ಈ ದಿನ ಸಂಪಾದಕೀಯ | ಅಧಿಕಾರಸ್ಥರ ಅತಿಯಾಸೆಗೆ ಬಿಡದಿ ರೈತರು ಬಲಿಯಾಗಬೇಕೇ?

Date:

ಬಿಡದಿ ಟೌನ್‌ಶಿಪ್ ಯೋಜನೆ ಕೇವಲ ನಗರಾಭಿವೃದ್ಧಿಯ ಪ್ರಶ್ನೆಯಲ್ಲ. ಸರ್ಕಾರ ಇದನ್ನು ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡುವ ಹಾಗೂ ಯೋಜಿತ ನಗರೀಕರಣಕ್ಕೆ ಅಗತ್ಯವಾದ ಹೆಜ್ಜೆ ಎಂದು ಸಮರ್ಥಿಸಿಕೊಂಡರೆ; ಬಿಡದಿಯ ಕೃಷಿಕರು, ಕೃಷಿ ಕಾರ್ಮಿಕರು ಮತ್ತು ಸ್ಥಳೀಯರು ಇದನ್ನು ಭೂಮಿ ಮತ್ತು ಬದುಕಿನ ಪ್ರಶ್ನೆ ಎನ್ನುತ್ತಿದ್ದಾರೆ.

ಕರ್ನಾಟಕ ಸರ್ಕಾರವು ಬೆಂಗಳೂರು ನಗರದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಹಾಗೂ ಯೋಜಿತ ನಗರೀಕರಣಕ್ಕೆ ಉತ್ತೇಜನ ನೀಡಲು ಬಿಡದಿ ಪ್ರದೇಶದಲ್ಲಿ ಹೊಸ ಟೌನ್‌ಶಿಪ್ ಅಭಿವೃದ್ಧಿ ಯೋಜನೆಯನ್ನು ಮುಂದಿಟ್ಟಿದೆ.

- Advertisement -

ಇದೇನು ಹೊಸದಲ್ಲ, ಎಚ್.ಡಿ. ಕುಮಾರಸ್ವಾಮಿ, ಯಡಿಯೂರಪ್ಪ, ಸಿದ್ದರಾಮಯ್ಯನವರ ಸರ್ಕಾರವಿದ್ದಾಗಲೇ ಈ ಬಗ್ಗೆ ಪ್ರಸ್ತಾಪಿಸಲಾಗಿತ್ತು. ವಿರೋಧ ವ್ಯಕ್ತವಾದ್ದರಿಂದ ಕೈಬಿಡಲಾಗಿತ್ತು. ಈಗ ಬೆಂಗಳೂರು ನಗರ ಬೆಳೆದಂತೆಲ್ಲ, ಅದರ ಮೇಲಿನ ಒತ್ತಡ ಹೆಚ್ಚಾದಂತೆಲ್ಲ, ಟೌನ್‌ಶಿಪ್ ನೆಪದ ವಿಸ್ತರಣೆ ಮತ್ತೆ ಮುನ್ನೆಲೆಗೆ ಬಂದಿದೆ. ಬಿಡದಿ ಟೌನ್‌ಶಿಪ್‌ಗಾಗಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದನ್ನು ಸರ್ಕಾರ ಅಭಿವೃದ್ಧಿ ಎನ್ನುತ್ತಿದೆ, ಹೊಸ ಅವಕಾಶಗಳು ತೆರೆಯಲಿವೆ ಎಂದು ಸಮರ್ಥಿಸಿಕೊಳ್ಳುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗುಳಿಯದೆ, ಕರಾವಳಿ ಭಾಗದ ದಶಕಗಳ ಬೇಡಿಕೆಗಳಿಗೆ ಜೀವ ನೀಡುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ. ರಸ್ತೆ ಮತ್ತು ಹೆದ್ದಾರಿಗಳ ದುರಸ್ತಿ, ಮಂಗಳೂರು...

“ಪವಿತ್ರ ಸ್ಥಳಗಳ ಮೇಲೆ ದಾಳಿ” ಹೆಸರಿನಲ್ಲಿ ಸೌದಿ ಅರೇಬಿಯಾ...

