ಭಾರತದ ಮುಸ್ಲಿಮರು ಮತ್ತು ಬಹುಪತ್ನಿತ್ವ: ಸತ್ಯ V/s ಮಿಥ್ಯ

Date:

ಹಲವು ವರ್ಷಗಳಿಂದ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಮಾತನಾಡುವ ಬಿಜೆಪಿ, ಮುಸ್ಲಿಮರು ಹೆಚ್ಚು ಮಕ್ಕಳನ್ನು ಮಾಡುವುದಕ್ಕೆ ಬ್ರೇಕ್ ಹಾಕಲು ಎನ್ನುತ್ತಲೇ ಇದೆ. ಆದರೆ ವಾಸ್ತವದ ಸಂಗತಿ ಬೇರೆಯದೆ ಆಗಿದೆ. ಮುಸ್ಲಿಮರಲ್ಲಿ ಬಹುಪತ್ನಿತ್ವದ ತೀವ್ರತೆ ಹಿಂದೂಗಳಷ್ಟು ಹೆಚ್ಚಿನ ಪ್ರಮಾಣದಲ್ಲಿಲ್ಲ.

ಕರ್ನಾಟಕದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸರಕಾರವನ್ನು ತೆರೆಮರೆಯಲ್ಲಿ ನಿಯಂತ್ರಿಸುತ್ತಿದ್ದ ಸಂಘಿ ಬ್ರಾಹ್ಮಣರ ಅತಿರೇಕದಿಂದ ಬಿಜೆಪಿ ಹೇಳಹೆಸರಿಲ್ಲದಂತೆ ಸೋತು ಸುಣ್ಣವಾಗಿದೆ. ಹೀನಾಯ ಸೋಲಿನಿಂದ ಬಿಜೆಪಿಗರಲ್ಲಿನ ಹತಾಷೆ ನಿರಂತರವಾಗಿ ಪ್ರಕಟವಾಗುತ್ತಲೆ ಇದೆ.

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ವಾಗ್ದಾನಗಳನ್ನು ತಕ್ಷಣದಿಂದ ಜಾರಿಗೊಳಿಸಿದ್ದು, ಹತಾಶೆಯಿಂದ ಬೇಯುತ್ತಿದ್ದ ಬಿಜೆಪಿಯ ಗಾಯಕ್ಕೆ ಮತ್ತಷ್ಟು ಉಪ್ಪು ಸವರಿದಂತಾಗಿದೆ. ಸೋತು ಹೋಗಿರುವ ಹಾಗೂ ತಿಣುಕಾಡಿ ಗೆದ್ದಿರುವ ಮೊದಲ ಹಂತದ ಬಿಜೆಪಿ ನಾಯಕರೆಲ್ಲ ಮೌನಕ್ಕೆ ಶರಣಾದರೆ, ಅಕ್ಷರ ಹಾದರದ ಮೂಲಕ ರಾಜಕೀಯ ದಂಧೆಗಿಳಿದ ಮೈಸೂರು ಸಂಸದ ಪ್ರತಾಪ ಸಿಂಹನ ಆಕ್ರಂದನ ಮುಗಿಲು ಮುಟ್ಟಿದೆ.

