ಈ ದಿನ ಸಂಪಾದಕೀಯ | ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ಏರುತ್ತಲೇ ಇದೆ, ಸರ್ಕಾರವೇಕೆ ಸುಮ್ಮನಿದೆ?

Date:

ಬಡ ಪೋಷಕರ ನೋವು ಕೇವಲ ಕುಟುಂಬಗಳ ಸಮಸ್ಯೆಯಲ್ಲ, ಅದು ಭವಿಷ್ಯದ ಪ್ರಜೆಗಳ ಪ್ರಶ್ನೆ. ಶಿಕ್ಷಣದ ಬಾಗಿಲು ಹಣವಂತರಿಗೆ ಮಾತ್ರ ತೆರೆಯುವ ಸ್ಥಿತಿ ಬಂದರೆ, ಸಮಾಜದಲ್ಲಿ ಅಸಮಾನತೆ ಹೆಚ್ಚುತ್ತದೆ. ಸಾಮರಸ್ಯ-ಸಹಬಾಳ್ವೆಯ ಬದುಕಿಗೆ ಭಂಗ ಬರುತ್ತದೆ. ಆದ್ದರಿಂದ ಶಿಕ್ಷಣವನ್ನು ವ್ಯಾಪಾರದ ಮಾರುಕಟ್ಟೆಯಿಂದ ಹೊರತೆಗೆದು, ಸಾರ್ವಜನಿಕ ಹಕ್ಕಿನ ರೂಪದಲ್ಲಿ ಉಳಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ.

- Advertisement -

ಬೇಸಿಗೆ ರಜೆ ಕಳೆದು ಶಾಲೆಗಳು ಶುರುವಾಗುತ್ತಿವೆ. ದೀರ್ಘರಜೆಯ ಮಂಪರಿನಿಂದ ಎದ್ದ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಶಾಲೆ ಎಂದಾಕ್ಷಣ ಸಹಜವಾಗಿಯೇ, ಪ್ರವೇಶ ಶುಲ್ಕ, ವಾರ್ಷಿಕ ಶುಲ್ಕ, ಅಭಿವೃದ್ಧಿ ಶುಲ್ಕ, ಸಾರಿಗೆ ಶುಲ್ಕ, ಡಿಜಿಟಲ್ ಕ್ಲಾಸ್ ಶುಲ್ಕ, ಯೂನಿಫಾರ್ಮ್, ಪುಸ್ತಕ ಇತ್ಯಾದಿ ಶುಲ್ಕಗಳ ಪಟ್ಟಿ ನೋಡಿ ಪೋಷಕರು ಪ್ರಜ್ಞೆ ತಪ್ಪುವುದುಂಟು. ಬಲ್ಲಿದರಿಗೆ ಎಲ್ಲವೂ ಸಲೀಸು. ಆದರೆ ಬಡ ಪೋಷಕರ ಪಡಿಪಾಟಲು ಹೇಳತೀರದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಅಂಥದ್ದೇ ಒಂದು ಬಡಕುಟುಂಬ ಶಿವನಂಜಪ್ಪ ಮತ್ತು ಸಾವಿತ್ರಮ್ಮನವರದು. ಮದುವೆಯಾಗುತ್ತಿದ್ದಂತೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದರು. ಇಬ್ಬರೂ ಅನಕ್ಷರಸ್ಥರು. ಶಿವನಂಜಪ್ಪನವರು ಹಗಲು-ರಾತ್ರಿ ಆಟೋ ಓಡಿಸಿದರೆ, ಸಾವಿತ್ರಮ್ಮನವರು ಹತ್ತಾರು ಮನೆಗಳ ಕೆಲಸ ಮಾಡುತ್ತ ಸಂಸಾರದ ನೊಗ ಹೊತ್ತು ಸರಿದೂಗಿಸಿದವರು. ಇಬ್ಬರು ಮಕ್ಕಳು. ನಗರವಾಸಿಗಳಾಗಿ ಇವತ್ತಿಗೆ 18 ವರ್ಷಗಳಾಗಿವೆ, ಇವತ್ತಿಗೂ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದಾರೆ. ಹೊಟ್ಟೆ-ಬಟ್ಟೆ ಕಟ್ಟಿ ಬದುಕುತ್ತಿರುವ ಅವರಿಗೆ ಒಂದೇ ಆಸೆ, ‘ನಮ್ಮ ಮಕ್ಕಳು ನಮ್ಮಂತಾಗದಿರಲಿ, ಚೆನ್ನಾಗಿ ಓದಲಿ, ಮುಂದೆ ಬರಲಿ’. ಅದಕ್ಕಾಗಿ ಅವರು ತಮ್ಮೆಲ್ಲ ದುಡಿಮೆಯನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ಸರೀಕರ ಮಕ್ಕಳಂತೆ ತಮ್ಮ ಮಕ್ಕಳು ಇಂಗ್ಲಿಷ್ ಕಲಿಯಲಿ ಎಂದು ಕಾನ್ವೆಂಟಿಗೆ ಸೇರಿಸಿದ್ದಾರೆ.  