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯವು ಅತ್ಯಂತ ಸಂಕೀರ್ಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇಸ್ರೇಲ್ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಯೆಮೆನ್‌ನ ಹೌತಿ ಪಡೆಗಳು (ಅನ್ಸಾರ್ ಅಲ್ಲಾ) ಉಡಾವಣೆ ಮಾಡುತ್ತಿರುವ ಕ್ಷಿಪಣಿಗಳು ಹಾಗೂ ಡ್ರೋನ್‌ಗಳು...

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ ಅರೇಬಿಯಾ ಮತ್ತು ಕೆಂಪು ಸಮುದ್ರದ ಭದ್ರತಾ ಸಮೀಕರಣಗಳ ಕೇಂದ್ರದಲ್ಲಿ ನಿಂತಿದ್ದಾರೆ. ಮೆಕ್ಕಾವನ್ನೇ ಗುರಿಯಾಗಿಸಿ ಡ್ರೋನ್ ಕಳುಹಿಸಲಾಗಿದೆ ಎಂಬ ಸೌದಿ ಆರೋಪದ...

ಬೆಂಗಳೂರು ನಗರ ಇಂದು ಜನಸಂಖ್ಯೆ, ವಾಹನ ದಟ್ಟಣೆ, ವಸತಿ ಸಮಸ್ಯೆ ಮತ್ತು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಬಿಡದಿಯಲ್ಲಿ ಉದ್ಯೋಗ, ವಸತಿ ಮತ್ತು ಸೇವಾ ಸೌಲಭ್ಯಗಳನ್ನು ಒಳಗೊಂಡ ಸಮಗ್ರ ಟೌನ್‌ಶಿಪ್ ನಿರ್ಮಾಣವಾದರೆ, ಜನಸಂಖ್ಯೆಯ ಒಂದು ಭಾಗವನ್ನು ಅಲ್ಲಿಗೆ ಸೆಳೆಯುವ ಸಾಧ್ಯತೆ ಇದೆ. ಹೊಸ ಟೌನ್‌ಶಿಪ್‌ಗಳು ಸಾಮಾನ್ಯವಾಗಿ ಕೈಗಾರಿಕೆ, ಐಟಿ ಪಾರ್ಕ್, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ವ್ಯಾಪಾರ ಕೇಂದ್ರಗಳನ್ನು ಆಕರ್ಷಿಸುತ್ತವೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಮತ್ತು ಆ ಭಾಗದ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಲಿದೆ ಎನ್ನುತ್ತಿದೆ ಸರ್ಕಾರ.

ಇದು ನಿಜ. ಆದರೆ, ಬಿಡದಿ ಟೌನ್‌ಶಿಪ್ ಯೋಜನೆ ಕೇವಲ ನಗರಾಭಿವೃದ್ಧಿಯ ಪ್ರಶ್ನೆಯಲ್ಲ. ಸರ್ಕಾರ ಇದನ್ನು ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡುವ ಹಾಗೂ ಯೋಜಿತ ನಗರೀಕರಣಕ್ಕೆ ಅಗತ್ಯವಾದ ಹೆಜ್ಜೆ ಎಂದು ಸಮರ್ಥಿಸಿಕೊಂಡರೆ; ಬಿಡದಿಯ ಕೃಷಿಕರು, ಕೃಷಿ ಕಾರ್ಮಿಕರು ಮತ್ತು ಸ್ಥಳೀಯರು ಇದನ್ನು ಭೂಮಿ ಮತ್ತು ಬದುಕಿನ ಪ್ರಶ್ನೆ ಎನ್ನುತ್ತಿದ್ದಾರೆ. ಬಾಯಿಲ್ಲದವರ ಮೇಲೆ ಬಲಿಷ್ಠರ ದಾಳಿ ಎಂದು ವ್ಯಾಖ್ಯಾನಿಸುತ್ತಿದ್ದಾರೆ.

