ಬಿರುಬಿಸಿಲಿಗೆ ಸಿಲುಕಿ ನರಳುತ್ತಿರುವ ಮನರೇಗಾ ಕಾರ್ಮಿಕರು: ಕೆಲಸದ ಪ್ರಮಾಣಕ್ಕೆ ಸಿಗದ ವಿನಾಯಿತಿ

Date:

ಕಾರ್ಮಿಕರ ಶ್ರಮವು ಮಾನವೀಯ ಮಿತಿಯೊಳಗೆ ಇರಬೇಕು. ಮನರೇಗಾ ಕಾರ್ಮಿಕರು ದೇಶದ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು. ಅವರ ಆರೋಗ್ಯವನ್ನು ರಕ್ಷಿಸದೆ ಅಭಿವೃದ್ಧಿ ಸಾಧ್ಯವಿಲ್ಲ. ಬಿಸಿಲಿನಲ್ಲಿ ಬೆಂದು, ಬೆವರಿನಲ್ಲಿ ನೆನೆದು ಕೆಲಸ ಮಾಡುತ್ತಿರುವ ಈ ಕಾರ್ಮಿಕರಿಗೆ ನಾವು ಕೃತಜ್ಞರಾಗಬೇಕು. ಅವರಿಗೆ ಯೋಗ್ಯವಾದ ಕೆಲಸದ ಪರಿಸ್ಥಿತಿ, ವಿಶ್ರಾಂತಿ ಮತ್ತು ರಕ್ಷಣೆ ಒದಗಿಸುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿ.

ಭಾರತದ ಗ್ರಾಮೀಣ ಭಾಗಗಳಲ್ಲಿ ಇಂದು ಸಾವಿರಾರು ಮನರೇಗಾ ಕಾರ್ಮಿಕರು ಬಿರುಬಿಸಿಲಿನಲ್ಲಿ ಬೆವರು ಸುರಿಸುತ್ತ, ತಮ್ಮ ಬದುಕಿನ ಹೋರಾಟವನ್ನು ಮುಂದುವರೆಸುತ್ತಿದ್ದಾರೆ. 45-50 ಡಿಗ್ರಿ ಸೆಲ್ಸಿಯಸ್‌ನ ತಾಪಮಾನದಲ್ಲಿ ಕಲ್ಲು ಒಡೆಯುವುದು, ರಸ್ತೆ ಸರಿಪಡಿಸುವುದು, ಕೆರೆಯಲ್ಲಿ ಹೂಳು ತೆಗೆಯುವುದು, ಗುಂಡಿಗಳನ್ನು ತೆಗೆಯುವುದು ಸೇರಿದಂತೆ ಬಯಲು ಪ್ರದೇಶದಲ್ಲೇ ಅವರ ದೈನಂದಿನ ಕೆಲಸ. ಆದರೆ ಈ ಕೆಲಸಕ್ಕೆ ಸೂಕ್ತವಾದ ರಕ್ಷಣೆ ಇಲ್ಲದೆ ಅವರು ನರಳುತ್ತಿದ್ದಾರೆ. ಕೆಲವೆಡೆ ಸಾವುಗಳು ಸಂಭವಿಸುತ್ತಿವೆ.

- Advertisement -

ಮನರೇಗಾ(Mahatma Gandhi National Rural Employment Guarantee Act) ಭಾರತ ಸರ್ಕಾರದ ಅತ್ಯಂತ ಮುಖ್ಯವಾದ ಗ್ರಾಮೀಣ ಉದ್ಯೋಗ ಯೋಜನೆ. ಪ್ರತಿ ಗ್ರಾಮೀಣ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಉದ್ಯೋಗವನ್ನು ಖಾತರಿಪಡಿಸುವ ಈ ಯೋಜನೆಯು ದೇಶದ ಅತಿದೊಡ್ಡ ಉದ್ಯೋಗ ಯೋಜನೆಯಾಗಿದೆ. ಆದರೆ ಈ ಯೋಜನೆಯ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬೇಸಿಗೆಯ ಬಿರುಬಿಸಿಲಿನಲ್ಲಿ ಕೆಲಸ ಮಾಡುವುದು ಅನಿವಾರ್ಯವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಕರ್ನಾಟಕ, ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಕಂಡುಬರುತ್ತಿದೆ.