ಕಾನ್ವೆಂಟ್ ನಲ್ಲಿ ಓದಿದ, ಎಂಜಿನಿಯರಿಂಗ್ ಆಸೆ ಹೊತ್ತ ಮಗ ಈಗ ಪಿಯುಸಿಗೆ ಸೇರಬೇಕು. ಸರ್ಕಾರಿ ಕಾಲೇಜುಗಳಿಗೆ ಸೇರಿದರೆ ಭವಿಷ್ಯವಿಲ್ಲ, ಅಲ್ಲಿಗೆ ಕಳಿಸಲು ಪೋಷಕರಿಗೂ ಮನಸ್ಸಿಲ್ಲ. ಆದರೆ ಖಾಸಗಿ ಕಾಲೇಜುಗಳ ದುಬಾರಿ ಶುಲ್ಕ ಭರಿಸಲು ಪೋಷಕರಿಗೆ ಸಾಧ್ಯವಾಗುತ್ತಿಲ್ಲ. ಅವರ ತೊಳಲಾಟ, ತಳಮಳ ಹೇಳಿಕೊಳ್ಳುವಂಥದ್ದಲ್ಲ; ಹೇಳಿದರೆ ಯಾರಿಗೂ ಅರ್ಥವಾಗುವುದಿಲ್ಲ.

ಒಂದು ಕಾಲದಲ್ಲಿ ಶಾಲೆ ಎಂದರೆ ಜ್ಞಾನದೇಗುಲ ಎನ್ನುತ್ತಿದ್ದರು. ಇಂದು ಅದೇ ಶಾಲಾ-ಕಾಲೇಜುಗಳು ದುಡ್ಡಿದ್ದವರ ಪಾಲಿಗೆ ಪದವಿ ಕರುಣಿಸುವ ಕಾಮಧೇನುವಾಗಿವೆ. ಲಕ್ಷಾಂತರ ರೂಪಾಯಿ ಶುಲ್ಕ ವಸೂಲಿ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳು ಈಗ ಕಾರ್ಪೊರೇಟ್ ಸಂಸ್ಥೆಗಳಾಗಿ ಬದಲಾಗುತ್ತಿವೆ. ಶಿಕ್ಷಣ ಇಂದು ಬಡಕುಟುಂಬಗಳಿಗೆ ಭಾರವಾಗುತ್ತಿದೆ. ಮಕ್ಕಳ ಭವಿಷ್ಯ ಭದ್ರಗೊಳಿಸಬೇಕೆಂಬ ಕನಸಿನೊಂದಿಗೆ ಬದುಕುತ್ತಿರುವ ಬಡ ಪೋಷಕರು ಈಗ ಸಂಬಳದ ಹಣವನ್ನು ಶಾಲಾ-ಕಾಲೇಜಿನ ಶುಲ್ಕಕ್ಕೆ ಮೀಸಲಿಟ್ಟರೂ ಸಾಲದಾಗಿದೆ. ಬ್ಯಾಂಕ್ ಸಾಲ, ಗೋಲ್ಡ್ ಗಿರವಿ ಇಡುವುದು ಸಾಮಾನ್ಯವಾಗಿದೆ.

