ಹೀರೋ ಆರಾಧನೆ ವಿರುದ್ಧ ಧ್ವನಿ ಎತ್ತಿದ ನಿತ್ಯಾ ಮೆನನ್

Date:

‘ಮಾಸ್ ಸಿನಿಮಾ’ ಎಂದು ಕರೆಯಲ್ಪಡುವ ಕೆಲ ಚಿತ್ರಗಳು ಧನಾತ್ಮಕ ಬದಲಾವಣೆ ತರಬಹುದಾದ ಎಲ್ಲಾ ವಿಚಾರಗಳನ್ನು ತಳ್ಳಿಹಾಕುತ್ತವೆ. ಇವು ಒಬ್ಬ ವ್ಯಕ್ತಿಯ ವೈಭವೀಕರಣಕ್ಕಾಗಿ ಹುಟ್ಟಿಕೊಳ್ಳುತ್ತವೆ, ಪುರುಷವಾದಿ ಮನೋಭಾವದಿಂದ ಕೂಡಿರುವ, ಅತಿ ನಂಜುಭರಿತ ಎಲಿಮೆಂಟ್ಸ್‌ಗಳನ್ನೇ ತುಂಬಿಕೊಂಡ ಇವು ಹಲವು ಆಯಾಮಗಳಲ್ಲಿ ಮನುಷ್ಯವಿರೋಧಿ ಚಿತ್ರಗಳೇ ಆಗಿರುತ್ತವೆ. ಈ ಕಹಿ ಸತ್ಯವನ್ನು ನಿಷ್ಠುರವಾಗಿ ಹೇಳಿದವರು ಬಹುಭಾಷಾ ನಟಿ ನಿತ್ಯಾ ಮೆನನ್‌.

- Advertisement -

ಭಾರತೀಯ ಸಿನೆಮಾ ಜಗತ್ತಿನಲ್ಲಿ “ಮಾಸ್” ಎಂಬ ಪದಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಜನಪ್ರಿಯ ಹೀರೋ, ಭರ್ಜರಿ ಫೈಟ್, ಭಾರೀ ಡೈಲಾಗ್, ಅಬ್ಬರದ ಹಿನ್ನೆಲೆ ಸಂಗೀತ, ಬಿಡುಗಡೆಗೂ ಮೊದಲು ಸಿಕ್ಕಾಪಟ್ಟೆ ಹೈಪ್, ಅಭಿಮಾನಿಗಳ ಕೂಗಾಟ.. ಇವೆಲ್ಲ ಸೇರಿ ನಿರ್ಮಾಣವಾಗುವ ಆ ಚಿತ್ರವನ್ನು ಸಿನಿಪ್ರಿಯರು “ಮಾಸ್ ಎಂಟರ್ಟೈನ್ಮೆಂಟ್” ಎಂಬ ಟ್ಯಾಗ್‌ ಅಂಟಿಸುತ್ತಾರೆ. ಆದರೆ ಇದೇ ಒಂದು ಮಾಸ್ ಸಿನೆಮಾದ ಒಳಹೊಕ್ಕು ನೋಡಿದರೆ, ಅದರೊಳಗೆ ಕಟ್ಟಿರುವ ಕೆಲ ಸಂಕುಚಿತ, ಸಂಪ್ರದಾಯವಾದಿ, ಗಂಡಾಳಿಕೆಯ ಗೂಡುಗಳು ಕಾಣಿಸುತ್ತವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ –...

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ಚುನಾವಣೆಗೂ ಗಂಭೀರ ಸವಾಲು ಒಡ್ಡುವಂತಿವೆ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ನಂದಿಗ್ರಾಮದ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ...

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್ ಸರ್ಕಲ್ಸ್' (Local Circles) ನಡೆಸಿದ 32,000ಕ್ಕೂ ಹೆಚ್ಚು ಜನರ ಸಮೀಕ್ಷೆ ಬಟಾಬಯಲು ಮಾಡಿದೆ. ಸಮೀಕ್ಷೆಯ ಪ್ರಕಾರ, ಕೇವಲ ಶೇ.17ರಷ್ಟು ವರ್ತಕರು...