ಮನೆಯೊಡತಿಗೆ ಮಾಸಿಕ ₹2000 ರೂಪಾಯಿ ನೀಡುವ ‘ಗೃಹಲಕ್ಷ್ಮಿ ಯೋಜನೆ’ಯನ್ನು ತೀರಾ ಕೆಳಮಟ್ಟದಲ್ಲಿ ಟೀಕಿಸಿರುವ ಪ್ರತಾಪ ಸಿಂಹ, ಮುಸ್ಲಿಮರ ಮನೆಯ ನಾಲ್ಕು ಪತ್ನಿಯಲ್ಲಿರಲ್ಲಿ ಯಾರಿಗೆ ಹಣ ನೀಡುತ್ತೀರಿ ಎಂದು ವ್ಯಂಗ್ಯವಾಡುವ ಮೂಲಕ ತನ್ನ ನೀಚತನದ ಪ್ರತಾಪವನ್ನು ಪ್ರದರ್ಶಿಸಿದ್ದಾನೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹಿಂದೂ ಎಂದು ತಪ್ಪಾಗಿ ಕರೆಯಲ್ಪಡುವ ಸನಾತನ ಆರ್ಯ ವೈದಿಕ ಧರ್ಮದೊಳಗಿನ ಪುರಾಣದ ಕತೆಗಳು ಪ್ರತಾಪನಿಗೆ ತಿಳಿದಿದೆ. ಮಹಾಭಾರತದ ರಾಜರನ್ನು ಚಂದ್ರವಂಶಜರು ಎನ್ನುತ್ತಾರೆ. ಆ ಚಂದ್ರನಿಗೆ ಅಶ್ವಿನಾದಿ ಒಟ್ಟು 27 ಜನ ಹೆಂಡಿರು. ಸಾಲದ್ದಕ್ಕೆ ಗುರುವಿನ ಪತ್ನಿಯನ್ನು ಅಪಹರಿಸಿದ ಸಂಗತಿ ಪುರಾಣದಲ್ಲಿ ಉಲ್ಲೇಖವಾಗಿದೆ.

ಇನ್ನು ರಾಮಾಯಣದ ರಾಮನ ತಂದೆ ದಶರಥನಿಗೆ ಮೂರು ಜನ ಹೆಂಡಿರು. ಬ್ರಾಹ್ಮಣ ಧರ್ಮ ಸಂಸ್ಥಾಪಕ ಬ್ರಹ್ಮನು ತನ್ನ ಮಗಳನ್ನೆ ಮದುವೆಯಾದವ. ಕೃಷ್ಣನಂತೂ 16,000 ಗೋಪಿಕೆಯರ ಲೋಲ. ಅರ್ಜುನ ಹೋದಲೆಲ್ಲ ಒಬ್ಬ ಹೆಂಡತಿಯನ್ನು ಮದುವೆಯಾಗಿದ್ದ. ಹೀಗೆ ಆರ್ಯ ವೈದಿಕ ಧರ್ಮದ ಪುರಾಣಗಳ ತುಂಬಾ ಬಹುಪತ್ನಿತ್ವ/ಬಹುಪತಿತ್ವದ ಅನೇಕ ಉದಾಹರಣೆಗಳಿವೆ.

ಬಿಜೆಪಿಯವರು ಮತಬೇಟೆಗೆ ಆರಾಧಿಸುವ ಶಿವಾಜಿ ಮಹಾರಾಜ 6 ಜನ ಪತ್ನಿಯರನ್ನು ಹೊಂದಿದ್ದ. ಪುರಾಣ-ಇತಿಹಾಸ ಹೋಗಲಿ, ಬಿಜೆಪಿ ಪಕ್ಷದಲ್ಲೇ ಅನೇಕರ ತಾತ ಮುತ್ತಾತಂದಿರು ಹಾಗೂ ಅನೇಕ ಬಿಜೆಪಿಗರು ಬಹುಪತ್ನಿಯರನ್ನು ಹೊಂದಿರುವ ಸಾಕಷ್ಟು ಉದಾಹರಣೆಗಳಿವೆ.

ಜುಲೈ 8, 2014 ರ ಸ್ಕ್ರೋಲ್. ಇನ್(Scroll.in) ವೆಬ್‌ಸೈಟ್‌ನಲ್ಲಿ ವೆಂಕಟ ರಾಮಕೃಷ್ಣನ್ ಎನ್ನುವ ಅಂಕಣಕಾರರು ಈ ಕುರಿತು ಬರೆದಿರುವ ಲೇಖನವು ಬಿಜೆಪಿ ಮತ್ತು ಸಂಘಿಗಳು ಮುಸ್ಲಿಮರ ಬಗ್ಗೆ ಮಾಡುತ್ತಿರುವ ಅಪಪ್ರಚಾರದ ಬಣ್ಣ ಬಯಲುಗೊಳಿಸಿದೆ.