Advertisements

ಗ್ರಾಮಗಳಲ್ಲಿ ಸ್ಥಳೀಯ ಕಾರ್ಮಿಕರು ಬೆಳಿಗ್ಗೆ 8ರಿಂದ ಮಧ್ಯಾಹ್ನ 2-3 ಗಂಟೆಯವರೆಗೆ ನೇರ ಬಿಸಿಲಿನಲ್ಲಿ ಕೆಲಸ ಮಾಡುತ್ತಾರೆ. ತಲೆಗೆ ಒಂದು ತುಂಡು ಬಟ್ಟೆ ಕಟ್ಟಿಕೊಂಡು, ನೀರು ತುಂಬಿದ ಪ್ಲ್ಯಾಸ್ಟಿಕ್ ಬಾಟಲ್ ಜತೆಗೆ ಅವರು ಕೆಲಸಕ್ಕೆ ಹೋಗುತ್ತಾರೆ. ಮಧ್ಯಾಹ್ನದ ಬಿಸಿಲಿನಲ್ಲಿ ಉರಿಯುವ ನೆಲದ ಮೇಲೆ ಕಲ್ಲು ಒಡೆಯುವುದು, ಮಣ್ಣು ತುಂಬುವುದು ಅವರಿಗೆ ದೈಹಿಕವಾಗಿ ಬಹಳ ಕಷ್ಟಕರವಾಗುತ್ತದೆ. ಹೀಟ್ ಸ್ಟ್ರೋಕ್, ಡಿಹೈಡ್ರೇಷನ್, ತಲೆಸುತ್ತು, ವಾಂತಿ ಇಂತಹ ಸಮಸ್ಯೆಗಳು ಸಾಮಾನ್ಯವಾಗಿವೆ. ಆದರೆ ಅವರಿಗೆ ಸೂಕ್ತವಾದ ವೈದ್ಯಕೀಯ ನೆರವು ಅಥವಾ ವಿಶ್ರಾಂತಿ ಸೌಲಭ್ಯಗಳು ದೊರಕದಿರುವುದು ವಿಷಾದನೀಯ.

ಗದಗ ಭಾಗದ ಕಾರ್ಮಿಕ ಮಹಿಳೆ ಗಂಗಮ್ಮ ಎಂಬುವವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಬಿಸಿಲಿನ ವೇಳೆ ಕೆಲಸದ ಪ್ರಮಾಣಕ್ಕೆ ವಿನಾಯಿತಿ ಇಲ್ಲದಿರುವುದು ಇನ್ನೊಂದು ದೊಡ್ಡ ಸಮಸ್ಯೆ. ಮನರೇಗಾ ನಿಯಮಗಳ ಪ್ರಕಾರ ಕೆಲಸದ ಸಮಯ 6 ಗಂಟೆಗಳಾಗಿರಬೇಕು. ಆದರೆ ವಾಸ್ತವದಲ್ಲಿ ಅನೇಕ ಸ್ಥಳಗಳಲ್ಲಿ 8-9 ಗಂಟೆಗಳ ಕೆಲಸ ನಡೆಯುತ್ತದೆ. ಬಿಸಿಲಿನ ಸಮಯದಲ್ಲಿ ಕೆಲಸ ಮಾಡುವುದನ್ನು ಕಡಿಮೆ ಮಾಡಲು ಬೆಳಿಗ್ಗೆ ಮತ್ತು ಸಂಜೆ ತಂಪುಹೊತ್ತಿನ ವೇಳೆ ಕೆಲಸವನ್ನು ಮಾಡಬಹುದು. ಆದರೆ ಕೇಂದ್ರ ಸರ್ಕಾರದ ಕಾರ್ಮಿಕ ವಿರೋದಿ ನೀತಿಗಳಿಂದಾಗಿ ಕಾರ್ಮಿಕರು ವಿಶೇಷವಾಗಿ ಮಹಿಳೆಯರು, ವೃದ್ಧರು ಮತ್ತು ಮಕ್ಕಳ ಜತೆಗೆ ಕೆಲಸ ಮಾಡುವವರು ಹೆಚ್ಚು ತೊಂದರೆಗೆ ಒಳಗಾಗುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಕಲ್ಯಾಣ ಕರ್ನಾಟಕ ಭಾಗದಲ್ಲಿ ಸರ್ಕಾರಿ ಕಚೇರಿಗಳ ಸಮಯವನ್ನು ಬದಲಾವಣೆ ಮಾಡಿದೆ. ನೆರಳಿನಲ್ಲಿ ಕೂತು ಕೆಲಸ ಮಾಡುವವರಿಗೆ ಸಮಯ ಪರಿಷ್ಕರಣೆ ಮಾಡಲಾಗುತ್ತದೆ, ಆದರೆ ನೇರವಾಗಿ ಬೀಳುವ ಬಿರುಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರ ಬಗ್ಗೆ ಯಾವ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದು ತಿಳಿಯದಾಗಿದೆ. ಅದರಲ್ಲೂ, ಪಂಚಾಯಿತಿ ಅಧಿಕಾರಿಗಳು ಕೆಲಸದ ಸ್ಥಳಕ್ಕೆ ಬಂದು ಬಯೋಮೆಟ್ರಿಕ್‌, ಗುಂಪು ಫೋಟೊದಂತಹ ಕಾ‌ರ್ಯಗಳನ್ನು ಮಾಡುವವರೆಗೂ ನಾವು ಮನೆಗೆ ತೆರಳುವಂತಿಲ್ಲ. ಅವರು ಬರುವವರೆಗೂ ಕಾಯಬೇಕು. ಕುಡಿಯಲು ನೀರಿರುವುದಿಲ್ಲ, ಹಸಿವಾಗಿರುತ್ತದೆ. ಶೌಚಕ್ಕೆ ಹೋಗುವ ವ್ಯವಸ್ಥೆ ಇರುವುದಿಲ್ಲ….. ತುಂಬಾ ಸಮಸ್ಯೆಗಳನ್ನು ಅನುಭವಿಸಿತ್ತಿದ್ದೇವೆ. ಅಧಿಕಾರಿಗಳು ಬಂದ ಸಮಯಕ್ಕೆ ಕಾರ್ಮಿಕರು ಇಲ್ಲದಿದ್ದರೆ, ʼಕೆಲಸ ಮಾಡಿಲ್ಲ ವೇತನವಿಲ್ಲʼ ಎಂಬ ನಿರ್ಬಂಧಕ್ಕೆ ಸಿಲುಕಿ ನಮ್ಮ ಗುರುತಿಗಾಗಿ ಬಿರುಬಿಸಿಲಿನಲ್ಲಿ ನರಳುವಂತಾಗಿದೆ” ಎಂದರು.

