ಅಲ್ಲಮನ ಅನನ್ಯ ಪದಪ್ರಯೋಗಗಳು | ನಿಸ್ಸೀಮ ಸುಖಿ 

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ನಿಸ್ಸೀಮ ಸುಖಿ
ಮರುಳುಂಡ ಮನುಷ್ಯನ ಇರವಿನ ಪರಿಯಂತೆ, ವಿವರವನರಿಯಬಾರದು ನೋಡಾ,
ಶಿವಜ್ಞಾನ! ಅದನರಿದೆಹೆನರಿದೆಹೆನೆಂದು ನೆನೆಯಹೋದರೆ, ಅದು ಮುಂದುದೋರದು. ಮರೆದೆಹೆನೆಂದು ಭಾವಿಸ ಹೋದಡೆ ತೆರಹುಗೊಡದು!  ಗುಹೇಶ್ವರಾ,
ನಿಮ್ಮ ನೆರೆ ಅರಿದ ಶರಣರು, ನಿಸ್ಸೀಮಸುಖಿಗಳು ನೋಡಾ.

- Advertisement -

ಪದಾರ್ಥ:
ಮರುಳುಂಡ  =  ಹುಚ್ಚನಂತಾದ, ಭೂತ ಹಿಡಿದ
ಇರವಿನ  = ಇರುವಿಕೆಯ
ಮುಂದುದೋರದು  = ಮುಂದೆ ತೋರದು
ತೆರಹು  = ಅವಕಾಶ
ನೆರೆ = ನೆರೆಹೊರೆ, ಸನಿಹ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ –...

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ಚುನಾವಣೆಗೂ ಗಂಭೀರ ಸವಾಲು ಒಡ್ಡುವಂತಿವೆ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ನಂದಿಗ್ರಾಮದ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ...

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್ ಸರ್ಕಲ್ಸ್' (Local Circles) ನಡೆಸಿದ 32,000ಕ್ಕೂ ಹೆಚ್ಚು ಜನರ ಸಮೀಕ್ಷೆ ಬಟಾಬಯಲು ಮಾಡಿದೆ. ಸಮೀಕ್ಷೆಯ ಪ್ರಕಾರ, ಕೇವಲ ಶೇ.17ರಷ್ಟು ವರ್ತಕರು...

ವಚನಾರ್ಥ:
ಮರುಳುಂಡ ಮನುಷ್ಯ ಎಂದರೆ ಮೈಯೊಳಗೆ ಭೂತ ಹಿಡಿದಂತೆ ಭ್ರಮಿಸಿಕೊಂಡು ವರ್ತಿಸುವ ಮನುಷ್ಯ. ಭೂತ ಹಿಡಿದ ಮನುಷ್ಯನು ತನ್ನತನವನ್ನು ಕಳೆದುಕೊಂಡು ತಾನೇ ಭೂತ ಪ್ರೇತ ಪ್ರೇರೇಪಿಸಿದಂತೆ ನಡೆದುಕೊಳ್ಳುತ್ತಾನೆ. ಅದೇ ರೀತಿ ತಾನು ಲಿಂಗವೇ ಆಗಿದ್ದೇನೆ ಎಂದು ಅಂದುಕೊಂಡವನು ತನ್ನ ಬಗೆಯ ವಿವರಗಳನ್ನು ಮರೆತು ಶಿವಜ್ಞಾನವೊಂದನ್ನೇ ಅನುಭವಿಸುತ್ತಾನೆ. ಶಿವಜ್ಞಾನವನ್ನು
ಅದನರಿದೆಹೆನರಿದೆಹೆನೆಂದು
(ಅದನು+ಅರಿದೆಹೆನು+ಅರಿದೆಹೆನು+ಎಂದು) ಅವನು ಅಂದುಕೊಂಡರೆ ಅದು ಅವನ ಮುಂದೆ ಕೂಡಲೇ ಬಂದು ನಿಲ್ಲುವುದಿಲ್ಲ.
ಅದು ಮುಂದುದೋರದು. ಒಮ್ಮೆ ಶಿವಜ್ಞಾನವನ್ನು ಅರಿದವ ಅದನ್ನು ಮರೆಯಲು ಯತ್ನಿಸಿದರೆ ಅದು ಮರೆಯಲು ಅವಕಾಶ ಕೊಡುವುದಿಲ್ಲ. “ಮರೆತೇನೆಂದಾರ ಮರೆಯಲಿ ಹ್ಯಾಂಗ” ಎಂಬಂತೆ. ಶಿವನೊಂದಿಗೆ ಬೆರೆತು ಶಿವಜ್ಞಾನವನ್ನು ಅನುಭವಿಸಿದ ಅನುಭಾವಿ ಶರಣನು ನಿಸ್ಸೀಮ ಸುಖಿ. ಅಂದರೆ ದುಃಖಕ್ಕೆ ಕಾರಣವಾದ ಅಜ್ಞಾನವೇ ಅವನಲ್ಲಿ ಇಲ್ಲವೆಂದಾದರೆ ಶರಣನ ಸುಖಕ್ಕೆ ಸಂಕಷ್ಟ ಉಂಟಾಗುವ ಸಾಧ್ಯತೆಯೇ ಇಲ್ಲ. ಅಲ್ಲಿ ಬರೀ ಸುಖವೇ, ಸುಖವೇ. ಅದು ನಿಸ್ಸೀಮ ಸುಖ. ಶರಣನು ನಿಸ್ಸೀಮ ಸುಖಿ.