ಭಾರತದಲ್ಲಿ ಮುಸ್ಲಿಮರಿಗೆ ಅನ್ವಯಿಸುವ ಇಸ್ಲಾಮಿಕ್ ಕಾನೂನನ್ನು ಮತ್ತಷ್ಟು ಕ್ರೋಢೀಕರಿಸಲು ಬಯಸುವ ಮುಸ್ಲಿಂ ಮಹಿಳಾ ಸಂಘಟನೆಯ ಹೊಸ ಪ್ರಯತ್ನವು ಅಸಾಮಾನ್ಯ ಸ್ಥಾನವನ್ನು ಪಡೆದುಕೊಂಡಿದೆ ಎನ್ನುತ್ತಾರೆ ಲೇಖಕರು. ಮುಸ್ಲಿಮ್ ಮಹಿಳಾ ಸಂಘಟನೆಯು ಮುಸ್ಲಿಮರಲ್ಲಿ ಬಹುಪತ್ನಿತ್ವವನ್ನು ನಿಷೇಧಿಸಲು ಕರೆ ನೀಡುತ್ತದೆ. ವಿವಾಹಕ್ಕೆ ಸಂಬಂಧಿಸಿದ ಇಸ್ಲಾಮಿಕ್ ಕಾನೂನಿನ ನಿಬಂಧನೆಗಳನ್ನು ಮತ್ತಷ್ಟು ಕ್ರೋಢೀಕರಿಸಲು ಭಾರತೀಯ ಮುಸ್ಲಿಂ ಮಹಿಳಾ ಆಂದೋಲನವು ರಚಿಸಿದ ಕಾನೂನು, ಶಾ ಬಾನು ಪ್ರಕರಣದಿಂದ ಸ್ಪೂರ್ತಿ ಪಡೆದಿದೆ ಎಂದು ಉಲ್ಲೇಖಿಸುತ್ತಾರೆ. ಇದು ಎಲ್ಲಾ ಬಗೆಯ ಬಹುಪತ್ನಿತ್ವ ವಿವಾಹಗಳನ್ನು ಕಾನೂನುಬಾಹಿರ ಎಂದು ಕರೆದಿದೆ. ಬಹುಪತ್ನಿತ್ವವನ್ನು ನಿಷೇಧಿಸಲು ಕರೆ ನೀಡುವಲ್ಲಿ, ಈ ಸಂಘಟನೆಯು ಅಸಾಮಾನ್ಯ ಧೈರ್ಯ ಪ್ರದರ್ಶಿಸಿದೆ.

ಭಾರತೀಯ ಜನತಾ ಪಕ್ಷವು ಹಲವು ವರ್ಷಗಳಿಂದ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಮಾತನಾಡುತ್ತಿದೆ. ಇದರ ಹಿಂದೆ ಮುಸ್ಲಿಮರ ಬಹುಪತ್ನಿತ್ವವನ್ನು ನಿಷೇಧಿಸುವ ಮೂಲಕˌ ಅದರಿಂದ ಮುಸ್ಲಿಮರು ಹಿಂದೂಗಳಿಗಿಂತ ಹೆಚ್ಚು ಮಕ್ಕಳನ್ನು ಮಾಡುತ್ತಿದ್ದಾರೆನ್ನುವುದಕ್ಕೆ ಬ್ರೇಕ್ ಹಾಕುವ ಉದ್ದೇಶ ಹೊಂದಿದೆ. ಆದರೆ ವಾಸ್ತವದ ಸಂಗತಿ ಬೇರೆಯದೆ ಆಗಿದೆ. ಬಿಜೆಪಿ ಮತ್ತು ಸಂಘಿಗಳು ಆರೋಪಿಸುವಂತೆ ಮುಸ್ಲಿಮರಲ್ಲಿ ಬಹುಪತ್ನಿತ್ವದ ತೀವ್ರತೆ ಹಿಂದುಗಳಷ್ಟು ಹೆಚ್ಚಿನ ಪ್ರಮಾಣದಲ್ಲಿಲ್ಲ.