ಇದನ್ನು ಓದಿದ್ದೀರಾ?: RSSಗೆ ಹೊಣೆಗಾರಿಕೆಯ ಭಯವೇ ಅಥವಾ ಸೈದ್ಧಾಂತಿಕ ಹಠವೇ?

ಅಕಸ್ಮಾತ್ ಅಧಿಕಾರಸ್ಥರ ಆಸೆಯಂತೆ ಭೂಸ್ವಾಧೀನವಾದರೆ, ಫಲವತ್ತಾದ ಕೃಷಿಭೂಮಿಗಳು ನಗರೀಕರಣದ ಒತ್ತಡಕ್ಕೆ ಸಿಲುಕುವ ಅಪಾಯವಿದೆ. ಕೆರೆಗಳು, ಜಲಮೂಲಗಳು, ಅರಣ್ಯ ಪ್ರದೇಶಗಳು ಮತ್ತು ಭೂಗರ್ಭ ಜಲದ ಮೇಲೆ ನಗರೀಕರಣದ ಒತ್ತಡ ಹೆಚ್ಚಾಗಬಹುದು. ಗ್ರಾಮೀಣ ಪ್ರದೇಶಗಳು ವೇಗವಾಗಿ ನಗರೀಕರಣಗೊಂಡಾಗ ಸ್ಥಳೀಯ ಸಂಸ್ಕೃತಿ, ಸಮುದಾಯ ಸಂಬಂಧಗಳು ಮತ್ತು ಪರಂಪರೆಯ ಜೀವನಶೈಲಿ ಬದಲಾಗಬಹುದು. ಅದನ್ನು ನಂಬಿದ, ಪಾಲಿಸಿಕೊಂಡು ಬಂದ ಅವರ ಬದುಕು ಬರಡಾಗಬಹುದು.

ಒಮ್ಮೆ ಕೃಷಿಭೂಮಿ ಕಳೆದುಕೊಂಡರೆ ಅದನ್ನು ಮರಳಿ ಪಡೆಯುವುದು ಮತ್ತೆ ಹುಟ್ಟಿ ಬಂದರೂ ಸಾಧ್ಯವಿಲ್ಲ ಎನ್ನುವುದು ರೈತರಿಗಷ್ಟೇ ಗೊತ್ತಿರುವ ಸತ್ಯ. ಅಕಸ್ಮಾತ್ ಭೂಸ್ವಾಧೀನವಾದರೆ, ಸೂಕ್ತ ಪರಿಹಾರ ಸಿಗದಿದ್ದರೆ, ಪುನರ್ವಸತಿ ಕಲ್ಪಿಸದಿದ್ದರೆ ರೈತರು ತಮ್ಮ ಸಾಂಪ್ರದಾಯಿಕ ಜೀವನೋಪಾಯವನ್ನು ಕಳೆದುಕೊಳ್ಳಬಹುದು. ಒಂದು ವೇಳೆ ಸಮಯಕ್ಕೆ ಸರಿಯಾಗಿ ಹಣ ಸಿಕ್ಕರೂ, ಅದನ್ನು ಯೋಗ್ಯರೀತಿಯಲ್ಲಿ ಬಳಸಿಕೊಳ್ಳುವ ಬುದ್ಧಿವಂತಿಕೆಯಿಲ್ಲದೆ ಬದುಕು ಬೀದಿಗೆ ಬೀಳಬಹುದು. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಭೂಮಿ ಬಿಟ್ಟುಕೊಟ್ಟ ದೇವನಹಳ್ಳಿ ಸುತ್ತಮುತ್ತ ರೈತರ ಇಂದಿನ ಸ್ಥಿತಿಯನ್ನು ಧ್ಯಾನಿಸುವ ಅಗತ್ಯವಿದೆ. ಕೇವಲ 20 ವರ್ಷಗಳ ಅಂತರದಲ್ಲಿ ಅಂದಿನ ಭೂಮಾಲೀಕ ರೈತ, ಇಂದು ಭಿಕಾರಿಯಾಗಿದ್ದಾನೆ. ಅವನದೇ ಭೂಮಿ ಮೇಲೆ ಎದ್ದುನಿಂತ ಗಗನಚುಂಬಿ ಕಟ್ಟಡಗಳಲ್ಲಿ ಭದ್ರತಾ ಸಿಬ್ಬಂದಿಯಾಗಿ, ಗಿಡಗಳಿಗೆ ನೀರುಣಿಸುವ, ಕಸ ಗುಡಿಸುವ, ಕಾರು ತೊಳೆಯುವ ದಿನಗೂಲಿ ಕಾರ್ಮಿಕನಾಗಿ ಬದಲಾಗಿದ್ದಾನೆ.

