಿಯಾನ ಸೌಲಭ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಕಾರ್ಮಿಕರ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡುಬಂದಲ್ಲಿ ಕೂಡಲೇ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಯಾವುದೇ ಸ್ಥಳದಲ್ಲಿ ಈ ವ್ಯವಸ್ಥೆಗಳು ಸರಿಯಾಗಿ ಜಾರಿಯಾಗದಿದ್ದಲ್ಲಿ ಸಂಬಂಧಿತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.

ಬಿಸಿಲಿಗೆ ತತ್ತರಿಸುತ್ತಿರುವ ಕಾರ್ಮಿಕ ವರ್ಗ

ರಾಯಚೂರು ಜಿಲ್ಲೆಯಲ್ಲಿ ಈಗಾಗಲೇ ಬಿಸಿಲಿನ ತಾಪ ತೀವ್ರವಾಗಿದ್ದು, ಮಾನ್ವಿ, ಸಿರಾವಾರ, ದೇವದುರ್ಗ, ಸಿಂಧನೂರು ಸೇರಿದಂತೆ ಹಲವು ತಾಲೂಕುಗಳಲ್ಲಿ 44 ಡಿಗ್ರಿ ಮೀರಿದ ಉಷ್ಣಾಂಶ ದಾಖಲಾಗಿದೆ. ಇಲ್ಲಿ ಬೇಸಿಗೆಯಲ್ಲಿ ಸಾಮಾನ್ಯವಾಗಿ 40ರಂದ 44ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪುತ್ತದೆ. 2026ರ ಏಪ್ರಿಲ್‌ನಲ್ಲಿ ಈ ತಾಪಮಾನ ಇನ್ನಷ್ಟು ಏರಿಕೆ ಕಂಡಿದೆ. ಇಂತಹ ಪರಿಸ್ಥಿತಿಯಲ್ಲಿ ನರೇಗಾ ಯೋಜನೆಯಡಿ ರಸ್ತೆ, ಕೆರೆ, ಗ್ರಾಮೀಣ ಮೂಲಸೌಕರ್ಯ ಕಾಮಗಾರಿಗಳಲ್ಲಿ ತೊಡಗಿಸಿಕೊಂಡಿರುವ ದಿನಗೂಲಿ ಕಾರ್ಮಿಕರು ಮಧ್ಯಾಹ್ನ 12ರಿಂದ 3ರವರೆಗೆ ಸೂರ್ಯನ ನೇರ ಕಿರಣಗಳಿಗೆ ಒಡ್ಡಿಕೊಂಡು ಕೆಲಸ ಮಾಡುತ್ತಾರೆ.

ನರೇಗಾ ಕಾರ್ಮಿಕರು ಸಾಮಾನ್ಯವಾಗಿ ದುರ್ಬಲ ಆರ್ಥಿಕ ಪರಿಸ್ಥಿತಿಯಲ್ಲಿರುತ್ತಾರೆ. ದೈನಂದಿನ ಕೂಲಿ ಅವರ ಕುಟುಂಬದ ಏಕೈಕ ಆದಾಯ. ಬಿಸಿಲಿನ ತೀವ್ರತೆ ಇದೆಯೆಂದು ಕೆಲಸ ಬಿಟ್ಟು ಮನೆಯಲ್ಲಿ ಕುಳಿತರೆ ನಿತ್ಯದ ಆಹಾರಕ್ಕೇ ತೊಂದರೆಯಾಗುತ್ತದೆ. ಆದರೆ ಬಿಸಿಲಿನಲ್ಲಿ ಕೆಲಸ ಮಾಡುವುದು ಅವರ ಆರೋಗ್ಯಕ್ಕೆ ತೀವ್ರ ಹಾನಿಯನ್ನುಂಟು ಮಾಡುತ್ತಿದೆ. ತೀವ್ರ ಬಿಸಿಲಾಘಾತ(heatstroke), ನಿರ್ಜಲೀಕರಣ(dehydration), ರಕ್ತದೊತ್ತಡದ ಸಮಸ್ಯೆಗಳು ಸಾಮಾನ್ಯವಾಗಿವೆ.