ಇದನ್ನು ಓದಿದ್ದೀರಾ?: ಮತದಾನದ ಹಕ್ಕು ಮೂಲಭೂತ ಹಕ್ಕಾಗಬೇಕು, ಅಗತ್ಯ ಜನಜಾಗೃತಿ ನಡೆಯಬೇಕು

ಶಾಲಾ-ಕಾಲೇಜುಗಳ ಶುಲ್ಕ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ‘ಗುಣಮಟ್ಟದ ಶಿಕ್ಷಣ’ ಎಂಬ ನೆಪದಡಿ ಪೋಷಕರನ್ನು ಅಕ್ಷರಶಃ ಸುಲಿಗೆ ಮಾಡುತ್ತಿವೆ. ಈ ಸುಲಿಗೆಯ ಸುಳಿಗೆ ಸಿಲುಕುತ್ತಿರುವವರು ಬಡ ಮತ್ತು ಮಧ್ಯಮ ವರ್ಗದ ಪೋಷಕರು. ಬೆಲೆ ಏರಿಕೆಯ ದುರ್ಬರ ದಿನಗಳಲ್ಲಿ ಬದುಕುವುದೇ ಕಷ್ಟವಾಗಿದೆ. ಕೆಲವರು ಎರಡೆರಡು ಉದ್ಯೋಗ ನಿರ್ವಹಿಸಿದರೂ ಸಾಲದಾಗಿದೆ. ಮಕ್ಕಳ ಶಿಕ್ಷಣಕ್ಕಾಗಿ ಜೀವ ಒತ್ತೆ ಇಡಬೇಕಾದ, ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಗಾದರೆ ಸರ್ಕಾರದ ಪಾತ್ರವೇನು, ದುಬಾರಿ ಶುಲ್ಕ ನಿಯಂತ್ರಣವಿಲ್ಲವೇಕೆ ಎಂಬ ಪ್ರಶ್ನೆಗಳು ಎದುರಾಗುವುದು ಸಹಜ. ಶಿಕ್ಷಣ ಮೂಲಭೂತ ಹಕ್ಕು ಎಂದು ಸಂವಿಧಾನ ಹೇಳುತ್ತದೆ. ಆದರೆ ಸರ್ಕಾರಗಳು ಕ್ರಮೇಣ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತ ಸಾಗಿವೆ. ಇದೇ ಇಂದಿನ ಸಮಸ್ಯೆಯ ಮೂಲ ಕಾರಣವಾಗಿದೆ. ಸರ್ಕಾರಿ ಶಾಲಾ-ಕಾಲೇಜುಗಳಿಗೆ ಸಮರ್ಪಕ ಅನುದಾನ, ಮೂಲಸೌಕರ್ಯ, ಶಿಕ್ಷಕರ ನೇಮಕ, ಗುಣಮಟ್ಟದ ಪಾಠ ವ್ಯವಸ್ಥೆ ಒದಗಿಸಲು ವಿಫಲವಾದಾಗ ಜನ ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಮುಖ ಮಾಡುತ್ತಾರೆ. ಅದನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ದುರುಪಯೋಗಪಡಿಸಿಕೊಳ್ಳುತ್ತಿವೆ.