ಇದು ಆಳುವ ಸರ್ಕಾರಕ್ಕೆ ತಿಳಿಯದ ವಿಷಯವಲ್ಲ. ಆದರೂ ಟೌನ್‌ಶಿಪ್ ನಿರ್ಮಾಣಕ್ಕಾಗಿ ಒಟ್ಟು 7,481 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಈ ಪ್ರಾಜೆಕ್ಟ್‌ಗಾಗಿ ಬಿಡದಿ ಹೋಬಳಿಯ ಒಂಬತ್ತು ಗ್ರಾಮಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ಸುಮಾರು 518 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ.

ಭೂಮಾಲೀಕರಾದ ನಮ್ಮನ್ನು ಕೇಳದೆ ಅಧಿಸೂಚನೆ ಹೊರಡಿಸಿದ ಸರ್ಕಾರದ ವಿರುದ್ಧ ಆಕ್ರೋಶಗೊಂಡ ಈ ಭಾಗದ ರೈತರು, ಬದುಕಿಗೆ ಆಧಾರವಾದ ಭೂಮಿ ಬಿಟ್ಟುಕೊಡುವುದಿಲ್ಲವೆಂದು ಪ್ರತಿಭಟನೆಗೆ ಇಳಿದಿದ್ದಾರೆ. ಕೆಲ ಸಂಘ-ಸಂಸ್ಥೆಗಳು ರೈತರ ಬೆನ್ನಿಗೆ ನಿಂತು ಬೆಂಬಲಿಸುತ್ತಿವೆ. ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಪತ್ರ ಬರೆದು ಪ್ರಾಜೆಕ್ಟ್ ತಡೆಹಿಡಿಯಲು ಮನವಿ ಮಾಡಿಕೊಳ್ಳಲಾಗಿದೆ. ಧರಣಿನಿರತ ರೈತರೊಂದಿಗೆ ಈಗ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು, ಕೊರಳಿಗೆ ಹಸಿರು ಟವಲ್‌ ಸುತ್ತಿಕೊಂಡು, ಸರ್ಕಾರದ ವಿರುದ್ಧ ಕೂಗಾಡುತ್ತಿದ್ದಾರೆ. ‘ಇದು ಸಾರ್ವಜನಿಕ ಹಿತಾಸಕ್ತಿಯ ಯೋಜನೆಯಲ್ಲ, ಅಧಿಕಾರ, ರಾಜಕೀಯ ಮತ್ತು ರಿಯಲ್ ಎಸ್ಟೇಟ್ ಹಿತಾಸಕ್ತಿಗಳ ಸಂಗಮ’ವೆಂದು ಟೌನ್‌ಶಿಪ್ ಹಿಂದಿನ ಹುನ್ನಾರವನ್ನು ಬಯಲುಗೊಳಿಸುತ್ತಿದ್ದಾರೆ.