ಈ ಅಂಕಣದಲ್ಲಿ ಲೇಖಕರು ಭಾರತೀಯ ಮುಸ್ಲಿಮರಲ್ಲಿ ಬಹುಪತ್ನಿತ್ವವು ನಿಜವಾಗಿಯೂ ವ್ಯಾಪಕವಾಗಿಲ್ಲ ಎನ್ನುವುದಕ್ಕೆ ಸೂಕ್ತ ಅಂಕಿ-ಅಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ. ಈ ವಿಷಯದ ಬಗ್ಗೆ ನಿಖರವಾಗಿ ನಿರ್ಧಾರಕ್ಕೆ ಬರುವುದು ಕಷ್ಟಕರ ಎನ್ನುತ್ತಾರೆ ಲೇಖಕರು.

ಏಕೆಂದರೆ ಸಮುದಾಯಗಳಲ್ಲಿನ ಮದುವೆ ಆಧರಿಸಿ ಮಾಡುವ ಜನಗಣತಿ ಪದ್ದತಿಯು 1961ರಲ್ಲಿ ಕೊನೆಗೊಂಡಿದೆ. ಒಂದು ಸರ್ವೇಕ್ಷಣೆಯ ಪ್ರಕಾರ ವಾಸ್ತವವಾಗಿ, ಮುಸ್ಲಿಮರಲ್ಲಿ ಬಹುಪತ್ನಿತ್ವದ ಸಂಭವವು ಕಡಿಮೆಯಿದ್ದು, ಅದು ಕೇವಲ 5.7% ರಷ್ಟಿತ್ತು. ಆದರೆ ಆಶ್ಚರ್ಯವೆನ್ನುವಂತೆ ಹಿಂದೂಗಳಲ್ಲಿ ಇದರ ಪ್ರಮಾಣವು 5.8% ರಷ್ಟಿತ್ತು. ಆದಾಗ್ಯೂ, ಬೌದ್ಧರು ಮತ್ತು ಜೈನರು ಸೇರಿದಂತೆ ಇತರ ಸಮುದಾಯಗಳಲ್ಲಿ ಇದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಇತ್ತು ಎನ್ನಲಾಗಿದೆ. ಇದೆಲ್ಲಕ್ಕಿಂತ ಹೆಚ್ಚಿನ 15.25% ಬಹುಪತ್ನಿತ್ವ ಪದ್ದತಿ ಬುಡಕಟ್ಟು ಜನಾಂಗದಲ್ಲಿತ್ತು ಎನ್ನುತ್ತದೆ ಸರ್ವೇಕ್ಷಣಾ ವರದಿ.

ಮುಸ್ಲಿಮರಲ್ಲಿ ಬಹುಪತ್ನಿತ್ವ ಪದ್ದತಿಗೆ ಕಾರಣ ಮುಸ್ಲಿಂ ವೈಯಕ್ತಿಕ ಕಾನೂನು ಎಂದು ಕೆಲವರು ಆರೋಪಿಸುತ್ತಾರೆ, ಆದರೆ ಆ ತರಹದ ಘಟನೆಗಳ ಪ್ರಮಾಣವು ಇವರು ಆರೋಪಿಸಿದಷ್ಟು ಹೆಚ್ಚಿಲ್ಲ ಎಂದು ಪ್ರಕಾಶಕರುˌ ಸ್ತ್ರೀವಾದಿಗಳು ಮತ್ತು ಸ್ವತಂತ್ರ ವಿದ್ವಾಂಸರಾದ ರಿತು ಮೆನನ್ ಅವರು ಹೇಳುತ್ತಾರೆ, ಅವರು ಈ ವಿಷಯದ ಬಗ್ಗೆ “ಅನ್-ಇಕ್ವಲ್ ಸಿಟಿಜನ್ಸ್: ಎ ಸ್ಟಡಿ ಆಫ್ ಮುಸ್ಲಿಂ ಇನ್ ಇಂಡಿಯಾ” ಪುಸ್ತಕದ ಸಹ ಲೇಖಕರಾಗಿದ್ದಾರೆ.