ದುರದೃಷ್ಟಕರ ಸಂಗತಿ ಎಂದರೆ, ಇಂದು ರಾಜ್ಯದಲ್ಲಿರುವ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರು ಹೆಚ್ಚೂಕಡಿಮೆ ರಾಜಕಾರಣಿಗಳೇ ಆಗಿದ್ದಾರೆ. ಇಲ್ಲವೇ ಅವರ ಸಂಬಂಧಿಕರಾಗಿದ್ದಾರೆ. ಇಲ್ಲದಿದ್ದರೆ ಸಹಭಾಗಿತ್ವ ಹೊಂದಿದ್ದಾರೆ. ಅವರನ್ನು ಬಿಟ್ಟರೆ ಜಾತಿಯ ಮಠಗಳು, ಸ್ವಾಮೀಜಿಗಳು, ಮುಲ್ಲಾಗಳು, ಮಿಷನರಿಗಳು ಮಾಲೀಕತ್ವ ಹೊಂದಿವೆ. ಇವರು ಮತ್ತು ರಾಜಕಾರಣಿಗಳ ನಡುವೆ ಕೊಡು-ಕೊಳ್ಳುವ ವ್ಯವಹಾರವಿದೆ. ರಾಜಕಾರಣ ಮತ್ತು ಹಣಕ್ಕಾಗಿ ಶಿಕ್ಷಣ ಬಲಿಯಾಗುತ್ತಿದೆ.

ಇದರ ನಡುವೆಯೇ ಶಿಕ್ಷಣ ಮೂಲಭೂತ ಹಕ್ಕು ಎಂದು ಹೇಳುವ ಸರ್ಕಾರ, ಶಿಕ್ಷಣ ಕ್ಷೇತ್ರಕ್ಕಾಗಿ ವ‍‍ರ್ಷಕ್ಕೆ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ. 2023-24ರ ಬಜೆಟ್‌ನಲ್ಲಿ ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ ವಿಭಾಗಕ್ಕೆ ಸುಮಾರು 33,271 ಕೋಟಿ; 2024-25ರ ಬಜೆಟ್‌ನಲ್ಲಿ 40,945 ಕೋಟಿ ಅನುದಾನ ಘೋಷಿಸಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಕಾರ್ಯಕ್ರಮಗಳಿಗೆ 22,209 ಕೋಟಿ ಮೀಸಲಿಡಲಾಗಿದೆ. ಮಧ್ಯಾಹ್ನ ಬಿಸಿಯೂಟ ಯೋಜನೆಗೆ 1,553 ಕೋಟಿ ಅನುದಾನ ನೀಡಲಾಗಿದೆ. 2026ರ ಅವಧಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ ವಿಸ್ತರಣೆ, ಶಿಕ್ಷಕರ ನೇಮಕ, ಮೂಲಸೌಕರ್ಯ, ಡಿಜಿಟಲ್ ಶಿಕ್ಷಣ ಮತ್ತು ಪಿಎಂಶ್ರೀ ಶಾಲೆಗಳ ಯೋಜನೆಗಳಿಗೆ ಹೆಚ್ಚುವರಿ ಹೂಡಿಕೆ ಮಾಡುವುದಾಗಿ ಸರ್ಕಾರ ಘೋಷಿಸಿದೆ.

ಶಿಕ್ಷಣ ಕ್ಷೇತ್ರಕ್ಕೇ ಮೂವರು ಮಂತ್ರಿಗಳು, ಅಧಿಕಾರಿವರ್ಗ, ಅನುದಾನ ಸರ್ಕಾರದ ವತಿಯಿಂದ ವಿನಿಯೋಗವಾಗುತ್ತಿದ್ದರೂ, ಸಾರ್ವಜನಿಕ ಶಿಕ್ಷಣ ಕ್ಷೇತ್ರ ಸದೃಢಗೊಳ್ಳಲಿಲ್ಲ. ಬದಲಿಗೆ ಖಾಸಗಿಯವರ ಹಿಡಿತ ಗಟ್ಟಿಗೊಳ್ಳತೊಡಗಿದೆ. ಖಾಸಗಿಯವರನ್ನು ನಿಯಂತ್ರಿಸುವ ಕಾಯ್ದೆ ಕಾನೂನು ರೂಪಿಸುವಲ್ಲಿ ಮತ್ತು ಅವುಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಸರ್ಕಾರ ವಿಫಲವಾಗುತ್ತಿದೆ. ಉದಾಹರಣೆಗೆ ಶುಲ್ಕ ನಿಗದಿ ಮಾಡಲು ಸರ್ಕಾರಗಳ ಬಳಿ ಸಮರ್ಪಕ ಯಂತ್ರಾಂಗ ಇದ್ದರೂ, ಅದರ ಅನುಷ್ಠಾನದಲ್ಲಿ ರಾಜಕೀಯ ಒತ್ತಡ, ಖಾಸಗಿ ಶಿಕ್ಷಣ ಲಾಬಿಗಳ ಪ್ರಭಾವಕ್ಕೆ ಸರ್ಕಾರ ಮಣಿಯುತ್ತಿದೆ. ಅನೇಕ ಖಾಸಗಿ ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿಗಳನ್ನು ಮೀರಿ ಶುಲ್ಕ ವಸೂಲಿ ಮಾಡಿದರೂ ಕೇಳುವವರಿಲ್ಲದಾಗಿದೆ. ಪೋಷಕರು ಶುಲ್ಕ ಭರಿಸುವಾಗ ಬೇಸತ್ತು ಬೀದಿಗಿಳಿಯುತ್ತಾರೆ, ಪ್ರತಿಭಟಿಸುತ್ತಾರೆ. ಆದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ.