ರಾಯಚೂರು ಭಾಗದ ಕಾರ್ಮಿಕ ಮಹಿಳೆ ಒಂದು ಕಡೆ ಸರ್ಕಾರವು ʼಕಾರ್ಮಿಕರ ಕಲ್ಯಾಣʼ ಎಂದು ಮಾತನಾಡುತ್ತಿದೆ. ಮತ್ತೊಂದು ಕಡೆ ಮನರೇಗಾ ಯೋಜನೆಯಲ್ಲಿ ಕೆಲಸ ಮಾಡುವವರ ಆರೋಗ್ಯ ರಕ್ಷಣೆಗೆ ಸಾಕಷ್ಟು ಗಮನ ನೀಡಲಾಗುತ್ತಿಲ್ಲ. ಈಗಾಗಲೇ ಮೂವರು ಮನರೇಗಾ ಕಾರ್ಮಿಕರು ಮೃತಪಟ್ಟಿದ್ದಾರೆ. ಕಾರ್ಮಿಕರ ಬದುಕು ನಿಜಕ್ಕೂ ಹೇಳತೀರದಾಗಿದೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇತ್ತ ಸರಿಯಾದ ಕೆಲಸವೂ ಇಲ್ಲ, ಸಮರ್ಪಕ ವೇತನವೂ ಇಲ್ಲ….. ಅನಾರೋಗ್ಯಕ್ಕೀಡಾಗುತ್ತಿದ್ದು, ಬದುಕು ದುಸ್ತರವಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.