ರಾಜ್ಯದಲ್ಲಿ ಈಗಾಗಲೇ ಬಿಸಿಲಿನಿಂದಾಗಿ ಇತರೆ ಸಾವುಗಳೂ ವರದಿಯಾಗಿವೆ. ಬೀದರ್, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜನರು ಬಿಸಿಲಾಘಾತಕ್ಕೆ ಬಲಿಯಾಗಿದ್ದಾರೆ. ರಾಯಚೂರಿನಲ್ಲಿ ಶಿಶುಗಳ ಮೇಲೆಯೂ ಈ ಬಿಸಿಲು ಪರಿಣಾಮ ಬೀರಿದ್ದು, 42ಕ್ಕೂ ಅಧಿಕ ಹಸುಳೆಗಳು ನಿರ್ಜಲೀಕರಣ ಮತ್ತು ಜ್ವರದಿಂದ ಆಸ್ಪತ್ರೆಗೆ ದಾಖಲಾಗಿರುವುದು ಕಂಡುಬಂದಿದೆ.

ನರೇಗಾ ಯೋಜನೆಯಲ್ಲಿ ಮಾನವೀಯ ಅಂಶದ ಕೊರತೆ

ನರೇಗಾ ಯೋಜನೆಯು ಗ್ರಾಮೀಣ ನಿರುದ್ಯೋಗ ನಿವಾರಣೆಗೆ ಉತ್ತಮ ಉದ್ದೇಶ ಹೊಂದಿದೆ. ಆದರೆ ಕಾರ್ಯಾಚರಣೆಯಲ್ಲಿ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಗೆ ಸಾಕಷ್ಟು ಗಮನ ನೀಡಲಾಗುತ್ತಿಲ್ಲ. ಹಿಂದಿನ ವರ್ಷಗಳಲ್ಲೂ ರಾಯಚೂರು, ಲಿಂಗಸುಗೂರು ಸೇರಿದಂತೆ ಜಿಲ್ಲೆಗಳಲ್ಲಿ ನರೇಗಾ ಕೆಲಸದ ವೇಳೆ ಕಾರ್ಮಿಕರು ಕುಸಿದು ಬಿದ್ದ ಮೃತಪಟ್ಟ ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ಇನ್ನೂ ಅಧಿಕ ಬಿಸಿಲು ಇರುವುದರಿಂದ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಕಾಮಗಾರಿ ಸ್ಥಳಗಳಲ್ಲಿ, ಶುದ್ಧ ನೀರಿನ ವ್ಯವಸ್ಥೆ ಮಾಡುವುದು, ತಾತ್ಕಾಲಿಕ ನೆರಳು ಅಥವಾ ತಂಪುಗೊಳಿಸುವ ವ್ಯವಸ್ಥೆ,
ಮಧ್ಯಾಹ್ನದ ವೇಳೆ ಕೆಲಸ ಸ್ಥಗಿತಗೊಳಿಸುವ ನಿಯಮ, ಆರೋಗ್ಯ ಪರೀಕ್ಷೆ ಮತ್ತು ತುರ್ತು ಸಹಾಯವಾಗುವಂತಹ ಪ್ರಮುಖ ಕಾರ್ಯಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.

ಆದರೆ, ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಕಾರ್ಮಿಕರು ತಮ್ಮ ಹಕ್ಕುಗಳನ್ನು ಕೇಳಿದರೆ, ʼಕೆಲಸ ಬಿಡು, ಮನೆಯಲ್ಲೇ ಇರುʼ ಎನ್ನುವಂತಹ ಧೋರಣೆ ಇರುವುದಾಗಿಯೂ ತಿಳಿದುಬಂದಿದೆ. ಈ ಸಮಯದಲ್ಲಿ ಸರ್ಕಾರವು ಮಾನವೀಯ ದೃಷ್ಟಿಕೋನದಿಂದ ಕೆಲವು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ.