ಇದು ಕೇವಲ ಆರ್ಥಿಕ ಪ್ರಶ್ನೆಯಲ್ಲ, ಸಾಮಾಜಿಕ ನ್ಯಾಯದ ಪ್ರಶ್ನೆಯೂ ಹೌದು. ಶಿಕ್ಷಣ ದುಬಾರಿಯಾದಂತೆ ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುವ ಅಪಾಯ ಹೆಚ್ಚುತ್ತದೆ. ಸಮಾಜದಲ್ಲಿ ಶಿಕ್ಷಣವೇ ವರ್ಗ ವಿಭಜನೆಯ ಸಾಧನವಾದರೆ, ಸಮಾನತೆಯ ಕನಸು ಘೋಷಣೆಗಷ್ಟೇ ಸೀಮಿತವಾಗುತ್ತದೆ. ಸಮಾಜವಾದಿ ಮುಖ್ಯಮಂತ್ರಿಗಳಿದ್ದರೂ, ಸಮಾನತೆ ಸಾಕಾರಗೊಳ್ಳುವುದು ಸಾಧ್ಯವಿಲ್ಲವೆನಿಸುತ್ತಿದೆ.

ಇದನ್ನು ಓದಿದ್ದೀರಾ?: ವರದಕ್ಷಿಣೆ ಎಂಬ ಬಲಿಪೀಠದಿಂದ ಹೆಣ್ಣುಮಕ್ಕಳ ರಕ್ಷಣೆ ಯಾವಾಗ?

ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ತಕ್ಷಣ ಸಭೆ ಕರೆದು ಖಾಸಗಿ ಶಾಲಾ-ಕಾಲೇಜುಗಳ ಶುಲ್ಕಕ್ಕೆ ಗರಿಷ್ಠ ಮಿತಿ ನಿಗದಿ ಮಾಡಬೇಕು. ಇಲ್ಲವೇ ಏಕರೂಪದ ಶುಲ್ಕ ನಿಗದಿಗೆ ಕ್ರಮವಹಿಸಬೇಕು. ಅನಧಿಕೃತ ಶುಲ್ಕ ವಸೂಲಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇದಕ್ಕೆ ಪರ್ಯಾಯವಾಗಿ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಖಾಸಗಿ ಸಂಸ್ಥೆಗಳಿಗೆ ಸ್ಪರ್ಧೆಯೊಡ್ಡುವ ಮಟ್ಟಕ್ಕೆ ಹೆಚ್ಚಿಸಬೇಕು. ಶಿಕ್ಷಕರ ನೇಮಕಾತಿ, ಡಿಜಿಟಲ್ ಸೌಲಭ್ಯ, ಪ್ರಯೋಗಾಲಯ, ಗ್ರಂಥಾಲಯ ಇನ್ನಿತರ ಅಭಿವೃದ್ಧಿಗೆ ಆದ್ಯತೆ ನೀಡಬೇಕು.