“ಬಹುಪತ್ನಿತ್ವವು ವಿಶೇಷವಾಗಿ ಹಿಂದೂಗಳಿಗೆ ಸಂಬಂಧಿಸಿದಂತೆ ನಿಜ, ಆದರೆ ಎಲ್ಲ ಸಮುದಾಯಗಳಲ್ಲಿ ಬಹುಪತ್ನಿತ್ವವು ಸಾಮಾನ್ಯವಾಗಿಲ್ಲ. ಮತ್ತೊಂದೆಡೆ, ದ್ವಿಪತ್ನಿತ್ವವು ಎಲ್ಲ ಧರ್ಮಗಳಲ್ಲಿ ಸಾಕಷ್ಟು ಸಾಮಾನ್ಯವಾಗಿದೆ” ಎನ್ನುತ್ತಾರೆ ಮೆನನ್.

ಆನಂತರದ ಮತ್ತೊಂದಷ್ಟು ಸರ್ವೇಕ್ಷಣೆಗಳು ಇದನ್ನು ಖಚಿತಪಡಿಸುತ್ತವೆ. 1974ರಲ್ಲಿ ಸರ್ಕಾರವು ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಮುಸ್ಲಿಮರಲ್ಲಿ ಬಹುಪತ್ನಿತ್ವದ ಅಂಕಿಅಂಶವನ್ನು 5.6% ಮತ್ತು ಮೇಲ್ಜಾತಿ ಹಿಂದೂಗಳಲ್ಲಿ 5.8% ಎಂದು ಹೇಳಿರುವ ಕುರಿತು ಲೇಖಕರು ಬರೆದಿದ್ದಾರೆ.

1993ರಲ್ಲಿ ಪುಣೆಯ ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಂಡ್ ಎಕನಾಮಿಕ್ಸ್‌ನ ಮಲ್ಲಿಕಾ ಬಿ ಮಿಸ್ತ್ರಿಯವರು ನಡೆಸಿದ ಸಂಶೋಧನೆ ಮತ್ತು ಆನಂತರ ಜಾನ್ ದಯಾಳ್ ಅವರ ದಾಖಲೆಯ ಪ್ರಕಾರ, “ಬಹುಪತ್ನಿತ್ವ ವಿವಾಹಗಳು ಮುಸ್ಲಿಮರಲ್ಲಿ ಹಿಂದೂಗಳಿಗಿಂತ ಶೇಕಡಾವಾರು ಹೆಚ್ಚು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ” ಎನ್ನುವ ಸರ್ವೇಕ್ಷಣಾ ದಾಖಲೆಯನ್ನು ಲೇಖಕರು ಇಲ್ಲಿ ನೀಡಿದ್ದಾರೆ.

2006ರಲ್ಲಿ ನಡೆಸಿದ ಮೂರನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ಪ್ರಕಾರ, 2% ಮಹಿಳೆಯರು ತಮ್ಮ ಗಂಡಂದಿರು ಒಂದಕ್ಕಿಂತ ಹೆಚ್ಚು ಹೆಂಡತಿಯರನ್ನು ಹೊಂದಿದ್ದಾರೆಂದು ಹೇಳಿರುವುದು ವರದಿಯಲ್ಲಿ ದಾಖಲಿಸಲಾಗಿದೆ. ಈ ಸರ್ವೆಯಲ್ಲಿ ಬಹುಪತ್ನಿತ್ವಕ್ಕೆ ಜನರಲ್ಲಿನ ಧರ್ಮಕ್ಕಿಂತ ಹೆಚ್ಚಾಗಿ, ನಿರ್ಣಾಯಕ ಕಾರಣಗಳೆಂದರೆ ಮೊದಲ ಹೆಂಡತಿಯಿಂದ ಸಂತಾನ ಅಥವಾ ಗಂಡು ಮಗು ಆಗದಿರುವುದು, ಪತಿ-ಪತ್ನಿಯ ಶಿಕ್ಷಣದ ಮಟ್ಟ ಮತ್ತು ಮೊದಲ ಹೆಂಡತಿಯ ವಯಸ್ಸು ಎಂದು ಗುರುತಿಸಲಾಗಿದೆ.