ಸಿನಿಮಾ, ಸಾಮಾನ್ಯ ಮನುಷ್ಯನ ಜೀವನದ ಒಂದು ಭಾಗವಿದ್ದಂತೆ. ಸಿನಿಮಾ ಕನಸುಗಳನ್ನು ಬೆಳೆಸಬಲ್ಲದು, ಸಾಮಾಜಿಕ ಬದಲಾವಣೆಗಳನ್ನು ಉತ್ತೇಜಿಸಬಲ್ಲದು ಮತ್ತು ಕೆಲವೊಮ್ಮೆ ಸಮಾಜದ ಕತ್ತಲನ್ನೂ ತೊಳೆಯುವ ಶಕ್ತಿ ಅದಕ್ಕಿರುತ್ತದೆ. ಆದರೆ ‘ಮಾಸ್ ಸಿನಿಮಾ’ ಎಂದು ಕರೆಯಲ್ಪಡುವ ಕೆಲ ಚಿತ್ರಗಳು ಧನಾತ್ಮಕ ಬದಲಾವಣೆ ತರಬಹುದಾದ ಎಲ್ಲಾ ವಿಚಾರಗಳನ್ನ ತಳ್ಳಿಹಾಕುತ್ತದೆ. ಇವು ಒಬ್ಬ ವ್ಯಕ್ತಿಯ ವೈಭವೀಕರಣಕ್ಕಾಗಿ ಹುಟ್ಟಿಕೊಳ್ಳುತ್ತವೆ, ಪುರುಷವಾದಿ ಮನೋಭಾವದಿಂದ ಕೂಡಿರುವ, ಅತಿ ನಂಜುಭರಿತ ಎಲಿಮೆಂಟ್ಸ್‌ಗಳನ್ನೇ ತುಂಬಿಕೊಂಡ ಇವು ಹಲವು ಆಯಾಮಗಳಲ್ಲಿ ಮನುಷ್ಯವಿರೋಧಿ ಚಿತ್ರಗಳೇ ಆಗಿರುತ್ತವೆ. ಈ ಕಹಿ ಸತ್ಯವನ್ನು ನಿಷ್ಠುರವಾಗಿ ಹೇಳಿದವರು ಬಹುಭಾಷಾ ನಟಿ ನಿತ್ಯಾ ಮೆನನ್‌.

“ಮಾಸ್ ಸಿನಿಮಾ ಒಬ್ಬರಿಗಾಗಿ ಮಾತ್ರ ರಚಿಸಲ್ಪಡುತ್ತದೆ. ಅದು ಆ ವ್ಯಕ್ತಿಯನ್ನು ಹೀರೋ ಆಗಿ ಕಾಣಿಸುವುದಕ್ಕಾಗಿ ಮಾತ್ರ. ಎಲ್ಲವೂ ಅವರ ಸುತ್ತ ತಿರುಗುತ್ತದೆ. ಅದು ಅತ್ಯಂತ ವಿಷಕಾರಿ. ಪುರುಷವಾದಿ ಎನ್ನುವುದರಲ್ಲಿ ಹಲವು ತಪ್ಪುಗಳಿರುತ್ತೆ” ಎಂದು ಅವರು ಹೇಳಿದ್ದಾರೆ. ಈ ಧ್ವನಿ ಆಕೆಯ ಅಭಿಪ್ರಾಯ ಮಾತ್ರವಲ್ಲದೆ ಸಮಕಾಲೀನ ಸಿನಿಮಾ ಇಂಡಸ್ಟ್ರಿಯ ದೊಡ್ಡದೊಂದು ಸಮಸ್ಯೆಯನ್ನು ಎತ್ತಿ ತೋರುತ್ತದೆ.