ಬಡ ಪೋಷಕರ ನೋವು ಕೇವಲ ಕುಟುಂಬಗಳ ಸಮಸ್ಯೆಯಲ್ಲ, ಅದು ಭವಿಷ್ಯದ ಪ್ರಜೆಗಳ ಪ್ರಶ್ನೆ. ಶಿಕ್ಷಣದ ಬಾಗಿಲು ಹಣವಂತರಿಗೆ ಮಾತ್ರ ತೆರೆಯುವ ಸ್ಥಿತಿ ಬಂದರೆ, ಸಮಾಜದಲ್ಲಿ ಅಸಮಾನತೆ ಹೆಚ್ಚುತ್ತದೆ. ಸಾಮರಸ್ಯ-ಸಹಬಾಳ್ವೆಯ ಬದುಕಿಗೆ ಭಂಗ ಬರುತ್ತದೆ. ಆದ್ದರಿಂದ ಶಿಕ್ಷಣವನ್ನು ವ್ಯಾಪಾರದ ಮಾರುಕಟ್ಟೆಯಿಂದ ಹೊರತೆಗೆದು, ಸಾರ್ವಜನಿಕ ಹಕ್ಕಿನ ರೂಪದಲ್ಲಿ ಉಳಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ದೇಶಕ್ಕೆ ಆರ್ಥಿಕ ಬಿಕ್ಕಟ್ಟು ಎದುರಾಗಲಿದೆಯೇ, ನಾಯಕರ ಮಾತು ಎಚ್ಚರಿಕೆಯ ಗಂಟೆಯೇ?

ವಿದೇಶಾಂಗ ನೀತಿ ಗೊತ್ತಿಲ್ಲದ ಜೈಶಂಕರ್‌, ಬಡವರು ಹೇಗೆ ಬದುಕುತ್ತಿದ್ದಾರೆ ಎಂದು ಅರಿಯದ...

ಈ ದಿನ ಸಂಪಾದಕೀಯ | ಹೆಣ್ಣುಮಕ್ಕಳ ಹತ್ಯೆ ಅತ್ಯಾಚಾರಗಳ ಬಗ್ಗೆ ನಿಮಗೆ ʼಕಲ್ಚರಲ್ ಶಾಕ್ʼ ಆಗೋದು ಯಾವಾಗ ಮೋದೀಜಿ?

ಜಂತರ್‌ ಮಂತರ್‌ನಲ್ಲಿ ಹದಿಹರೆಯದ ಬಾಲಕಿಯೊಬ್ಬಳ ಮಾತು ಕೇಳಿ ‘ಕಲ್ಚರಲ್ ಶಾಕ್’ ಅನುಭವಿಸುವಷ್ಟು...

ಈ ದಿನ ಸಂಪಾದಕೀಯ | ಬರ, ಸರ್ವಪಕ್ಷ ನಿಯೋಗ ಮತ್ತು ರಾಜಕಾರಣಿಗಳ ಕಪಟ ನಾಟಕ

ಯಾವ ಪಕ್ಷ ಅಧಿಕಾರದಲ್ಲಿದ್ದರೂ, ಯಾರೇ ಮುಖ್ಯಮಂತ್ರಿಗಳಾಗಿದ್ದರೂ ಪ್ರಕೃತಿ ವಿಕೋಪದಿಂದ ಪಾರಾಗುವುದು ಸಾಧ್ಯವಿಲ್ಲ....

ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ಕೊಲೆಗಾರ, ‘ಮೋಶಾ’ ಸೂತ್ರದ ಬೊಂಬೆ ಗ್ಯಾನೇಶ್ ಕುಮಾರ್ ವಜಾಗೊಳ್ಳಬೇಕು!

ಮೋದಿ-ಅಮಿತ್ ಶಾರ 'ಅಧಿಕಾರದಾಹ'ಕ್ಕೆ ಇಡೀ ಚುನಾವಣಾ ಆಯೋಗವನ್ನೇ ಬಲಿಪಶು ಮಾಡಿ, ದೇಶದ...