ಬಹುಪತ್ನಿತ್ವ ಹೊಂದಿರುವ ಹಿಂದೂಗಳು 1.77 ಪತ್ನಿಯರು, ಮುಸ್ಲಿಮರು 2.55, ಕ್ರಿಶ್ಚಿಯನ್ 2.35 ಮತ್ತು ಬೌದ್ಧರು 3.2 ಪತ್ನಿಯರನ್ನು ಹೊಂದಿರುತ್ತಾರೆ ಎಂದು ಆ ವರದಿ ಹೇಳಿರುವುದಾಗಿ ಲೇಖಕರು ದಾಖಲಿಸಿದ್ದಾರೆ.

2006ರಲ್ಲಿ ನಡೆಸಿದ ಮೂರನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ

ಬಹು ಪತ್ನಿತ್ವದ ವಿವಾಹ ಪ್ರಕರಣಗಳು ಈಶಾನ್ಯ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದವು, ಆನಂತರ ದಕ್ಷಿಣ ಮತ್ತು ಭಾರತದ ಪೂರ್ವ ಪ್ರದೇಶದಲ್ಲಿ. ಉತ್ತರ ಮತ್ತು ಮಧ್ಯ ಭಾರತದಲ್ಲಿ, ಇದು ಬಹುತೇಕ ಇರಲಿಲ್ಲ ಎನ್ನುವ ಕುರಿತು ಲೇಖಕರು ಉಲ್ಲೇಖಿಸಿದ್ದಾರೆ.

ಬಹುಮುಖ್ಯವಾಗಿ, ಈ ಎಲ್ಲ ಅಧ್ಯಯನಗಳು 1950ರಲ್ಲಿ ಹಿಂದೂ ಕೋಡ್ ಬಿಲ್‌ಗಳನ್ನು ಜಾರಿಗೊಳಿಸಿದ ನಂತರ ಬಂದವುಗಳು. ಈ ಕಾನೂನಿನನ್ವಯ ಹಿಂದೂಗಳು ದ್ವಿಪತ್ನಿತ್ವ ಮತ್ತು ಬಹುಪತ್ನಿತ್ವವನ್ನು ಹೊಂದುವದು ನಿಷೇಧಿಸಲಾಯಿತು. ಆದರೂ, ಬಹುಪತ್ನಿತ್ವ ವಿವಾಹದ ಘಟನೆಗಳು ಸಮುದಾಯಗಳಾದ್ಯಂತ ಸಾಪೇಕ್ಷ ಘಟನೆಗಳ ದರಗಳು ಹೋಲಿಸಬಹುದಾದಂತೆ ಕಂಡುಬರುತ್ತವೆ.

“ಹಿಂದೂ ವಿವಾಹ ಕಾಯಿದೆಯು ಇತರ ಕಾನೂನಿನಂತೆಯೇ ಇದೆ. ಕಾನೂನಿನಲ್ಲಿ ಬಾಲ್ಯವಿವಾಹಗಳನ್ನು ಸಹ ನಿಷೇಧಿಸಲಾಗಿದೆ, ಆದರೆ ಅವು ಇಂದಿಗೆ ನಡೆಯುತ್ತಲೇ ಇವೆ” ಎನ್ನುವ ಮೆನನ್ ಹೇಳಿಕೆಯನ್ನು ಲೇಖಕರು ಉಲ್ಲೇಖಿಸಿದ್ದಾರೆ.

ಅಂಕಿಅಂಶ ಹಾಗೂ ಸರ್ವೇಕ್ಷಣೆಯ ವಾಸ್ತವ ಫಲಿತಾಂಶಗಳೇನೆ ಇದ್ದರೂ, ಮುಸ್ಲಿಂ ಸಮುದಾಯದಲ್ಲಿ ಬಹುಪತ್ನಿತ್ವವನ್ನು ನಿಷೇಧಿಸುವ ಕಾನೂನಿನ ಅಗತ್ಯವಿದೆ. ಹಾಗಾದಾಗ ಮಾತ್ರ ಮಹಿಳೆಯರನ್ನು ಘನತೆಯಿಂದ ಮತ್ತು ಸಮಾನತೆಯಿಂದ ನೋಡುವ ವಾತಾವರಣ ನಿರ್ಮಾಣವಾಗಬೇಕು ಎಂದು ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ಒತ್ತಾಯಿಸುತ್ತದೆ.