ಈಗಾಗಲೇ ಜನಜನಿತನಾಗಿರುವ ಹೀರೋನನ್ನು ದೇವರಂತೆ ಚಿತ್ರಿಸುವುದೇ ಈ ಮಾಸ್ ಸಿನಿಮಾಗಳ ಮೂಲ ಲಕ್ಷಣ. ರಜನೀಕಾಂತ್, ವಿಜಯ್, ಪ್ರಭಾಸ್, ಅಜಿತ್ ಅಥವಾ ಮೈಕಲ್ ಜಾಕ್ಸನ್‌ರಂತೆಯೇ, ಈ ಹೀರೋಗಳು ಚಿತ್ರದ ಕೇಂದ್ರಬಿಂದು. ಇತರ ಪಾತ್ರಗಳು, ವಿಶೇಷವಾಗಿ ಮಹಿಳಾ ಪಾತ್ರಗಳು, ಕೇವಲ ಚಿತ್ರಕ್ಕೆ ಅಲಂಕಾರಿಕ ಅಥವಾ ಹೀರೋನನ್ನ ಉನ್ನತೀಕರಿಸುವ ಸಾಧನಗಳಾಗಿರುತ್ತವೆ. ಎಲ್ಲವೂ ಹೀರೋ ಸುತ್ತ ತಿರುಗುವುದರಿಂದ ಚಿತ್ರದ ಕಥೆಯನ್ನು, ಸಂಭಾಷಣೆಗಳನ್ನು, ಹಾಡುಗಳನ್ನು, ಫೈಟ್ ಸೀನ್ಗಳನ್ನು ಸಹ ಹೀರೋ ಸೇವೆಗೆ ಸಮರ್ಪಿಸಲಾಗುತ್ತದೆ.

ಉದಾಹರಣೆಗೆ, ‘ಬಾಹುಬಲಿ’ ಸರಣಿಯನ್ನು ತೆಗೆದುಕೊಳ್ಳಿ. ʼಬಾಹುಬಲಿʼಯಾಗಿ ಪ್ರಭಾಸ್, ಒಬ್ಬ ಮಹಾನ್ ಯೋಧನಾಗಿ, ರಾಜನಾಗಿ, ಪ್ರೇಮಿಯಾಗಿ ಎಲ್ಲ ಪಾತ್ರಗಳಲ್ಲೂ ಅಚ್ಚುಕಟ್ಟಾಗಿ ಚಿತ್ರಿಸಲ್ಪಟ್ಟಿದ್ದಾರೆ. ಆದರೆ ಅವರ ಸುತ್ತಲಿನ ಮಹಿಳಾ ಪಾತ್ರಗಳು? ಅನುಷ್ಕಾ ಅಭಿನಯಿಸಿದ ದೇವಸೇನಾ ಕೇವಲ ಬಾಹುಬಲಿಯ ಪ್ರೇಮಿಯಾಗಿ, ರಾಜನ ಗುಂಪಿನಲ್ಲಿ ಬಂಧಿಯಾಗಿ ಕಾಣಿಸುತ್ತಾಳೆ. ಇಲ್ಲಿ ಕಥೆ ಬಾಹುಬಲಿಯ ವೀರತ್ವದ ಮೇಲೆ ಕೇಂದ್ರೀಕರಿಸಿದೆಯೇ ಹೊರತು, ಸಾಮಾಜಿಕ ಸಂದರ್ಭಗಳು ಅಥವಾ ಮಹಿಳಾ ಸ್ವಾತಂತ್ರ್ಯದಂತಹ ವಿಷಯಗಳಲ್ಲಿ ಹಿಂದೆ ಬಿದ್ದಿದೆ.