ಇದನ್ನೂ ಓದಿದ್ದೀರಾ? ಬೇಸಿಗೆಗೆ ಸೊರಗಿದ ರಾಜ್ಯದ ಅಣೆಕಟ್ಟುಗಳು; ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ

ನರೇಗಾ ಕಾರ್ಮಿಕರ ಸಾವು ಒಂದು ವೈಯಕ್ತಿಕ ದುರಂತವಲ್ಲ. ಇದು ಗ್ರಾಮೀಣ ಕಾರ್ಮಿಕ ವರ್ಗದ ಮೇಲೆ ಬೀರುತ್ತಿರುವ ಬಿಸಿಲಿನ ದುಷ್ಪರಿಣಾಮದ ಪ್ರತೀಕ. ನರೇಗಾ ಯೋಜನೆಯು ಉದ್ಯೋಗ ನೀಡುವುದರ ಜತೆಗೆ ಕಾರ್ಮಿಕರ ಜೀವನ ರಕ್ಷಣೆಗೂ ಜವಾಬ್ದಾರಿಯಾಗಬೇಕು. ಸರ್ಕಾರವು ತುರ್ತುಗತಿಯಲ್ಲಿ ಕೆಲಸ ಸ್ಥಗಿತಗೊಳಿಸಿ, ಆಹಾರ ಕಿಟ್‌ಗಳನ್ನು ಒದಗಿಸುವ ಮೂಲಕ ಮಾನವೀಯತೆಯನ್ನು ತೋರಿಸಬೇಕು.

ಬಿಸಿಲಿನ ತಾಪವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಮನರೇಗಾ ಕಾರ್ಮಿಕರಂತೆಯೇ ಇನ್ನೂ ಹಲವು ಕಾರ್ಮಿಕರು ಇಂತಹ ಅಪಾಯದಲ್ಲಿದ್ದಾರೆ. ಜಿಲ್ಲಾಡಳಿತವು ತನ್ನ ಕಣ್ಣುಗಳನ್ನು ಮುಚ್ಚಿಕೊಳ್ಳದೆ, ತ್ವರಿತ ಕ್ರಮ ಕೈಗೊಂಡರೆ ಮಾತ್ರ ಇಂತಹ ದುರಂತಗಳನ್ನು ತಡೆಯಬಹುದು. ಹೊರಾಂಗಣ ಪ್ರದೇಶದಲ್ಲಿ ದುಡಿಯುವ ಕಾರ್ಮಿಕ ವರ್ಗಕ್ಕೆ ಇದು ನಿಜವಾಗಿಯೂ ಕಷ್ಟದ ಕಾಲ. ಅವರ ಬದುಕು ರಕ್ಷಿಸುವುದು ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಸಮಾಜದ ಜವಾಬ್ದಾರಿಯೂ ಹೌದು.

WhatsApp Image 2025 07 12 at 17.38.34 e1752322718567
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ವರ್ಷಕ್ಕೊಮ್ಮೆ ನಡೆಯುವ ಹಾಸನಾಂಬ ಜಾತ್ರಾ ಮಹೋತ್ಸವ ಆರಂಭ 

ಶ್ರೀ ಹಾಸನಾಂಬೆ ದೇವಿ ದರ್ಶನೋತ್ಸವ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ...

ಬೀದರ್‌ | ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿ: ಡಿಸಿ ಶಿಲ್ಪಾ ಶರ್ಮಾ

ಭಾರತದ ಸಂವಿಧಾನವು ವಿಶಿಷ್ಟ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದು, ಇಡೀ ವಿಶ್ವಕ್ಕೆ ಮಾದರಿಯಾಗಿದೆ....

ಆತ್ಮಹತ್ಯೆ ಮಾಡಿಕೊಂಡ ರೈತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬೇಡಿ: ಶಿವಸೇನೆ ಶಾಸಕನ ವಿವಾದಾತ್ಮಕ ಹೇಳಿಕೆ

ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರ ಅಂತ್ಯಕ್ರಿಯೆಯಲ್ಲಿ ಯಾರೂ ಪಾಲ್ಗೊಳ್ಳಬಾರದು, ಮೃತದೇಹಗಳನ್ನು ಪ್ರಾಣಿಗಳು...

ಅಸ್ಸಾಂ: ಬಾಲ್ಯವಿವಾಹದ ವಿರುದ್ಧ ಕಾರ್ಯಾಚರಣೆ ತೀವ್ರ, 500ಕ್ಕೂ ಹೆಚ್ಚು ಮಂದಿ ಬಂಧನ

ಅಸ್ಸಾಂನಲ್ಲಿ ಬಾಲ್ಯವಿವಾಹದ ವಿರುದ್ಧ ರಾಜ್ಯ ಸರ್ಕಾರವು ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಪ್ರಸ್ತುತ...