ಈ ಆಂದೋಲನದ ಸಹ-ಸಂಸ್ಥಾಪಕಿ ಝಕಿಯಾ ಸೋಮನ್ ಅವರು, ಲಿಂಗ ಸಮಾನತೆಯ ನ್ಯಾಯಕ್ಕಾಗಿ ಹೋರಾಡುವವರಿಗೆ ಕಾನೂನಿನ ಬೆಂಬಲದ ಅಗತ್ಯವಿದೆ ಎನ್ನುತ್ತಾರೆ.

ಕೇವಲ ಕಾನೂನುಗಳನ್ನು ಅಂಗೀಕರಿಸುವುದರಿಂದ ಈ ವಿಷಯಗಳು ಬದಲಾಗುತ್ತವೆ ಎಂದು ನಾವು ನಂಬುವುದಿಲ್ಲ, ಜನರಲ್ಲಿ ಸರಿಯಾದ ತಿಳುವಳಿಕೆ ತರದ ಹೊರತು ಬೇರೆ ಪರ್ಯಾಯವಿಲ್ಲ. ಆದರೆ ಕನಿಷ್ಠ ಅದಕ್ಕಾಗಿ ಪುಸ್ತಕದಲ್ಲಿ ಒಂದು ಕಾನೂನು ಅಂಗೀಕಾರವಾಗಿ ಬರೆದಿಡಲ್ಪಟ್ಟರೆ ಅದು ನಮ್ಮ ಹೋರಾಟಕ್ಕೆ ಬಲ ನೀಡಬಲ್ಲುದು ಎನ್ನುವ ಝಕಿಯಾ ಅವರ ಮಾತನ್ನು ಲೇಖಕರು ಬಲವಾಗಿ ಅನುಮೋದಿಸಿ ಉಲ್ಲೇಖಿಸಿದ್ದಾರೆ.

ಬಿಜೆಪಿ ಮತ್ತು ಸಂಘಪರಿವಾರದವರು ಈ ಸತ್ಯವನ್ನು ಎಂದಿಗೂ ಜೀರ್ಣಿಸಿಕೊಳ್ಳಲಾರರು. ಮುಸ್ಲಿಮ್ ದ್ವೇಷವೇ ಅವರ ಅಧಿಕಾರ ರಾಜಕೀಯದ ಊರುಗೋಲಾಗಿರುವುದರಿಂದ ಸಾಮಾನ್ಯ ಜನರು ಈ ಸತ್ಯವನ್ನು ಅರಿತುಕೊಳ್ಳಬೇಕಿದೆ.

ಡಾ ಜೆ ಎಸ್‌ ಪಾಟೀಲ್‌
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಬೇಡ್ಕರರ ಪ್ರಬುದ್ಧ ಭಾರತ ಮತ್ತು ಮೋದಿಯವರ ವಿಕಸಿತ ಭಾರತ

ರಾಜಕೀಯ ಸ್ವಾತಂತ್ರ್ಯಕ್ಕಿಂತ ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಪ್ರಜಾಸತ್ತೆ ಮತ್ತು ಆರ್ಥಿಕ ಪ್ರಜಾಸತ್ತೆಗಳನ್ನು...

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...

ಆನೆಗಳ ಕುರಿತ ಹೊಸ ನಿಯಮ, ಅನಂತ ಅಂಬಾನಿಯ ವನತಾರ ಮತ್ತು ಆನೆ ತಜ್ಞ ಪ್ರೊ. ರಾಮನ್‌ ಸುಕುಮಾರ್

‌ಆನೆಗಳ ಸಾಗಾಟ ಮತ್ತು ಸಾಕಾಣಿಕೆಗೆ ಸಂಬಂಧಿಸಿದ ಹೊಸ ನಿಯಮ(ಕ್ಯಾಪ್ಟಿವ್‌ ಎಲಿಫೆಂಟ್) ಮತ್ತು...