ಈ ರೀತಿಯ ಸಿನೆಮಾಗಳು ಸಮಾಜದಲ್ಲಿ ‘ಸೂಪರ್‌ಮ್ಯಾನ್’ ಕಲ್ಪನೆಯನ್ನು ಬೆಳೆಸುತ್ತವೆ. ಹೀರೋ ಎಲ್ಲವನ್ನೂ ಉಳಿಸುತ್ತಾನೆ, ಏನು ಬೇಕಾದರೂ ಮಾಡುತ್ತಾನೆ ಎಂಬ ಭ್ರಮೆ ಸೃಷ್ಟಿಸುತ್ತವೆ. ಅದೇ ಭ್ರಮೆಯಲ್ಲಿ ನಾವು ಸಾಮಾಜಿಕ ಸಮಸ್ಯೆಗಳನ್ನು ಒಪ್ಪಿಕೊಳ್ಳುತ್ತೇವೆ. ಹೀರೋಗಳು ತಮ್ಮ ಚಿತ್ರಗಳಲ್ಲಿ ದೇವರು, ರಾಜ, ಯೋಧ… ಎಲ್ಲರೂ ಆಗಬಹುದು. ಇದರಿಂದ ಇತರ ಸಣ್ಣ ಪುಟ್ಟ ಕಲಾವಿದರಿಗೆ ಅವಕಾಶ ಕಡಿಮೆಯಾಗುತ್ತದೆ. ತಮ್ಮ ಪ್ರತಿಭೆ ಮೂಲಕ ಹೀರೋಯಿಸಂ ಬೇಸ್ಡ್‌ ಸಿನೆಮಾಗಳನ್ನು ಬೆಂಬಲಿಸುವುದಕ್ಕಿಂತಲೂ ಹೆಚ್ಚು ಸ್ವತಂತ್ರ ಪಾತ್ರಗಳನ್ನು ಕೆಲ ನಟಿಯರು ಹುಡುಕುತ್ತಾರೆ. ಅವರಲ್ಲಿ ನಿತ್ಯಾ ಕೂಡ ಒಬ್ಬರು.

ನಿತ್ಯಾ ಈ ಪ್ರವೃತ್ತಿಯನ್ನು ‘ಸೆಕ್ಸಿಸ್ಟ್’ ಎಂದು ಕರೆದಿದ್ದಾರೆ. ಅಂದರೆ ಪುರುಷವಾದಿ. ಮಾಸ್ ಸಿನಿಮಾಗಳು ಮಹಿಳಾ ಪಾತ್ರಗಳನ್ನು ಯಾವಾಗಲೂ ಒಂದೇ ರೀತಿಯಲ್ಲಿ ಚಿತ್ರಿಸುತ್ತವೆ. ಸೌಂದರ್ಯದ ಸಂಕೇತ, ಹೀರೋನನ್ನು ಪ್ರಶಂಸಿಸುವವಳು ಹೀಗೆ… ಇಲ್ಲೂ ಕೂಡ ಹೀರೋನ ಸುತ್ತಲೇ ಇರಬೇಕಾಗುತ್ತದೆ. ಇದು ಸಮಾಜದಲ್ಲಿನ ಪುರುಷಾಧಿಪತ್ಯವನ್ನು ಮತ್ತಷ್ಟು ಬಲಪಡಿಸುತ್ತದೆ. ಇನ್ನು ಕೆಲ ಸಿನಿಮಾಗಳು ಮಹಿಳಾ ಸ್ವಾತಂತ್ರ್ಯವನ್ನು ಬದಿಗೆ ಸರಿಸಿ ಮಹಿಳೆಯರನ್ನ ಕೆಲ ವಸ್ತುಗಳಂತೆ ಚಿತ್ರಿಸಿಬಿಡುತ್ತವೆ. ಇಲ್ಲಿ ಮಹಿಳೆಯರ ಆಯ್ಕೆಗಳು, ಆಕಾಂಕ್ಷೆಗಳು ಮುಖ್ಯವಾಗಲ್ಲ, ಅವುಗಳು ಹೀರೋಗೆ ಹೀರೋಯಿಸಂ ತೋರಿಸುವ ಸಾಧನಗಳಾಗುತ್ತವೆ. ಇದರಿಂದ ಪುರುಷ ಯುವ ಜನತೆ ನಾವು ಮಹಿಳೆಯರನ್ನು ‘ನಿಯಂತ್ರಿಸಬೇಕಾದವರು’ ಅನ್ನೋದನ್ನೇ ಕಲಿಯುತ್ತದೆ.