ಈ ಸಮಸ್ಯೆಗೆ ಕೆಲವು ಪರಿಹಾರಗಳು ಅಗತ್ಯವಿದೆ

ಮನರೇಗಾ ಕಾಯ್ದೆಯ ಉದ್ದೇಶ ಉದ್ಯೋಗ ಕೊಡುವುದು ನಿಜ, ಆದರೆ ಆ ಉದ್ಯೋಗವು ಕಾರ್ಮಿಕರ ಆರೋಗ್ಯವನ್ನು ಹಾಳುಮಾಡುವಂತೆ ಆಗಬಾರದು. ಹಾಗಾಗಿ ಬೇಸಿಗೆಯಲ್ಲಿ ಕಾರ್ಮಿಕರ ಕೆಲಸದ ಸಮಯವನ್ನು ಬೆಳಿಗ್ಗೆ 7ರಿಂದ 11 ಮತ್ತು ಸಂಜೆ 4 ರಿಂದ 7 ಗಂಟೆವರೆಗೆ ಮಾಡುವುದು, ಪ್ರತಿ ಕೆಲಸದ ಸ್ಥಳದಲ್ಲಿ ನೆರಳು, ಕುಡಿಯುವ ನೀರು, ಮುಖ್ಯ ಆರೋಗ್ಯ ಕೇಂದ್ರದೊಂದಿಗೆ ಸಂಪರ್ಕ, ತುರ್ತು ವಾಹನ ಸೌಲಭ್ಯಗಳನ್ನು ಒದಗಿಸುವುದು, ಬಿಸಿಲಿನ ಸಮಯದಲ್ಲಿ ಕೆಲಸ ಮಾಡಿದರೆ ಹೆಚ್ಚುವರಿ ವೇತನ ಅಥವಾ ವಿನಾಯಿತಿ ನೀಡುವುದು, ಮಹಿಳಾ ಕಾರ್ಮಿಕರಿಗೆ ವಿಶೇಷ ರಕ್ಷಣೆ ಮತ್ತು ಕೆಲಸದ ಸಮಯದಲ್ಲಿ ಮಕ್ಕಳ ರಕ್ಷಣೆಗೆ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದು ಕಾರ್ಮಿಕ ಮುಖಂಡರ ಅಭಿಪ್ರಾಯವಾಗಿದೆ.

ಇದನ್ನೂ ಓದಿದ್ದೀರಾ? ಗದಗ | ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಿ: ಕೃಷ್ಣಗೌಡ ಪಾಟೀಲ್

ಕಾರ್ಮಿಕರ ಶ್ರಮವು ಮಾನವೀಯ ಮಿತಿಯೊಳಗೆ ಇರಬೇಕು. ಮನರೇಗಾ ಕಾರ್ಮಿಕರು ದೇಶದ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು. ಅವರ ಆರೋಗ್ಯವನ್ನು ರಕ್ಷಿಸದೆ ಅಭಿವೃದ್ಧಿ ಸಾಧ್ಯವಿಲ್ಲ. ಬಿಸಿಲಿನಲ್ಲಿ ಬೆಂದು, ಬೆವರಿನಲ್ಲಿ ನೆನೆದು ಕೆಲಸ ಮಾಡುತ್ತಿರುವ ಈ ಕಾರ್ಮಿಕರಿಗೆ ನಾವು ಕೃತಜ್ಞರಾಗಬೇಕು. ಅವರಿಗೆ ಯೋಗ್ಯವಾದ ಕೆಲಸದ ಪರಿಸ್ಥಿತಿ, ವಿಶ್ರಾಂತಿ ಮತ್ತು ರಕ್ಷಣೆ ಒದಗಿಸುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿ.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದ 17 ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರೀ ಮಳೆ: ಹವಾಮಾನ ಇಲಾಖೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿದೆ. ಪರಿಣಾಮ, ಕರ್ನಾಟಕದ 17 ಜಿಲ್ಲೆಗಳಲ್ಲಿ ಮುಂದಿನ ನಾಲ್ಕು...

‘ಮತದಾನದ ಹಕ್ಕು ಕಸಿಯಲು ಯಾರಿಗೂ ಅಧಿಕಾರವಿಲ್ಲ’: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

"ಈ ದೇಶದಲ್ಲಿ ಹುಟ್ಟಿರುವ ಯಾವುದೇ ನಾಗರಿಕನ ಮತದಾನದ ಹಕ್ಕನ್ನು ಕಸಿಯಲು ಯಾರಿಗೂ...

ಬಿಡದಿ ರೈತರ ಮೇಲೆ ಪೊಲೀಸ್ ದೌರ್ಜನ್ಯ: ಸಂಯುಕ್ತ ಹೋರಾಟ ಕರ್ನಾಟಕ ತೀವ್ರ ಖಂಡನೆ

ಕಳೆದ ಐದು ದಿನಗಳಿಂದ ಬೈರಮಂಗಲ ವೃತ್ತದಲ್ಲಿ ರಸ್ತೆ ತಡೆ ಹಾಗೂ ಸರಣಿ...

ಸುಡುಗಾಡು ಸಿದ್ಧರ ಕಾಲೋನಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಅಲೆಮಾರಿ ಜಾಗೃತ ಸಂಘ ಒತ್ತಾಯ

ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಸೆ.25: ಪಾಮನಕಲ್ಲೂರು ಕ್ರಾಸ್ ಸಮೀಪ...