ಪದಪ್ರಯೋಗಾರ್ಥ:
ನಿಸ್ಸೀಮ ಸುಖಿ. ಎಣೆಯಿಲ್ಲದ ಎಲ್ಲೆಯಿಲ್ಲದ ಸೀಮಾತೀತವಾದ ಸುಖವನ್ನು ಅನುಭವಿಸುವವ ನಿಸ್ಸೀಮ ಸುಖಿ. ಅಪಾರ ಆನಂದಿ. ಅಲ್ಲಮ ತನ್ನ ವಚನದಲ್ಲಿ ಪ್ರಯೋಗಿಸಿರುವ ಈ ಪದಕ್ಕೆ ಸಮಾನವಾಗಿ ಕ್ರೈಸ್ತ ಧರ್ಮದಲ್ಲಿ Boundless Joy ಎಂಬ ಕಲ್ಪನೆಯಿದೆ. ಅಂದರೆ ದೇವರೊಂದಿಗೆ ಇರುವ ಸಂಬಂಧದಿಂದ ಉಂಟಾಗುವ ಆಳವಾದ, ಅಂತ್ಯವಿಲ್ಲದ ಆತ್ಮಿಕ ಸುಖ. ಇದು ತಾತ್ಕಾಲಿಕ ಲೌಕಿಕ ಸುಖದಿಂದ ಭಿನ್ನವಾಗಿದ್ದು ಕ್ರಿಸ್ತನಲ್ಲಿ ಇರುವ ನಂಬಿಕೆ, ಆತನ ಇಚ್ಛೆಗೆ ಅನುಗುಣವಾಗಿ ಸೇವೆ ಸಲ್ಲಿಸುವುದು ಮತ್ತು ಆತನ ಸನ್ನಿಧಿಯಲ್ಲಿ ಇರುವುದರ ಮೂಲಕ ಅನುಭವಿಸುವಂತಹ ಸುಖ. ಇಂತಹ ಸುಖವು ಕಷ್ಟಗಳ ನಡುವೆಯೂ ಮೀರಿ ನಿಲ್ಲುವ ಶಕ್ತಿ ಮತ್ತು ಶಾಂತಿಯನ್ನು ನೀಡುತ್ತದೆ. ಇದನ್ನು “ವರ್ಣಿಸಲಾರದ ಮತ್ತು ಮಹಾ ಮಹಿಮ” ಸುಖವೆಂದು ಹೇಳಲಾಗಿದ್ದು, ಇದು ದೈವಿಕ ಗುಣಗಳ ಫಲವಾಗಿಯೂ, ಕ್ರೈಸ್ತ ಜೀವನದ ಪ್ರಮುಖ ಅಂಶವಾಗಿಯೂ ಕಾಣುತ್ತದೆ; ದುಃಖವನ್ನು ಮಹಿಮೆಯನ್ನಾಗಿ ಸುಖವನ್ನಾಗಿ ಪರಿವರ್ತಿಸುತ್ತದೆ. ಇಂತಹ ಆನಂದವು ಆಳವಾದುದಷ್ಟೇ ಅಲ್ಲ, ಮಿತಿಯಿಲ್ಲದದ್ದಾಗಿಯೂ ಇರುತ್ತದೆ. ಇದೇ ಅಲ್ಲಮ ಹೇಳಿರುವ ನಿಸ್ಸೀಮ ಸುಖ. ದೈವ ಸಂಪರ್ಕದಲ್ಲಿ ಪಡೆಯುವ ಸುಖ ಧರ್ಮಾತೀತ, ಸೀಮಾತೀತ. ಧರ್ಮ ಧರ್ಮಗಳ ಗಡಿಯನ್ನು ಮೀರಿ ಸರ್ವ ವ್ಯಾಪಿಯಾದದ್ದು. ನಿಸ್ಸೀಮ ಸುಖಿ ಅನನ್ಯವಾದ ಪದಪ್ರಯೋಗ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನ ಕಲ್ಯಾಣ | ಭಕ್ತಂಗೆ ಸುಖವೂ ಸರಿ, ದುಃಖವೂ ಸರಿ..

ಭಕ್ತಂಗೆ ಸುಖವೂ ಸರಿ, ದುಃಖವೂ ಸರಿ, ಉರಿ ಸಿರಿ ಉಭಯವೂ ಸರಿ...

ಕಾಲಮಾನ | ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಮನಬಿಲ್ಲು ಮಿಶ್ರಣ- ಒಂದು ಪಕ್ಷಿನೋಟ

ನಮ್ಮ ಸ್ವಾತಂತ್ರ್ಯ ಹೋರಾಟವನ್ನು ʼಕಾಮನಬಿಲ್ಲು ಮಿಶ್ರಣʼ ಎಂದು ಕರೆಯಬಹುದು. ಇದರಲ್ಲಿ ಭಿನ್ನ...

ವಚನ ಕಲ್ಯಾಣ | ಕಲ್ಯಾಣವಿಲ್ಲದ ಕಾರಣ ಕೈಲಾಸವಿಲ್ಲವೆನಗೆ, ಬಸವಾ!

ಕಲ್ಯಾಣವಿಲ್ಲ ಕೈಲಾಸವಿಲ್ಲ, ಬಸವಾ. ಕಲ್ಯಾಣವಿಲ್ಲದ ಕಾರಣ ಕೈಲಾಸವಿಲ್ಲವೆನಗೆ, ಬಸವಾ. ಆ ಕಲ್ಯಾಣ...

ವಚನ ಕಲ್ಯಾಣ | ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು

ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು,ಅಂತಃಕರಣ ಚತುಷ್ಟಯವೆಂಬ ಪಶುವಂ ಕಟ್ಟಿಓಂಕಾರನಾದವೆಂಬ ಸೆಳೆಕೋಲಂ...