ಮಾಸ್ ಸಿನಿಮಾದ ಮತ್ತೊಂದು ದೊಡ್ಡ ಸಮಸ್ಯೆ ಅದರ ನಂಜು. ಒಬ್ಬ ಹೀರೋ ಹತ್ತಿಪ್ಪತ್ತು ಶತ್ರುಗಳನ್ನು ಕೊಂದುಹಾಕುತ್ತಾನೆ. ಇದನ್ನು ನೋಡುವ ಜನ ಹುಚ್ಚೆದ್ದು ಕುಣಿಯುತ್ತಾರೆ. ನಂಜನ್ನೂ ಗ್ಲಾಮರಸ್ ಆಗಿ ತೋರಿಸುವ ಈ ಕೆಟ್ಟ ಚಾಳಿ ನಿಜಜೀವನದಲ್ಲಿ ಹಿಂಸೆಯ ಸಂಸ್ಕೃತಿಯನ್ನು ಪೋಷಿಸುತ್ತದೆ. ಅದರಿಂದ ಪ್ರಭಾವಿತರಾದವರು ‘ನನ್ನ ಹಕ್ಕುಗಳಿಗಾಗಿ ಹಿಂಸೆ ಮಾಡಬೇಕು ಅಥವಾ ಹಿಂಸೆ ಕೊಡಬೇಕು’ ಎಂದು ಕಲಿಯುತ್ತಾರೆ. ಸಂಶೋಧನೆಗಳ ಪ್ರಕಾರ, ಇಂತಹ ಚಿತ್ರಗಳನ್ನು ನೋಡುವ ಯುವಕರು ಹಿಂಸಾತ್ಮಕ ವರ್ತನೆಯನ್ನು ಸ್ವೀಕಾರಾರ್ಹವೆಂದು ಭಾವಿಸುತ್ತಾರೆ. ಇದು ಮಹಿಳಾ ಹಿಂಸೆಯನ್ನು ಸಹ ಉತ್ತೇಜಿಸುತ್ತದೆ. ಏಕೆಂದರೆ ಹೀರೋ ‘ ತನ್ನ ಪ್ರೇಮಿಯನ್ನು ರಕ್ಷಿಸಲು’ ಹಿಂಸೆ ಮಾಡುತ್ತಾನೆ ಎಂಬ ಭ್ರಮೆ!

ಹಲವು ಸಿನಿಮಾಗಳು ಹಲವು ರೀತಿಯಲ್ಲಿ ಮನುಷ್ಯವಿರೋಧಿ ಅನ್ನೋದು ನಿತ್ಯಾ ಮೆನನ್ ಮಾತಿನ ಭಾವ. ಮಾಸ್ ಸಿನಿಮಾ ಮಾನವೀಯ ಮೌಲ್ಯಗಳನ್ನು ನಿರಾಕರಿಸುತ್ತದೆ. ಸಹಾನುಭೂತಿ, ಸಂವಾದ, ಸಾಮೂಹಿಕತೆ… ಇವುಗಳಿಲ್ಲದೆ, ಕೇವಲ ವೈಯಕ್ತಿಕ ವೀರತ್ವ ಮಾತ್ರ ಮಾಸ್ ಸಿನಿಮಾಗಳಲ್ಲಿ ಕಾಣಿಸುತ್ತದೆ. ನಿತ್ಯಾ ಟೀಕೆ ಮಾತ್ರ ಮಾಡಿಲ್ಲ; ಬದಲಾವಣೆಗಾಗಿ ಕೆಲಸ ಮಾಡಬೇಕು ಅಂತಲೂ ಆಶಿಸುತ್ತಿದ್ದಾರೆ.

ಮಲಯಾಳಂ ಸಿನಿಮಾದಲ್ಲಿ ‘ದೃಶ್ಯಂ’ ಅಥವಾ ‘ಮಂಜಮೇಲ್ ಬಾಯ್ಸ್’ರಂತಹ ಚಿತ್ರಗಳು ಇದಕ್ಕೆ ಉದಾಹರಣೆ. ಇಲ್ಲಿಗೆ ಹೀರೋ ಪ್ರಧಾನತೆ ಇಲ್ಲ, ಮಾನವೀಯ ಕಥೆಗಳು ಇವೆ. ಇಂತಹ ಚಿತ್ರಗಳು ಸಮಾಜವನ್ನು ಪ್ರಶ್ನಿಸುತ್ತವೆ, ಬದಲಾಯಿಸುತ್ತವೆ. ಸಿನಿಮಾ ಇಂಡಸ್ಟ್ರಿ, ನಿರ್ಮಾಪಕರು, ನಿರ್ದೇಶಕರು ಈ ಕಟು ಸತ್ಯವನ್ನು ಅಂಗೀಕರಿಸಬೇಕು. OTT ಪ್ಲಾಟ್‌ಫಾರಂಗಳು ಈ ಬದಲಾವಣೆಗೆ ಅವಕಾಶ ನೀಡುತ್ತಿವೆ. ನಿತ್ಯಾ ಮೆನನ್‌ ಅವರಂತಹ ನಟಿಯರು ಪ್ರೊಡ್ಯೂಸರ್ ಆಗಿ ಮುಂದುವರಿದರೆ, ಹೆಚ್ಚಿನ ವೈವಿಧ್ಯಮಯ ಚಿತ್ರಗಳು ಬರುತ್ತವೆ.