ಇಂದು ರೈತರ ಪರ ನಿಂತು ಆಳುವ ಸರ್ಕಾರದ ಟೌನ್‌ಶಿಪ್ ಯೋಜನೆ ವಿರೋಧಿಸುತ್ತಿರುವ ಬಿಜೆಪಿಯ ಯಡಿಯೂರಪ್ಪ ಮತ್ತು ಜೆಡಿಎಸ್ ಕುಮಾರಸ್ವಾಮಿಯವರೇ ಈ ಹಿಂದೆ, ಬೆಂಗಳೂರು ಸುತ್ತಮುತ್ತ ಐದು ಟೌನ್‌ಶಿಪ್ ಮಾಡಲು ಮುಂದಾಗಿದ್ದರು. ಅದರಲ್ಲೂ ಬಿಡದಿಯಿಂದಲೇ ಗೆದ್ದ ಕುಮಾರಸ್ವಾಮಿಯವರು, ಟೌನ್‌ಶಿಪ್‌ಗೆ 400 ಕೋಟಿ ರೂಪಾಯಿ ಠೇವಣಿ ಇಟ್ಟಿದ್ದರು. ಆದರೆ ಆಗ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್, ರೈತರ ಪರ ನಿಂತು, ಯೋಜನೆಯನ್ನು ಬಲವಾಗಿ ವಿರೋಧಿಸಿತ್ತು. ಅದರ ಫಲವಾಗಿ ಗೆಜೆಟ್ ನೋಟಿಫಿಕೇಶನ್ ಆಗಿದ್ದರೂ, ಭೂಮಿ ಖರೀದಿ ಕೈಬಿಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಈಗ ಅದೇ ಕಾಂಗ್ರೆಸ್ ಅಧಿಕಾರದಲ್ಲಿದೆ, ಆಗ ವಿರೋಧಿಸಿದ್ದ ಬಿಡದಿ ಟೌನ್‌ಶಿಪ್ ಯೋಜನೆಯನ್ನೇ ಕಾಂಗ್ರೆಸ್ ಮಾಡಲು ಮುಂದಾಗಿದೆ.

ಇದನ್ನು ಓದಿದ್ದೀರಾ?: ಶೇ. 100 ಎಥೆನಾಲ್ ಇಂಧನ ಬಳಕೆಯಿಂದ ಯಾರಿಗೆ ಲಾಭ?

ಬಿಜೆಪಿ, ಜೆಡಿಎಸ್, ಕಾಂಗ್ರೆಸ್- ಪಕ್ಷಾತೀತವಾಗಿ ಎಲ್ಲರೂ ಟೌನ್‌ಶಿಪ್ ಪರವಾಗಿದ್ದಾರೆ. ಅಧಿಕಾರದ ಬಲದಿಂದ ಬಡ ರೈತರ ಭೂಮಿ ಕಬಳಿಸಲು ಹೊಂಚು ಹಾಕುತ್ತಿದ್ದಾರೆ. ಟೌನ್‌ಶಿಪ್ ಯೋಜನೆಯ ನೆಪದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮುಖ್ಯವಾಗಿದೆ. ಕೇಂದ್ರ ಸಚಿವ ಕುಮಾರಸ್ವಾಮಿಯವರು, ‘ಈಗೇನ್‌ ಮಾಡ್ಲಿಕ್ಕೆ ಹೊರಟಿದಾರಲ್ಲ ಬಿಡದಿ ಟೌನ್‌ಶಿಪ್, ಅದು 33 ಸಾವಿರ ಕೋಟಿ ಹಗರಣ’ ಎಂದಿದ್ದಾರೆ. ಅದಕ್ಕೆ ಕಾಂಗ್ರೆಸ್ ನಾಯಕರು, ‘ಕುಮಾರಸ್ವಾಮಿಯವರ ಕುಟುಂಬ 100 ಎಕರೆ ಬೇಸಾಮಿ ಆಸ್ತಿ ಹೊಂದಿದೆ. ಸರ್ಕಾರ ಭೂಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವಾಗ, ಪರಿಹಾರ ಪಡೆಯಲು ಅವರೇ ಅರ್ಜಿ ಹಾಕಿದ್ದಾರೆ’ ಎಂದು ದೂರುತ್ತಿದ್ದಾರೆ. ಜೊತೆಗೆ ಅವರ ಕೊಳಕುತನ ತೋರುವ ಪೋಸ್ಟರ್ ವಾರ್ ಕೂಡ ಬಹಿರಂಗವಾಗಿದೆ. ಒಟ್ಟಿನಲ್ಲಿ ಅವರ ಮಾತು ಮತ್ತು ವರ್ತನೆಗಳೇ ಅವರ ಸಾಚಾತನವನ್ನು ಬಯಲು ಮಾಡುತ್ತಿವೆ.