ನಿತ್ಯಾ ಮೆನನ್‌ ಬಗ್ಗೆ ಹೇಳಲೇಬೇಕು, ಆಕೆ ಅಪ್ಪಟ ಕನ್ನಡತಿ. ಕೇರಳ ಮೂಲದ ನಿತ್ಯಾ ಪೋಷಕರು ದಶಕಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ನಿತ್ಯಾ ಹುಟ್ಟಿ ಬೆಳೆದಿದ್ದು, ಶಿಕ್ಷಣ ಪೂರೈಸಿದ್ದು ಎಲ್ಲವೂ ಕನ್ನಡದ ನೆಲದಲ್ಲಿ. ಬೆಂಗಳೂರಿನಲ್ಲಿ ಆಡಿ ಬೆಳೆದ ಈ ಬೆಡಗಿಗೆ ಕನ್ನಡ ಓದಲು, ಬರೆಯಲು ಸುಲಲಿತ. ಹಲವು ಸಂದರ್ಶನಗಳಲ್ಲಿ ಆಕೆ ಹೆಮ್ಮೆಯಿಂದ ನಾನು ಕನ್ನಡದ ಹುಡುಗಿ ಎಂದು ಹೇಳಿಕೊಂಡಿದ್ದಾರೆ.

ಸಿನೆಮಾ ಅಂದರೆ ಒಬ್ಬ ವ್ಯಕ್ತಿಯನ್ನ ವೈಭವೀಕರಿಸುವ ವೇದಿಕೆಯಾಗಿರಬೇಕೇ? ಅಥವಾ ಮನುಷ್ಯರ ವೈವಿಧ್ಯಮಯ ಕಥೆಗಳನ್ನು ಹೇಳುವ ಕಲಾಮಾಧ್ಯಮವಾಗಿರಬೇಕೇ? ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯಾಣವೇ, ಬಹುಶಃ ಭಾರತೀಯ ಸಿನೆಮಾದ ಮುಂದಿನ ಅಧ್ಯಾಯವನ್ನು ನಿರ್ಧರಿಸಬಹುದು.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10 ದಿನಗಳಲ್ಲಿ ಘೋಷಣೆ – ಶಾಸಕ ಅಶೋಕ ಪಟ್ಟಣ

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ ಭವಿಷ್ಯ!

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ,...

ಈ ದಿನ ಕವಿತೆ | ಇಸ್ರೇಲಿನ ವಾಯುದಾಳಿಯ ರಾತ್ರಿಯಲಿ ಗಾಜಾ ತಾಯಿ ಏನು ಮಾಡುವಳು?

ಈ ಬಾರಿ ಪ್ಯಾಲೆಸ್ತೀನ್‌ನ ಕವಿ ಮೊಸಾಬ್ ಅಬು ತೋಹಾ ಅವರ ಕವನವನ್ನು...

ಎಐ ಯುಗದಲ್ಲಿ ನಿಜವಾದ ಬರಹಕ್ಕೆ ಎಲ್ಲಿದೆ ಸ್ಥಾನ?

ಎಐಯಿಂದ ಬರಹಗಾರರ ಸ್ಥಾನ ಉಳಿಯುತ್ತದೆಯೇ? ಎಂಬುದಲ್ಲ. ಬದಲಾಗಿ, ಎಐಯ ನೆರವಿನ ನಡುವೆಯೂ...