ಅಧಿಕಾರಸ್ಥರು ಹೀಗೆ ಬೆತ್ತಲಾದಷ್ಟೂ ಒಳ್ಳೆಯದು. ಅದು ಅಧಿಕಾರಸ್ಥರನ್ನು ಅನುಮಾನದಿಂದ ನೋಡುವಂತೆ ಮಾಡುತ್ತದೆ, ಅವರ ನಿಲುವು-ನಿರ್ಧಾರಗಳನ್ನು ಪ್ರಶ್ನಿಸುವಂತೆ ಪ್ರೇರೇಪಿಸುತ್ತದೆ. ನಿನ್ನೆ ದೇವನಹಳ್ಳಿಯ ರೈತರಿಗಾದದ್ದು ನಾಳೆ ಬಿಡದಿಯ ರೈತರಿಗೆ ಆಗುತ್ತದೆ ಎಂಬುದನ್ನು ಮನಗಾಣಿಸುತ್ತದೆ. ಅವರ ಪರ ದೃಢವಾಗಿ ನಿಲ್ಲುವಂತೆ ಮಾಡುತ್ತದೆ. ಈ ವಿರೋಧ ಗಟ್ಟಿಗೊಂಡ ಪರಿಣಾಮವಾಗಿಯೇ, ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ ರೈತರ ಭೂಸ್ವಾಧೀನವನ್ನು ಸರ್ಕಾರ ಕೈಬಿಟ್ಟಿದ್ದು. ಇಂತಹ ಹೋರಾಟ, ವಿರೋಧ ಇಲ್ಲೂ ಗಟ್ಟಿಗೊಳ್ಳಬೇಕಿದೆ. ಅಧಿಕಾರಸ್ಥರ ಅತಿಯಾಸೆಗೆ ಅಂಕುಶ ಹಾಕಬೇಕಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಮೈಮನಗಳನ್ನು ಪೊರಕೆಗಳನ್ನಾಗಿಸಿ ದುಡಿಯುವವರ ಕುರಿತು ಕೃಷ್ಣಭೈರೇಗೌಡರ ಮಾತುಗಳು ಸಂವೇದನಾಹೀನ!

ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಹಾಗೂ ಪಂಚಮ ಎಂಬುದಾಗಿ ಮನುಷ್ಯರನ್ನು ಏಣಿಶ್ರೇಣಿಗಳಲ್ಲಿ...

ಈ ದಿನ ಸಂಪಾದಕೀಯ | ತಾಪಮಾನ ಏರಿಕೆಗೆ ಬದುಕಿನ ಬೆಲೆ ತೆರುವವರು ಯಾರು?

ಭೂಮಿಗೆ ನಮ್ಮ ಅಗತ್ಯವಿಲ್ಲ, ನಮಗೆ ಭೂಮಿಯ ಅಗತ್ಯವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು....

ಈ ದಿನ ಸಂಪಾದಕೀಯ | ಜನಪೀಡಕ ಕೇಸರಿ ಕೇಡಿಗಳಿಗೆ ಕಡೆಗಾಲ ಬಂದಿದೆ, ಎಚ್ಚರಗೊಳ್ಳುತ್ತಿದೆ ಜನಶಕ್ತಿ!

ಪಾಡ್‌ಕಾಸ್ಟ್‌ ಒಂದರಲ್ಲಿ ಮಾತನಾಡಿದ ಸ್ವತಂತ್ರ ಭಾರದ್ವಾಜ್ ಎಂಬ ವ್ಯಕ್ತಿ ನೀಡಿದ ಹೇಳಿಕೆಯೀಗ...

ಈ ದಿನ ಸಂಪಾದಕೀಯ | ಗುಳೆ ಹೊಸದಲ್ಲ, ಪರ್ಯಾಯ ಹುಡುಕದಿರುವುದು ಸರ್ಕಾರದ ವೈಫಲ್ಯವಲ್ಲವೇ?

ಗುಳೆ ಸಮಸ್ಯೆಯನ್ನು ಕೇವಲ ಕೃಷಿಕರ, ಬಡ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ...